Headlines

ಶಿವಮೊಗ್ಗ : ಕಾಂಗ್ರೆಸ್‌ ಪ್ರತಿಭಟನೆ ವೇಳೆ ಎಎಸ್ಐ ಅಮೃತ ಬಾಯಿ ಅವರ ಮಾಂಗಲ್ಯ ಸರ ಎಗರಿಸಿದ ಖತರ್ನಾಕ್ ಕಳ್ಳ.!!

ಅಶ್ವಸೂರ್ಯ/ಶಿವಮೊಗ್ಗ : ಶಿವಮೊಗ್ಗ ನಗರದಲ್ಲಿ ಕಾಂಗ್ರೆಸ್ ಪಕ್ಷ ಕೇಂದ್ರ ಸರ್ಕಾರದ ವಿರುದ್ಧ ಹಮ್ಮಿಕೊಂಡಿದ್ದ ಬಿಜೆಪಿ (BJP) ಕಚೇರಿ ಮುತ್ತಿಗೆ ಪ್ರತಿಭಟನೆಯ ವೇಳೆ ಕರ್ತವ್ಯ ನಿರತ ಮಹಿಳಾ ಪೊಲೀಸ್ ಅಧಿಕಾರಿ ಅಮೃತ ಬಾಯಿ ಅವರ ಕುತ್ತಿಗೆಯಲ್ಲಿದ್ದ ಸುಮಾರು 60 ಗ್ರಾಂ ತೂಕದ ಮಾಂಗಲ್ಯ ಸರವನ್ನು ಕಳ್ಳನೊಬ್ಬ ಎಗರಿಸಿದಗದಾನೆ ಎಂದು ತಿಳಿದುಬಂದಿದೆ.
ಪ್ರತಿಭಟನಾಕಾರರನ್ನು ನಿಯಂತ್ರಿಸುವಲ್ಲಿ ಪೊಲೀಸರು ನಿರತರಾಗಿದ್ದ ಸಂದರ್ಭದಲ್ಲಿ ಹೊಂಚು ಹಾಕಿ ಕುಳಿತಿದ್ದ ಖತರ್ನಾಕ್ಬ ಕಳ್ಳ ಪೊಲೀಸ್ ಅಧಿಕಾರಿಯ ಮಾಂಗಲ್ಯ ಸರವನ್ನೆ ಎಗರಿಸಿದ್ದಾನೆ.ನೂಕು ನುಗ್ಗಲು ತಳ್ಳಾಟದಲ್ಲಿ ಎಎಸ್ಐ ಅಮೃತಾಬಾಯಿ ಕರ್ತವ್ಯದಲ್ಲಿ ನಿರತರಾಗಿದ್ದ ಸಂಧರ್ಭದಲ್ಲಿ ಖತರ್ನಾಕ್ ಕಳ್ಳ ತನ್ನ ಕೈಚಳಕ ತೋರಿಸಿರ ಬಹುದು.?ಎಎಸ್ಐ ಅಮೃತ ಬಾಯಿ ಅವರು ಇತ್ತೀಚೆಗಷ್ಟೇ ಹೊಸ ಮಾಂಗಲ್ಯ ಸರವನ್ನು ಮಾಡಿಸಿದ್ದರಂತೆ.ಕಾಂಗ್ರೆಸ್ ಪ್ರತಿಭಟನೆಯ ವೇಳೆ ಮಾಂಗಲ್ಯ ಸರವನ್ನು ಕಳೆದುಕೊಂಡ ಎಎಸ್ಐ ಅಮೃತಾಬಾಯಿ ಕಣ್ಣೀರಿಟ್ಟಿದ್ದಾರೆ.ಕಾರಣ ಮಾಂಗಲ್ಯಸರ ಕಳ್ಳತನವಾಯ್ಯು ಅನ್ನೊದಕ್ಕಿಂತ ಪವಿತ್ರವಾದ ಮಾಂಗಲ್ಯ ಸರ ಕುತ್ತಿಗೆಯಲ್ಲಿ ಇಲ್ಲ ಅನ್ನುವ ನೋವು ಅವರನ್ನು ಕಾಡಿದೆ ಈ ಕಾರಣದಿಂದಲೇ ಅವರು ಕಣ್ಣಿರು ಹಾಕಿದ್ದಾರೆ.

ನರೇಗಾ ಹೆಸರು ಬದಲಾವಣೆ, ಇಡಿ ದುರ್ಬಳಕೆ ಆಗುತ್ತಿದೆ ಎಂದು ಬಿಜೆಪಿ ಕಚೇರಿಗೆ ಕಾಂಗ್ರೆಸ್ ಕಾರ್ಯಕರ್ತರು ಮುತ್ತಿಗೆ ಹಾಕಲು ಯತ್ನಿಸಿದ್ದರು. ಈ ವೇಳೆ ಎಎಸ್‌ಐ ಅಮೃತ ಬಾಯಿ ಬಂದೋಬಸ್ತ್‌ನಲ್ಲಿದ್ದರು ಜನರ ಗುಂಪಿನಲ್ಲಿದ್ದ ಕಳ್ಳ ಕೈಚಳಕ ತೋರಿಸಿ ಎಎಸ್‌ಐ ಮಾಂಗಲ್ಯ ಸರ ಕಳವು ಮಾಡಿದ್ದಾನೆ.
ಸುಮಾರು 60 ಗ್ರಾಂ ತೂಕದ ಸುಮಾರು 8 ಲಕ್ಷ ರೂಪಾಯಿ ಮೌಲ್ಯದ ಮಾಂಗಲ್ಯ ಸರವನ್ನು ಕಳ್ಳರು ಕಿತ್ತುಕೊಂಡು ಪರಾರಿಯಾಗಿದ್ದಾರೆ.

Leave a Reply

Your email address will not be published. Required fields are marked *

Optimized by Optimole
error: Content is protected !!