ಉಡುಪಿಯಲ್ಲಿ ಸಂಚಲನ ಮೂಡಿಸಿದ್ದ ಗ್ಯಾಂಗ್ ವಾರ್ ಪ್ರಕರಣ ನಡೆಸಿದ್ದ ಗರುಡ ಗ್ಯಾಂಗ್ ಸದಸ್ಯನಿಗೆ ಹಣಕಾಸು ಮತ್ತು ಆಶ್ರಯ ನೀಡಿದ್ದ ಆರೋಪದ ಮೇಲೆ ಯುವತಿಯೊಬ್ಬಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಟ್ವಾಳದ ಸಫರಾ (35) ಬಂಧಿತ ಯುವತಿ. ಉಡುಪಿಯಲ್ಲಿ ಎರಡು ತಿಂಗಳ ಹಿಂದೆ ಗರುಡ ಗ್ಯಾಂಗ್ನ ಸದಸ್ಯರು ಹೆದ್ದಾರಿಯಲ್ಲಿ ತಲ್ವಾರ್ ಹಿಡಿದು ಅಟ್ಟಹಾಸ ಮೆರೆದಿದ್ದರು.
ಉಡುಪಿ ಗರುಡ ಗ್ಯಾಂಗ್ ಅಟ್ಟಹಾಸ ಪ್ರಕರಣ. ಹಣದ ಸಹಾಯ ಮಾಡಿದ್ದ ಯುವತಿ ಬಂಧನ..!!
ಅಶ್ವಸೂರ್ಯ/ಶಿವಮೊಗ್ಗ: ಉಡುಪಿಯ ನಡುರಸ್ತೆಯಲ್ಲೆ ಲಾಂಗು ಮಚ್ಚುಗಳನ್ನು ಜಳಪಿಸಿದ ಗರುಡ ಗ್ಯಾಂಗ್ ಅಟ್ಟಹಾಸದ ವಿಚಾರಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಉಡುಪಿ ಪೊಲೀಸರು ಮಹತ್ತರ ಬೆಳವಣಿಗೆಯಲ್ಲಿ ಇದೀಗ ಗರುಡ ಗ್ಯಾಂಗಿನ ಯುವಕರಿಗೆ ಹಣಕಾಸಿನ ನೆರವು ನೀಡುತ್ತಿದ್ದ ಯುವತಿಯೊಬ್ಬಳನ್ನು ಬಂಧಿಸಿದ್ದಾರೆ.
ದ.ಕ ಜಿಲ್ಲೆ ಉಪ್ಪಿನಂಗಡಿ ಮೂಲದ ಶಾಫೀರಾ ಎಂಬಾಕೆಯನ್ನು ಬಂಧಿಸಲಾಗಿದ್ದು ಇನ್ನಷ್ಟು ತನಿಖೆ ಮುಂದುವರೆದಿದರ. ಗರುಡ ಗ್ಯಾಂಗ್‌ನಲ್ಲಿ ಶಾಮೀಲಾಗಿದ್ದ ಆರೋಪಿ ಇಸಾಕ್ ಎಂಬ ಯುವಕನ ಗೆಳತಿ ಸಫರಾ (35) ಬಂಧಿತ ಆರೋಪಿಯಾಗಿದ್ದು ಈಕೆ ಗ್ಯಾಂಗಿನ ಆರೋಪಿಗಳಿಗೆ ಆಶ್ರಯ, ಹಣಕಾಸು ವ್ಯವಸ್ಥೆ ಮಾಡುತ್ತಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.
ಬ್ಯಾಂಕ್ ಅಕೌಂಟ್ ಮೂಲಕ ಹಣ ರವಾನೆ ಮಾಡಿರುವ ವಿಚಾರದಲ್ಲಿ ಈಕೆಯನ್ನು ಬಂಧಿಸಲಾಗಿದೆ. ಮೊಬೈಲ್ ಫೋನ್ ನೀಡಿ ತಲೆಮರೆಸಿಕೊಳ್ಳಲು ಸಹಾಯ ಮಾಡಿದ್ದಾಳೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಉಡುಪಿ ನಗರ ಠಾಣೆ ಪೊಲೀಸರು ಇನ್ನು ಕಾರ್ಯಾಚರಣೆ ಮುಂದುವರಿಸಿದ್ದಾರೆ ಎಂದು ಉಡುಪಿ ಎಸ್ ಪಿ ಡಾ. ಅರುಣ್ ಕುಮಾರ್ ಮಾಹಿತಿ ನೀಡಿದ್ದಾರೆ.
ಹೆದ್ದಾರಿಯಲ್ಲಿ ತಲ್ವಾರ್ ಹಿಡಿದು ಅಟ್ಟಹಾಸ ತೋರಿದ್ದ ತಂಡವು ಯುವಕನ ಮೇಲೆ ಕಾರು ಹತ್ತಿಸಿ ಕೊಲೆ ಮಾಡಲು ಯತ್ನಿಸಿದ ಪ್ರಕರಣ ದಾಖಲಾಗಿತ್ತು. ಗರುಡ ಗ್ಯಾಂಗಿನ ನಡುವೆ ಹೊಡೆದಾಟ ನಡೆಯುತ್ತಿರುವ ವಿಡಿಯೋ ವೈರಲ್ ಆದ ಬಳಿಕ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಲಾಂಗು ಜಳಪಿಸಿದ ಗ್ಯಾಂಗಿನ ಸದಸ್ಯರನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.