✍️ ಕೆ ಪಿ ಶ್ರೀಪಾಲ್ , ವಕೀಲರು, ಶಿವಮೊಗ್ಗ
ಎಂ.ಶ್ರೀಕಾಂತ್ ಬೆರೆಯವರ ಪಾಲಿಗೆ ಅದೃಷ್ಟದ ಬಾಗಿಲು, ವ್ಯಕ್ತಿಗತವಾಗಿ ಅವರಿಗೆ ಅವರು ನತಾದೃಷ್ಟ ವ್ಯಕ್ತಿ: ಕೆ ಪಿ ಶ್ರೀಪಾಲ್, ವಕೀಲರು
ಅಶ್ವಸೂರ್ಯ/ಶಿವಮೊಗ್ಗ: ಎಂ.ಶ್ರೀಕಾಂತ್ ಎಂಬ ಹೃದಯವಂತ ಮನುಷ್ಯ ಬೆರೆಯವರ ಪಾಲಿಗೆ ಮಾತ್ರ ಅದೃಷ್ಟದ ಬಗಿಲು, ವ್ಯಕ್ತಿಗತವಾಗಿ ಅವರಿಗೆ ಅವರು ನತಾದೃಷ್ಟ,
ಶಿವಮೊಗ್ಗ ಜಿಲ್ಲೆಯ ಮೂಲೆ ಮೂಲೆಯ ಜನರಿಗೂ ಪರಿಚಿತ ವ್ಯಕ್ತಿ. ಎಲ್ಲೆ ಕೇಳಿದರು ಗೊತ್ತಿಲ್ಲದವರಿಲ್ಲಾ, ಇವರೆಂದು MLA ಆಗಿಲ್ಲ MP ಆದವರಲ್ಲ, ಆದರೆ ತನ್ನ ಬಳಿ ಸಹಾಯಕೇಳಿ ಬರುವ ಪ್ರತಿಯೊಬ್ಬರನ್ನು ಗೌರವಪೂರ್ವಕವಾಗಿ ಮಾತನಾಡಿಸಿ ಅವರಿಗೆ ಹೃದಯಪೂರ್ವಕವಾಗಿ ಸ್ಪಂದಿಸುವವರು, ಯಾರಿಗೆ ಸ್ಪಂದಿಸಿ ಸಹಾಯ ಮಾಡಿದ್ದರು ಅದನ್ನು ಇನ್ನೊಬ್ವರ ಬಳಿ ಹೇಳಿಕೊಂಡವರಲ್ಲ, ಆಸ್ಪತ್ರೆ ಬಿಲ್, ಶಾಲಾ ಕಾಲೇಜು ಪೀ, ಮದುವೆ, ಮಕ್ಕಳ ನಾಮಕರಣದಿಂದ ಹಿಡಿದು, ಶವಾ ಸಂಸ್ಕಾರ ತಿಥಿ ಕಾರ್ಯದವರೆಗೆ ಇವರಿಂದ ಈ ತರದ ಸಹಕಾರ ಪಡೆಯುವವರು ದಿನ ನಿತ್ಯ ಇರುತ್ತಾರೆ, ಎಂದೂ ಕೂಡ ಸಹಾಯ ಸಹಕಾರ ಕೇಳಿದವರ ಮುಂದೆ ಸಿಟ್ಟಾಗಿ ಅಥವಾ ಬೆಸರದಿಂದ ನಡೆದುಕೊಂಡವರಲ್ಲಾ. ಆದರೆ ಇಂತಹ ದೇವತಾ ಮನುಷ್ಯನಿಗೆ ಯಾಕೋ ಮೇಲಿಂದ ಮೇಲೆ ಅನ್ಯಾಯ ಆಗುತ್ತಿದ್ದೆ, ಇವರಿಂದ ಸಣ್ಣ ಪುಟ್ಟ ಸಹಾಯವಲ್ಲ ಪುನರ್ ಜೀವನವನ್ನು ಪಡೆದವರು ಇವರಿಂದ ಎಲ್ಲವನ್ನೂ ಪಡೆದವರೆ ಇವರಿಗೆ ಬೆನ್ನಿಗೆ ಚೂರಿ ಹಾಕುತ್ತಿದ್ದಾರೆ. ಜಗತ್ತೆ ಇಷ್ಟು ಅನಿಸುತ್ತೆ, ಜನರಲ್ಲಿ ಸತ್ಯ ಪ್ರಾಮಾಣಿಕತೆಗಳು ಮಯಾವಾಗಿವೆ, ಜನ ಕೃತಜ್ಞತೆ ಇಲ್ಲದವರಾಗಿದ್ದಾರೆ.
ತನ್ನ ಬಳಿ ಸಹಾಯಕೇಳಿ ಬರುವ ಪ್ರತಿಯೊಬ್ಬರನ್ನು ಗೌರವಪೂರ್ವಕವಾಗಿ ಮಾತನಾಡಿಸಿ ಅವರಿಗೆ ಹೃದಯಪೂರ್ವಕವಾಗಿ ಸ್ಪಂದಿಸುವವರು, ಯಾರಿಗೆ ಸ್ಪಂದಿಸಿ ಸಹಾಯ ಮಾಡಿದ್ದರು ಅದನ್ನು ಇನ್ನೊಬ್ಬರ ಬಳಿ ಹೇಳಿಕೊಳ್ಳದ ದೊಡ್ಡ ಮನಸ್ಸಿನ ವ್ಯಕ್ತಿ..
ಕೃತಜ್ಞತೆ ಇಲ್ಲದ ರೀತಿ ನಡೆಕೊಳ್ಳುವವರು ಸಾಮಾನ್ಯ ಜನರಾದರೆ ಹೌದು ತಿಳುವಳಿಕೆ ಇಲ್ಲಾ ಹೊಗಲಿ ಬಿಡಿ ಅನ್ನಬಹುದು. ಆದರೆ ಯಾವ ಬ್ಯಾಂಕಿನ ಪ್ರಕರಣದಲ್ಲಿ ಯಾರ ಪರವಾಗಿ ನಿಂತು ಹೋರಾಟ ಮಾಡಿದ್ರೊ, ಅದೆ ಬ್ಯಾಂಕ್ ಅದೆ ವ್ಯಕ್ತಿಗಳಿಂದ ಇವತ್ತು ನಂಬಿಕೆ ದ್ರೋಹವಾಯಿತು.
ಕಳೆದ 25 ವರ್ಷಗಳಿಂದ ಹತ್ತಿರದಿಂದ ಶ್ರೀಕಾಂತ್ ಏನು ಎಂದು ನೋಡಿದ್ದ ನಮಗೆ, ಅವರಿಗೆ ಬ್ಯಾಂಕೊಂದರ ಚುನಾವಣೆಯಲ್ಲಿ ಕೆಲವರು ಮಾಡಿದ ನಂಬಿಕೆ ದ್ರೋಹ ನೋಡಿ ತುಂಬಾ ನೋವಾಯಿತು.
– ಕೆಪಿಎಸ್.