ಪಾಪಿ ಮಗ ಪೊಲೀಸ್ ಠಾಣೆ ಮುಂಭಾಗದಲ್ಲಿ ಹೆತ್ತ ತಾಯಿಗೆ ಬೆಂಕಿ ಹಚ್ಚಿದ್ದಾನೆ.! ಆಕೆಯ ನರಳಾಟವನ್ನು ವಿಡಿಯೋ ಮಾಡಿ ಇನ್ನಷ್ಟು ವಿಕೃತಿ ಮೇರೆದಿದ್ದಾನೆ ಮಗ.!

ಪಾಪಿ ಮಗ ಪೊಲೀಸ್ ಠಾಣೆ ಮುಂಭಾಗದಲ್ಲಿ ಹೆತ್ತ ತಾಯಿಗೆ ಬೆಂಕಿ ಹಚ್ಚಿದ್ದಾನೆ.! ಆಕೆಯ ನರಳಾಟವನ್ನು ವಿಡಿಯೋ ಮಾಡಿ ಇನ್ನಷ್ಟು ವಿಕೃತಿ ಮೇರೆದಿದ್ದಾನೆ ಮಗ.!

ಅಶ್ವಸೂರ್ಯ/ಶಿವಮೊಗ್ಗ: ಅಲಿಘಡದ ಪೊಲೀಸ್ ಠಾಣೆ ಮುಂಭಾಗದಲ್ಲಿ ತಾಯಿ ಮೇಲೆ ಏಕಾಏಕಿ ಪೆಟ್ರೋಲ್ ಸುರಿದ ಪಾಪಿ ಮಗ ತಕ್ಷಣವೇ ಬೆಂಕಿ ಹಚ್ಚಿದ್ದಾನೆ. ಬಳಿಕ ಆಕೆಯ ನರಳಾಟದ ದೃಶ್ಯಗಳನ್ನು ವಿಡಿಯೋ ರೆಕಾರ್ಡ್ ಮಾಡಿ ವಿಕೃತಿ ಮೆರೆದಿದ್ದಾನೆ.

ಈ ಘಟನೆ ಜು.16 ರಂದು ನೆಡೆದಿದೆ. ಮನೆಯಲ್ಲಿ ಪ್ರತಿ ದಿನ ಆಸ್ತಿಗಾಗಿ ಜಗಳ ನೆಡೆಯುತ್ತಿತ್ತು ಹೀಗಾಗಿ ಪೊಲೀಸ್ ಠಾಣೆಗೆ ತಾಯಿ ಹಾಗೂ ಮಗ ಆಗಮಿಸಿದ್ದಾರೆ. ಕೆಲ ಹೊತ್ತಿನ ಬಳಿಕ ಪೊಲೀಸ್ ಠಾಣೆಯಿಂದ ಹೊರಬಂದ ತಾಯಿ ಮಗ ವಾಗ್ವಾದ ನಡೆಸಿದ್ದಾರೆ. ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಳ್ಳುವ ಬೆದರಿಕೆ ಹಾಕಿದ ತಾಯಿಗೆ ಮಗನೆ ಬೆಂಕಿ ಹಚ್ಚಿದ ಘಟನೆ ನಡೆದಿದೆ. ಬಳಿಕ ತನ್ನ ಮೊಬೈಲ್‌ ನಲ್ಲಿ ಆಕೆಯ ( ಹೆತ್ತ ತಾಯಿಯ) ನರಳಾಟವನ್ನು ವಿಡಿಯೋ ತೆಗೆದಿದ್ದಾನೆ ಇಷ್ಟೆಲ್ಲಾ ನೆಡೆದದ್ದು ಮಾತ್ರ ಪೋಲಿಸ್ ಠಾಣೆಯ ಮುಂಭಾಗದಲ್ಲಿ.ಈ ಹೇಯ ಕೃತ್ಯ ನೆಡೆದದ್ದು ಉತ್ತರ ಪ್ರದೇಶದ ಅಲಿಘಡದಲ್ಲಿ ನಡದಿದೆ.

ತಾಯಿ ಹಾಗೂ ಮಗನ ನಡುವೆ ಆಸ್ತಿಗಾಗಿ ಜಗಳ ಶುರುವಾಗಿದೆ. ಈ ಕುರಿತು ಕುಟುಂಬಸ್ಥರು ಮಧ್ಯಪ್ರವೇಶಿದರೂ ಮಗ ಆಸ್ತಿಗಾಗಿ ಪಟ್ಟು ಹಿಡಿದಿದ್ದಾನೆ. ಇರುವ ಮನೆಯನ್ನು ಮಗನ ಹೆಸರಿಗೆ ಬರೆದರೆ ತನಗೆ ಉಳಿಗಾಲವಿಲ್ಲ ಎಂದು ಯೋಚಿಸಿದ ತಾಯಿ ಆಸ್ತಿ ಮಗನಿಗೆ ನೀಡಲು ನಿರಾಕರಿಸಿದ್ದಾಳೆ. ಹೀಗಾಗಿ ಜಗಳ ತಾರಕಕ್ಕೇರಿತ್ತು. ಕುಟುಂಬಸ್ಥರು ಮಾತುಕತೆ ನಡೆಸಿದರೂ ಪ್ರಯೋಜನವಾಗಿಲ್ಲ. ಹೀಗಾಗಿ ದೂರು ನೀಡಲಾಗಿತ್ತು.
ತಾಯಿ, ಮಗ ಹಾಗೂ ಕುಟುಂಬಸ್ಥರು ಖೈರ್ ಪೊಲೀಸ್ ಠಾಣೆಗೆ ಆಗಮಿಸಿದ್ದಾರೆ. ಕುಟುಂಬಸ್ಥರು ಹಾಗೂ ತಾಯಿ ಮಗ ಪೊಲೀಸ್ ಠಾಣೆಯಲ್ಲಿ ಆಸ್ತಿ ಹಂಚಿಕೆ ವಿಚಾರದ ಮಾತುಕತೆ ಆರಂಭಿಸಿದ್ದಾರೆ. ಕೆಲ ಹೊತ್ತಿನ ಬಳಿಕ ತಾಯಿ ಹಾಗೂ ಮಗ ಪೊಲೀಸ್ ಠಾಣೆಯಿಂದ ಹೊರಬಂದಿದ್ದಾರೆ. ಬಳಿಕ ಠಾಣೆಯ ಬದಿಯಲ್ಲಿ ನಿಂತು ವಾಗ್ವಾದ ಆರಂಭಿಸಿದ್ದಾರೆ.
ಈ ವೇಳೆ ತಾಯಿ ತನ್ನ ಮೇಲೆ ಪೆಟ್ರೋಲ್ ಮುರಿದುಕೊಂಡು ಬೆಂಕಿ ಹಚ್ಚಿಕೊಳ್ಳುವುದಾಗಿ ಬೆದರಿಸಿದ್ದಾಳೆ. ಪೊಲೀಸರಿಗೆ ಹೇಳುವುದಾಗಿ ಮಗನ ಬೆದರಿಸಲು ನೋಡಿದ್ದಾಳೆ. ಆದರೆ ಪಿತ್ತ ನೆತ್ತಿಗೇರಿಸಿಕೊಂಡಿದ್ದ ಮಗ ತಾಯಿಯ ಮೇಲೆ ಬೆಂಕಿಯ ಕಿಡಿ ಹೊತ್ತಿಸಿದ್ದಾನೆ.ಇದರ ಪರಿಣಾಮ ಒಂದೇ ಸಮನೆ ಬೆಂಕಿ ಹೊತ್ತಿಕೊಂಡಿದೆ. ಕೆಲವೇ ಕ್ಷಣಗಳಲ್ಲಿ ಬೆಂಕಿ ಧಗ ಧಗನೆ ಹೊತ್ತಿ ಉರಿದಿದೆ. ಪೊಲೀಸರು ಓಡೋಡಿ ಬಂದು ಬೆಂಕಿ ನಂದಿಸುವ ಪ್ರಯತ್ನ ಮಾಡಿದ್ದಾರೆ. ಈ ಪ್ರಯತ್ನಗಳು ಕೆಲ ನಿಮಿಷಗಳ ವರೆಗೆ ನಡೆದಿದೆ. 

ಠಾಣೆ ಒಳಗಿದ್ದ ಪೊಲೀಸರು ಟೇಬಲ್ ಮೇಲೆ, ಠಾಣೆಯಲ್ಲಿರುವ ಜೈಲಿನೊಳಗೆ ನೀಡವು ಬೆಡ್ ಶೀಟ್ ಹೊತ್ತು ತಂದು ಬೆಂಕಿ ನಂದಿಸಿದ್ದಾರೆ. ಆದರೆ ಅಷ್ಟರಲ್ಲಿ ತಾಯಿಯ ಬಹುತೇಕ ದೇಹದ ಭಾಗ ಸುಟ್ಟು ಹೋಗಿದೆ. ಇತ್ತ ಲೈಟರ್ ಮೂಲಕ ಬೆಂಕಿ ಹಚ್ಚಿದ ಮಗ ಈ ದೃಶ್ಯಗಳನ್ನು ತನ್ನ ಮೊಬೈಲ್ ನಲ್ಲಿ ವಿಡಿಯೋ ತೆಗೆಯುತ್ತ ವಿಕೃತಿ ಮೆರೆದಿದ್ದಾನೆ. ತಕ್ಷಣವೇ ಮಹಿಳೆಯನ್ನು ಪೊಲೀಸರು ಆಸ್ಪತ್ರೆ ದಾಖಲಿಸಿದ್ದಾರೆ. ಶೇಕಡಾ 40 ರಷ್ಟು ಮಹಿಳೆ ದೇಹ ಸುಟ್ಟು ಹೋಗಿದೆ.  ಪ್ರಾಥಮಿಕ ತನಿಕೆಯಲ್ಲಿ ಮಗ ಬೆಂಕಿ ಹಚ್ಚುತ್ತಿರುವ ಸಿಸಿಟಿವಿ ದೃಶ್ಯಗಳನ್ನು ಪೊಲೀಸರು ಕಲೆ ಹಾಕಿ ಆತನನ್ನು ಬಂಧಿಸಿ ತನಿಖೆ ಕೈಗೊಂಡಿದ್ದಾರೆ

Leave a Reply

Your email address will not be published. Required fields are marked *

Optimized by Optimole
error: Content is protected !!