T20 ವಿಶ್ವಕಪ್: ಭಾರತ ತಂಡ ದಕ್ಷಿಣ ಆಫ್ರಿಕಾ ವಿರುದ್ಧ ಯುಗಗಳ ನಂತರ ಫೈನಲ್ ಗೆದ್ದು ಸುದೀರ್ಘ ಪ್ರಶಸ್ತಿಯ ಬರವನ್ನು ಕೊನೆಗೊಳಿಸಿತು
ಅಶ್ವಸೂರ್ಯ/ಶಿವಮೊಗ್ಗ: T20 ವಿಶ್ವಕಪ್ ಗೆದ್ದ ಭಾರತ, ವಿಶ್ವ ಕ್ರಿಕೆಟ್ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದ ಟ20 ವಿಶ್ವಕಪ್ ಫೈನಲ್ ನ ಸಮರದಲ್ಲಿ ದಕ್ಷಿಣ ಆಫ್ರಿಕಾವನ್ನು ಭಾರತ ತಂಡ ಪಂದ್ಯದ ಅಂತಿಮ ಓವರ್ ನಲ್ಲಿ ರೋಚಕವಾಗಿ ಸೋಲಿಸಿ ಚಾಂಪಿಯನ್ ಪಟ್ಟವನ್ನು ಮುಡಿಗೇರಿಸಿಕೊಂಡಿತು..
ಅಂತಿಮ ಹಣಾಹಣಿಯಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡರು ಭಾರತ ತಂಡದ ನಾಯಕ ರೋಹಿತ್ ಶರ್ಮಾ. ಪಂದ್ಯ ಆರಂಭದ ಮೊದಲ ಓವರ್‌ನಲ್ಲೇ ವಿರಾಟ್ ಕೊಹ್ಲಿ ಮೂರು ಬೌಂಡರಿ ಸಿಡಿಸುವ ಮೂಲಕ ಭರ್ಜರಿ ಆರಂಭ ಮೂಲಕ ದೊಡ್ಡ ಸ್ಕೋರ್ ಮಾಡುವ ಮುನ್ಸೂಚನೆ ಕೊಟ್ಟರು .. ಆದರೆ ಅದು ಹುಸಿಯಾಗಲಿಲ್ಲ ಪಂದ್ಯದ ಎರಡನೇ ಓವರ್‌ನಲ್ಲಿ ದಕ್ಷಿಣ ಆಫ್ರಿಕಾ ಕ್ಯಾಪ್ಟನ್ ಏಯ್ಡನ್ ಮಾರ್ಕ್‌ರಮ್ ಬಾಲನ್ನು ಸ್ಪಿನ್ನರ್ ಕೇಶವ್ ಮಹರಾಜ್ ಕೈಗಿಟ್ಟರು ಕೇಶವ್ ಭಾರತ ತಂಡದ ಪ್ರಮುಖ ಆರಂಭಿಕ ಆಟಗಾರ ರೋಹಿತ್ ಶರ್ಮಾ ವಿಕೆಟ್ ಕಬಳಿಸಿದರು ನಂತರ ಆಡಲು ಬಂದ ರಿಷಭ್ ಪಂತ್ ಅವರನ್ನು ಖಾತೆ ತೆರೆಯುವಮುನ್ನ ಪೆವಿಲಿಯನ್ನಿಗೆ ಕಳಿಸಿದರು ನಂತರ ಬಂದ ಭರವಸೆಯ ಆಟಗಾರ ಸೂರ್ಯ ಕುಮಾರ್ ಯಾದವ್ ಕೂಡ 3 ರನ್ ಗಳಿಸಿ ಔಟ್ ಅದರು ಭಾರತ ಕೇವಲ 34 ರನ್ ಗಳಿಗೆ ತನ್ನ ಮೂರು ಪ್ರಮುಖ ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು ಕಿಂಗ್ ಕೊಯ್ಲಿ ಮಾತ್ರ ತಾಳ್ಮೆ ಕಳೆದುಕೊಳ್ಳದೆ ಒಂದು ತುದಿಯಲ್ಲಿ ಭರವಸೆ ಮೂಡಿಸಿದ್ದರು
ಮೂರು ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಸಮಯದಲ್ಲಿ ತಂಡದ ನಾಯಕ ರೋಹಿತ್ ಬ್ಯಾಟಿಂಗ್ ಕ್ರಮಾಂಕದಲ್ಲಿ ಬದಲಾವಣೆ ಮಾಡಿ ಹಾರ್ದಿಕ್ ಪಾಂಡ್ಯ ಸ್ಥಾನದಲ್ಲಿ ಅಕ್ಷರ್ ಪಟೇಲ್ ಅವರನ್ನು ಕಳಿಸಿದ್ದರು ಅದು ಯಶಸ್ವಿಯಾಯಿತು ಮೈ ಚಳಿಬಿಟ್ಟು ಆಡಿದ ಅಕ್ಸರ್ ನಾಲ್ಕು ಸಿಕ್ಸರ್ ನೊಂದಿಗೆ 47 ಗಳಿಸಿ ಔಟ್ ಅದರು ಆಗ ಕ್ಷಣಕ್ಕೆ ಭಾರತ ತಂಡ 13.3 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು ಓವರಿಗೆ 8 ರನ್ ಗಳ ಸರಾಸರಿಯಲ್ಲಿ 106 ರನ್ ಕಲೆಹಾಕಿ ಉತ್ತಮ ಮೊತ್ತವನ್ನು ಕಲೆಹಾಕುವ ಹಾದಿಯಲ್ಲಿತ್ತು.
ನಂತರ ಬಂದ ಶಿವಂ ದುಬೆ ಕೂಡ ಹದಿನಾರು ಎಸೆತದಲ್ಲಿ 27 ರನ್ ಗಳಿಸಿ ಭಾರತ ತಂಡಕ್ಕೆ ಆಸರೆಯಾದರು.ಇನ್ನೊಂದು ತುದಿಯಲ್ಲಿ ಆರಂಭಿಕ ಆಟಗಾರನಾಗಿ ಬಂದು ತಾಳ್ಮೆಯಿಂದ ಆಡುತ್ತಿದ್ದ
ರನ್ ಮಷೀನ್ ವಿರಾಟ್ ಕೊಹ್ಲಿ 56 ಬಾಲುಗಳಲ್ಲಿ 76 ರನ್ ಸಿಡಿಸಿ ಪಂದ್ಯದ 19 ಓವರಿನ 5 ನೇ ಬಾಲ್ ನಲ್ಲಿ ಓಟ್ ಆಗಿ ಪೆವಿಲಿಯನ್ ಗೆ ಮರಳಿದರು
ಈ ಪಂದ್ಯದ ಮೂಲಕ ಲೆಜೆಂಡ್ ಆಟಗಾರ ಎನ್ನುವುದನ್ನು ಮತ್ತೊಮ್ಮೆ ಸಾಬೀತು ಪಡಿಸಿದ್ದರು ಕಿಂಗ್ ಕೊಯ್ಲಿ .. ಈ ಹೈವೋಲ್ಟೇಜ್ ಆಟದಲ್ಲಿ ತಂಡ ಕಷ್ಟದಲ್ಲಿದ್ದಾಗ ವಿರಾಟ್ ಅರ್ಧಶತಕ ಸಿಡಿಸಿ ಆಪತ್ಪಾಂಧವನಂತೆ ತಂಡಕ್ಕೆ ನೆರವಾದರು.. ಇದರೊಂದಿಗೆ ಕಿಂಗ್ ಕೊಹ್ಲಿಗೆ ಆಲ್ರೌಂಡರ್ ಅಕ್ಷರ್ ಪಟೇಲ್ ಮತ್ತು ಶಿವಂ ದುಬೆ ಬೆನ್ನೆಲುಬಿನಂತೆ ಸಾಥ್ ನೀಡಿದರು.. ಇದರ ಪರಿಣಾಮವಾಗಿ ಆರಂಭಿಕ ಆಘಾತವನ್ನು ಎದುರಿಸಿದರು ಭಾರತ ತಂಡ 2024ರ T20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ 7 ವಿಕೆಟ್ ಕಳೆದುಕೊಂಡು 176 ರನ್ ಗಳನ್ನು ಕಲೆಹಾಕಿ ಎದುರಾಳಿಗೆ ಗುರಿ ನೀಡಿತು ..
ಈ ಪಂದ್ಯಲ್ಲಿ ಕೇವಲ 4.3 ಓವರ್‌ನಲ್ಲಿ 34 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಭಾರತ ತಂಡಕ್ಕೆ ಕಿಂಗ್ ಕೊಹ್ಲಿ ಮತ್ತು ಆಲ್ರೌಂಡರ್ ಅಕ್ಷರ್ ಪಟೇಲ್ ಮನಮೋಹಕ ಬ್ಯಾಟಿಂಗ್ ಮಾಡುವ ಮೂಲಕ ತಂಡವನ್ನು ಒಳ್ಳೆಯ ಮೊತ್ತವನ್ನು ಕಲೆಹಾಕುವತ್ತ ಕೊಂಡ್ಯೊಯ್ದರು. ಮತ್ತೊಂದು ತುದಿಯಲ್ಲಿ ವಿರಾಟ್ ಕೊಹ್ಲಿ ಎಚ್ಚರಿಕೆಯಿಂದ ಬ್ಯಾಟಿಂಗ್ ಮಾಡಿದರು..
ಫೈನಲ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಜವಾಬ್ದಾರಿಯುತ ಇನಿಂಗ್ಸ್ ಆಡಿ ತಂಡಕ್ಕೆ ನೆರವಾದರು.. 48 ಎಸೆತಗಳಲ್ಲಿ ಅರ್ಧಶತಕ ಗಳಿಸಿ, ಭರ್ಜರಿ ಇನಿಂಗ್ಸ್ ಆಡಿದರು.. ಕೊನೆಯದಾಗಿ ವಿರಾಟ್ 59 ಎಸೆತಗಳಿಗೆ 6 ಬೌಂಡರಿ 2 ಸಿಕ್ಸರ್, 76 ರನ್ ರನ್ ಬಾರಿಸಿ ತಂಡಕ್ಕೆ ಆಸರೆಯಾದರು.. ಬಳಿಕ ಶಿವಂ ದುಬೆ ಹಾಗೂ ಹಾರ್ದಿಕ್ ಪಾಂಡ್ಯ ರಣರೋಚಕವಾಗಿ ಬ್ಯಾಟಿಂಗ್ ಮಾಡುವ ಮೂಲಕ ತಂಡದ ಮೊತ್ತವನ್ನು 175ರ ಗಡಿ ದಾಟುವಂತೆ ಮಾಡಿದರು..
ನಂತರ ಬ್ಯಾಟಿಂಗ್ ಆರಂಭಿಸಿದ ಸೌತ್ ಆಫ್ರಿಕಾ ಅಂತಿಮ ಕ್ಷಣದಲ್ಲಿ ಮುಗ್ಗರಿಸಿತು ..
ಭಾರತ ನೀಡಿದ್ದ 177 ರನ್ ಗಳ ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕಾ ಗೆಲುವಿನ ನಿರೀಕ್ಷೆಯಲ್ಲಿತ್ತಾದರೂ ಅಂತಿಮ ಹಂತದಲ್ಲಿ ಎಡವಿತು. 20 ಓವರ್ ಗಳಲ್ಲಿ 8 ವಿಕೆಟ್ ಗೆ 169 ರನ್ ಗಳಿಸಿ ಸೋಲು ಕಂಡಿತು. ಹೆನ್ರಿಚ್ ಕ್ಲೆಸೆನ್ 52, ಕ್ವಿಂಟನ್ 39, ಟ್ರಿಸ್ಟನ್ 31, ಡೇವಿಡ್ ಮಿಲ್ಲರ್ 21ರನ್ ಗಳಿಸಿದರು. ಭಾರತದ ಪರ ಹಾರ್ದಿಕ್ ಪಾಂಡ್ಯ 3, ಆರ್ಷ್ ದೀಪ್ ಸಿಂಗ್ 2, ಜಸ್ ಪ್ರೀತ್ ಬೂಮ್ರಾ 2 ವಿಕೆಟ್ ಪಡೆದರು.
ದಕ್ಷಿಣ ಆಫ್ರಿಕಾ ವಿರುದ್ಧ 7 ರನ್ ಗಳ ಅಂತರದ ರೋಚಕ ಜಯಗಳಿಸುವ ಮೂಲಕ ಭಾರತ ಐಸಿಸಿ ಟಿ20 ವಿಶ್ವಕಪ್ ಚಾಂಪಿಯನ್ ಆಗಿದೆ. ಎರಡನೇ ಬಾರಿಗೆ ಭಾರತ ಐಸಿಸಿ ಟಿ20 ವಿಶ್ವಕಪ್ ಗೆದ್ದಿದೆ. ಈ ಟೂರ್ನಿಯ ಪಂದ್ಯಾವಳಿಯಲ್ಲಿ ಉತ್ತಮ ಆಟ ಪ್ರದರ್ಶಿಸಿದ ದಕ್ಷಿಣ ಆಫ್ರಿಕಾ ಮತ್ತೊಮ್ಮೆ ಫೈನಲ್ ಪಂದ್ಯದಲ್ಲಿ ಎಡವಿ ಸೋಲಿಗೆ ಶರಣಾಗಿ ಜೋಕರ್ಸ್ ಎಂಬ ಹಣೆ ಪಟ್ಟಿಯನ್ನು ಮತ್ತೊಮ್ಮೆ ಉಳಿಸಿಕೊಂಡಿದೆ
ಪಂದ್ಯಕ್ಕೆ ಬಿಗ್ ಟ್ಟಿಸ್ಸ್ ಕೊಟ್ಟ ಬುಮ್ರಾ,ಅಕ್ಷರ್,ಸೂರ್ಯ ಮತ್ತು ಪಾಂಡ್ಯ…
58 ರನ್ ಗಳ ಜೊತೆಯಾಟದಲ್ಲಿ ಕ್ರೀಸ್ ನಲ್ಲಿ ಅಪಾಯಕಾರಿ ಎನಿಸಿಕೊಂಡ ಸೌತ್ ಆಫ್ರಿಕಾ ತಂಡದ ಜೋಡಿಯನ್ನು ಅಕ್ಷರ್ ಪಟೇಲ್ ಬೇರ್ಪಡಿಸಿದರು. ಸ್ಟಬ್ ಅವರನ್ನು ಕ್ಲೀನ್ ಬೌಲ್ಡ್ ಮಾಡಿ ಕೈ ಜಾರುತ್ತಿದ್ದ ಪಂದ್ಯವನ್ನು ಮತ್ತೆ ಭಾರತದ ಕಡೆ ವಾಲುವಂತೆ ಮಾಡಿದ ಹಿರಿಮೆ ಪಟೇಲ್ ಅವರದು. ಆದರೆ ಈ ಹಂತದಲ್ಲಿ ಕ್ರೀಸ್ ಗೆ ಬಂದ ಹೆನ್ರಿಚ್ ಕ್ಲಾಸೆನ್ ಸ್ಪೋಟಕ ಬ್ಯಾಟಿಂಗ್ ನಡೆಸಿದರು. ಆದರೆ ಕ್ವಿಂಟನ್ ಡಿ ಕಾಕ್ ವಿಕೆಟ್ ಪಡೆದು ವೇಗಿ ಅರ್ಷದೀಪ್ ಸಿಂಗ್ ಮತ್ತೊಂದು ಶಾಕ್ ನೀಡಿ ಸಿಂಗ್ ಈಸ್ ಕಿಂಗ್ ಎನಿಸಿಕೊಂಡರು. ಆದರೆ ಕ್ಲಾಸೆನ್ ಬೃಹತ್ ಸಿಕ್ಸರ್‌ಗಳೊಂದಿಗೆ ಭಾರತವನ್ನು ಕಾಡಿದರು, ಭಾರತೀಯ ಸ್ಪಿನ್ನರ್ ಗಳನ್ನು ಚೆಂಡಾಡಿದ ಕ್ಲಾಸೆನ್ 23 ಎಸೆತಗಳಲ್ಲಿ ಅರ್ಧಶತಕ ಪೂರೈಸಿ ಗೆಲುವಿನ ಹಾದಿಗೆ ಕೊಂಡೊಯ್ದಿದ್ದರು. ಆದರೆ ಹಾರ್ದಿಕ್ ಪಾಂಡ್ಯ ಕ್ಲಾಸೆನ್ ವಿಕೆಟ್ ಕಿತ್ತು ಪಂದ್ಯಕ್ಕೆ ತಿರುವು ನೀಡಿ ಆಟದ ಗತಿಯನ್ನೆ ಬದಲಾಯಿಸಿದರು.
ಅಂತಿಮ ಕ್ಷಣದಲ್ಲಿ ರಣರೋಚಕ ಅಂತ್ಯಕಂಡ ಪಂದ್ಯ..
ಇದರ ಬೆನ್ನಲ್ಲೇ 18ನೇ ಓವರ್‌ನಲ್ಲಿ ಅಮೋಘ ಎಸೆತದಲ್ಲಿ ಮಾರ್ಕೊ ಜಾನ್ಸನ್ (2) ಅವರನ್ನು ಬುಮ್ರಾ ಕ್ಲೀನ್ ಬೌಲ್ಡ್ ಮಾಡಿದರು. ಇದರೊಂದಿಗೆ ಸೌತ್ ಆಫ್ರಿಕಾದ ಗೆಲುವಿನ ಆಸೆಗೆ ಬಿಗ್ ಬ್ರೇಕ್ ಹಾಕಿದ್ದರು. ಕೊನೆಯ 12 ಎಸೆತಗಳಲ್ಲಿ 19 ರನ್‌ಗಳ ಅಗತ್ಯವಿತ್ತು. 19ನೇ ಓವರ್ ಬೌಲ್ ಮಾಡಿದ ಅರ್ಷದೀಪ್ ಸಿಂಗ್ ಕೇವಲ 4 ರನ್ ನೀಡಿ ಯಶಸ್ಸಿ ಬೌಲರ್ ಎನಿಸಿಕೊಂಡರು, ಕೊನೆಯ ಓವರ್ ನಲ್ಲಿ 15 ರನ್ ಗಳಿಸಬೇಕಾಯಿತು. ಅಂತಿಮ ಓವರ್ ಬೌಲ್ ಮಾಡಿದ ಹಾರ್ದಿಕ್ ಪಾಂಡ್ಯ ಮೊದಲ ಎಸೆತದಲ್ಲೇ ಡೇವಿಡ್ ಮಿಲ್ಲರ್ ಅವರ ವಿಕೆಟ್ ಪಡೆದರು. ಬೌಂಡರಿ ಗೆರೆ ಬಳಿ ಸೂರ್ಯ ಕುಮಾರ್ ಯಾದವ್ ಹಿಡಿದ ಸೂಪರ್ ಕ್ಯಾಚ್ ಭಾರತದ ಗೆಲುವನ್ನು ಖಚಿತ ಪಡಿಸಿತ್ತು
ಇದು ಭಾತರದ ಗೆಲುವನ್ನು ಇನ್ನಷ್ಟು ಸನಿಹಕ್ಕೆ ತಂದು ನಿಲ್ಲಿಸಿತ್ತು. ಆ ಬಳಿಕ ಬಂದ ರಬಾಡ ಐದನೇ ಎಸೆತದಲ್ಲಿ ಔಟಾದ ಕಾರಣ ಟೀಂ ಇಂಡಿಯಾ ಗೆಲುವಿನ ದಡ ಸೇರಿತು ಹದಿಮೂರು ವರ್ಷಗಳ ನಂತರ ಭಾರತ T20 ವಿಶ್ವಕಪ್ ಅನ್ನು ಗೆದ್ದು ಬಿಗಿತು..
ಅಂತರಾಷ್ಟ್ರೀಯ T20 ಪಂದ್ಯವಳಿಗಳಿಗೆ ವಿಧಾಯ ಹೇಳಿದ ಕಿಂಗ್ ಕೊಯ್ಲಿ
ಬ್ರಿಡ್ಜ್ ಟೌನ್ : ಇಲ್ಲಿನ ಕೆನ್ಸಿಂಗ್ಟನ್ ಓವಲ್ ಸ್ಟೇಡಿಯಂನಲ್ಲಿ ನಡೆದ ಟಿ20 ವಿಶ್ವಕಪ್ ನ ಫೈನಲ್ ಪಂದ್ಯದಲ್ಲಿ ಭಾರತ ತಂಡವು ದಕ್ಷಿಣ ಆಫ್ರಿಕಾವನ್ನು ಸೋಲಿಸಿ 17 ವರ್ಷಗಳ ಬಳಿಕ ಟಿ20 ವಿಶ್ವಕಪ್ ಅನ್ನು ತನ್ನ ಮುಡಿಗೇರಿಸಿಕೊಂಡಿತು
ಅದ್ಭುತ ಆಟವಾಡಿ 76 ರನ್ ಗಳಿಸಿ ಜೋತೆಗೆ ವಿಶ್ವಕಪ್ ಗೆದ್ದನಂತರ ವಿರಾಟ್ ಕೊಯ್ಲಿ ʼಮ್ಯಾನ್ ಆಫ್ ದಿ ಮ್ಯಾಚ್ʼ ಪ್ರಶಸ್ತಿ ಪಡೆದು ಮಾತನಾಡಿದರು. ಮಾತಿನ ನಡುವೆಯೇ ಭಾರತ ತಂಡದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ತಮ್ಮ ಅಂತರಾಷ್ಟ್ರೀಯ ಟಿ20 ಕ್ರಿಕಟ್ ಗೆ ನಿವೃತ್ತಿ ನೀಡುವುದಾಗಿ ಘೋಷಣೆ ಮಾಡಿದರು.!
ಕೊಹ್ಲಿ ಬೆನ್ನಿಗೆ T20 ಅಂತರರಾಷ್ಟ್ರೀಯ ಪಂದ್ಯಾವಳಿಗೆ ರೋಹಿತ್ ಶರ್ಮಾ ಕೂಡ ವಿಧಾಯ ಹೇಳಿದ್ದಾರೆ.!
ಹೌದು ನನ್ನ ಕನಸು ನನಸಾಗಿದೆ ನನ್ನ ನಾಯಕತ್ವದಲ್ಲಿ T20 ವಿಶ್ವಕಪ್ ಅನ್ನು ಗೆದ್ದಿದ್ದೇವೆ ಎಂದು ರೋಹಿತ್ ಶರ್ಮಾ ಹೇಳಿದ್ದಾರೆ, ಇದು ವಿದಾಯ ಹೇಳಲು ಇದಕ್ಕಿಂತ ಉತ್ತಮ ಸಮಯವಿಲ್ಲ. ನಾನು ಇದರ ಪ್ರತಿ ಕ್ಷಣವನ್ನು ಪ್ರೀತಿಸುತ್ತೇನೆ. ನಾನು ಈ ಮಾದರಿಯಲ್ಲಿ ನನ್ನ ಟೀಂ ಇಂಡಿಯಾ ವೃತ್ತಿಜೀವನವನ್ನು ಪ್ರಾರಂಭಿಸಿದೆ. ನಾನು ಬಯಸಿದ್ದು ಇದೇ, ನಾನು ಕಪ್ ಗೆಲ್ಲಲು ಬಯಸಿದ್ದೆ.ಕಪ್ ಅನ್ನು ಗೆದ್ದಿದ್ದೇವೆ, ಇದು ನನಗೆ ತುಂಬಾ ಭಾವನಾತ್ಮಕ ಕ್ಷಣವಾಗಿತ್ತು. ನನ್ನ ಜೀವನದಲ್ಲಿ ಈ ಕ್ಷಣಕ್ಕಾಗಿ ನಾನು ತುಂಬಾ ಕಾದಿದ್ದೆ. ನಾವು ಅಂತಿಮವಾಗಿ ಗುರಿಯನ್ನು ಯಶಸ್ವಿಯಾಗಿ ಮುಟ್ಟಿದ್ದೇವೆ ಸಂತೋಷವಾಗಿದೆ. ಇನ್ನೂ ನಾನು T20 ಅಂತರರಾಷ್ಟ್ರೀಯ ಪಂದ್ಯಾವಳಿಗಳಿಗೆ ಗುಡ್ ಬೈ ಹೇಳುತ್ತೇನೆ ಎಂದು ಹೇಳಿದ್ದಾರೆ.
ಇದು ನನ್ನ ಅದೃಷ್ಟ ಎಂದು…..: ಟ್ರೋಫಿಯೊಂದಿಗೆ ಟೀಂ ಇಂಡಿಯಾದ ಮುಖ್ಯ ತರಬೇತುದಾರನ ಹುದ್ದೆ ತೊರೆದ ದ್ರಾವಿಡ್
ಬಾರ್ಬಡೋಸ್: ಹಲವು ಸಮಯದ ಬಳಿಕ ಅಂದರೆ ಸುಮಾರು ಹದಿನೇಳು ವರ್ಷಗಳ ಬಳಿಕ ಭಾರತವು ಟಿ20 ವಿಶ್ವಕಪ್ ಗೆದ್ದಿದೆ. ಬ್ರಿಜ್ ಟೌನ್ ನ ಕೆನ್ನಿಂಗ್ಸ್ಟನ್ ಓವಲ್ ನ ಅಂಕಣದಲ್ಲಿ ನಡೆದ ರೋಚಕ ಫೈನಲ್ ಪಂದ್ಯದಲ್ಲಿ ಭಾರತದ ರೋಹಿತ್ ನಾಯಕತ್ವದ ತಂಡ ದಕ್ಷಿಣ ಆಫ್ರಿಕಾ ತಂಡವನ್ನು ಏಳು ರನ್ ಗಳ ಅಂತರದಿಂದ ಸೋಲಿಸಿತು. ಈ ಮೂಲಕ ಕೋಟಿ ಕೋಟಿ ಭಾರತೀಯರು ಕಾಯುತ್ತಿದ್ದ ಶುಭ ಘಳಿಗೆಗೆ ಕೆರಿಬಿಯನ್ ದ್ವೀಪ ಸಾಕ್ಷಿಯಾಯಿತು.
ಕಳೆದ ಐಸಿಸಿ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್, ಏಕದಿನ ಫೈನಲ್ ಗೆ, ಇದೀಗ ಟಿ20 ಚಾಂಪಿಯನ್ ಆಗುವಲ್ಲಿ ಪ್ರಮುಖ ಪಾತ್ರ ವಹಿಸಿದ ಮುಖ್ಯ ತರಬೇತುದಾರ ರಾಹುಲ್ ದ್ರಾವಿಡ್ ಅವರ ಭಾರತೀಯ ತಂಡದ ಪಯಣ ಕೂಡಾ ಈ ವಿಶ್ವಕಪ್ ಗೆಲುವಿನೊಂದಿಗೆ ಅಂತ್ಯವಾಗಿದೆ. ಟಿ20 ವಿಶ್ವಕಪ್ ಅವರ ಕೊನೆಯ ಕೂಟವಾಗಿತ್ತು.
ಟಿ20 ವಿಶ್ವಕಪ್ 2024 ಗೆದ್ದ ಸಂತೋಷದಲ್ಲಿ ಮಾತನಾಡಿದ ದ್ರಾವಿಡ್ “ಒಬ್ಬ ಆಟಗಾರನಾಗಿ, ನಾನು ಟ್ರೋಫಿ ಗೆಲ್ಲುವ ಅದೃಷ್ಟವನ್ನು ಹೊಂದಿರಲಿಲ್ಲ ಆದರೆ ನಾನು ಒಬ್ಬ ತರಬೇತುದಾರನಾಗಿ ಅತ್ಯುತ್ತಮವಾದುದನ್ನು ಆಟಗಾರರಿಗೆ ನೀಡಿದ್ದೆ.ನನ್ನ ಭಾರತತಂಡ ವಿಶ್ವಕಪ್ ಟ್ರೋಫಿಯನ್ನು ಗೆಲ್ಲಲು ಸಾಧ್ಯವಾಗುವಂತೆ ಮಾಡಿದ್ದು ನನ್ನ ಅದೃಷ್ಟ ಇದು ತಂಡದ ಜೋತೆಗಿನ ಉತ್ತಮ ಪ್ರಯಾಣವಾಗಿದೆ … ” ಎಂದಿದ್ದಾರೆ.