
ಧಾರವಾಡ : ಸರ್ಕಾರಿ ನೇಮಕಾತಿ ವಿಳಂಬ ನೊಂದು ಆತ್ಮಹತ್ಯೆಗೆ ಶರಣಾಗಿ ಸಾವಿನ ಮನೆ ಸೇರಿಸಿ ಪ್ರತಿಭಾವಂತ ವಿದ್ಯಾರ್ಥಿನಿ.!
news.ashwasurya.in
ಅಶ್ವಸೂರ್ಯ/ಧಾರವಾಡ : ಆಕೆ ಪ್ರತಿಭಾವಂತ ವಿದ್ಯಾರ್ಥಿ ಕಳೆದ ನಾಲ್ಕು ವರ್ಷಗಳಿಂದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ಪಡೆಯುತ್ತಿದ್ದಳು. ಆದರರಲ್ಲೂ ಪಿಎಸ್ಐ ಆಗಬೇಕು ಎನ್ನುವ ಗುರಿ ಹೊಂದಿದ್ದಳು ಯುವತಿ.!ಆದರೆ ನೇಮಕಾತಿಗಳು ನಡೆಯದೇ ಇರುವ ಬಗ್ಗೆ ನೊಂದಿದ್ದಳು.ಇನ್ನೂ ಈ ಸರ್ಕಾರಗಳು ಕೆಲಸ ಕೊಟ್ಟಹಾಗೆ ಎನ್ನುವ ತೀರ್ಮಾನಕ್ಕೆ ಆಕೆ ಬಂದಿರಬೇಕು.!? ಹೀಗಾಗಿ ಆಕೆ ಅಂತಿಮವಾಗಿ ಸಾಯುವ ತೀರ್ಮಾನ ಮಾಡಿರಬಹುದು ಈ ಕಾರಣದಿಂದಲೇ ಆಕೆ ಈ ಬದುಕಿಗೆ ಅಂತ್ಯಹಾಡಿ ಆತ್ಮಹತ್ಯೆಗೆ ಶರಣಾಗಿ ಸಾವಿನ ಮನೆ ಸೇರಿದ್ದಾಳೆ….

ಈ ಮನಕುಲುಕುವ ಘಟನೆ ನಡೆದಿರೋದು ಧಾರವಾಡ ನಗರದ ಶಿವಗಿರಿಯಲ್ಲಿ. ಬಳ್ಳಾರಿ ಮೂಲದ 25 ವರ್ಷದ ಪಲ್ಲವಿ ಕಗ್ಗಲ್ ಎನ್ನುವ ಬದುಕಿನ ಹತ್ತು ಹಲವು ಕನಸು ಹೋತ್ತು ಸರ್ಕಾರಿ ನೌಕರಿ ಪಡೆಯಬೇಕೆನ್ನುವ ಧೃಡ ನಿರ್ಧಾರ ಹೊಂದಿದ್ದ ಯುವತಿಗೆ ಯಾವುದೇ ಕೆಲಸಕ್ಕೆ ಪ್ರಯತ್ನಿಸಲು ಅವಕಾಶಗಳೆ ಸೀಗಲಿಲ್ಲ ಒಂದು ಕಡೆ ನಾಲ್ಕೈದು ವರ್ಷದಿಂದ ಸ್ಪರ್ಧಾತ್ಮಕ ಪರೀಕ್ಷೆಗೆ ರಾತ್ರಿ ಹಗಲೇನ್ನದೆ ಪಟ್ಟ ಶ್ರಮ ಇನ್ನೊಂದು ಕಡೆ ಕೆಲಸಕ್ಕೆ ಬೇಕಾದ ವಯಸ್ಸು ಮೀರುತ್ತಿದೆ ಎಂದು ಮನನೊಂದು ಸಾವಿನ ಮನೆ ಸೇರಿದ್ದಾಳೆ.! ಆತ್ಮಹತ್ಯೆ ಮಾಡಿಕೊಂಡ ಯುವತಿ. ಬಿಕಾಂ ಪದವಿ ಮುಗಿಸಿದ್ದ ಪಲ್ಲವಿ, ಕಳೆದ ನಾಲ್ಕು ವರ್ಷಗಳಿಂದ ಧಾರವಾಡದಲ್ಲಿ ಉಳಿದುಕೊಂಡು ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಜ್ಜಾಗುತ್ತಿದ್ದಳು. ಇತ್ತೀಚೆಗೆ ನಡೆದಿದ್ದ ಪೊಲೀಸ್ ಕಾನ್ಸ್ಟೇಬಲ್ ನೇಮಕಾತಿಯ ದೈಹಿಕ ಪರೀಕ್ಷೆಯಲ್ಲಿ ಪಲ್ಲವಿ 2024ರಲ್ಲಿ ಯಶಸ್ವಿಯಾಗಿ ಉತ್ತೀರ್ಣಳಾಗಿದ್ದಳು. ಆದರೆ, ಲಿಖಿತ ಪರೀಕ್ಷೆಯಲ್ಲಿ ಮಾತ್ರ ಯಶಸ್ಸು ಸಿಕ್ಕಿರಲಿಲ್ಲ.
ಇದರ ಜೊತೆಗೆ, ಸರ್ಕಾರದ ನೇಮಕಾತಿ ಪ್ರಕ್ರಿಯೆ ವಿಳಂಬವಾಗುತ್ತಿರುವುದು ಪಲ್ಲವಿಯನ್ನು ಒತ್ತಡಕ್ಕೆ ಸಿಲುಕಿಸಿತ್ತು ಎನ್ನಲಾಗಿದೆ. ಕಳೆದ ಡಿಸೆಂಬರ್ ಮೊದಲ ವಾರದಲ್ಲಿ ನೇಮಕಾತಿ ವಿಳಂಬ ವಿರೋಧಿಸಿ ನಡೆದ ಪ್ರತಿಭಟನೆಯಲ್ಲೂ ಪಲ್ಲವಿ ಭಾಗವಹಿಸಿದ್ದಳು ಎಂದು ತಿಳಿದುಬಂದಿದೆ.


