ಶಾಲೆಗೆ ಗನ್ ತಂದು 3ನೇ ಕ್ಲಾಸ್ ವಿದ್ಯಾರ್ಥಿಗೆ ಗುಂಡಿಕ್ಕಿದ ನರ್ಸರಿ ಬಾಲಕ.!!
ಸೆಂಟ್ ಜಾನ್ಸ್ ಶಾಲೆಯ ಶಿಕ್ಷಕರು ತಕ್ಷಣವೇ 5 ವರ್ಷದ ಬಾಲಕನ ಕೈಯಲಿದ್ದ ಗನ್ ಅನ್ನು ವಶಕ್ಕೆ ಪಡೆದು, ಅವರ ಪೋಷಕರನ್ನು ಶಾಲೆಗೆ ಕರೆಸಿದ್ದಾರೆ. ಜೊತೆಗೆ ಘಟನೆಯ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮನೆಯ ಟೇಬಲ್ ಮೇಲೆ ಇಟ್ಟಿದ್ದ ಗನ್ ಅನ್ನು ಅವಕಾಶ ನೋಡಿ ಬಾಲಕ ತನ್ನ ಪುಸ್ತಕದ ಬ್ಯಾಗಿನಲ್ಲಿ ಹಾಕಿಕೊಂಡು ಶಾಲೆಗೆ ತಂದಿರುವುದಾಗಿ ಕೃತ್ಯ ಎಸಗಿದ ಬಾಲಕನ ತಂದೆ ಹೇಳಿಕೆ ನೀಡಿದ್ದಾರೆ.ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಮುಂದುವರೆದಿದೆ.
ಅಶ್ವಸೂರ್ಯ/ಶಿವಮೊಗ್ಗ: ನರ್ಸರಿಗೆ ಹೋಗ್ತಿದ್ದ 5 ವರ್ಷದ ಬಾಲಕನೋರ್ವ ತನ್ನ ಸ್ಕೂಲ್ ಬ್ಯಾಗ್‌ನಲ್ಲಿ ಪಿಸ್ತೂಲ್ ತೆಗೆದುಕೊಂಡು ಹೋಗಿ 3ನೇ ಕ್ಲಾಸ್ ವಿದ್ಯಾರ್ಥಿಗೆ ಗುಂಡು ಹೋಡೆದಿದ್ದಾನೆ.!!
ಶಾಲಾ ಮಕ್ಕಳು ಗುಂಡಿನ ದಾಳಿ ನಡೆಸುವಂತಹ ಘಟನೆಗಳನ್ನು ನಾವು ಅಮೆರಿಕಾದಂತ ದೇಶಗಳಲ್ಲಿ ನಡೆದಿರುವುದನ್ನು ನಾವು ಕೇಳಿದ್ದೇವೆ. ಆದರೆ ಈಗ ಭಾರತದ ಬಿಹಾರದಲ್ಲಿ ಇಂತಹದೊಂದು ಘಟನೆ ನಡೆದಿದೆ ಎಂದರೆ ನೀವು ನಂಬಲೆಬೇಕು. ನರ್ಸರಿಗೆ ಹೋಗ್ತಿದ್ದ 5 ವರ್ಷದ ಬಾಲಕನೋರ್ವ ತನ್ನ ಸ್ಕೂಲ್ ಬ್ಯಾಗ್‌ನಲ್ಲಿ ಪಿಸ್ತೂಲ್ ಒಂದನ್ನು ತೆಗೆದುಕೊಂಡು ಶಾಲೆಗೆ ಹೋಗಿದ್ದು, 3ನೇ ಕ್ಲಾಸ್ ವಿದ್ಯಾರ್ಥಿಗೆ ಗುಂಡು ತೂರಿಸಿದ್ದಾನೆ. ಈ ಅವಘಡದಲ್ಲಿ ಅದೃಷ್ಟವಶಾತ್ ಗುಂಡೇಟಿಗೊಳಗಾದ ಬಾಲಕ ಗಾಯಗೊಂಡು ಬದುಕುಳಿದಿದ್ದಾನೆ.!
ಉತ್ತರ ಬಿಹಾರದ ಸೊಪೌಲ್ ಪ್ರದೇಶದ ಸೇಂಟ್ ಜಾನ್ಸ್ ಬೋರ್ಡಿಂಗ್ ಸ್ಕೂಲ್‌ನಲ್ಲಿ ಈ ಒಂದು ಪ್ರಕರಣ ನೆಡೆದಿದ್ದು ಸ್ಥಳೀಯರನ್ನು ಬೆಚ್ಚಿ ಬಿಳಿಸಿದೆ.
ಈ ಪ್ರಕರಣದ ಬಗ್ಗೆ ಪೊಲೀಸರು ಹೇಳುವಂತೆ ನರ್ಸರಿಗೆ ಹೋಗುತ್ತಿದ್ದ 5 ವರ್ಷದ ಬಾಲಕ ತನ್ನ ಬ್ಯಾಗ್‌ನಲ್ಲಿ ಗನ್ ಅಡಗಿಸಿಟ್ಟುಕೊಂಡು ಶಾಲೆಗೆ ಹೋಗಿದ್ದಾನೆ.! ಅಲ್ಲಿ ಮೂರನೇ ತರಗತಿಯ ಹತ್ತು ವರ್ಷದ ಬಾಲಕನ ಕೈಗೆ ಗುಂಡಿಕ್ಕಿದ್ದಾನೆ.! ಗುಂಡು ಬಿದ್ದಂತಹ ಬಾಲಕನಿಗೆ ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು ಪ್ರಾಣಕ್ಕೆ ತೊಂದರೆ ಇಲ್ಲ ಎಂದು ಪೊಲೀಸರು ಹೇಳಿದ್ದಾರೆ.
ಬಿಹಾರದ ಸೊಪೌಲ್ ಜಿಲ್ಲೆಯಲ್ಲಿ ನಡೆದಿದೆ. ಜಿಲ್ಲೆಯಲ್ಲಿ ತ್ರಿವೇಣಿಗಂಜ್ ಪೊಲೀಸ್ ಠಾಣೆಯ ಸರಹದ್ದಿನಲ್ಲಿರುವ ಸೆಂಟ್ ಜೋಸೆಫ್ ಶಾಲೆಯಲ್ಲಿ ಈ ಪ್ರಕರಣ ನಡೆದಿದೆ. ಬುಧವಾರ ಬೆಳಗ್ಗೆ 9 ಗಂಟೆಗೆ ಶಾಲೆಯಲ್ಲಿ ಅಸೆಂಬ್ಲಿ ವೇಳೆ ಈ ಘಟನೆ ನಡೆದಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶೈಶವ್ ಯಾದವ್ ತಿಳಿಸಿದ್ದಾರೆ.
ನಾನು ಶಾಲೆಗೆ ಹೋಗುತ್ತಿದ್ದ ವೇಳೆ ಆತ ಅವನ ಬ್ಯಾಗಿನಿಂದ ಗನ್ಅನ್ನು ಹೊರತೆಗೆದು ನನಗೆ ಶೂಟ್ ಮಾಡಿದ, ನಾನು ತಡೆಯಲು ಯತ್ನಿಸಿದರು ಆತ ನನ್ನ ಕೈಗೆ ಗುಂಡಿಕ್ಕಿದ ಎಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಾಲಕ ಹೇಳಿದ್ದಾನೆ. ಅಲ್ಲದೇ ಏನಾದರೂ ಗುಂಡಿಕ್ಕಿದ ಬಾಲಕನಿಗೂ ಈತನಿಗೂ ವೈಷಮ್ಯವಿತ್ತೇ ಎಂದು ಕೇಳಿದಾಗ ಉತ್ತರಿಸಿದ ಬಾಲಕ ನಮ್ಮ ಮಧ್ಯೆ ಯಾವುದೇ ಕಿತ್ತಾಟ ನಡೆದಿಲ್ಲ ಎಂದಿದ್ದಾನೆ.
ಘಟನೆಯ ನಂತರ ಬಾಲಕನ ಕೈಯಲ್ಲಿದ್ದ ಗನ್ ಕಿತ್ತುಕೊಂಡ ಶಿಕ್ಷಕರು ಆತನ ಪೋಷಕರನ್ನು ಶಾಲೆಗೆ ಕರೆಸಿದ್ದಾರೆ.ಪೋಲಿಸರಿಗು ಮಾಹಿತಿ ನೀಡಿದ್ದರಿಂದ ಅವರು ಘಟನ ಸ್ಥಳಕ್ಕೆ ಆಗಮಿಸಿ ಸ್ಥಳ ಪರಿಶೀಲನೆಮಾಡಿ ಗುಂಡು ಹೋಡೆದ ಪೋಷಕರನ್ನು ವಿಚಾರಣೆಗೆ ಒಳಪಡಿಸಿದ್ದಾರೆ.ನರ್ಸಿರಿ ಬಾಲಕ ಮನೆಯ ಟೇಬಲ್ ಮೇಲೆ ಇದ್ದ ಗನ್ ಅನ್ನು ಯಾರಿಗೂ ಗೊತ್ತಾಗದಂತೆ ಶಾಲೆಗೆ ತಂದು ಈ ಕೃತ್ಯ ಎಸಗಿದ್ದಾನೆ. ಘಟನೆಯ ಬಳಿಕ ಭಯಭೀತರಾದ ಇನ್ನುಳಿದ ಮಕ್ಕಳ ಪೋಷಕರು ಶಾಲೆ ಮುಂದೆ ಜಮಾಯಿಸಿದ್ದು, ಆಡಳಿತ ಮಂಡಳಿ ವಿರುದ್ಧ ಘೋಷಣೆ ಕೂಗಿದ್ದಾರೆ. ಅಲ್ಲದೇ ಜಿಲ್ಲೆಯಾದ್ಯಂತ ಶಾಲೆಗೆ ಆಗಮಿಸುವ ಮೊದಲು ಮಕ್ಕಳ ಬ್ಯಾಗ್‌ನ್ನು ಚೆಕ್ ಮಾಡಿ ಶಾಲೆಗೆ ಕಳಿಸುವಂತೆ ಪೋಷಕರಿಗೆ ಪೋಲಿಸರು ಸೂಚಿಸಿದ್ದಾರೆ.