ಶಿಕಾರಿಪುರ,”ಅಘೋರ ಅಭಿಮಾನಿ ಬಳಗ” ಆಶ್ರಯದಲ್ಲಿ ರಾಜ್ಯ ಮಟ್ಟದ ಹೊನಲು ಬೆಳಕಿನ “ಕುರಿ ಕಾಳಗ” ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಸಂಸದ ಬಿ ವೈ ರಾಘವೇಂದ್ರ ಮತ್ತು ಕಾಂಗ್ರೆಸ್ ಮುಖಂಡರಾದ ಎಂ ಶ್ರೀಕಾಂತ್
ಅಶ್ವಸೂರ್ಯ/ಶಿಕಾರಿಪುರ: ಶಿಕಾರಿಪುರದ ಶ್ರೀ ಮಾರಿಕಾಂಬಾ ಬಯಲು ರಂಗಮಂದಿರದಲ್ಲಿ “ಅಘೋರ ಅಭಿಮಾನಿ ಬಳಗ” ಆಶ್ರಯದಲ್ಲಿ ಅದ್ದೂರಿಯಾಗಿ ಆಯೋಜಿಸಿದ್ದ ಪ್ರಥಮ ವರ್ಷದ ರಾಜ್ಯ ಮಟ್ಟದ ಹೊನಲು ಬೆಳಕಿನ “ಕುರಿ ಕಾಳಗ” ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಸಂಸದರಾದ ಬಿ ವೈ ರಾಘವೇಂದ್ರ ಮತ್ತು ಕಾಂಗ್ರೆಸ್ ಮುಖಂಡ ಎಂ ಶ್ರೀಕಾಂತ್ ಭಾಗವಹಿಸಿದ್ದರು
ಸಂಸದ ರಾಘವೇಂದ್ರ ಅವರು ಮಾತನಾಡಿ. ನಮ್ಮ ಪೂರ್ವಜರು ಏನೇ ಮಾಡಿದರು ಅದರ ಹಿಂದೆ ವೈಜ್ಞಾನಿಕ ನೆಲೆಗಟ್ಟು ಅಡಕವಾಗಿರುತ್ತದೆ. “ಕುರಿ ಕಾಳಗ” ಸ್ಪರ್ಧೆ ನೂರಾರು ವರ್ಷಗಳ ಭವ್ಯ ಇತಿಹಾಸ ಹೊಂದಿರುವ ನಮ್ಮ ಪೂರ್ವಜರು ಹುಟ್ಟು ಹಾಕಿದ ಗ್ರಾಮೀಣ ಕ್ರೀಡೆ. ಮನುಷ್ಯ ಜೀವನದ ಉಲ್ಲಾಸ-ಉತ್ಸಾಹ-ಮನೋಸ್ಥೈರ್ಯ-ಆತ್ಮವಿಶ್ವಾಸ ಹೆಚ್ಚಿಸುವ ವಿಶಿಷ್ಟ ಕ್ರೀಡೆ ಎಂದರೆ ಅತಿಶಯೋಕ್ತಿ ಆಗಲಾರದು.
ನೋಡುಗರನ್ನು ತನ್ನತ್ತ ಅತ್ಯಾಕರ್ಷಿಸುವ ರೋಮಾಂಚನಕಾರಿ ಕ್ರೀಡೆಯೂ ಹೌದು. ಕ್ರೀಡೆಯ ಆರಂಭದಿಂದ ಹಿಡಿದು ಅಂತ್ಯದವರೆಗೂ ಕ್ರೀಡಾ ಪ್ರೇಮಿಗಳನ್ನು ತನ್ನಲ್ಲಿ ಹಿಡಿದಿಟ್ಟುಕೊಂಡು ತುದಿಗಾಲಿನಲ್ಲಿ ನಿಲ್ಲಿಸಿ ದಿನ ನಿತ್ಯದ ಜಂಜಾಟದಿಂದ ಅಲ್ಪ ಸಮಯ ಬಿಡುವು ಕೊಡುವುದು ಅಷ್ಟೇ ಸತ್ಯ ಕೂಡ ಹೌದು. ಕೆಲ ಸಮಯ ನಾನು ಕೂಡ ರಾಜಕೀಯ ಲೋಕವನ್ನು ಮರೆತು ಅದರ ಆಳದಲ್ಲಿ ಬೇರೂರಿದ್ದು ಸುಳ್ಳಲ್ಲ.
ಈ ಸಮಯದಲ್ಲಿ ಶ್ರೀ ಹುಲ್ಮಾರು ಮಹೇಶ್ ಅವರು, ಶ್ರೀ ಗೋಣಿ ಸಂದೀಪ ಅವರು, ಶ್ರೀ ಈರಣ್ಣ ಅವರು, ಶ್ರೀ ಪ್ರಶಾಂತ್ ಅವರು, ಶ್ರೀ ಗಿರೀಶ್ ಅವರು, ಶ್ರೀ ಶ್ರೀಕಾಂತ್ ಅವರು, ಶ್ರೀ ನಗರದ ಮಹಾದೇವಪ್ಪ ಅವರು ಸೇರಿದಂತೆ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.