ಮಗನ ಮೇಲೆ ಮಚ್ಚಿನಿಂದ ದಾಳಿಗೆ ಮುಂದಾದ ರೌಡಿಗಳು. ರೌಡಿಗಳನ್ನು ಕಲ್ಲಿನಿಂದ ಓಡಿಸಿದ ತಾಯಿ.! ವಿಡಿಯೋ ವೈರಲ್
ಅಶ್ವಸೂರ್ಯ/ಶಿವಮೊಗ್ಗ: ತಾಯಿ ಮಗ ಒಟ್ಟಿಗೆ ರಸ್ತೆಯಲ್ಲಿದ್ದಾಗ ಪುಡಿ ರೌಡಿಗಳು ಮಗನ ಮೇಲೆ ದಾಳಿಮಾಡಿದ್ದಾರೆ. ಮಚ್ಚಿನಿಂದ ಮಗನ ಮೇಲೆ ರೌಡಿಗಳು ದಾಳಿಮಾಡುತ್ತಿದ್ದಂತೆ ಎಚ್ಚೆತ್ತುಕೊಂಡ ತಾಯಿ ಕೆಳಗೆ ಬಿದ್ದಿದ್ದ ಕಲ್ಲನ್ನು ಎತ್ತಿಕೊಂಡು ರೌಡಿಗಳ ಕಡೆಗೆ ಹೊಡೆದು ಓಡಿಸಿದ ಘಟನೆ ವರದಿಯಾಗಿದೆ.
ಈ ಘಟನೆ ಮಹಾರಾಷ್ಟ್ರದ ಕೋಲ್ಹಾಪುರದಿಂದ ವರದಿಯಾಗಿದ್ದು. ತಾಯಿ ಅದೆಂತಾ ಪರಿಸ್ಥಿತಿಯಲ್ಲೂ ಮಕ್ಕಳ ರಕ್ಷಣೆಗೆ ನಿಲ್ಲುತ್ತಾಳೆ.ಮಕ್ಕಳಿಗೆ ಅಪಾಯವಿದ್ದಾಗ ಪ್ರಾಣ ಪಣಕ್ಕಿಟ್ಟು ಮಕ್ಕಳ ಜೀವಕ್ಕೆ ಅಪಾಯ ಬರದಂತೆ ನೋಡಿಕೊಳ್ಳುತ್ತಾಳೆ ಎನ್ನುವುದಕ್ಕೆ ಈ ಘಟನೆಯು ಮತ್ತೊಂದು ಸಾಕ್ಷಿಯಾಗಿದೆ. ರಸ್ತೆಯಲ್ಲಿ ತಾಯಿಯ ಜೊತೆಗೆ ಮಾತನಾಡುತ್ತಿರುವಾಗಲೇ ದ್ವಿಚಕ್ರ ವಾಹನದಲ್ಲಿ ಪುಡಿ ರೌಡಿಗಳು ಮಗನ ಮೇಲೆ ಮಚ್ಚಿನಿಂದ ದಾಳಿ ಮಾಡಿದ್ದಾರೆ. ಒಂದೇ ಕ್ಷಣಾರ್ಧದಲ್ಲಿ ತಾಯಿ ಎಚ್ಚೆತ್ತುಕೊಂಡು ಕೆಳಗೆ ಬಿದ್ದಿದ್ದ ಕಲ್ಲನ್ನು ಎತ್ತಿಕೊಂಡು ರೌಡಿಗಳತ್ತ ಎಸೆದು ಇಬ್ಬರು ರೌಡಿಗಳನ್ನು ಓಡಿಸಿದ ಘಟನೆ ಕೋಲ್ಹಾಪುರದಲ್ಲಿ ನಡೆದಿದೆ ಎಂದು ತಿಳಿದುಬಂದಿದೆ. ಈ ಘಟನೆಯ ವಿಡಿಯೋ ಈಗ ಎಲ್ಲೆಡೆ ವೈರಲ್ ಆಗುತ್ತಿದೆ.
ಈ ವಿಡಿಯೋದಲ್ಲಿ ತಾಯಿ ಹಾಗೂ ಮಗ ಇಬ್ಬರು ರಸ್ತೆಯಲ್ಲಿ ನಿಂತು ಮಾತಾನಾಡುತ್ತಿರುತ್ತಾರೆ ಮಗ ಸ್ಕೂಟರ್ ಮೇಲೆ ಕುಳಿತುಕೊಂಡಿದ್ದರೆ, ತಾಯಿ ಆತನ ಪಕ್ಕದಲ್ಲೇ ನಿಂತುಕೊಂಡಿರುತ್ತಾರೆ. ಇಬ್ಬರು ಮಾತನಾಡುತ್ತಿರುವಾಗಲೇ ಸ್ಕೂಟರ್ ಮೂಲಕ ಇಬ್ಬರು ಪುಟಿ ರೌಡಿಗಳು ಆಗಮಿಸುತ್ತಾರೆ.ದ್ವಿಚಕ್ರ ವಾಹನದಲ್ಲಿ ವೇಗವಾಗಿ ಬಂದ ರೌಡಿಗಳು ಸ್ಕೂಟರ್ ಅನ್ನು ತುಸು ದೂರದಲ್ಲಿ ನಿಲ್ಲಿಸುತ್ತಾರೆ. ಅಷ್ಟೇ ವೇಗವಾಗಿ ಇಳಿದು ಬಂದ ಒಬ್ಬ ಕೈಯಲ್ಲಿದ್ದ ಮಚ್ಚಿನ್ನು ಹಿಡಿದು
ತಾಯಿ ಹಾಗೂ ಮಗ ಇರವಕಡೆಗೆ ದೌಡಾಯಿಸಿ ಹಿಂಬದಿಯಿಂದ ತಾಯಿಯ ಎದುರೆ ಮಗನ ಮೇಲೆ ಮಚ್ಚಿನಿಂದ ದಾಳಿ ಮಾಡುತ್ತಾನೆ ದಾಳಿಯ ಸುಳಿವರಿತ ಆತ ತಕ್ಷಣ ತಪ್ಪಿಸಿಕೊಳ್ಳುತ್ತಾನೆ. ಪಕ್ಕದಲ್ಲಿದ್ದ ತಾಯಿ ಕಿರುಚಿಕೊಂಡು ಮಗನ ಮೇಲಾದ ದಾಳಿಗೆ ರೌಡಿಗಳ ಮೇಲೆ ಅಲ್ಲೆ ಬಿದ್ದಿದ್ದ ಕಲ್ಲನ್ನು ಎತ್ತಿಕೊಂಡು ದಾಳಿಗೆ ಮುಂದಾಗುತ್ತಾಳೆ. ರೌಡಿಗಳ ಮೇಲೆ ಕಲ್ಲಿನಿಂದ ದಾಳಿ ಮಾಡುತ್ತಿದ್ದಂತೆ ಅಷ್ಟರಲ್ಲೇ ಮಗ ಕೂಡ ಎದ್ದು ಬಂದು ಕಲ್ಲಿನ ಮೂಲಕ ಅಮ್ಮನ ಜೋತೆಗೆ ಪ್ರತಿದಾಳಿ ನಡೆಸಿ ಇಬ್ಬರು ರೌಡಿಗಳನ್ನು ಅಟ್ಟಾಡಿಸಿಕೊಂಡು ಓಡಿಸುತ್ತಾರೆ.! ಈ ಪ್ರಕರಣ ಹಾಡಹಗಲೇ ನಡೆದಿದ್ದು ಕಣ್ಣಾರೆ ನೋಡಿದ ಜನ ಬೆಚ್ಚಿ ಬಿದ್ದಿದ್ದಾರೆ. ಪೊಲೀಸರಿಗೆ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿ ರೌಡಿಗಳ ಬಿಟ್ಟುಹೋದ ಸ್ಕೂಟರ್ ಅನ್ನು ವಶಕ್ಕೆ ಪಡೆದು ಆರೋಪಿಗಳ ಪತ್ತೆಗಾಗಿ ಭಲೇ ಬಿಸಿದ್ದಾರೆ ಅನ್ನೋ ಮಾಹಿತಿ ಲಭ್ಯವಾಗಿದ್ದು ಈ ಘಟನೆ ಕೋಲ್ಹಾಪುರದ ಜೈಸಿಂಗಪುರದ ಮಾರುಕಟ್ಟೆಯ ಬಳಿ ನಡೆದಿರುವುದಾಗಿ ವರದಿಯಾಗಿದೆ.
ಮಗನ ಮೇಲಾಗ ಬಹುದಾದ ದಾಳಿಯನ್ನು ತಪ್ಪಿಸಿದ ತಾಯಿ ಜೀವ ಉಳಿಸಿದ್ದಾಳೆ. ತಾಯಿಯ ಧೈರ್ಯಕ್ಕೆ ಎಲ್ಲಡೆ ಮೆಚ್ಚುಗೆ ವ್ಯಕ್ತವಾಗುತ್ತಿದ್ದು. ಪುಡಿ ರೌಡಿಗಳ ದಾಳಿಗೆ ಕಾರಣವೇನು ಅನ್ನೋದು ಮಾತ್ರ ಇನ್ನೂ ತಿಳಿದುಬಂದಿಲ್ಲ.