ವಿಸ್ತಾರ್ ರಂಗ ಶಾಲೆ (VRS) ಕೊಪ್ಪಳ ( ಪರಿವರ್ತನಾತ್ಮಕ ರಂಗಭೂಮಿ ) ಇವರ ಆಶ್ರಯದಲ್ಲಿ ಒಂದು ವರ್ಷದ ನಾಟಕ ಡಿಪ್ಲೋಮಾ ಕೋರ್ಸ್‌ಗೆ ಅರ್ಜಿ ಆಹ್ವಾನ

ನಾಟಕ ಕಲೆ ಡಿಪ್ಲೊಮಾಕ್ಕೆ ಅರ್ಜಿ ಆಹ್ವಾನ

ಅಶ್ವಸೂರ್ಯ/ಶಿವಮೊಗ್ಗ: ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲ್ಲೂಕಿನ ಚಿಕ್ಕ ಬಿಡನಾಳ ಗ್ರಾಮದಲ್ಲಿರುವ ವಿಸ್ತಾರ್ ರಂಗಶಾಲೆಯು “ಸಮಾಜ ಪರಿವರ್ತನೆಗಾಗಿ ರಂಗಭೂಮಿ” 2024 -25 ರ ಸಾಲಿಗೆ ರಂಗಕಲೆಯಲ್ಲಿ ಆಸಕ್ತಿ ಇರುವ ಯುವತಿ ಯುವಕರಿಗಾಗಿ ವಿಸ್ತಾರ ರಂಗಶಾಲೆ ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ವಿಶ್ವವಿದ್ಯಾಲಯ ಮೈಸೂರಿನಿಂದ ಮಾನ್ಯತೆ ಪಡೆದಿದೆ.

ನಾಟಕ ಕಲೆ ಡಿಪ್ಲೊಮಾ ಒಂದು ವರ್ಷದ ಕೋರ್ಸ್ ಆಗಿದ್ದು. ಆಸಕ್ತರು ದಿನಾಂಕ 20 ಜುಲೈ 2024 ಒಳಗಾಗಿ. ಈ ಕೆಳಗಿನ ವಿಳಾಸಕ್ಕೆ ಅರ್ಜಿ ಸಲ್ಲಿಸಬಹುದು. ವಿಸ್ತಾರ್ ರಂಗಶಾಲೆಯಲ್ಲಿ ಅಭಿನಯ,ಭಾಷಾ ಕಲಿಕೆ, ಹಾಡುಗಾರಿಕೆ, ನೃತ್ಯ, ಕೋಲಾಟ, ದೊಡ್ಡಾಟ, ಕಂಸಾಳೆ, ಕಳರಿಪಯಟ್ಟು, ದೇವರ ಟಂ ಕಲೆ, ಪೋರಂ ಥಿಯೇಟ‌ರ್,ವಸ್ತ್ರ ವಿನ್ಯಾಸ, ರಂಗಸಜ್ಜಿಕೆ,ಪ್ರಸಾಧನ, ಬೆಳಕಿನ ವಿನ್ಯಾಸ, ನಿರ್ದೇಶನ, ಕೃಷಿ, ಪ್ರಾತ್ಯಕ್ಷಿಕೆ ಪ್ರಯೋಗಗಳ ಪ್ರದರ್ಶನ, ಸುತ್ತಾಟ ,ಜಗತ್ತಿನ ರಂಗಭೂಮಿಗಳ ಪರಿಚಯದ ಜೊತೆ ವಿಶೇಷತೆಗಳನ್ನು ರಂಗ ವಿದ್ವಾಂಸರಿಂದ ಕಲಿಸಿಕೊಡಲಾಗುವು.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಜುಲೈ 20

ಈಗಾಗಲೇ ಯಶಸ್ವಿಯಾಗಿ ನಾಲ್ಕು ಬ್ಯಾಚ್ ಗಳನ್ನು ಪೂರೈಸಿದ್ದು ಐದನೇ ಬ್ಯಾಚ್ ಗೆ ಅರ್ಜಿ ಆಹ್ವಾನಿಸಲಾಗಿದೆ

ಕೋರ್ಸ್‌ನ ವೈಶಿಷ್ಟ್ಯತೆಗಳು :-

  • ದೇಶದ ಅನುಭವಿ ರಂಗಶಿಕ್ಷಕರಿಂದ ತರಬೇತಿ.
  • ಪ್ರಾಯೋಗಿಕ & ಸೈದ್ದಾಂತಿಕ ತರಬೇತಿಗಳು.
  • ನಟನೆ, ನಿರ್ದೇಶನ, ಕ್ರಿಯಾತ್ಮಕ ಬರವಣಿಗೆ, ಜಾನಪದ ರೂಪಗಳು, ಕಳರಿಪಟ್ಟು ಇತ್ಯಾದಿ.
  • ಲಿಂಗ ಹಾಗೂ ಸಾಮಾಜಿಕ ವಿಶ್ಲೇಷಣೆ.
  • ಪ್ರಸಾಧನ, ರಂಗಸಜ್ಜಿಕೆ, ಬೆಳಕು, ಪರಿಕರ, ವಸ್ತ್ರ ವಿನ್ಯಾಸದ ತರಗತಿಗಳು.
  • ಜನಪದ ಕಲಾಪ್ರಕಾರಗಳ ಅಲ್ಪಾವಧಿ ಕೋರ್ಸುಗಳು.
  • ಮೂರು ಪ್ರಾಯೋಗಿಕ ನಾಟಕಗಳು.

ಹೆಚ್ಚಿನ ಮಾಹಿತಿಗಾಗಿ : ವಿಸ್ತಾರ್ ಬಾಲಧವಿ, ಹೊನ್ನುಣಸಿ ಕ್ರಾಸ್, ಚಿಕ್ಕಬೀಡನಾಳ, ಹಿರೇಖಿಸನಾಳಿ ಅಂಚೆ.

ಕುಕನೂರ ತಾಲೂಕು, ಕೊಪ್ಪಳಜಿಲ್ಲೆ.-583230

9535383161, ರೇವತಿ – 7026972770, 9741135933

Leave a Reply

Your email address will not be published. Required fields are marked *

Optimized by Optimole
error: Content is protected !!