ಕಿರಿವಯಸ್ಸಿನಲ್ಲೆ ಆತ್ಮಹತ್ಯೆಗೆ ಶರಣಾದ ಬಾಲಕ! ತಂದೆ ತಾಯಿಗೆ ಪ್ರತ್ಯೇಕ ಡೆತ್ ನೋಟ್! ಕೊನೆಯಾದಾಗಿ ಟೀಚರ್ ಗೆ ಬರೆದ ಮೆಸ್ಸೇಜ್ ಏನು?
ಅಶ್ವಸೂರ್ಯ/ಶಿವಮೊಗ್ಗ:ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 16 ವರ್ಷದ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆಗೆ ಶರಣಾಗಿದ್ದಾನೆ. ಆತನ ಸಾವಿಗೆ ಕಾರಣವೇನೆಂದು ಇನ್ನೂ ನಿಗೂಢವಾಗಿ ಉಳಿದಿದೆ. ಅದರೂ ಆತ ಬರೆದ ಡೆತ್ ನೋಟ್ ಆಧಾರ ಮೇಲೆ ಶಿಕ್ಷಕಿ ವಿರುದ್ಧ ದೂರು ದಾಖಲಾಗಿದೆ.ಆತ್ಮಹತ್ಯೆಗೆ ಶರಣಾಗುವ ಮುನ್ನ ಬಾಲಕ ತಂದೆ ತಾಯಿಗೆ ಎರಡು ಪ್ರತ್ಯೇಕ ಡೆತ್ ನೋಟ್ ಬರೆದಿರುವುದು ಆತನ ಸಾವು ಹೆತ್ತವರಿಗೆ ಆತಂಕ ಮೂಡಿಸಿದೆ.!
ಇತ್ತೀಚೆಗೆ ಮಕ್ಕಳ ಆತ್ಮಹತ್ಯೆ ಪ್ರಕರಣ ಹೆಚ್ಚಾಗುತ್ತಿದೆ. ತಮ್ಮನ್ನು ತಾವು ಎದುರಿಸಲಾಗದ ಸ್ಥಿತಿಯಲ್ಲಿ ಹೆದರಿದ ಮಕ್ಕಳು ಆತ್ಮಹತ್ಯೆಗೆ ಶರಣಾಗಿ ಕಿರಿ ವಯಸ್ಸಿನಲ್ಲೆ ಸಾವಿನ ಮನೆ ಸೇರುತ್ತಿದ್ದಾರೆ.! ಮನೆಯಲ್ಲಿ ಹೆತ್ತವರ ಒತ್ತಡ, ಶಾಲೆಗೆ ಹೊದರೆ ಶಿಕ್ಷಕರ ಒತ್ತಡ. ಕಠಿಣ ಶಿಕ್ಷಣ ನೀತಿ,ಇನ್ನೂ ಜೋತೆ ಜೋತೆಗೆ ಓದುವ ಸಹಪಾಠಿಗಳ ಸ್ಪರ್ಧೆ!ಇನ್ನೂ ವಿಐಪಿ ಮಕ್ಕಳ ಜೊತೆಗೆ ಜನಸಾಮಾನ್ಯರ ಮಕ್ಕಳ ಕಲಿಕೆ ಮತ್ತು ಹೋಲಿಕೆ ಎಲ್ಲವೂ ಎನು ಅರಿಯದ ಅಮಾಯಕ ಮಕ್ಕಳನ್ನು ಓದಿನ ಮನೆ ಎನ್ನುವ ಚಕ್ರವ್ಯೂಹದೊಳಗೆ ಸಿಲುಕಿಸಿ ಕ್ಷಣ ಕ್ಷಣಕ್ಕೂ ಹೈರಾಣ ಮಾಡಿದೆ. ಇಡೀ ದಿನ ವಿಶ್ರಾಂತಿ ಇಲ್ಲದೆ ಕಲಿಕೆ ಎನ್ನುವ ಸಮುದ್ರದಲ್ಲಿ ಮುಳುಗಿರುವ ಮಕ್ಕಳಿಗೆ ಮನಸ್ಸಿಗೆ ಸಂತೋಷ ಆಟ, ನೆಮ್ಮದಿ,ಅಪ್ಪ ಅಮ್ಮನ ಪ್ರೀತಿ ಒಡಹುಟ್ಟಿದವರ ಜೋತೆಗಿನ ಒಡನಾಟ ಎಲ್ಲವೂ ಮರೆತು ಹೋಗಿದೆ.ಈ ಹಾದಿಯಲ್ಲೆ ಸಾಗಿದ ದೆಹಲಿ ವಿದ್ಯಾರ್ಥಿಯೊಬ್ಬನ ಆತ್ಮಹತ್ಯೆ ಪ್ರಕರಣ ಆತನ ಪಾಲಕರನ್ನೆ ಬೆಚ್ಚಿಬಿಳಿಸಿದೆ. ಕಿರಿ ವಯಸ್ಸಿನ ಬಾಲಕ ಆತ್ಮಹತ್ಯೆಗೆ ಶರಣಾಗಿರುವುದು ಜನರಲ್ಲಿ ನಾನಾ ಪ್ರಶ್ನೆ ಹುಟ್ಟುಹಾಕಿದೆ? ಮುಂದೇನು ಎಂಬ ಆತಂಕ ಪ್ರತಿಯೊಬ್ಬ ವಿಧ್ಯಾರ್ಥಿಗಳ ಪೋಷಕರದಾಗಿದೆ.
ದೆಹಲಿಯ ಕಂಜ್ವಾಲಾ ಪ್ರದೇಶದಲ್ಲಿ 16 ವರ್ಷದ ವಿದ್ಯಾರ್ಥಿ ನೇಣಿ ಕೊರಳೊಡ್ಡಿ (Hanging) ಆತ್ಮಹತ್ಯೆ ಶರಣಾಗಿದ್ದಾನೆ.! ಆತ ಸಾಯುವ ಮುನ್ನ ಬರೆದಿಟ್ಟ ಎರಡೆರಡು ಡೆತ್ ನೋಟ್ ಪೊಲೀಸರ ಕೈ ಸೇರಿದ್ದು, ಇದೀಗ ವೈರಲ್ ಆಗಿದೆ.!ಸಾವಿಗೆ ಶರಣಾದ ಬಾಲಕ ಧೈರ್ಯ ಪ್ರತಾಪ್ ಸಿಂಗ್. ಕಂಜ್ವಾಲಾ ಪ್ರದೇಶದ ಕರಾಲಾ ಗ್ರಾಮದ ನಿವಾಸಿ. ದೆಹಲಿ ಆನಂದಪುರ್ ಧಾಮ್ ಪ್ರದೇಶದಲ್ಲಿರುವ ಶಾಲೆಯಲ್ಲಿ ಈ ಬಾಲಕ ಓದುತ್ತಿದ್ದ.ಎಂದಿನಂತೆ ಧೈರ್ಯ ಪ್ರತಾಪ್ ಸಿಂಗ್ ರಾತ್ರಿಯ ಊಟ ಮುಗಿಸಿ ಮಲಗಲು ತನ್ನ ಕೋಣೆಗೆ ತೆರಳಿದ್ದಾನೆ. ಮರುದಿನ ಬೆಳಿಗ್ಗೆ ಮಗ ಧೈರ್ಯ ಎದ್ದು ಬಾರದ ಕಾರಣ ಕುಟುಂಬಸ್ಥರು ಆತನ ಕೋಣೆಯ ಬಳಿಗೆ ಹೋಗಿ ನೋಡಿದ್ದಾರೆ. ಆದರೆ ಕೋಣೆಯ ಒಳಗಿನಿಂದ ಲಾಕ್ ಆಗಿತ್ತು. ಕಿಟಕಿಯಿಂದ ಇಣುಕಿ ನೋಡಿದಾಗ, ನೇಣು ಬಿಗಿದ ಸ್ಥಿತಿಯಲ್ಲಿ ಮಗ ಧೈರ್ಯ ಪ್ರತಾಪನ ಶವ ನೇತಾಡುತ್ತಿದ್ದದ್ದು ಪತ್ತೆಯಾಗಿದೆ.
ಆದರೆ ಸಾಯುವ ಮುನ್ನ ಮಗ ಧೈರ್ಯ ಅಪ್ಪ – ಅಮ್ಮನಿಗೆ ಪ್ರತ್ಯೇಕ ಡೆತ್ ನೋಟ್ ಬರೆದಿಟ್ಟು ಉಸಿರು ಚಲ್ಲಿದ್ದಾನೆ! ಧೈರ್ಯ ಪ್ರತಾಪ್ ಸಿಂಗ್ ಅಮ್ಮನಿಗೆ ಬರೆದ ನೋಟ್ ನಲ್ಲಿ, ಇಷ್ಟು ದಿನ ನಿನಗೆ ಕಾಟ ಕೊಟ್ಟಿದ್ದಕ್ಕೆ ಕ್ಷಮೆ ಇರಲಿ ಅಮ್ಮ. ನಿನಗೆ ನೋವು ಕೊಟ್ಟಿದ್ದೇನೆ. ನಿನ್ನ ನಂಬಿಕೆಯನ್ನು ಪಾಲಿಸಲಾಗಿಲ್ಲ. ಎಲ್ಲರ ಮುಂದೆ ನಿನಗೆ ಅವಮಾನ ಮಾಡಿದ್ದೇನೆ. ನಿನ್ನ ಹೆಸರು ಹಾಳು ಮಾಡಿದ್ದೇನೆ. ನಿನ್ನ ನನ್ನ ಮೇಲಿಟ್ಟ ನಂಬಿಕೆಯನ್ನು ಉಳಿಸಿಕೊಳ್ಳಲು ನನಗೆ ಸಾಧ್ಯವಾಗ್ಲಿಲ್ಲ. ಸಾಕಷ್ಟು ತಪ್ಪುಗಳನ್ನು ಮಾಡಿದ್ದೇನೆ. ಆದರೆ ಒಂದು ವಿಷಯ ನೆನಪಿರಲಿ.ಅಮ್ಮ ನಾವಿಬ್ಬರು ಮತ್ತೆ ಭೇಟಿಯಾತ್ತೇವೆ. ಈ ಜನ್ಮದಲ್ಲಿ ನಾನು ನಿನಗೆ ಒಳ್ಳೆಯ ಮಗನಾಗಲೂ ಸಾಧ್ಯವಾಗ್ಲಿಲ್ಲ. ಮುಂದಿನ ಜನ್ಮದಲ್ಲಿ ನಿನ್ನ ಮಗನಾಗಿ ಹುಟ್ಟಿ ಎಲ್ಲವನ್ನೂ ಈಡೇರಿಸುವೆ! ಕೊನೆಯದಾಗಿ ನನ್ನ ತಂಗಿ ಮತ್ತು ತಂದೆಯನ್ನು ಚೆನ್ನಾಗಿ ನೋಡಿಕೊಳ್ಳುವಂತೆ ಅಮ್ಮನಿಗೆ ವಿನಂತಿ ಮಾಡಿಕೊಂಡಿದ್ದಾನೆ ಮಗ ಧೈರ್ಯ.
ಇನ್ನೂ ಅಪ್ಪನಿಗೆ ಬರೆದ ಕೊನೆಯ ಸಾವಿನ ಪತ್ರದಲ್ಲಿ , ತನ್ನ ತಂಗಿಗೆ ಹೆಚ್ಚು ವಿದ್ಯಾಭ್ಯಾಸ ಕೋಡಿಸುವಂತೆ ಮನವಿ ಮಾಡಿದ್ದಾನೆ. ನಾನು ಕೇಳಿದ್ದನ್ನೆಲ್ಲ ಕೊಡಿಸಿದ್ದೀರಿ. ನನ್ನ ಎಲ್ಲಾ ಆಸೆಯನ್ನು ಸಾಕಷ್ಟು ಈಡೇರಿಸಿದ್ದೀರಿ. ನನ್ನ ಕೊನೆಯ ಆಸೆ ಮತ್ತು ಮನವಿ ನನ್ನ ತಂಗಿ ಹಂಸಿತಾ ವಿದ್ಯಾಭ್ಯಾಸಕ್ಕೆ ಅಡ್ಡಿ ಮಾಡಬೇಡಿ. ಅವಳು ಎಲ್ಲಿಯವರೆಗೆ ಓದಲು ಬಯಸುತ್ತಾಳೊ ಅಲ್ಲಿಯ ವರೆಗೆ ಓದಿಸಿ. ನಾನು ನಿಮ್ಮಿಂದ ಇದನ್ನು ಕೊನೆಯದಾಗಿ ಕೇಳುತ್ತಿದ್ದೇನೆ ಎಂದು ಧೈರ್ಯ ಪತ್ರದಲ್ಲಿ ಬರೆದಿದ್ದಾನೆ.
ಟೀಚರ್ ಮೇಲೆ ದೂರು ದಾಖಲು!
ಧೈರ್ಯ ಪ್ರತಾಪ್ ಸಿಂಗ್ ಆತ್ಮಹತ್ಯೆಯ ನಂತರ ಆತನ ಶಾಲೆಯ ಶಿಕ್ಷಕಿ ಮೇಲೆ ಕುಟುಂಬಸ್ಥರು ದೂರು ದಾಖಲಿಸಿದ್ದಾರೆ. ಇದಕ್ಕೆ ಕಾರಣ ಧೈರ್ಯ ಸಾವಿನಪತ್ರದಲ್ಲಿ ಬರೆದ ಆ ಒಂದು ಸಾಲು! ಸಾವಿಗೆ ಮುನ್ನ ತನ್ನ ಶಿಕ್ಷಕಿ ಸುನೀತಾ ಪಾಸಿ ಹೆಸರು ಬರೆದಿರುವ ಧೈರ್ಯ ಪ್ರತಾಪ್ ಸಿಂಗ್, ಈ ದಿನ ನಿಮಗೆ ತುಂಬಾ ಒಳ್ಳೆಯ ದಿನವಾಗಲಿದೆ. ನಿಮ್ಮ ದೊಡ್ಡ tension ದೂರ ಮಾಡುತಿದ್ದೇನೆ!ಆದರೆ ನಿಗೂಢವಾಗಿರುವ ಆತ ಬರೆದಿರುವ ಒಂದೆರಡು ಸಾಲುಗಳು! ಎಲ್ಲರನ್ನೂ ದಿಗ್ಭ್ರಮೆಗೊಳಿಸಿದೆ.ಧೈರ್ಯನಿಗೆ ಆತ್ಮಹತ್ಯೆಗೆ ಶರಣಾಗುವಂತದ್ದು ಶಾಲೆಯಲ್ಲಿ ಏನಾಗಿತ್ತು? ಎನ್ನುವುದು ಮಾತ್ರ ಪೋಲಿಸರ ತನಿಖೆಯ ನಂತರವಷ್ಟೇ ಬಯಲಾಗಬೇಕಿದೆ.