ಕಮಲಶಿಲೆ ಶ್ರೀ ಬ್ರಾಹ್ಮೀ ದುರ್ಗಾಪರಮೇಶ್ವರಿ, ದೇವಸ್ಥಾನ
ಕಮಲಶಿಲೆ ದೇಗುಲದಲ್ಲಿ ಗೋವು ಕಳ್ಳತನಕ್ಕೆ ಯತ್ನ.! ಸಕಾಲದಲ್ಲಿ ಎಚ್ಚರಿಸಿದ ಸಿಸಿಟಿವಿ ದೃಶ್ಯ.! ಎಚ್ಚೆತ್ತ ಭದ್ರತಾ ಸಿಬ್ಬಂದಿ..
ಅಶ್ವಸೂರ್ಯ/ಕುಂದಾಪುರ: ಕುಂದಾಪುರ ತಾಲೂಕಿನ ಸಿದ್ದಾಪುರ ಸಮೀಪವಿರುವ ರಾಜ್ಯದ ಹೆಸರಾಂತ ದೇಗುಲಗಳಲ್ಲಿ ಒಂದಾದ ಕಮಲಶಿಲೆ ದೇವಸ್ಥಾನದಲ್ಲಿ ಶನಿವಾರ (ಜೂನ್,22) ತಡರಾತ್ರಿ ಗೋ ಕಳ್ಳತನಕ್ಕೆ ಖದೀಮರು ಯತ್ನಿಸುತ್ತಿದ್ದ ಸಂಧರ್ಭದಲ್ಲಿ ಸೈನ್ ಇನ್ ಸಿಸಿಟಿವಿ ತಂಡ ಸಕಾಲದಲ್ಲಿ ಎಚ್ಚರಿಸಿ ಕಳ್ಳತನವನ್ನು ವಿಫಲಗೊಳಿಸಿದೆ.ಮುಂದಾಗುವ ಅನಾವುತವನ್ನು ಅರಿತ ಕಳ್ಳರು ಎಸ್ಕೇಪ್ ಆಗಿದ್ದರು.
ಕಮಲಶಿಲೆ ದೇವಸ್ಥಾನದ ಸರಹದ್ದಿನಲ್ಲಿರುವ ಗೋಶಾಲೆಯಲ್ಲಿ ತಡ ರಾತ್ರಿ 2.30ರ ಸಮಯಕ್ಕೆ ಇಬ್ಬರು ಕಳ್ಳರು ಗೋವು ಶಾಲೆಯ ಎದುರಿನ ಬಾಗಿಲಿನ ಬೀಗ ಮುರಿದು ಇನ್ನೊಂದು ಬಾಗಿಲಿನ ಮೂಲಕ ಒಳ ನುಗ್ಗಿದ ಖದೀಮರು ಮೂರು ಹಸುಗಳಿಗೆ ಕಟ್ಟಿದ್ದ ಹಗ್ಗವನ್ನು ಕತ್ತಿಯಿಂದ ಕತ್ತರಿಸಿ ಇನ್ನೇನು ಗೋವುಗಳನ್ನು ಕದ್ದು ಸಾಗಾಟಕ್ಕೆ ಯತ್ನಿಸಿದ್ದರು. ದೇವಸ್ಥಾನ ಸರಹದ್ದಿನಲ್ಲಿ ದೇವಸ್ಥಾನದ ವತಿಯಿಂದ ಅಳವಡಿಸಿರುವ ಸೈನ್ ಇನ್ ಸೆಕ್ಯುರಿಟೀಸ್ ಸಂಸ್ಥೆಯ ಲೈವ್ ಮಾನಿಟರಿಂಗ್ ಸಿಸಿಟಿವಿಗಳು 24 ತಾಸು ಅಲ್ಲಿಯ ಪ್ರತಿಯೊಂದು ಸ್ಥಳದ ಮೇಲೆ ನೇರ ನಿಗಾ ಇಟ್ಟಿದ್ದರಿಂದ ಕಳ್ಳತನಕ್ಕೆ ಬಂದ ಕಳ್ಳರ ಮಾಹಿತ ತಕ್ಷಣ ಸಿಕ್ಕಿದೆ ಕೂಡಲೇ ಕಳ್ಳತನ ನೆಡೆಯುವ ಮಾಹಿತಿಯನ್ನು ಪೊಲೀಸ್ ಇಲಾಖೆಗೆ ತಲುಪಿದೆ.ಸಿಸಿಟಿವಿ ಅನುಮಾನಾಸ್ಪದ ವ್ಯಕ್ತಿಗಳ ಓಡಾಟ, ಸಂಶಯಾಸ್ಪದ ಚಟುವಟಿಕೆಗಳ ಮಾಹಿತಿಯನ್ನು ತತ್‌ಕ್ಷಣ ಪೊಲೀಸರಿಗೆ ಮಾಹಿತಿ.
ಕುಂದಾಪುರದ ಅಂಕದಕಟ್ಟೆಯಲ್ಲಿರುವ ಮಾನಿಟರಿಂಗ್ ಸೆಂಟರ್‌ನ ಸಿಬಂದಿ ದೇವಸ್ಥಾನದ ಗೋಶಾಲೆಯಲ್ಲಿ ಜಾನುವಾರುಗಳ ಹಗ್ಗ ಕಡಿಯುತ್ತಿರುವುದನ್ನು ಕಂಡು ಬೀಟ್ ಪೊಲೀಸ್, ಎಸ್‌ಐ, ದೇವಾಲಯದ ಭದ್ರತಾ ವಿಭಾಗದವರಿಗೆ ಮಾಹಿತಿ ನೀಡಿದ್ದಾರೆ. ಭದ್ರತಾ ವಿಭಾಗದವರು ತಕ್ಷಣವೇ ಗೋಶಾಲೆಗೆ ಹೋದಾಗ ಗೋವು ಕದಿಯಲು ಬಂದವರು ಸ್ಥಳದಿಂದ ಪರಾರಿಯಾಗಿದ್ದಾರೆ. ಎಲ್ಲಾ ದನಗಳೂ ಗೋವು ಶಾಲೆಯಲ್ಲಿಯೆ ಸುರಕ್ಷಿತವಾಗಿದ್ದವು. ಪೋಲಿಸರ್ ಸಬ್ ಇನ್ಸ್‌ಪೆಕ್ಟರ್ ಹಾಗೂ ಕುಂದಾಪುರ ಡಿವೈಎಸ್‌ಪಿ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದು ಕಾರಿನ ಮೂಲಕ ಬಂದವರ ಮಾಹಿತಿ ಕಲೆ ಹಾಕಿದ್ದಾರೆ. ಖಚಿತ ಮಾಹಿತಿ ದೊರೆತಿದ್ದು ಶಂಕಿತರ ಪತ್ತೆಗೆ ನಮ್ಮ ಪೊಲೀಸರ ತಂಡ ಭಲೇ ಬಿಸಿದೆ ಎಂದು ಡಿವೈಎಸ್‌ಪಿ ಕೆ.ಯು. ಬೆಳ್ಳಿಯಪ್ಪ ತಿಳಿಸಿದ್ದರು
ಗೋವು ಕದಿಯಲು ಬಂದು ಎಸ್ಕೇಪ್ ಆಗಿದ್ದ ಖದೀಮರನ್ನು ಕೇಲವೆ ಗಂಟೆಗಳಲ್ಲಿ ಬಂಧಿಸಿದ ಪೊಲೀಸರು
ಶಂಕರನಾರಾಯಣ: ಕಮಲಶಿಲೆ ದೇವಸ್ಥಾನ ದಲ್ಲಿ ಗೋ ಕಳ್ಳತನಕ್ಕೆ ಯತ್ನಿಸಿದ್ದ ಇಬ್ಬರು ಆರೋಪಿಗಳನ್ನು ಶಂಕರನಾರಾಯಣ ಪೊಲೀಸರು ಶನಿವಾರ (ಜೂ,22) ಗೋಳಿಯಂಗಡಿ ಸಮೀಪ ಬಂಧಿಸಿದ್ದು, ಇನ್ನೊಬ್ಬನ ಬಂಧನಕ್ಕಾಗಿ ಶಂಕರನಾರಾಯಣ ಪೊಲೀಸರು ಬಲೆ ಬೀಸಿದ್ದಾರೆ.ಬಂಧಿತರಾದವರು
ಮಂಗಳೂರು ಬಜ್ಪೆಯ ವಾಜೀದ್ ಜೆ. (26) ಹಾಗೂ ಫೈಜಲ್ (40) ಬಂಧಿತರು. ಕೃತ್ಯಕ್ಕೆ ಬಳಸಿದ ಕಾರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆರೋಪಿಗಳಿಗೆ 15 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಕಮಲಶಿಲೆಯ ಗೋಶಾಲೆಯ ಬಾಗಿಲಿನ ಬೀಗ ಮುರಿದು, ಜೂ.15ರ ತಡರಾತ್ರಿ 2.45ರ ಸುಮಾರಿಗೆ ನುಗ್ಗಿದ್ದ ಇಬ್ಬರು ಗೋವು ಕಳ್ಳರು ಮೂರು ಹಸುಗಳ ಹಗ್ಗವನ್ನು ಕತ್ತಿಯಿಂದ ಕಡಿದು ಇನ್ನೇನು ಗೋವುಗಳ ಸಾಗಾಟಕ್ಕೆ ಮುಂದಾಗಿದ್ದರು ಅ ಸಂಧರ್ಭದಲ್ಲಿ ಕಳ್ಳತನದ ದೃಶ್ಯ ಸೈನ್ ಇನ್ ಸೆಕ್ಯೂರಿಟಿ ಸಂಸ್ಥೆ ಅಳವಡಿಸಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಕೂಡಲೇ ಆ ತಂಡ ಪೊಲೀಸರಿಗೆ ಹಾಗೂ ದೇವಸ್ಥಾನದ ಭದ್ರತಾ ಸಿಬಂದಿಗೆ ಮಾಹಿತಿ ನೀಡಿದೆ.ತಕ್ಷಣವೇ ದೇವಳದ ಸೆಕ್ಯೂರಿಟಿಗಳು ಪೋಲಿಸರು ಕಳ್ಳರನ್ನು ಹಿಡಿಯುವ ಮುನ್ನ ಅ ಕ್ಷಣದಲ್ಲಿ ತಪ್ಪಿಸಿಕೊಂಡಿದ್ದರು ಇದರಿಂದ ಗೋಕಳ್ಳತನ ವಿಫಲಗೊಂಡಿತ್ತು. ಸಿಸಿ ಟಿವಿಯ ದೃಶ್ಯಗಳನ್ನು ಆಧಾರಿಸಿ ಗೋವು ಕಳ್ಳರನ್ನು ಹಿಡಿಯುವಲ್ಲಿ ಶಂಕರನಾರಾಯಣ ಪೋಲಿಸರು ಯಶಸ್ವಿಯಾಗಿದ್ದಾರೆ.ಒಬ್ಬ ತಪ್ಪಿಸಿಕೊಂಡಿದ್ದು ಅವನ ಬಂಧನಕ್ಕೆ ಭಲೇ ಬಿಸಿದ್ದಾರೆ