ಕೋಮಲ ಆಂಟಿಯ ಕಣ್ ಸನ್ನೆಗೆ ಕೋಮಕ್ಕೆ ಜಾರಿದ ಅಂಕಲ್‌ಗಳು! ಕಳೆದುಕೊಂಡಿದ್ದು ಮಾತ್ರ ಲಕ್ಷ ಲಕ್ಷ!

ಕೋಮಲ ಆಂಟಿಯ ಕಣ್ ಸನ್ನೆಗೆ ಕೋಮಕ್ಕೆ ಜಾರಿದ  ಅಂಕಲ್‌ಗಳು ! ಕಳೆದುಕೊಂಡಿದ್ದು ಮಾತ್ರ ಲಕ್ಷ ಲಕ್ಷ!

ಅಶ್ವಸೂರ್ಯ/ಶಿವಮೊಗ್ಗ:ಈಕೆಗೆ ಮದುವೆಯಾಗಿ 20 ವರ್ಷ ಮಕ್ಕಳಿದ್ದರೂ ಸಾಮಾಜಿಕ ಜಾಲತಾಣದಲ್ಲಿ ಚಾಟಿಂಗ್ ಜಾರಿದ ಅಂಟಿ ಮದುವೆ ಆಗುವುದಾಗಿ ನಂಬಿಸಿ ಹಲವರಿಂದ ಲಕ್ಷಾಂತರ ರೂಪಾಯಿ ಪಡೆದು ವಂಚಿಸುತ್ತಿದ್ದ ಮಹಿಳೆಯನ್ನು ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.!
ಈ ಘಟನೆ ನೆಡೆದದ್ದು ಚಿಕ್ಕಬಳ್ಳಾಪುರದಲ್ಲಿ. ಮದುವೆಯಾಗಿ ಸುಮಾರು ಇಪ್ಪತ್ತು ವರ್ಷ ದಾಟಿದ್ದು ಮಕ್ಕಳಿರುವ ಕೋಮಲಾ ಅಂಟಿಯ ರೂಪಕ್ಕೆ ಕಣ್ ಸನ್ನೆಗೆ ಹಾಗೂ ಆಕೆಯ ಅಮಲೆರಿಸುವ ಮೆಸೇಜ್‌ಗಳಿಗೆ ಢಮಾರ್ ಆಗದ ಅಂಕಲ್‌ಗಳೇ ಇಲ್ಲ. ಎನ್ನುವ ಮಟ್ಟಕ್ಕೆ ಸಾಮಾಜಿಕ ಜಾಲತಾಣದಲ್ಲಿ ಬಣ್ಣ ಬಣ್ಣದ ರೀಲ್ಸ್ ಮಾಡುತ್ತಾ ಪೋಸ್ಟ್ ಹಂಚಿಕೊಳ್ಳುವ ಕೋಮಲ ಆಂಟಿ ಆನ್‌ಲೈನ್‌ನಲ್ಲಿ ತನಗೆ ಸಂದೇಶ ಕಳಿಸುವ ಅಂಕಲ್‌ಗಳೆ ಈಕೆಗೆ ಬಲಿಪಶುಗಳಾಗಿದ್ದಾರೆ. ನಾನು ವಿಧವೆಯಾಗಿದ್ದೇನೆ.ನನಗೆ ಗಂಡನಿಲ್ಲ, ಮಕ್ಕಳು ಇಲ್ಲಾ ಎಂದು ಹೇಳಿಕೊಳ್ಳುತ್ತಿದ್ದ ಕೋಮಲಾ ಆಂಟಿ ಕೇಲವು ಗಂಡಸರ ಮುಂದೆ ಮದುವೆ ಪ್ರಸ್ತಾಪ ಮಾಡಿ.ಅ ಅಂಕಲ್‌ಗಳಿಂದ ಲಕ್ಷ ಲಕ್ಷ ಹಣ, ಒಡವೆ, ದ
ಬಾರಿ ಬೆಲೆಬಾಳುವ ಉಡುಗೊರೆಗಳನ್ನು ಪಡೆದು ಭರ್ಜರಿಯಾಗಿ ಪಂಗನಾಮ ಹಾಕಿದ್ದಾಳೆ.!ಹಾಕುತ್ತಿದ್ದಾಳೆ! ಈಕೆ ಮದುವೆಯಾಗುವ ನೆಪವೊಡ್ಡಿ ರಾಜ್ಯದ ಅನೇಕ ಪುರುಷರಿಗೆ ವಂಚನೆ ಮಾಡಿರುವ ಮಹಿಳೆಯನ್ನು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.

ಬಂಧಿತ ಮಹಿಳೆಯ ಹೆಸರು ಕೋಮಲ ಸುಮಾರು 38ರಿಂದ 40 ವರ್ಷದ ಈ ಮಹಿಳೆಗೆ ಈಗಾಗಲೇ ಮದುವೆ ಆಗಿ ಇಪ್ಪತ್ತು ವರ್ಷವಾಗಿದೆ. ಈಕೆಗೆ 20 ವರ್ಷದ ಮಗ ಹಾಗೂ 16 ವರ್ಷದ ಮಗಳಿದ್ದಾಳೆ.! ತಾನಾಯ್ತು, ತನ್ನ ಸಂಸಾರವಾಯ್ತು ಎಂದು ಯಾವುದಾದರೂ ದುಡಿಮೆ ಮಾಡಿಕೊಂಡು ಮಕ್ಕಳಿಗೆ ಒಳ್ಳೆಯ ಭವಿಷ್ಯ ರೂಪಿಸುವುದನ್ನು ಬಿಟ್ಟು? ತಾನೊಬ್ಬಳು ಮಹಾನ್ ನಡಿ ಎನ್ನುವಂತೆ ಸಾಮಾಜಿಕ ಜಾಲತಾಣದಲ್ಲಿ ರೀಲ್ಸ್ ಮಾಡುತ್ತಾ ಅಂಕಲ್‌ಗಳನ್ನು ತನ್ನ ತೆಕ್ಕೆಗೆ ಕೆಡವಿಕೊಂಡು ಲಕ್ಷ ಲಕ್ಷ ಹಣ ಪಿಕಿದ್ದಾಳಂತೆ.!? ಈಕೆಯ ವೈಯಾರಕ್ಕೆ ಮಾರುಹೋಗಿದ್ದ ನಾಲ್ಕೈದು ಅಂಕಲ್‌ಗಳನ್ನು ತನ್ನ ಖೆಡ್ಡಕ್ಕೆ ಕೆಡವಿಕೊಂಡು ಲಕ್ಷಾಂತರ ರೂ. ಹಣ ವಂಚನೆ ಮಾಡಿದ ಆರೋಪ ಇವಳ ಮೇಲಿದೆ.!
ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ನಿವಾಸಿ ರಾಘವೇಂದ್ರ ಎಂಬುವರ ಜೊತೆಯಲ್ಲಿ ಚಾಟಿಂಗ್ ಮಾಡುತ್ತಾ ಮದುವೆಯಾಗುವುದಾಗಿ ಹೇಳಿ ವಂಚನೆ ಮಾಡಿದ ಘಟನೆ ನಡೆದಿದೆ. ಸಾಮಾಜಿಕ ಜಾಲತಾಣದಲ್ಲಿ ರೀಲ್ಸ್ ಮಾಡುತ್ತಾ ಪೋಸ್ಟ್ ಮಾಡುತ್ತಿದ್ದ ಕೋಮಲಾ ಆಂಟಿಗೆ ಯಾರಾದರೂ ಲೈಕ್ ಮಾಡಿದರೆ, ಕಾಮೆಂಟ್ ಮಾಡಿದರೆ ಅವರೊಂದಿಗೆ ಚಾಟಿಂಗ್ ಮಾಡುತ್ತಿದ್ದಳಂತೆ. ನಂತರ ತನಗೆ ಕಾಮೆಂಟ್‌ ಮಾಡುವವರ ಎಲ್ಲಾ ವಿಷಯವನ್ನು ಕಲೆಹಾಕಿ ಅವರೊಂದಿಗೆ ಸಲುಗೆ ಬೆಳೆಸಿಕೊಂಡು. ನಂತರ ಮದುವೆ ಆಗದಿರುವ ಪುರುಷರು, ಡಿವೋರ್ಸ್ ನೀಡಿ ಒಬ್ಬಂಟಿಯಾಗಿರುವ ಪುರುಷರಿಗೆ ಮದುವೆ ಮಾಡಿಕೊಳ್ಳುವುದಾಗಿ ನಂಬಿಸಿ. ನನಗೆ ಈಗಾಗಲೇ ಮದುವೆ ಆಗಿದ್ದು, ಗಂಡ ತೀರಿ ಹೋಗಿದ್ದಾರೆ. ನನಗೆ ಮಕ್ಕಳಿಲ್ಲ, ಮದುವೆ ಮಾಡಿಕೊಂಡು ಬಾಳು ಕೊಡುತ್ತೀರಾ? ಎಂದು ಕೇಳುತ್ತಾಳಂತೆ.! ಇನ್ನು ಮೊದಲೇ ಹೆಣ್ಣು ಸಿಗದೇ ಪರಿತಪಿಸುತ್ತಿರುವ ಗಂಡಸರು ಈಕೆಯ ವೈರಾಕ್ಕೆ ಸುಲಭವಾಗಿ ಬೀಳುತ್ತಾರಂತೆ!
ತನ್ನ ಮೋಹಕ್ಕೆ ಬಿದ್ದ ಅಂಕಲ್‌ಗಳೊಂದಿಗೆ ಸ್ವಲ್ಪ ಸಲುಗೆಯಿಂದಲೇ ಚಾಟಿಂಗ್ ಮಾಡುವ ಕೋಮಲಾ ಆಂಟಿ, ತೀರಾ ಪರ್ಸನಲ್ ಎನ್ನುವಂತೆ ಅವರೊಂದಿಗೆ ಮಾತನಾಡುತ್ತಿದ್ದಳಂತೆ. ನಂತರ,ಮನೆಯ ಜವಬ್ದಾರಿ, ಇನ್ನಿತರ ಕಥೆ ಹೇಳಿ ಲಕ್ಷ ಲಕ್ಷ ರೂಪಾಯಿ ಹಣವನ್ನು ಸಲಿಸಾಗಿ ಕೀಳುತ್ತಾಳಂತೆ!?. ನಂತರ ಅವರ ಸಂಪರ್ಕವನ್ನು ಕಸಿದುಕೊಂಡು ಅವರಿಗೆ ಕೈ ಕೊಟ್ಟು. ವಂಚಿಸಿ ಚಾಟಿಂಗ್ ಮಾಡುತ್ತಿದ್ದವರನ್ನು ಬ್ಲ್ಯಾಕ್ ಲಿಸ್ಟ್‌ಗೆ ಸೇರಿಸುತ್ತಾಳೆ ಎಂದರೆ ಅವಳ ಚಾಲಕಿತನವನ್ನು ನೀವೆ ಅರಿಯ ಬೇಕಿದೆ. ಹೀಗೆ ರಾಘವೇಂದ್ರ ಎಂಬುವವರನ್ನು ಮದುವೆ ಮಾಡಿಕೊಳ್ಳುವುದಾಗಿ ನಂಬಿಸಿ ಬರೋಬ್ಬರಿ 7.40 ಲಕ್ಷ  ರೂಪಾಯಿ ಪಡೆದು ವಂಚನೆ ಮಾಡಿದ್ದಾಳೆ ಕಿಲ ಕಿಲ ಕೋಮಲ! ಈ ಕಾರಣಕ್ಕೆ ವಂಚನೆಗೆ ಒಳಗಾದ ರಾಘವೇಂದ್ರ ಅವರು ಮಹಿಳೆಯ ವಿರುದ್ಧ ಸ್ಥಳೀಯ ಪೊಲೀಸ್ ಠಾಣೆಗೆ ದೂರು ನಿಡಿದ್ದಾರೆ.
ರಾಘವೇಂದ್ರ ಅವರ ದೂರು ಆಧರಿಸಿ ಚಿಕ್ಕಬಳ್ಳಾಪುರ ಕೇಂದ್ರೀಯ ಠಾಣೆಯ ಪೊಲೀಸರ ತಂಡ ಕಾರ್ಯಾಚರಣೆಗೆ ಇಳಿದಿದ್ದಾರೆ. ಡಿವೈಎಸ್ಪಿ ರವಿಕುಮಾರ್ ನೇತೃತ್ವದಲ್ಲಿ ಕಾರ್ಯಾಚರಣೆ ಮಾಡಿ, ಬೆಂಗಳೂರಿನ ಕೋಮಲ ಅಂಟಿಯನ್ನು ಬಂಧಿಸಿದ್ದಾರೆ.ಸಾಮಾಜಿಕ ಜಾಲತಾಣದಲ್ಲಿ ವಂಚನೆ ಮಾಡುತ್ತಿದ್ದ ಮಹಿಳೆಯಿಂದ ಒಂದು ಐಷಾರಾಮಿ ಐಪೋನ್, ಲಕ್ಷಾಂತರ ರೂ. ಹಣವನ್ನು ಜಪ್ತಿ ಮಾಡಿದ್ದಾರೆ. ಈ ಮಹಿಳೆ ಉತ್ತಮವಾಗಿ ಹಿಂದಿ ಮಾತನಾಡುವವಳಾಗಿದ್ದು ಬೆಂಗಳೂರು, ಗುಜರಾತ್ ಸೇರಿದಂತೆ ಹಲವು ರಾಜ್ಯದ ಪುರುಷರಿಗೆ ಆನ್‌ಲೈನ್‌ಲ್ಲಿ ವಂಚನೆ ಮಾಡಿ, ಬಂದ ಹಣದಲ್ಲಿ ಐಷಾರಾಮಿ ಜೀವನ ನೆಡೆಸುತ್ತಿದ್ದಳು ಎಂದು ತಿಳಿದುಬಂದಿದೆ

Leave a Reply

Your email address will not be published. Required fields are marked *

Optimized by Optimole
error: Content is protected !!