
ಅಬುಧಾಬಿ : ಆರ್ಸಿಬಿಗೆ ಹೊಸ 8 ಆಟಗಾರರ ಸೇರ್ಪಡೆ.! ಮತ್ತಷ್ಟು ಬಲಿಷ್ಠವಾಯ್ತಾ ಆರ್ಸಿಬಿ.!ಒಬ್ಬೊಬ್ಬರ ಬೆಲೆ ಎಷ್ಟು.?
news.ashwasurya. in

ಅಶ್ವಸೂರ್ಯ/ಅಬುಧಾಭಿ : ಹಾಲಿ ಚಾಂಪಿಯನ್ ಆರ್ಸಿಬಿಗೆ ಮತ್ತೆ ಹೊಸ 8 ಮಂದಿ ಬಲಿಷ್ಠ ಆಟಗಾರರ ಸೇರ್ಪಡೆಯಾಗಿದೆ..ಮತ್ತೆ ಈ ಬಾರಿಯು ಚಾಂಪಿಯನ್ ಆಗಲು ಎಲ್ಲಾ ಸಿದ್ಧತೆಯೊಂದಿಗೆ ಕಣಕ್ಕೆ ಇಳಿಯಲು ಅಣಿಯಾಗಿದೆ.ಆರ್ಸಿಬಿ ಎಂಟು ಮಂದಿ ಹೊಸ ಆಟಗಾರರ ಸೇರ್ಪಡೆಯೊಂದಿಗೆ ಮತ್ತಷ್ಟು ಬಲಿಷ್ಠ ತಂಡವಾಗಿದೆ ರೂಪುಗೊಂಡಿದೆ.
ಈ ಬಾರಿ ಆರ್ಸಿಬಿ ಯಾವ ಆಟಗಾರನಿಗೆ ಎಷ್ಟು ಹಣ ಕೊಟ್ಟು ಖರೀದಿಸಿದೆ .?

ವಿಶ್ವದ ಹೆಮ್ಮೆಯ ಐಪಿಎಲ್ ತಂಡ RCB ಈಗಾಗಲೇ ಸ್ಟ್ರಾಂಗ್ ತಂಡವನ್ನು ಹೊಂದಿದ್ದರು ಕಳೆದ ಎರಡು ದಿನದಿಂದ ನಡೆಯುತ್ತಿರುವ ಮಿನಿ ಹಾರಾಜಿನಲ್ಲಿ ಆರ್ಸಿಬಿ 8 ಆಟಗಾರರನ್ನು ಖರೀದಿಸಿದೆ. ಆರ್ಸಿಬಿ ಹರಾಜಿನಲ್ಲಿ ಖರೀದಿಸಿದ ಎಂಟು ಆಟಗಾರರ ಬೇಲೆ ಎಷ್ಟು ಅನ್ನೋದನ್ನ ನೀವೆ ನೋಡಿ…
ಕಳೆದ ಬಾರಿ ಈ ಸಲ ಕಪ್ ನಮ್ದೆ ಎಂದು ಕಣಕ್ಕಿಳಿದ ನೆಚ್ಚಿನ ಆರ್ಸಿಬಿ ಬಹುತೇಕ ಹಳೆಯ ಆಟಗಾರರನ್ನು ಉಳಿಸಿಕೊಂಡಿದೆ. ಅದರಲ್ಲಿ ಎಂಟು ಮಂದಿ ಹೊಸ ಆಟಗಾರರನ್ನು ಸೇರ್ಪಡೆ ಮಾಡಿಕೊಂಡಿದೆ..ಕಳೆದ ಸೀಸನ್ಗಳಲ್ಲಿ ಕೊನೆಯವರೆಗೂ ಬಂದು ಬ್ಯಾಟಿಂಗ್ ಅಥವಾ ಬೌಲಿಂಗ್ನಲ್ಲಿ ಕಳಪೆ ಪ್ರದರ್ಶನ ನೀಡಿ ಸೋಲಿಗೆ ಶರಣಾಗುತ್ತಿತ್ತು ಆದರೆ ಈ ಸಾಲಿನಲ್ಲಿ ಬ್ಯಾಟಿಂಗ್, ಬೌಲಿಂಗ್ ಫೀಲ್ಡಿಂಗ್ ವಿಭಾಗದಲ್ಲೂ ಉತ್ತಮ ಪ್ರದರ್ಶನ ನೀಡಿ ಬಲಿಷ್ಠ ತಂಡಗಳನ್ನು ಬಗ್ಗು ಬಡಿದು ಕೊನೆಗೂ ಐಪಿಎಲ್ ಟ್ರೋಫಿಯನ್ನು ತಮ್ಮದಾಗಿಸಿಕೊಂಡಿತ್ತು..
ಆರ್ಸಿಬಿ ಐಪಿಎಲ್ 2025 ಫೈನಲ್ ಪಂದ್ಯ ಗೆಲ್ಲಲು ಪ್ರಮುಖ ಕಾರಣವೇ ಒಗ್ಗಟ್ಟಿನ ಹೊರಟ ಜೊತೆಗೆ ಬಲಿಷ್ಠ ತಂಡವನ್ನು ಕಟ್ಟಿದ್ದು.ಈ ಬಾರಿನೂ ಕಪ್ ಗೆಲ್ಲುವ ಬಲಿಷ್ಠ ತಂಡವಾಗಿದ್ದರು ಕೂಡ ಐಪಿಎಲ್ 2026 ನ ಮಿನಿ ಹರಾಜಿನಲ್ಲಿ 8 ಹೊಸ ಆಟಗಾರರನ್ನು ಆರ್ಸಿಬಿ ಖರೀದಿ ಮಾಡಿದೆ.! ಆಡುವ ಪಂದ್ಯದಲ್ಲಿ ಯಾವುದೇ ಆಟಗಾರ ಗಾಯಗೊಂಡರೂ ತಂಡಕ್ಕೆ ಹಿನ್ನಡೆ ಆಗಬಾರದು ಎನ್ನುವ ಕಾರಣಕ್ಕೆ 8 ಆಟಗಾರರನ್ನು ಖರೀದಿಸಿದೆ..
ಐಪಿಎಲ್ ಮಿನಿ ಹರಾಜಿನ ಪ್ರಕ್ರಿಯೆ ಅಬುಧಾಬಿಯಲ್ಲಿ ನಡೆದಿದೆ.ವಿರಾಟ್ ಕೊಹ್ಲಿ, ಫಿಲ್ ಸಾಲ್ಟ್, ದೇವದತ್ ಪಡಿಕ್ಕಲ್, ರಜತ್ ಪಟಿದಾರ್ (ನಾಯಕ), ಟಿಮ್ ಡೇವಿಡ್, ಕೃಣಾಲ್ ಪಾಂಡ್ಯ, ರೊಮಾರಿಯೊ ಶೆಫರ್ಡ್, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಭುವನೇಶ್ವರ್ ಕುಮಾರ್, ಯಶ್ ದಯಾಳ್, ಜೋಶ್ ಹ್ಯಾಝಲ್ವುಡ್, ಸುಯಾಶ್ ಶರ್ಮಾ, ಅಭಿನಂದನ್ ಸಿಂಗ್, ಜಾಕೋಬ್ ಬೆಥೆಲ್, ನುವಾನ್ ತುಷಾರ, ರಸಿಖ್ ಸಲಾಂ, ಸ್ವಪ್ನಿಲ್ ಸಿಂಗ್.ಇರುವ ತಂಡಕ್ಕೆ ಹೊಸ ಆಟಗಾರರಾದ ವೆಂಕಟೇಶ್ ಅಯ್ಯರ್, ಮಂಗೇಶ್ ಯಾದವ್, ಜಾಕೋಬ್ ಡಫ್ಫಿ, ಜೋರ್ಡಾನ್ ಕಾಕ್ಸ್, ಸಾತ್ವಿಕ್ ದೇಸ್ವಾಲ್ ಸೇರ್ಪಡೆಯಾಗಿದ್ದಾರೆ.
ಹೊಸ ಆಟಗಾಋ ಖರೀದಿ ನಂತರ ಆರ್ಸಿಬಿ ಪರ್ಸ್ನಲ್ಲಿ ಉಳಿದ ಹಣ ಎಷ್ಟು?: ಆರ್ಸಿಬಿ ಮಿನಿ ಹರಾಜಿಗೆಂದು 16.40 ಕೋಟಿ ರೂಪಾಯಿ ಉಳಿಸಿಕೊಂಡಿತ್ತು. ಆದರೆ, ಇದೀಗ ಐದು ಆಟಗಾರರನ್ನು ಖರೀದಿ ಮಾಡಿದ ಬಳಿಕ ಆರ್ಸಿಬಿ ಪರ್ಸ್ನಲ್ಲಿ ಸದ್ಯ ಉಳಿದಿರುವ ಮೊತ್ತ ₹25,00,000 ಮಾತ್ರ. ಅಬುಧಾಬಿಯಲ್ಲಿ ಹರಾಜು ಪ್ರಕ್ರಿಯೆ ನಡೆಯಿತು. ತಂಡವನ್ನು ಮತ್ತಷ್ಟು ಬಲಿಷ್ಠಗೊಳಿಸಲು ಎಂಟು ಮಂದಿಯನ್ನು ಖರೀದಿಸಿದೆ.
ಆರ್ಸಿಬಿ ತಂಡ: ವಿರಾಟ್ ಕೊಹ್ಲಿ, ಫಿಲ್ ಸಾಲ್ಟ್, ದೇವದತ್ ಪಡಿಕ್ಕಲ್, ರಜತ್ ಪಟಿದಾರ್ (ನಾಯಕ), ಟಿಮ್ ಡೇವಿಡ್, ಕೃಣಾಲ್ ಪಾಂಡ್ಯ, ರೊಮಾರಿಯೊ ಶೆಫರ್ಡ್, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಭುವನೇಶ್ವರ್ ಕುಮಾರ್, ಯಶ್ ದಯಾಳ್, ಜೋಶ್ ಹ್ಯಾಝಲ್ವುಡ್, ಸುಯಾಶ್ ಶರ್ಮಾ, ಅಭಿನಂದನ್ ಸಿಂಗ್, ಜಾಕೋಬ್ ಬೆಥೆಲ್, ನುವಾನ್ ತುಷಾರ, ರಸಿಖ್ ಸಲಾಂ, ಸ್ವಪ್ನಿಲ್ ಸಿಂಗ್. ಇದೀಗ ಈ ಪಟ್ಟಿಗೆ ವೆಂಕಟೇಶ್ ಅಯ್ಯರ್, ಮಂಗೇಶ್ ಯಾದವ್, ಜಾಕೋಬ್ ಡಫ್ಫಿ, ಜೋರ್ಡಾನ್ ಕಾಕ್ಸ್, ಸಾತ್ವಿಕ್ ದೇಸ್ವಾಲ್ ಸೇರ್ಪಡೆಯಾಗಿದ್ದಾರೆ.
ಖರೀದಿಸಿದ ಹೊಸ ಆಟಗಾರನಿಗೆ ಬೆಲೆ ಎಷ್ಟು.?
• ವೆಂಕಟೇಶ್ ಅಯ್ಯರ್ : ₹7,00,00,000

• ಮಂಗೇಶ್ ಯಾದವ್ : ₹5,20,00,000

• ಜಾಕೋಬ್ ಡಫ್ಫಿ: ₹2,00,00,000

• ಜೋರ್ಡಾನ್ ಕಾಕ್ಸ್: ₹75,00,000

• ವಿಹಾನ್ ಮಲ್ಹೋತ್ರಾ: ₹30,00,0,0

• ಸಾತ್ವಿಕ್ ದೇಸ್ವಾಲ್: ₹30,00,000

• ವಿಕ್ಕಿ ಓಸ್ಟ್ವಾಲ್: ₹ಆಟಗಾರನಿಗೆ

• ಕನಿಷ್ಕ್ ಚೌಹಾಣ್: ₹30,00,00


