ಪುರಸಭೆ ಸದಸ್ಯ ರವಿ ಮರ್ಡರ್ ಕೇಸ್: ಆರೋಪಿ ಕಾಲಿಗೆ ಗುಂಡು

ಪುರಸಭೆ ಸದಸ್ಯ ರವಿ ಮರ್ಡರ್ ಕೇಸ್: ಆರೋಪಿ ಕಾಲಿಗೆ ಗುಂಡು

ಅಶ್ವಸೂರ್ಯ/ಶಿವಮೊಗ್ಗ: ಆನೇಕಲ್ ಪುರಸಭೆಯ ಸದಸ್ಯ ರವಿ ಕೊಲೆ ಪ್ರಕರಣದ ಪ್ರಮುಖ ಆರೋಪಿ ಕಾರ್ತೀಕ್‌ ಅಲಿಯಾಸ್‌ ಜೆಕೆಯ ಕಾಲಿಗೆ ಪೊಲೀಸರು ಮೈಸೂರಮ್ಮನ ದೊಡ್ಡಿಯ ಬಳಿ ಬುಧವಾರ ಬೆಳಗಿನ ಜಾವ ಪೋಲಿಸರು ತಮ್ಮ ಸೊಂಟದಲ್ಲಿದ್ದ ರಿವಲ್ವಾರ್ ಗೆ ಕೇಲಸ ಕೊಟ್ಟಿದ್ದಾರೆ.! ಆರೋಪಿ ಕಾಲಿಗೆ ನೆರವಾಗಿ ಗುಂಡು ತೂರಿಸಿದ್ದಾರೆ.
ಜುಲೈ 24ರಂದು ಪುರಸಭೆ ಸದಸ್ಯ ರವಿ ಕೊಲೆಯಾಗಿತ್ತು. ಕೊಲೆಗೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳು ಬೆಂಗಳೂರಿನ ನ್ಯಾಯಾಲಯದಲ್ಲಿ ಶರಣಾಗಿದ್ದರು. ಕೊಲೆಯ ಮತ್ತೊಬ್ಬ ಪ್ರಮುಖ ಆರೋಪಿ ಕಾರ್ತೀಕ್‌ ಅಲಿಯಾಸ್‌ ಜೆಕೆ ತಲೆಮರೆಯಿಸಿಕೊಂಡಿದ್ದ. ಇವನ ಬಂಧನಕ್ಕಾಗಿ ಆನೇಕಲ್‌ ಪೊಲೀಸರು ಎರಡು ತಂಡ ರಚಿಸಿಕೊಂಡು ಕಾರ್ಯಾಚರಣೆ ಇಳಿದಿದ್ದರು.


ಹತ್ಯೆಯಾದ ಆನೇಕಲ್ ಪುರಸಭೆ ಸದಸ್ಯ ರವಿ

ತಾಲ್ಲೂಕಿನ ಮೈಸೂರಮ್ಮನ ದೊಡ್ಡಿಯಲ್ಲಿ ಆರೋಪಿ ಇರುವುದನ್ನು ಖಚಿತ ಪಡಿಸಿಕೊಂಡ ಪೋಲಿಸರು ಬುಧವಾರ ಬೆಳಗಿನ ಜಾವ ದಾಳಿ ನಡೆಸಿದಾಗ ಆರೋಪಿ ತಪ್ಪಿಸಿಕೊಳ್ಳಲು ಯತ್ನಿಸಿದ್ದ.ಪೋಲಿಸರು ಹಲವು ಬಾರಿ ಸೂಚನೆ ನೀಡಿದರೂ ಶರಣಾಗಲಿಲ್ಲ. ಎರಡು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಲಾಯಿತು. ಆರೋಪಿಯನ್ನು ಹಿಡಿಯಲು ಹೋದ ಪೊಲೀಸ್‌ ಕಾನ್‌ಸ್ಟೇಬಲ್‌ ಸುರೇಶ್‌ ಮೇಲೆ ಕಾರ್ತೀಕ್‌ ಹಲ್ಲೆ ನಡೆಸಲು ಮುಂದಾದಾಗ ಎಚ್ಚೆತ್ತುಕೊಂಡ ಆನೇಕಲ್‌ ಇನ್‌ಸ್ಪೆಕ್ಟರ್‌ ತಿಪ್ಪೇಸ್ವಾಮಿ ಆರೋಪಿ ಕಾಲಿಗೆ ಗುಂಡು ಹೊಡೆದಿದ್ದಾರೆ.! ಗುಂಡು ಬಲಗಾಲಿನ ಮಂಡಿಯ ಕೆಳಗೆ ತೂರಿಕೊಂಡು ಹೋಗಿದೆ. ಪೋಲಿಸರ ಗುಂಡು ಕಾಲನ್ನು ಸೀಳುತ್ತಿದ್ದಹಾಗೆ ಆರೋಪಿ ನಿಂತ ಜಾಗದಲ್ಲೆ ಕುಸಿದು ಬಿದಿದ್ದಾನೆ. ಕೂಡಲೇ ಆತನನ್ನು ವಶಕ್ಕೆ ಪಡೆದು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ.

ಆರೋಪಿಯ ವಿರುದ್ಧ ಆನೇಕಲ್‌, ಅತ್ತಿಬೆಲೆ, ಕುಂಬಳಗೋಡು, ಬನ್ನೇರುಘಟ್ಟ ಸೇರಿದಂತೆ ವಿವಿಧೆಡೆ ಪೊಲೀಸ್‌ ಠಾಣೆಯಲ್ಲಿ 13 ಪ್ರಕರಣ ದಾಖಲಾಗಿದ್ದು.ಕ್ರಿಮಿನಲ್ ಚಟುವಟಿಕೆಯೆ ಇವನ‌ ಬದುಕಾಗಿದೆ. ಇತನ ಮೇಲೆ ಎಲ್ಲಾ ಠಾಣೆಗಳಲ್ಲಿಯೂ ರೌಡಿಶೀಟ್ ತೆರೆಯಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಎಎಸ್ಪಿ ನಾಗರಾಜು, ಡಿವೈಎಸ್ಪಿ ಮೋಹನ್‌ ಕುಮಾರ್ ಸ್ಥಳಕ್ಕೆ ಭೇಟಿ ನೀಡಿದ್ದರು.ಆರೋಪಿಗೆ ಗುಂಡೇಟು ಹೊಡೆದ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಸ್ಥಳ ಪರಿಶೀಲಿಸಿದರು

Leave a Reply

Your email address will not be published. Required fields are marked *

Optimized by Optimole
error: Content is protected !!