ಪೊಲೀಸರ ಭದ್ರತೆಯಲ್ಲಿ ತಂದೆಯ ಅಂತ್ಯಸಂಸ್ಕಾರಕ್ಕೆ ಬಂದ ರೇಣುಕಾಸ್ವಾಮಿ ಕೊಲೆ ಆರೋಪಿ ಅನುಕುಮಾರ್: ನಿನ್ನ ಸಾವಿಗೆ ನಾನೆ ಕಾರಣನಾದೆ ತಂದೆ ಶವದ ಮುಂದೆ ಕಣ್ಣೀರಿಟ್ಟ ಆರೋಪಿ ಅನು..!
ಅಶ್ವಸೂರ್ಯ/ಚಿತ್ರದುರ್ಗ:ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದರ್ಶನ್ ಗ್ಯಾಂಗ್ನ ಕೊಲೆ 7ನೇ ಆರೋಪಿ ಅನುಕುಮಾರ್ ಅಲಿಯಾಸ್ ಅನು ತಂದೆ ಸಾವನಪ್ಪಿದ್ದು, ಅವರ ಆಂತ್ಯಕ್ರಿಯೆಯನ್ನು ತಡರಾತ್ರಿ ನೆರವೇರಿಸಲಾಗಿದೆ.
ರೇಣುಕಾಸ್ವಾಮಿ ಕೊಲೆಯಿಂದಾಗಿ ಅನೇಕ ಬಡ ಕುಟುಂಬಗಳು ಕಣ್ಣೀರಿನಲ್ಲಿ ಕೈತೊಳೆಯುವಂತಾಗಿದೆ. ದರ್ಶನ್ ಗ್ಯಾಂಗ್ನಲ್ಲಿದ್ದ 7ನೇ ಕೊಲೆ ಆರೋಪಿ ಅನುಕುಮಾರ್ ಅಲಿಯಾಸ್ ಅನು ರೇಣುಕಾಸ್ವಾಮಿ ಕೊಲೆ ನಡೆದ ಮರುದಿನವೇ ಪೊಲೀಸರಿಗೆ ಸರೆಂಡರ್ ಆಗಿದ್ದ. ಈ ವಿಷಯ ತಿಳಿದ ಅನು ತಂದೆ ಚಂದ್ರಪ್ಪ ಆಘಾತಕ್ಕೊಳಗಾಗಿ ಲೊ ಬಿಪಿಯಿಂದ ನಡು ರಸ್ತೆಯಲ್ಲೇ ಕುಸಿದು ಬಿದ್ದು ಹೃದಯಾಘಾತದಿಂದ ಸಾವನಪ್ಪಿದ್ದರು. ಸಾವನ್ನಪ್ಪಿದ 24 ಗಂಟೆಗಳ ಬಳಿಕ ಅವರ ಅಂತ್ಯಕ್ರಿಯೆ ನೆರವೇರಿಸಲಾಗಿದೆ. ಪೊಲೀಸರ ವಶದಲ್ಲಿದ್ದ ಮಗ ಅನುಕುಮಾರ್ ಬಂದ ಬಳಿಕವೇ ಶವ ಸಂಸ್ಕಾರ ಮಾಡುವುದಾಗಿ ಕುಟುಂಬಸ್ಥರು ತೀರ್ಮಾನಿಸಿದ್ದರು. ಶವದ ಮುಂದೆ ಕುಟುಂಬಸ್ಥರು ಅನು ಬರುವಿಕೆಗಾಗಿ ಕಾದು ಕುಳಿತಿದ್ದರು.
ನ್ಯಾಯಾಧೀಶರ ಆದೇಶದಂತೆ ಆರೋಪಿ ಅನುಕುಮಾರನನ್ನು ಪೊಲೀಸರು ಚಿತ್ರದುರ್ಗಕ್ಕೆ ಕರೆದುಕೊಂಡು ಹೋಗಿದ್ದರು.ಮಗ ಬರುತ್ತಿದ್ದಂತೆಯೇ ಅನು ತನ್ನ ತಾಯಿ, ಅಕ್ಕನನ್ನು ತಬ್ಬಿಕೊಂಡು ಕಣ್ಣೀರು ಹಾಕಿದ್ದಾನೆ .ತಂದೆಯ ಶವದ ಮುಂದೆ ಕೂತು ನನ್ನಿಂದ ಹೀಗೆ ಆಗೋಯ್ತಲ್ಲ ಎಂದು ಬಿಕ್ಕಿ ಬಿಕ್ಕಿ ಅತ್ತಿದ್ದಾನೆ.!
ದರ್ಶನ್ ನನ್ನು ಬಾಸು ಗುರು ಎಂದು ಹಾಡಿ ಹೋಗಳಿದ್ದು ಬಿಟ್ಟರೆ ಈ ಬಡಪಾಯಿ ಯುವಕರಿಗೆ ಅವನಿಂದ ಸಿಕ್ಕಿದ್ದು ನಯಾ ಪೈಸೆನು ಇಲ್ಲಾ. ಉಪಯೋಗವಿಲ್ಲದಿದ್ದರು ಹುಚ್ಚು ಅಭಿಮಾನಕ್ಕೆ ಕೊಲೆ ಪ್ರಕರಣದಲ್ಲಿ ತಗಲುಹಾಕಿಕೊಂಡು ಜೈಲು ಸೇರಿದ್ದಾನೆ ಅನುಕುಮಾರ್.
ಇದು ಇವನಿಗೆ ಬೇಕಿತ್ತಾ.? ಮಗನ ಮೇಲೆ ಅಗಾಧ ವಾದ ಪ್ರೀತಿ ಇಟ್ಟುಕೊಂಡಿದ್ದ ಅನು ತಂದೆ ಮಗ ಜೈಲಿಗೆ ಹೊದ ಕಾರಣಕ್ಕೆ ಶಾಖ್ ನಿಂದಲೇ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ,ಮನೆ ಮಗ ಜೈಲು ಸೇರಿದ.! ಮನೆಯ ಯಜಮಾನ ಮಸಣ ಸೇರಿದ.! ಇವರಿಬ್ಬರನ್ನು ನಂಬಿದವರು ದಿಕ್ಕುಕಾಣದೆ ಕುಳಿತಿದ್ದಾರೆ…..