
ಮುಂಬಯಿ : ಲಾಡ್ಜ್ ನಲ್ಲಿ ಮಿಸ್ ಆಗಿ ಬೇರೆ ರೂಮ್ನ ಬಾಗಿಲು ತಟ್ಟಿದ ಮಹಿಳೆ – ನಶೆ ಮತ್ತಿನಲ್ಲಿದ್ದ ಮೂವರು ಯುವಕರಿಂದ ಗ್ಯಾಂಗ್ ರೇಪ್.!

news.ashwasurya.in
ಅಶ್ವಸೂರ್ಯ/ಮುಂಬೈ : ಲಾಡ್ಜ್ ಗೆತೆರಳಿದ ಮಹಿಳೆಯೊಬ್ಬರು ಹೋಗಬೇಕಾದ ಕೊಠಡಿ ಬಿಟ್ಟು ತಪ್ಪಾಗಿ ಬೇರೆ ಕೊಠಡಿಯ ಬಾಗಿಲು ತಟ್ಟಿದ ಮಹಿಳೆ ಮೇಲೆ ರೂಮ್ ನಲ್ಲಿ ಹೆಂಡದ ನಶೆಯಲ್ಲಿದ್ದ ಮೂವರು ಆಕೆಯನ್ನು ಎಳೆದುಕೊಂಡು ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ಮಹಾರಾಷ್ಟ್ರದಲ್ಲಿ ಮುಂಬಯಿಯಲ್ಲಿ ನಡೆದಿದೆ.
ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ 30 ವರ್ಷದ ಮಹಿಳೆ, ಛತ್ರಪತಿ ಸಂಭಾಜಿ ನಗರದ ಹೋಟೆಲ್ಲಿನ ವಸತಿ ಗೃಹದ ಕೊಠಡಿ ಸಂಖ್ಯೆ 105 ರಲ್ಲಿ ತಂಗಿದ್ದ ಸ್ನೇಹಿತೆಯಿಂದ ಹಣ ಸಂಗ್ರಹಿಸಲು ಹೋಗಿದ್ದರು. ಈ ವೇಳೆ ಕುಡಿದ ಮತ್ತಿನಲ್ಲಿದ್ದ ಮೂವರು ಆಕೆ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ.
ಮಹಿಳೆ ಹೋಟೆಲ್ನಲ್ಲಿ ತನ್ನ ಸ್ನೇಹಿತೆಯ ಕೊಠಡಿಗೆ ಬಂದಿದ್ದಳು. ಸ್ವಲ್ಪ ಹೊತ್ತು ಹೊರಗಡೆ ಹೋಗಿ ಮತ್ತೆ ಬರುವಾಗ ಗೊಂದಲಗೊಂಡು 105 ಬದಲಾಗಿ 205 ಕೊಠಡಿಯ ಬಾಗಿಲು ತಟ್ಟಿದ್ದಾಳೆ. ನಂ.205 ಕೊಠಡಿ ಒಳಗೆ ಹೆಂಡದ ನಶೆ ಎರಿಸಿಕೊಳ್ಳಲು ಬಂದಿದ್ದ ಘನಶ್ಯಾಮ್ ಭೌಲಾಲ್ ರಾಥೋಡ್, ರಿಷಿಕೇಶ್ ತುಳಸಿರಾಮ್ ಚವಾಣ್ ಮತ್ತು ಕಿರಣ್ ಲಕ್ಷ್ಮಣ್ ರಾಥೋಡ್ ಬಿಯರ್ ಪಾರ್ಟಿ ಮಾಡುತ್ತಿದ್ದರು. ಬಾಗಿಲು ತೆರೆದಾಗ, ಆ ಮಹಿಳೆ ತಾನು ಎಲ್ಲಿಗೆ ಬಂದಿದ್ದೇನೆಂದು ಗೊಂದಲಕ್ಕೆ ಒಳಗಾಗಿದ್ದಳು.
ನಂತರ ಆರೋಪಿಗಳು ಆಕೆಯನ್ನು ಕೊಠಡಿಯೊಳಗೆ ಎಳೆದುಕೊಂಡು ಹೋಗಿ ಬಲವಂತವಾಗಿ ಬಿಯರ್ ಕುಡಿಯುವಂತೆ ಮಾಡಿದ್ದಾರೆ.

ರಾತ್ರಿಯಿಡೀ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ. ಬೆಳಗಿನ ಜಾವ 3-4 ಗಂಟೆ ಸುಮಾರಿಗೆ ಆಕೆ ತಪ್ಪಿಸಿಕೊಂಡಿದ್ದಾಳೆ. ಮಹಿಳೆ ಕಿರುಚುತ್ತಾ ಕೋಣೆಯಿಂದ ಹೊರಗೆ ಓಡಿ ವೇದಾಂತ್ ನಗರ ಪೊಲೀಸ್ ಠಾಣೆಗೆ ತೆರಳಿ ತನ್ನ ಮೇಲಾದ ಪೈಶಾಚಿಕ ಕೃತ್ಯದ ಬಗ್ಗೆ ಹೇಳಿ ದೂರು ದಾಖಲಿಸಿದ್ದಾರೆ.
ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ, ಪೊಲೀಸರು ತಕ್ಷಣ ಕಾರ್ಯಚರಣೆಗೆ ಇಳಿದು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ಕೇವಲ ಮೂರು ಗಂಟೆಗಳಲ್ಲಿ ಮೂವರು ಕಾಮಾಂದರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.


