ಸಾವಿನ ಕೊನೆಯ ಕ್ಷಣದ ಭೀಕರ ದೃಶ್ಯ, ಡ್ಯಾಮಿನಿಂದ ಹರಿದು ಬಂದ ಹೆಚ್ಚಾದ ನೀರು ಕೊಚ್ಚಿ ಹೋದ 9 ಮಂದಿ.!

ಸಾವಿನ ಕೊನೆಯ ಕ್ಷಣದ ಭೀಕರ ದೃಶ್ಯ, ಡ್ಯಾಮಿನಿಂದ ಹರಿದು ಬಂದ ಹೆಚ್ಚಾದ ನೀರು ಕೊಚ್ಚಿ ಹೋದ 9 ಮಂದಿ.!

ಅಶ್ವಸೂರ್ಯ/ಶಿವಮೊಗ್ಗ: ಮಹಾರಾಷ್ಟ್ರದ ಲೋನವಾಲದ ಸಮೀಪದ ಬುಶಿ ಡ್ಯಾಮ್ ಪಕ್ಕದ ಪ್ರವಾಸಿ ತಾಣಕ್ಕೆ ತೆರಳಿದ ಒಂದೇ ಕುಟುಂಬದ ಒಂಬತ್ತು ಮಂದಿ ನೀರಿನಲ್ಲಿ ಕೊಚ್ಚಿ ಹೋದ ಘಟನೆ ನಡದಿದೆ. ಸಾವಿನ ಕೊನೆಯ ಕ್ಷಣದ ವಿಡಿಯೋ ಬೆಚ್ಚಿ ಬೀಳಿಸುವಂತಿದೆ.

ಜೂ.30 ಭಾನುವಾರದ ರಜಾ ದಿನವನ್ನು ಪ್ರವಾಸಿ ತಾಣದಲ್ಲಿ ಕಳೆಯಲು ಹೋದ ಒಂದೆ ಕುಟುಂಬದ ಒಂಬತ್ತು ಮಂದಿ ನೀರಿನಲ್ಲಿ ಕೊಚ್ಚಿ ಹೋದ ಘಟನೆ ಮಹಾರಾಷ್ಟ್ರದ ಲೋನವಾಲದಲ್ಲಿ ನಡೆದಿದೆ. ಭುಶಿ ಡ್ಯಾಮ್ ಪಕ್ಕದ ಪ್ರಸಿದ್ದ ಪ್ರವಾಸಿ ತಾಣದಲ್ಲಿನ ಜಲಪಾತ ಸೇರಿದಂತೆ ಪ್ರಕೃತಿ ಸೌಂದರ್ಯದಿಂದ ಸಾವಿರಾರು ಪ್ರವಾಸಿಗರು ಆಗಮಿಸುತ್ತಾರೆ. ಪ್ರವಾಸಿತಾಣದಲ್ಲಿ ರಜಾ ದಿನವನ್ನು ಕಳೆಯಲು ಒಂದೆ ಕುಟುಂಬದವರು ಇದೇ ಭುಷಿ ಜಲಪಾತ ಪ್ರದೇಶಕ್ಕೆ ತೆರಳಿದ್ದಾರೆ.ಅದರಲ್ಲಿ ಒಂಬತ್ತು ಮಂದಿ ಹರಿಯುವ ನೀರನ ಮಧ್ಯೆ ಹೋಗಿದ್ದಾರೆ ಆದರೆ ಏಕಾಏಕಿ ಡ್ಯಾಮ್ ನೀರು ತುಂಬಿ ಹರಿದಿದೆ. ಇದರ ಪರಿಣಾಮ ಮಹಿಳೆಯರು ಮಕ್ಕಳು ಸೇರಿದಂತೆ ಒಂಬತ್ತು ಮಂದಿ ಬದುಕಿಗಾಗಿ ಹೋರಾಡಿ ಅಂತಿಮವಾಗಿ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ಈ ಪೈಕಿ ಮಹಿಳೆ ಹಾಗೂ ಇಬ್ಬರ ಮಕ್ಕಳ ಮೃತದೇಹ ಪತ್ತೆಯಾಗಿದ್ದು, ಇನ್ನುಳಿದವರ ಮೃತದೇಹಕ್ಕೆ ಶೋಧ ಕಾರ್ಯ ಮುಂದುವರಿದಿದೆ.

ಲೋನವಾಲದ ಭುಶಿ ಡ್ಯಾಮ್ ಪಕ್ಕದ ಪ್ರವಾಸಿ ತಾಣದಲ್ಲಿ ಭಾರಿ ಜನಸಾಗರವೇ ಸೇರಿತ್ತು. 36 ವರ್ಷದ ಮಹಿಳೆ ತನ್ನ ನಾಲ್ವರು ಮಕ್ಕಳನ್ನು ಕರೆದುಕೊಂಡು ಇದೇ ಪ್ರವಾಸಿ ತಾಣಕ್ಕೆ ತೆರಳಿದ್ದಾರೆ. ಎಲ್ಲರಂತೆ ಮಹಿಳೆ ಹಾಗೂ ಮಕ್ಕಳು ಡ್ಯಾಮ್ ನೀರಿನಿಂದ ಕೆಳಭಾಗದಲ್ಲಿ ಸೃಷ್ಟಿಯಾಗುವ ಜಲಪಾತ ವೀಕ್ಷಿಸುತ್ತಾ, ನೀರಿನಲ್ಲಿ ಆಟವಾಡುತ್ತಾ ಕಾಲ ಕಳೆದಿದ್ದಾರೆ. ಆದರೆ ಮಹಾರಾಷ್ಟ್ರ ಪಶ್ಚಿಮ ಘಟ್ಟಗಳಲ್ಲಿ ಭಾರಿ ಮಳೆಯಾಗುತ್ತಿರುವ ಕಾರಣ ಡ್ಯಾಮ್‌ಗೆ ಏಕಾಏಕಿ ನೀರು ಹರಿದು ಬಂದಿದೆ.

ನೀರಿನಲ್ಲಿ ಆಟವಾಡುತ್ತಿದ್ದ ಮಹಿಳೆ ಸೇರಿ ನಾಲ್ವರು ಮಕ್ಕಳು ಪ್ರಾಣ ಉಳಿಸಲು ಸತತವಾಗಿ ಹೋರಾಡಿದ್ದಾರೆ. ಸಹಾಯಕ್ಕಾಗಿ ಕಿರುಚಾಡಿದ್ದಾರೆ. ಆದರೆ ದಡದಲ್ಲಿದ್ದವರು ಏನೂ ಮಾಡಲಾಗದ ಪರಿಸ್ಥಿತಿ. ನೀರಿನ ರಭಸ ಹೆಚ್ಚಾಗುತ್ತಿದ್ದಂತೆ ಮಹಿಳೆ ಸೇರಿ ನಾಲ್ವರು ಮಕ್ಕಳು ಸೇರಿದಂತೆ ಒಂಬತ್ತು ಮಂದಿ ಕೊಚ್ಚಿ ಹೋಗಿದ್ದಾರೆ.ಇವರಲ್ಲಿ ನಾಲ್ವರು ಕೊನೆಯ ಕ್ಷಣದ ಬದುಕುಳಿದ ಸಾಧ್ಯತೆ ಇದೆ ವಿಡಿಯೋ ಸೆರೆಯಾಗಿದೆ. 

ಈ ಪೈಕಿ ಮಹಿಳೆ, 13 ವರ್ಷ ಹಾಗೂ 8 ವರ್ಷದ ಇಬ್ಬರು ಹೆಣ್ಣುಮಕ್ಕಳ ಮೃತದೇಹ ಪತ್ತೆಯಾಗಿದೆ. ಆದರೆ 9 ವರ್ಷದ ಬಾಲಕ ಹಾಗೂ 4 ವರ್ಷ ಹೆಣ್ಣು ಮಗು ಪತ್ತೆಯಾಗಿಲ್ಲ. ಘಟನೆ ನಡೆದ ಮಾಹಿತಿ ಸಿಕ್ಕ ಬೆನ್ನಲ್ಲೇ ರಕ್ಷಣಾ ತಂಡಗಳು ಸ್ಥಳಕ್ಕೆ ಆಗಮಿಸಿ ಶೋಧ ಕಾರ್ಯ ನಡೆಸಿದೆ. ಮೂವರ ಮೃತದೇಹ ಪತ್ತೆ ಹಚ್ಚಿ ಹೊರಕ್ಕೆ ತಗೆಯಲಾಗಿದೆ. ಅಷ್ಟರಲ್ಲಿ ಕತ್ತಲಾದ ಕಾರಣ ಶೋಧ ಕಾರ್ಯ ಸ್ಥಗಿತಗೊಂಡಿದೆ. ಶೋಧ ಕಾರ್ಯ ಇಂದು ಮುಂದುವರಿಯಲಿದೆ. 

ಮಧ್ಯಾಹ್ನ 1.30ರ ವೇಳೆಗೆ ಈ ಘಟನೆ ನಡೆದಿದೆ. ಇತ್ತ ಲೋನವಾಲ ಅಧಿಕಾರಿಗಳು ಇದೀಗ ಪ್ರವಾಸಿ ತಾಣಕ್ಕೆ ಪ್ರವೇಶ ನಿರ್ಬಂಧ ವಿಧಿಸಿದ್ದರೆ. ಇದರ ಜೊತೆಗೆ ಲೋನವಾಲದಲ್ಲಿರುವ ಹಲವು ಪ್ರವಾಸಿ ತಾಣಗಳಿಗೆ ಪ್ರವೇಶ ನಿರ್ಬಂಧಿಸಲು ಚರ್ಚಿಸಾಗಿದೆ. ಇದೇ ವೇಳೆ ನೀರು, ಜಲಾಪತದ ಕಡೆ ಹೋಗದಂತೆ ಎಚ್ಚರಿಕೆ ನೀಡಲಾಗಿದೆ.  

Leave a Reply

Your email address will not be published. Required fields are marked *

Optimized by Optimole
error: Content is protected !!