ಡಿಸಿಸಿ ಬ್ಯಾಂಕ್ ನ ಚುನಾವಣೆ- ಆರ್ ಎಂ ಮಂಜುನಾಥ್ ಗೌಡ ಬಣದ ಮುಂದೆ ದೂಳಿಪಟವಾದ ಎದುರಾಳಿಗಳು.!
ಮಧು ಬಂಗಾರಪ್ಪನವರ ಯಶಸ್ವಿಯಾದ ಸಂಧಾನ… ಕಾಂಗ್ರೆಸ್ ಅಭ್ಯರ್ಥಿಗಳ ಭಾರಿ ಜಯಭೇರಿಗೆ ಕಾರಣವಾಯ್ತಾ
ಅಶ್ವಸೂರ್ಯ/ಶಿವಮೊಗ್ಗ: ಜಿಲ್ಲೆಯ ಪ್ರತಿಷ್ಠಿತ ಡಿಸಿಸಿ ಬ್ಯಾಂಕಿನ 12 ನಿರ್ದೇಶಕರ ಸ್ಥಾನಕ್ಕೆ ಇಂದು (ಜೂನ್,28) ಚುನಾವಣೆ ನಡೆದಿದ್ದು ಒಬ್ಬರನ್ನು ಬಿಟ್ಟು ಉಳಿದ ಕಾಂಗ್ರೆಸ್ ಬೆಂಬಲಿತ ಬಹುತೇಕ ನಾಯಕರು ಗೆಲುವು ಸಾಧಿಸಿದ್ದಾರೆ. ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಸೋಲಿಗೆ ಶರಣಾಗಿದ್ದಾರೆ.
ಡಿಸಿಸಿ ಬ್ಯಾಂಕಿನ ಹೊಸನಗರದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಎಂಎಂ ಪರಮೇಶ್ ಅವಿರೋಧ ಆಯ್ಕೆಯಾಗಿದ್ದ ಕಾರಣಕ್ಕೆ ಉಳಿದ 12 ಸ್ಥಾನಕ್ಕೆ ಚುನಾವಣೆ ಇಂದು ನೆಡೆಯಿತು,ಸಾಕಷ್ಟು ಕುತೂಹಲ ಮೂಡಿಸಿದ್ದ ಈ ಚುನಾವಣೆಯಲ್ಲಿ ಅಂತಿಮವಾಗಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಗೆದ್ದು ಬೀಗಿದ್ದಾರೆ.
ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ.ಶಿವಮೊಗ್ಗ ತಾಲ್ಲೂಕು ಕ್ಷೇತ್ರದಿಂದ ಕೆ.ಪಿ ದುಗ್ಗಪ್ಪಗೌಡ ಮತ್ತು ಶಿವನಂಜಪ್ಪ.ಜೆ ನಡುವಿನ ಹಣಾಹಣಿಯಲ್ಲಿ ದುಗ್ಗಪ್ಪ ಗೌಡ ಗೆಲುವು ಸಾಧಿಸಿದ್ದಾರೆ,
ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ. ಭದ್ರಾವತಿ ತಾಲ್ಲೂಕು ಕ್ಷೇತ್ರದಿಂದ ಹೆಚ್.ಎಲ್. ಷಡಾಕ್ಷರಿ ವಿರುದ್ಧ ಸಿ.ಹನುಮಂತಪ್ಪ ನುಡುವಿನ ಸ್ಪರ್ಧೆಯಲ್ಲಿ ಹನುಮಂತಪ್ಪ ಗೆಲುವಿನ ನಗೆ ಬಿರಿದ್ದಾರೆ. ಇವರು ಭದ್ರಾವತಿಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿದ್ದಾರೆ,
ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ, ತೀರ್ಥಹಳ್ಳಿ ತಾಲೂಕು ಕ್ಷೇತ್ರದಿಂದ ಹಿರಿಯರು ಅನುಭವಿಗಳಾದ ಬಸವಾನಿಯ ವಿಜಯದೇವ್ ಅವರು ಕೆ.ಎಸ್.ಶಿವಕುಮಾರ್ ವಿರುದ್ಧ ಗೆಲವು ಸಾಧಿಸಿದ್ದಾರೆ.
ಪ್ರಾ ಕೃ ಪ ಸ ಸಂಘ ನಿ ಸಾಗರ ತಾಲ್ಲೂಕು ಕ್ಷೇತ್ರದಿಂದ ಹಾಲಿ ಜನಪ್ರಿಯ ಶಾಸಕ ಗೋಪಾಲಕೃಷ್ಣ ಬೇಳೂರು ಅವರು ರತ್ನಾಕರ್ ಹೊನಗೋಡು ಅವರನ್ನು ಸೋಲಿಸಿ ಡಿಸಿಸಿ ಬ್ಯಾಂಕಿನ ಸದಸ್ಯರಾಗಿದ್ದಾರೆ,
ಪ್ರಾ ಕೃ ಪ ಸ ಸಂಘ ನಿ ಶಿಕಾರಿಪುರ ತಾಲ್ಲೂಕು ಕ್ಷೇತ್ರದಿಂದ ಅಗಡಿ ಅಶೋಕ ಮತ್ತು ಎಸ್.ಪಿ ಚಂದ್ರಶೇಖರಗೌಡ ನಡುವಿನ ಹಣಾಹಣಿಯಲ್ಲಿ ಚಂದ್ರಶೇಖರ್ ಗೌಡ ಗೆದ್ದಿದ್ದಾರೆ,
ಪ್ರಾ ಕೃ ಪ ಸ ಸಂಘ ನಿ ಸೊರಬ ತಾಲ್ಲೂಕು ಕ್ಷೇತ್ರದಿಂದ ಸಚಿವರಾದ ಮಧುಬಂಗಾರಪ್ಪ ನವರ ಆಪ್ತರಾದ ಕೆ.ಪಿ. ರುದ್ರಗೌಡ ಅವರು ಶಿವಮೂರ್ತಿಗೌಡ ಅವರನ್ನು ಸೋಲಿಸಿದ್ದಾರೆ.
ತಾಲ್ಲೂಕು ಕೃಷಿ ಉತ್ಪನ್ನ ಮಾರಾಟ ಸಹಕಾರ ಸಂಘ ಹಾಘೂ ಇತರೆ ಮಾರಾಟ ಮತ್ತು ಸಂಸ್ಕರಣ ಸಹಕಾರ ಸಂಘಗಳು ಶಿವಮೊಗ್ಗ ಉಪ ವಿಭಾಗದಿಂದ ಆರ್.ಎಂ. ಮಂಜುನಾಥಗೌಡ ಅವರು ವಿರೂಪಾಕ್ಷಪ್ಪ ಜಿ. ಅವರನ್ನು ಮಣಿಸಿ ಮತ್ತೊಮ್ಮೆ ಮಂಜುನಾಥ್ ಗೌಡ ಅಧ್ಯಕ್ಷ ಗಾದಿಗೆ ಎರುವ ಹಾದಿಯಲ್ಲಿದ್ದಾರೆ.
ತಾಲ್ಲೂಕು ಕೃಷಿ ಉತ್ಪನ್ನ ಮಾರಾಟ ಸಹಕಾರ ಸಂಘ ಹಾಘೂ ಇತರೆ ಮಾರಾಟ ಮತ್ತು ಸಂಸ್ಕರಣ ಸಹಕಾರ ಸಂಘಗಳು ಸಾಗರ ಉಪ ವಿಭಾಗದಿಂದ ಶಿಕಾರಿಪುರದ ಬಿ.ಡಿ ಭೂಕಾಂತ್ ವಿರುದ್ಧ ಮಂಜುನಾಥ್ ಗೌಡರ ಆಪ್ತರಾದ ಜಿ.ಎಸ್.ಸುಧೀರ್ ಗೆಲುವು ಸಾದಿಸಿದ್ದಾರೆ.
ಪಟ್ಟಣ ಸಹಕಾರ ಬ್ಯಾಂಕುಗಳ ಹಾಗೂ ವ್ಯವಸಾಯೇತರ ಪತ್ತಿನ ಸಹಕಾರ ಸಂಘಗಳು ಶಿವಮೊಗ್ಗ ಉಪವಿಭಾಗದಿಂದ ಎಸ್.ಪಿ.ದಿನೇಶ ವಿರುದ್ಧ ಸ್ಫರ್ಧಿಸಿದ್ದ ಮಾಜಿ ಮೇಯರ್ ಎಸ್ ಕೆ ಮರಿಯಪ್ಪ ನಡುವಿನ ಸ್ಪರ್ಧೆಯಲ್ಲಿ ಮರಿಯಪ್ಪ ಗೆದ್ದು ಬಿಗಿದ್ದಾರೆ.
ಪಟ್ಟಣ ಸಹಕಾರ ಬ್ಯಾಂಕುಗಳ ಹಾಗೂ ವ್ಯವಸಾಯೇತರ ಪತ್ತಿನ ಸಹಕಾರ ಸಂಘಗಳು ಸಾಗರ ಉಪವಿಭಾಗದಿಂದ ಎಸ್.ಕೆ, ಬಸವರಾಜ್ ಮತ್ತು ಡಿ.ಎಲ್, ರವೀಂದ್ರ ಹೆಚ್.ಎಸ್ ನಡುವಿನ ಸ್ಪರ್ಧೆಯಲ್ಲಿ ಬಸವರಾಜ್ ಗೆಲುವಿನ ದಡಸೇರಿದ್ದಾರೆ.
ಬ್ಯಾಂಕಿನ ಕಾರ್ಯ ವ್ಯಾಪ್ತಿಯಲ್ಲಿ ಬರುವ ಇನ್ನಿತರ ಸಹಕಾರ ಸಂಘಗಳು ಶಿವಮೊಗ್ಗ ಉಪವಿಭಾಗದಿಂದ ಆನಂದ ಡಿ, ಕೆ.ಎಲ್.ಜಗದೀಶ್ವರ್, ಹೆಚ್.ಬಿ ದಿನೇಶ್, ಎಸ್.ಎನ್, ಜೆ.ಪಿ ಯೋಗೇಶ್, ಟಿ. ಶಿವಶಂಕರಪ್ಪ, ಮತ್ತು ರಾಷ್ಟ್ರಭಕ್ತ ಬಳಗದ ಮಹಲಿಂಗ ಶಾಸ್ತ್ರಿ ಗೆದ್ದಿದ್ದಾರೆ.
ಇದರಿಂದ 13 ಕ್ಷೇತ್ರದಲ್ಲಿ 12 ಜನ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಗೆಲುವು ಸಾಧಿಸಿದ್ದು ಮತ್ತೊಮ್ಮೆ ಆರ್ ಎಂ. ಮಂಜುನಾಥ್ ಗೌಡರು ಮೇಲುಗೈ ಸಾಧಿಸಿದ್ದಾರೆ. ಈ ಹಿನ್ನಲೆಯಲ್ಲಿ ಆರ್ ಎಂ ಮಂಜುನಾಥ್ ಗೌಡ್ರು ಡಿಸಿಸಿ ಬ್ಯಾಂಕಿನ ಅಧ್ಯಕ್ಷರಾಗುವ ಸಾಧ್ಯತೆ ಇದೆ.