ಧರ್ಮಸ್ಥಳ ಠಾಣಾ ಸರಹದ್ದಿನ ಬೆಳಾಲು ಗ್ರಾಮದಲ್ಲಿ 84 ವರ್ಷದ ನಿವೃತ್ತ ಶಿಕ್ಷಕನ ಬರ್ಬರ ಹತ್ಯೆ.!
ಅಶ್ವಸೂರ್ಯ/ಶಿವಮೊಗ್ಗ: ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಠಾಣಾ ವ್ಯಾಪ್ತಿಯ ಬೆಳಾಲು ಗ್ರಾಮದಲ್ಲಿ 84 ವರ್ಷದ ನಿವೃತ್ತ ಶಿಕ್ಷಕ, ಬಾಲಕೃಷ್ಣ ಭಟ್ (84) ಎಂಬವರನ್ನು ಹತ್ಯೆ ಮಾಡಲಾಗಿದೆ. ಗ್ರಾಮದ ಎಲ್ಲರ ಪ್ರೀತಿಯ ವ್ಯಕ್ತಿಯಾಗಿದ್ದ ಬಾಲಕೃಷ್ಣ ಭಟ್ ಅವರನ್ನು ಅವರ ಮನೆಯ ಅಂಗಳದಲ್ಲೆ ಬರ್ಬರವಾಗಿ ಕೊಲೆಮಾಡಿದ್ದರೆ.! ಮಂಗಳವಾರ ಸಂಜೆ ನಾಲ್ಕು ಗಂಟೆ ಸುಮಾರಿಗೆ ಈ ಘಟನೆ ಬೆಳಕಿಗೆ ಬಂದಿದ್ದು, ಬೆಳಾಲು ಗ್ರಾಮದ ಜನರು ಪ್ರೀತಿಯ ಶಿಕ್ಷಕರ ಕೊಲೆಯ ಸುದ್ದಿ ಕೇಳಿ ಬೆಚ್ಚಿ ಬಿದ್ದಿದ್ದಾರೆ.
ಕೊಲೆಗಡುಕ ಬಾಲಕೃಷ್ಣ ಭಟ್ ಅವರ ತಲೆಯ ಭಾಗಕ್ಕೆ ಕತ್ತಿಯಿಂದ ಬಲವಾಗಿ ಕಡಿದ ರೀತಿ ಮೃತದೇಹ ಪತ್ತೆಯಾಗಿದ್ದು. ನೆತ್ತರ ಮಡುವಿನಲ್ಲಿ ವೃದ್ಧ ಜೀವವೊಂದು ಉಸಿರು ಚಲ್ಲಿದೆ.! ಮನೆಯ ಒಳಗೆ ಮತ್ತು ಜಗಲಿಯಲ್ಲಿ ರಕ್ತ ಬಿದ್ದಿರುವುದು ಕಂಡುಬಂದಿದ್ದು ಈ ಹತ್ಯೆಯನ್ನು ಹತ್ತಿರದವರೆ ಅದರಲ್ಲೂ ಅವರ ಮಗನೆ ಮಾಡಿರುವ ಶಂಕೆ ವ್ಯಕ್ತವಾಗಿದ್ದು.
ಸ್ಥಳೀಯರು ಕೂಡ ಬಾಲಕೃಷ್ಣ ಭಟ್ ಅವರ ಮಗನ ಮೇಲೆ ಅನುಮಾನ ವ್ಯಕ್ತಪಡಿಸಿದ್ದಾರೆ. ಧರ್ಮಸ್ಥಳ ಠಾಣೆಯ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ಮಾಡಿದ್ದಾರೆ. ಬಾಲಕೃಷ್ಣ ಭಟ್ ಅವರ ಪತ್ನಿಯೂ ನಿವೃತ್ತ ಶಿಕ್ಷಕಿಯಾಗಿದ್ದು ಐದು ವರ್ಷಗಳ ಹಿಂದೆ ತೀರಿಕೊಂಡಿದ್ದರು. ಇವರಿಗೆ ಇಬ್ಬರು ಪುತ್ರರಿದ್ದು, ದೊಡ್ಡ ಮಗ ಹರೀಶ್ ಬೆಂಗಳೂರಿನಲ್ಲಿ ಸ್ವಂತ ಗ್ಯಾರೇಜ್ ಹೊಂದಿದ್ದು ಒಳ್ಳೆಯ ಹುಡುಗ ಎಂದು ತಿಳಿದುಬಂದಿದೆ.
ಇನ್ನೊಬ್ಬ ಮಗ ಸುರೇಶ್ ಅಡ್ಡಕಸುಬಿಯಾಗಿದ್ದಾನಂತೆ.? ಸರಿಯಾಗಿ ಕೆಲಸವನ್ನು ಹೊಂದಿಲ್ಲದ ಇತ ಮಧ್ಯ ವ್ಯಸನಿಯಾಗಿದ್ದು ಪುತ್ತೂರಿಗೆ ಕೆಲಸಕ್ಕೆಂದು ಹೋಗಿ ಬರುವುದು ಮಾಡುತ್ತಿದ್ದ. ಜೊತೆಗೆ ಕುಡಿತದ ಚಟವನ್ನೂ ಹೊಂದಿದ್ದರಿಂದ ಅಪ್ಪನನ್ನು ಹಣಕ್ಕಾಗಿ ಪಿಡಿಸುತ್ತಿದ್ದನಂತೆ.! ಮೇಷ್ಟ್ರು ಮಡದಿ ತೀರಿಹೊದ ನಂತರದಲ್ಲಿ ಮನೆಯಲ್ಲಿ ಅವರೆ ಅಡುಗೆ ಮಾಡಿಕೊಳ್ಳುತ್ತಿದ್ದರಂತೆ. ಕೆಲವೊಮ್ಮೆ ಮಗನೂ ಜೊತೆಗೆ ಇರುತ್ತಿದ್ದ ಎಂದು ತಿಳಿದುಬಂದಿದೆ. ಇಂದು ಕೃತ್ಯ ನಡೆಯುವಾಗ ಮಗ ಎಲ್ಲಿದ್ದ ಎನ್ನುವುದು ಯಾರಿಗೂ ಗೊತ್ತಿಲ್ಲ. ಘಟನೆ ತಿಳಿದು ಸ್ಥಳೀಯರು ಶಿಕ್ಷಕರ ಮನೆಯ ಹತ್ತಿರ ಜಮಾಯಿಸುದಾಗ ಮನೆಯಲ್ಲಿ ಮಗನೂ ಇದ್ದ. ಪೊಲೀಸರು ಬಂದು ಪ್ರಶ್ನೆ ಮಾಡಿದಾಗ, ನಾನು ಬರುವಾಗ ತಂದೆ ಅಂಗಳದಲ್ಲಿ ಬಿದ್ದು ಕೊಲೆಯಾಗಿದ್ದರು.ಯಾವಾಗಲೂ ನಾನೇ ಅಡುಗೆ ಮಾಡಿ ಕೊಡುತ್ತಿದ್ದೆ ಎಂದು ತಿಳಿಸಿದ್ದಾನೆ. ಮನೆಯಲ್ಲಿ ಬೇರಾವುದೇ ವಸ್ತು ಕಳವಾಗಿರುವುದು ಕಂಡುಬಂದಿಲ್ಲ. ಮಗನ ಬಗ್ಗೆಯೇ ಸ್ಥಳೀಯರಿಗೆ ಬಲವಾದ ಸಂಶಯವಿದೆ ಎನ್ನುವ ಮಾತು ಕೇಳಿಬರುತ್ತಿದೆ.
ಬೆಳಾಲು ಶಾಲೆಯಲ್ಲೇ ಸುದೀರ್ಘ ಕಾಲ ಸೇವೆಗೈದು ನಿವೃತ್ತಿಯಾಗಿದ್ದ ಬಾಲಕೃಷ್ಣ ಭಟ್ ಅವರಿಗೆ ಅಪಾರ ಶಿಷ್ಯ ವೃಂದವೆ ಇದೆ. ಅಕ್ಕಪಕ್ಕದ ಊರಿನ ಅದೆಷ್ಟೋ ವಿಧ್ಯಾರ್ಥಿಗಳ ಪಾಲಿನ ಪಾಠ ಕಲಿಸಿದ ಪ್ರೀತಿಯ ಗುರುವಾಗಿದ್ದಾರೆ. ಹೀಗಾಗಿ ಇವರ ಬಗ್ಗೆ ಸ್ಥಳೀಯರು ಭಯ ಭಕ್ತಿ ಹೊಂದಿದ್ದರು. ಸುದ್ದಿ ತಿಳಿದು ಬಂದವರೆಲ್ಲ ನಮ್ಮ ದೆವರಂತ ಮೇಷ್ಟಿಗೆ ಈ ಸ್ಥಿತಿ ಬರಬಾರದಿತ್ತು ಎಂದು ಸ್ಥಳೀಯರು ದುಃಖಿಸುತ್ತಿದ್ದರೆ ಸಂಪೂರ್ಣ ಗ್ರಾಮದಲ್ಲಿ ಸೂತಕದ ಛಾಯೆ ಆವರಿಸಿತ್ತು…