ಅಮ್ಮನಿಗೆ ಸಾಲ ಕೊಟ್ಟು ಆಕೆಯ ಮಗಳನ್ನೆ ಪ್ರೀತಿಸಿದ.! ಪ್ರೀತಿಸಿದಾಕೆ ಮದುವೆಯಾಗು ಎಂದಿದ್ದಕ್ಕೆ ಉಸಿರುಗಟ್ಟಿಸಿ ಕೊಂದ.!

ಅಮ್ಮನಿಗೆ ಸಾಲ ಕೊಟ್ಟ ಆಕೆಯ ಮಗಳನ್ನೆ ಪ್ರೀತಿಸಿದ.! ಪ್ರೀತಿಸಿದಾಕೆ ಮದುವೆಯಾಗು ಎಂದಿದ್ದಕ್ಕೆ ಉಸಿರುಗಟ್ಟಿಸಿ ಕೊಂದ.!

ಅಶ್ವಸೂರ್ಯ/ಶಿವಮೊಗ್ಗ: ಶಿವಮೊಗ್ಗ ಜಿಲ್ಲೆ ತಾಳಗುಪ್ಪ ಮೂಲದ ಯುವಕ ಸೃಜನ್ ತೀರ್ಥಹಳ್ಳಿಯಲ್ಲಿ ಫೈನಾನ್ಸ್ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಾ ಅ ಸಮಯದಲ್ಲಿ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ಗುಣವಂತೆ ಸಮೀಪದ ಹಚ್ಚರಡಿ ಗ್ರಾಮದ ಹೆಂಗಸೊಬ್ಬರಿಗೆ ತಾನು ಕೇಲಸ ಮಾಡುವ ಫೈನಾನ್ಸ್ ಸಂಸ್ಥೆಯಿಂದ ಸಾಲ ಕೊಟ್ಟಿದ್ದ, ಅ ನಂತರದಲ್ಲಿ ಸಾಲ ವಸೂಲಾತಿಗಾಗಿ ಕೊಪ್ಪದ ಹಚ್ಚರಡಿ ಗ್ರಾಮಕ್ಕೆ ಹೋಗುತ್ತಿದ್ದ ಸೃಜನ್ ಸಾಲ ವಸೂಲಾತಿಯ ಜೋತೆಗೆ ಆಕೆಯ ಮಗಳ ಜೊತೆಗೆ ಸಲುಗೆ ಬೆಳೆಸಿದ ಸಲುಗೆ ಪ್ರೀತಿಗೆ ತಿರುಗಿ ಎರಡು ವರ್ಷಗಳೆ ಉರುಳಿತ್ತು.! ತಾನು ಪ್ರೀತಿಸಿದ ಯುವತಿ ಸೌಮ್ಯಳ ಜೋತೆಗೆ ಎಲ್ಲೆಂದರಲ್ಲಿ ಸುತ್ತಾಡಿ ಪ್ರೀತಿ ಪ್ರೇಮದ ಆಟವಾಡಿ ಇನ್ನೇನು ಇಬ್ಬರು ಮದುಯಾಗುವ ಹಂತಕ್ಕೆ ಬಂದು ನಿಂತಿದ್ದರು. ಅಷ್ಟೋತ್ತಿಗಾಗಲೆ ಸೃಜನ್ ಗೆ ತೀರ್ಥಹಳ್ಳಿಯಿಂದ ಸಾಗರದ ಫೈನಾನ್ಸ್ ಕಛೆರಿಗೆ ವರ್ಗವಾಗಿದ್ದನು.

ಸಾಗರಕ್ಕೆ ವರ್ಗಾವಣೆಯಾದ ಕೇಲವೆ ದಿನಗಳಲ್ಲಿ ಸೃಜನ್ ತಾನು ಪ್ರೀತಿಸುತ್ತಿದ್ದ ಯುವತಿ ಸೌಮ್ಯಳನ್ನು ಮರೆತು ಇನ್ನೊಬ್ಬಳನ್ನು ಕೆಡವಿಕೊಂಡು ಪ್ರೀತಿಯ ಪಾಠ ಶುರುಹಚ್ಚಿಕೊಂಡಿದ್ದನಂತೆ.! ಅದು ಹೇಗೊ ಈತನನ್ನು ಪ್ರೀತಿಸಿ ಮದುವೆ ಮಾಡಿಕೊಳ್ಳಬೇಕೆಂದು ಕನಸು ಕಂಡಿದ್ದ ಯುವತಿ ಸೌಮ್ಯಳಿಗೆ ಗೊತ್ತಾಗಿದೆ. ಇನ್ನೇನು ನನ್ನನ್ನು ನಂಬಿಸಿ ಪ್ರೀತಿಮಾಡಿದ ಸೃಜನ್ ನನಗೆ ಮೋಸಮಾಡಿ ಬೇರೊಬ್ಬಳ ಜೋತೆಗೆ ಮದುವೆಯಾಗುತ್ತಾನೆ ಎನ್ನುವ ಅನುಮಾನ ಕಾಡಲು ಶುರುವಾಗಿದ್ದ ಸೌಮ್ಯ ತಕ್ಷಣವೇ ಸೃಜನ್ ಗೆ ನನ್ನನ್ನು ಮದುವೆಯಾಗು ಎಂದು ರಚ್ಚೆ ಹಿಡಿದಿದ್ದಾಳೆ.! ಸೌಮ್ಯ ಜೋತೆಗೆ ತನ್ನ ತೀಟೆ ತೀರಿಸಿಕೊಳ್ಳಲಷ್ಟೆ ಕಳೆದ ಎರಡು ವರ್ಷದಿಂದ ಪ್ರೀತಿಯ ನಾಟಕವಾಡಿದ್ದ ಸೃಜನ್ ಇನ್ನೇನು ಇವಳು ನನ್ನನ್ನು ಬಿಡುವಹಾಗೆ ಕಾಣುತ್ತಿಲ್ಲ ಎಂದು ತೀರ್ಮಾನಿಸಿ ಆಕೆಯನ್ನು ನಿರ್ಜನ ಸ್ಥಳಕ್ಕೆ ಕರೆದೊಯ್ದು ಉಸಿರುಗಟ್ಟಿಸಿ ಕೊಲೆ ಮಾಡಿ ಹೂತು ಹಾಕಿದ್ದಾನೆ ಪರಮ ನೀಚ ಪ್ರೇಮಿ.!

ಸೌಮ್ಯಳನ್ನು ಕೊಲೆಮಾಡಿದ ನಂತರ ಬೈಕಿನಲ್ಲಿ ತಾಳಗುಪ್ಪಕ್ಕೆ ತೆರಳಿದ ಸೃಜನ್ ಬೈಕ್ ಮನೆಹತ್ತಿರ ಬಿಟ್ಟು ಹೆಣ ಸಾಗಿಸಲು ಕಾರನ್ನು ತೆಗೆದುಕೊಂಡು ಮರಳಿ ಸೌಮ್ಯಳನ್ನು ಹತ್ಯೆಮಾಡಿದ ಸ್ಥಳಕ್ಕೆ ಹೋಗಿ ಆಕೆಯ ಮೃತದೇಹವನ್ನು ಕಾರಿನಲ್ಲಿ ಹಾಕಿಕೊಂಡು ಆನಂದಪುರದ ರೈಲ್ವೆ ಟ್ರ್ಯಾಕ್ ಬಳಿಯ ಮುಂಬಾಳು ಕ್ರಾಸ್‌ ಬಳಿ ಜಲಜೀವನ್ ಕಾಮಗಾರಿಗೆಂದು ತೋಡಿದ್ದ ಕಾಲುವೆಯ ಗುಂಡಿಗೆ ಹಾಕಿ ಮಣ್ಣು ಮುಚ್ಚಿದ್ದಾನೆ..!!

ಪ್ರಕಕರಣದ ಹಿನ್ನಲೆ

ಪ್ರೀತಿ ಪ್ರೇಮ,ಸರಸ….ಲವ್ ದೋಖಾ

 ಖಾಸಗಿ ಫೈನಾನ್ಸ್ ಸಂಸ್ಥೆಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದ ಸಾಗರ ತಾಲೂಕಿನ ತಾಳಗುಪ್ಪ ಮೂಲದ ಸೃಜನ್ 2021ರಲ್ಲಿ ತೀರ್ಥಹಳ್ಳಿಯ ಫೈನಾನ್ಸ್ ಸಂಸ್ಥೆಯಲ್ಲಿ ಸಂಸ್ಥೆಯಿಂದ ಸಾಲಪಡೆದವರ ಮನೆ ಬಾಗಿಲಿಗೆ ಹೋಗಿ ಕೊಟ್ಟ ಸಾಲದ ಹಣ ವಸೂಲಾತಿ ಮಾಡುತ್ತಿದ್ದ. ಆಗಾಗ ಇದೇ ಬ್ರ್ಯಾಂಚಿಗೆ ಸಂಬಂಧಿಸಿದಂತೆ ಕೊಪ್ಪ ತಾಲೂಕಿಗೂ ಹಣದ ವಸೂಲಾತಿಗೆ ಹಳ್ಳಿ ಹಳ್ಳಿಗೆ ಹೊಗುತಿದ್ದ. ಹೀಗೆ ಕೊಪ್ಪ ತಾಲೂಕಿನ ಗುಣವಂತೆ ಸಮೀಪದ ಹಚ್ಚರಡಿ ಗ್ರಾಮದ ಮೃತ ಯುವತಿ ಸೌಮ್ಯಳ ಅಮ್ಮನಿಗೂ ಸಾಲ ಕೊಟ್ಟಿದ್ದ ಫೈನಾನ್ಸ್ ಸಂಸ್ಥೆಯ ಪ್ರತಿನಿಧಿಯಾಗಿ ಅವರ ಮನೆಗೆ ಹಣ ವಸೂಲಾತಿಗೆ ಹೊಗುತ್ತಿದ್ದ ಸೃಜನ್ ಅಲ್ಲಿ ಸಾಲ ಪಡೆದ ಹೆಂಗಸಿನ ಮಗಳು ಸೌಮ್ಯಾಳನ್ನು ಪರಿಚಯ ಮಾಡಿಕೊಂಡಿದ್ದಾನೆ. ಇಬ್ಬರ ಮೊಬೈಲ್ ನಂಬರ್ ವಿನಿಮಯವಾಗಿದೆ.! ನಂತರ ಆಕೆಯೊಂದಿಗೆ ಚಾಟಿಂಗ್ ಮಾಡುತ್ತಾ ಮಾಡುತ್ತಲೆ ಅತಿಯಾದ ಸಲುಗೆ ಸ್ನೇಹಕ್ಕೆ ತಿರುಗಿದೆ. ಇವರಿಬ್ಬರ ಸ್ನೇಹ ಸಲುಗೆ ಕೇಲವೆ ದಿನಗಳಲ್ಲಿ ಪ್ರೀತಿಯ ಸುಳಿಗೆ ಸಿಲುಕಿದೆ.

ಸೃಜನ್ ಹಾಗೂ ಸೌಮ್ಯಾ ಇಬ್ಬರೂ ಒಬ್ಬರನೊಬ್ಬರು ಬಿಟ್ಟಿರಲಾರದಷ್ಟು ಮಟ್ಟಿಗೆ ಪ್ರೀತಿಯಲ್ಲಿ ಮುಳುಗಿದ್ದಾರೆ.! ಪ್ರಣಯ ಪಕ್ಷಿಗಳಾಗಿ ಹಾರಾಡಿದ್ದಾರೆ. ನಂತರ ಇವರಿಬ್ಬರ ಪ್ರೀತಿಯ ವಿಚಾರ ಸೌಮ್ಯಾಳ ತಾಯಿಗೂ ತಿಳಿದಿತ್ತು. ಜೊತೆಗೆ ಮದುವೆಗೆ ಸೌಮ್ಯಳ ತಾಯಿ ಕಡೆಯಿಂದ ಗ್ರೀನ್ ಸಿಗ್ನಲ್ ಸಿಕ್ಕಿ ಮೇಲಂತೂ ಇಬ್ಬರ ತಿರುಗಾಟ ಪ್ರೀತಿಗೆ ಕಡಿವಾಣ ಇಲ್ಲದಂತಾಗಿತ್ತು ಹೇಗೊ ಮುಂದು ನನ್ನ ಅಳಿಯ ಆಗುವವನು ಎನ್ನುವ ಬಲವಾದ ನಂಬಿಕೆಯಿಂದ ಸೌಮ್ಯಳ ಅಮ್ಮ ಸೃಜನ್ ನನ್ನು ನಂಬಿದ್ದರು. ಆದರೆ ಕೆಳ ಸಮುದಾಯದ ಸೌಮ್ಯಾಳನ್ನು ಮೇಲ್ ವರ್ಗದ ಸೃಜನ್ ಮದುವೆ ಆಗುವುದಕ್ಕೆ ಒಪ್ಪಿರಲಿಲ್ಲವಂತೆ.! ತೀಟೆ ಚಪಲಕ್ಕೆ ಪ್ರೀತಿಸಿದ ಸೃಜನ್ ಈಗಲೇ ಮದುವೆ ಬೇಡ, ಮನೆಯ ಜವಾಬ್ದಾರಿ ನನ್ನ ಮೇಲಿದ್ದು, ಆ ಜವಾಬ್ದಾರಿ ಮುಗಿದ ಬಳಿಕ ಮದುವೆ ಮಾಡಿಕೊಳ್ಳುವುದಾಗಿ ಹೇಳಿ ಮದುವೆಯನ್ನು ಮುಂದೂಡುತ್ತಲೆ ಬಂದಿದ್ದನಂತೆ.!? ಎಂದು ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ಇನ್ನು ಜು.2ರಂದು ತನ್ನ ಮನೆಯಿಂದ ಹೊರಟು ಕೊಪ್ಪದಿಂದ ಸಾಗರಕ್ಕೆ ಹೋದ ಸೌಮ್ಯ ನೆರವಾಗಿ ಸೃಜನ್ ಕೇಲಸ ಮಾಡುವ ಫೈನಾನ್ಸ್ ಆಫಿಸಿಗೆ ಹೋಗಿದ್ದಾಳೆ. ಇತ್ತ ಹೊರ ಹೋಗಿ ಬರುತ್ತೇನೆ ಎಂದು ಮನೆಯಿಂದ ಹೊರಹೋದ ಮಗಳು ರಾತ್ರಿಯಾದರೂ ವಾಪಸ್ ಮನೆಗೆ ಬಂದಿರಲಿಲ್ಲ ಸೌಮ್ಯಳ ಹೆತ್ತವರು ಆತಂಕಗೊಂಡಿದ್ದಾರೆ.ಮೊದಲೆ ಸೌಮ್ಯಾಳ ಪ್ರೀತಿ ವಿಷಯ ಗೊತ್ತಿದ್ದ ಆಕೆಯ ತಾಯಿ, ಮಗಳ ಮೊಬೈಲ್‌ಗೆ ಫೋನ್ ಮಾಡಿದ್ದರೆ. ಆದರೆ ಆಕೆಯ ಮೊಬೈಲ್ ಸ್ವಿಚ್ ಆಫ್‌ ಆಗಿತ್ತು. ಬಳಿಕ ಸೃಜನ್‌ಗೆ ಫೋನ್ ಮಾಡಿದಾಗ ಮೊಬೈಲ್ ಬ್ಲೂಟೂತ್ ಕೊಡಿಸಿ ಬಸ್ ಹತ್ತಿಸಿದ್ದೇನೆ ಎಂದು ಸುಳ್ಳು ಹೇಳಿದ್ದಾನೆ.ಅನುಮಗೊಂಡ ಪೋಷಕರು ಜು.3ರಂದು ಕೊಪ್ಪ ಠಾಣೆಯಲ್ಲಿ ಮಗಳ ನಾಪತ್ತೆ ಪ್ರಕರಣ ದಾಖಲಿಸಿದ್ದಾರೆ.

ತಕ್ಷಣವೇ ಕಾರ್ಯಚರಣೆಗೆ ಇಳಿದ ಕೊಪ್ಪ ಪೋಲಿಸರ ತಂಡ ಸಾಕಷ್ಟು ಮಾಹಿತಿ ಕಲೆಹಾಕಿದ ನಂತರದಲ್ಲಿ ಯುವತಿಯ ಪತ್ತೆಗಾಗಿ ಸಾಗರದ ಕಡೆಗೆ ಹೊರಟಿದ್ದಾರೆ ಸೌಮ್ಯಳ ಅಮ್ಮನ ಹೇಳಿಕೆಯಂತೆ ಪೊಲೀಸರಿಗೆ ಸೃಜನ್ ಮೇಲೆ ಸಣ್ಣದೊಂದು ಅನುಮಾನವು ಇತ್ತು ಜೋತೆಗೆ ತಮ್ಮ ತನಿಖೆಯಿಂದ ಆತನ ಮೇಲೆ ಬಲವಾದ ಅನುಮಾನವಿತ್ತು ಕೂಡಲೇ ಆತನನ್ನು ಸಾಗರದಲ್ಲಿ ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ. ಪೋಲಿಸರನ್ನು ನೋಡುತ್ತಿದ್ದ ಹಾಗೆ ಅದುರಿಹೋಗಿದ್ದ ಸೃಜನ್ ಎಲ್ಲವನ್ನೂ ಬಾಯಿ ಬಿಟ್ಟಿದ್ದ.? ನಾನು ಆರೋಗ್ಯ ತರಬೇತಿಗೆ ಹೋಗುವುದಿದೆ ಎಂದು ಮನೆಯಲ್ಲಿ ಹೇಳಿ ಹೊರಟಿದ್ದ ಸೌಮ್ಯಾ ಜು.2ರಂದು ತನ್ನ ಪ್ರಿಯತಮ ಸೃಜನ್‌ನನ್ನು ನೋಡಲು ಸಾಗರಕ್ಕೆ ಹೋಗಿದ್ದಳು. ಈ ವೇಳೆ ಇಬ್ಬರ ನಡುವೆ ಮದುವೆ ವಿಚಾರದಲ್ಲಿ ವಾಗ್ವಾದ ನಡೆದು ಜಗಳವಾಗಿದೆ. ನನ್ನನ್ನು ಮದುವೆ ಮಾಡಿಕೊಳ್ಳಲೇಬೇಕು ಎಂದು ಯುವತಿ ಸೌಮ್ಯಾ ಹಠಹಿಡಿದಿದ್ದಾಳೆ. ಇದರಿಂದ ಕೋಪಗೊಂಡಿದ್ದ ಸೃಜನ್ ಸೌಮ್ಯಾಳನ್ನು ಅಲ್ಲಿಂದ ನಿರ್ಜನ ಸ್ಥಳಕ್ಕೆ ಕರೆದೊಯ್ದು ಹೊಡೆದಿದ್ದಾನೆ ಆಕೆ‌ ನೆಲಕ್ಕೆ ಬಿಳುತಿದ್ದಂತೆ ಆಕೆಯ ಕುತ್ತಿಗೆ ಮೇಲೆ ಕಾಲಿಟ್ಟು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ. ನಂತರ ಆಕೆಯ ಮೃತದೇಹವನ್ನು ಅಲ್ಲೆ ಬಿಟ್ಟು ಬೈಕಿನಲ್ಲಿ ತಾಳಗುಪ್ಪಕ್ಕೆ ತೆರಳಿ ಮತ್ತೆ ಅಲ್ಲಿಂದ ಹೆಣಸಾಗಿಸಲು ಕಾರನ್ನು ತೆಗೆದುಕೊಂಡು ಸೌಮ್ಯಳನ್ನು ಕೊಲೆಮಾಡಿದ್ದ ಸ್ಥಳಕ್ಕೆ ಬಂದಿದ್ದಾನೆ. ಸೌಮ್ಯಳ ಮೃತದೇಹವನ್ನು ಕಾರಿನಲ್ಲಿ ಕೊಂಡೊಯ್ದು ಆನಂದಪುರದ ರೈಲ್ವೆ ಟ್ರ್ಯಾಕ್ ಬಳಿಯ ಮುಂಬಾಳು ಕ್ರಾಸ್‌ ಬಳಿ ಜಲಜೀವನ್ ಮಿಷನ್ ಕಾಮಗಾರಿಗಾಗಿ ಪೈಪ್ ಅಳವಡಿಸಲು ತೋಡಿದ್ದ ಗುಂಡಿಯಲ್ಲಿ ಸೌಮ್ಯಳ ಮೃತದೇಹವನ್ನು ಹೂತು ಹಾಕಿ ಎಸ್ಕೇಪ್ ಆಗಿದ್ದ ಸೃಜನ್.

ಮೊಬೈಲ್ ಸಿ ಡಿ ಆರ್ ನಿಂದ ಸೌಮ್ಯ ಹತ್ಯೆ ಪ್ರಕರಣ ಬೆಳಕಿಗೆ:

ಯುವತಿ ಸೌಮ್ಯ ನಾಪತ್ತೆ ಪ್ರಕರಣದ ದಾಖಲಿಸಿಕೊಂಡ ಕೊಪ್ಪ ಠಾಣೆಯ ಪೋಲಿಸರಿಗೆ ಸಣ್ಣ ಸುಳಿವು ಕೂಡ ಇರಲಿಲ್ಲ. ಜು.3ರಿಂದ 19ರವರೆಗೆ ಎಲ್ಲ ರೀತಿಯ ಪ್ರಯತ್ನ ನಡೆಸಿದ್ದರೂ ಸೌಮ್ಯಾಳ ಸುಳಿವು ಮಾತ್ರ ಸಿಕ್ಕಿರಲಿಲ್ಲ.ತಕ್ಷಣ ಎಚ್ಚೆತ್ತುಕೊಂಡ ಕೊಪ್ಪ ಠಾಣೆ ಪೊಲೀಸರು ಸೌಮ್ಯಾಳ ಮೊಬೈಲ್ ಸಿಡಿಆರ್ (ಕಾಲ್ ರೇಕಾರ್ಡರ್) ಪರಿಶೀಲಿಸಿದಾಗ ಸೃಜನ್‌ಗೆ ಹಲವು ಬಾರಿ ಕರೆ ಮಾಡಿದ್ದು ಬೆಳಕಿಗೆ ಬಂದಿದೆ. ಇದನ್ನು ಅರಿತ ಪೊಲೀಸರು ಸೃಜನ್‌ ನನ್ನು ಬಂಧಿಸಿ ತೀವ್ರ ವಿಚಾರಣೆಗೆ ಒಳಪಡಿಸಿದಾಗ ಸೃಜನ್ ಪೊಲೀಸರ ಬಳಿ ಕೊಲೆಯ ಸಂಪೂರ್ಣ ಮಾಹಿತಿಯನ್ನು ಬಾಯಿ ಬಿಟ್ಟಿದ್ದಾನೆ.
ಪ್ರೀತಿಸಿದ ಹಡುಗಿಯನ್ನೆ ಕೊಂದು “ಪ್ರೀತಿ ಕೊಂದ ಕೊಲೆಗಾರನಾಗಿ” ಜೈಲು ಸೇರಿದ್ದಾನೆ. ಸೌಮ್ಯಳನ್ನು ನಂಬಿಸಿ ಪ್ರೀತಿಯ ನಾಟಕವಾಡಿ ಆಕೆಯ ಜೋತೆಗೆ ತನ್ನ ತೀಟೆ ತಿರಿದ ನಂತರ. ಆಕೆಯಿಂದ ಮದುವೆ ಪ್ರಸ್ತಾಪ ಬಂದಾಗ ಕೊಂದು ಮುಗಿಸಿದ್ದಾನೆ. ಇಂತಹಾ ನೀಚರಿಗೆ ಸರಿಯಾದ ಶಿಕ್ಷೆ ಆಗಬೇಕಿದೆ..ಹೆಣ್ಣು ಮಕ್ಕಳು ಪ್ರೀತಿ ಪ್ರೇಮದ ಸುಳಿಗೆ ಸಿಲುಕುವ ಮುನ್ನ ಈ ಒಂದು ಪ್ರಕರಣ ಪಾಠವಾಗಲಿ.. ಸುಂದರ ಕನಸು ಹೊತ್ತು ಬಾಳಿ ಬದುಕಬೇಕಾಗಿದ್ದ ಸುಂದರ ಯುವತಿ ಸೌಮ್ಯ ಪ್ರೀತಿಯ ಸುಳಿಗೆ ಸಿಲುಕಿ ಪ್ರೀತಿಸಿದವನಿಂದಲೆ ಹತ್ಯೆಯಾಗಿ ಸಾವಿನ ಮನೆ ಸೇರಿದ್ದಾಳೆ……

ಸೌಮ್ಯ ಮರ್ಡರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಮೊಗ್ಗ ಜಲ್ಲಾ ರಕ್ಷಣಾಧಿಕಾರಿ ಜಿ ಕೆ ಮಿಥುನ್ ಕುಮಾರ್ ಐಪಿಎಸ್ ಹೇಳಿದ್ದೇನು?

ಪ್ರೀತಿಸಿದವಳನ್ನೆ ಕತ್ತು ಹಿಸುಕಿ ಕೊಲೆಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಮುಂದುವರೆಸಿದ್ದು ಇವರಿಬ್ಬರ ನಡುವಿನ ಒಂದೊಂದು ವಿಷಯಗಳು ಹೊರಬರುತ್ತಿವೆ. ಈ ಪ್ರಕರಣಕ್ಕೆ ಸಂಬಂಧಿಸಿದ ಕೆಲವೊಂದಷ್ಟು ಮಾಹಿತಿಯನ್ನು ಶಿವಮೊಗ್ಗದ ಎಸ್ಪಿ ಮಿಥುನ್ ಕುಮಾರ್ ಐಪಿಎಸ್ ಸುದ್ದಿಗಾರರಿಗೆ ತಿಳಿಸಿದ್ದಾರೆ. ಬಂಧಿತ ಆರೋಪಿ ಸೃಜನ್ ಸೌಮ್ಯಾಳನ್ನು ಹತ್ಯೆ ಮಾಡಿರುವುದಾಗಿ ಈಗಾಗಲೇ ತಪ್ಪೊಪ್ಪಿಕೊಂಡಿದ್ದಾನೆ. ತಾನು ಪ್ರೀತಿಸಿದ ಯುವತಿ ಸೌಮ್ಯಾಳನ್ನು ಫೈನಾನ್ಸ್‌ನಲ್ಲಿ ಕೆಲಸ ಮಾಡುತ್ತಿದ್ದ ಯುವಕ ಸೃಜನ್ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದು, ಈ ಬಗ್ಗೆ ರಿಪ್ಪನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೂರು ವರ್ಷಗಳ ಹಿಂದೆ ಇಬ್ಬರ ನಡುವೆ ಪರಿಚಯವಾಗಿದೆ ಪರಿಚಯ ಅತಿಯಾದ ಸಲುಗೆಯಿಂದ ಇಬ್ಬರ‌ ನಡುವೆ ಪ್ರೀತಿಯಾಗಿದೆ.

ಇತ್ತೀಚೆಗೆ ಸಾಗರಕ್ಕೆ ವರ್ಗಾವಣೆಗೊಂಡಿದ್ದ ಸೃಜನ್‌ಗೆ ಬೇರೆ ಹುಡುಗಿ ಜತೆ ಸಲುಗೆ ಬೆಳೆದಿತ್ತು. ಆ ಕಾರಣದಿಂದ ಸೌಮ್ಯಾ ಮದುವೆ ಆಗುವಂತೆ ಒತ್ತಾಯಿಸುತ್ತಿದ್ದಳು. ಸೌಮ್ಯ ಆಗಾಗ ಕೊಪ್ಪದಿಂದ ಸಾಗರಕ್ಕೆ ಬಂದು ಹೋಗುತ್ತಿದ್ದಳು. ಸೃಜನ್ ಬೇರೆ ಹುಡುಗಿಯೊಂದಿಗೆ ಸ್ನೇಹ ಬೆಳೆಸಿದ್ದಕ್ಕೆ ಸೌಮ್ಯಾ ವಿರೋಧಿಸಿದ್ದಳು. ಸೃಜನ್ ಸಾಗರದಿಂದ ಸೌಮ್ಯಾಳನ್ನು ಬೈಕ್‌ನಲ್ಲಿ ಕರೆದುಕೊಂಡು ಹೋಗಿದ್ದಾನೆ. ದಾರಿಯುದ್ದಕ್ಕೂ ಜಗಳ ಮಾಡಿಕೊಂಡು ಬಂದಿದ್ದಾರೆ.ಸೃಜನ್ ಕೋಪ ದಿಂದ ಸೌಮ್ಯಾಳಿಗೆ ಹೊಡೆದಿದ್ದು ಆಕೆ ಕೆಳಕ್ಕೆ ಬಿದ್ದ ನಂತರ ಕಾಲಿನಿಂದ ಕುತ್ತಿಗೆಗೆ ತುಳಿದಿದ್ದಾನೆ.ಆಕೆ ಸಾವನ್ನಪ್ಪಿದ ನಂತರ ಸಾಗರಕ್ಕೆ ಬಂದು ಕಾರು ತೆಗೆದುಕೊಂಡು ಹೋಗಿದ್ದಾನೆ. ಕಾರಿನಲ್ಲಿ ಮೃತದೇಹ ತಂದು ಜಲಜೀವನ್ ಕಾಮಗಾರಿಯ ಕಾಲುವೆಯಲ್ಲಿ ಹೂತುಹಾಕಿದ್ದಾನೆ. ಈಗ ಕುಟುಂಬಸ್ಥರು ಎಸಿ ಸಮ್ಮುಖದಲ್ಲಿ ಮೃತದೇಹ ಹೊರ ತೆಗೆಯಲಾಗಿದೆ ಎಂದು ತಿಳಿಸಿದರು.
ಸೌಮ್ಯಾ ಕೊಪ್ಪ ತಾಲೂಕಿನ ಗುಣವಂತೆ ಸಮೀಪ ಹಚ್ಚರಡಿ ಗ್ರಾಮದವಳಾಗಿದ್ದು, ನರ್ಸಿಂಗ್ ಕಲಿಯುತ್ತಿದ್ದ ಸೌಮ್ಯಾ ಜು.2ರಂದು ಕಾಣೆಯಾಗಿದ್ದು, ಮನೆಯವರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

Leave a Reply

Your email address will not be published. Required fields are marked *

Optimized by Optimole
error: Content is protected !!