ಚುನಾವಣಾಧಿಕಾರಿಗಳು ಡಾ.ಧನಂಜಯ ಸರ್ಜಿ ಅವರಿಗೆ ಪ್ರಮಾಣ ಪತ್ರ ವಿತರಿಸಿದ ಕ್ಷಣ
ನೈರುತ್ಯ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾಕ್ಟರ್ ಧನಂಜಯ ಸರ್ಜಿ ಅವರಿಗೆ ಬಾರಿ ಅಂತರದ ಗೆಲುವು
news.ashwasurya.in/shivamogga
✍️ Sudhir Vidhata
ಅಶ್ವಸೂರ್ಯ/ಶಿವಮೊಗ್ಗ: ನೈರುತ್ಯ ಪದವೀಧರ ಕ್ಷೇತ್ರದ ಗೆಲುವಿನ ಕುದುರೆ ಎಂದೆ ಬಿಂಬಿತರಾಗಿದ್ದ ಬಿಜೆಪಿಯ ಡಾಕ್ಟರ್ ಧನಂಜಯ ಸರ್ಜಿ ಅವರು ಮತ ಏಣಿಕೆಯ ಆರಂಭದಿಂದಲೂ ಮತಗಳ ಬೇಟೆಯಲ್ಲಿ ತಮ್ಮ ಪ್ರತಿಸ್ಪರ್ಧಿ ಗಳಿಗಿಂತ ಹೆಚ್ಚಿನ ಮತದ ಅಂತರವನ್ನು ಕಾಯ್ದುಕೊಂಡು ಬಂದಿದ್ದರು.ಯಾವುದೇ ಸಂಧರ್ಭದಲ್ಲೂ ಡಾಕ್ಟರ್ ಸರ್ಜಿ ಅವರನ್ನು ಹಿಂದಿಕ್ಕಲೂ ಪ್ರತಿ ಸ್ಫರ್ದಿಗಳಿಗೆ ಸಾಧ್ಯವಾಗಲಿಲ್ಲ ಎನ್ನುವುದು ಮಾತ್ರ ದುರಂತವೇ ಹೌದು.ಮಾತಲ್ಲೆ ಮೋಡಿಮಾಡಿ ಗೆಲ್ಲಬಹುದು ಅಂದುಕೊಂಡಂತಹ ಸ್ಫರ್ದಿಗಳಿಗೆ ಪದವೀಧರ ಮತದಾರರು ಸರಿಯಾಗಿ ಪಾಠಕಲಿಸಿದ್ದಾರೆ.
ಈ ಚುನಾವಣೆಯಲ್ಲಿ ನೈರುತ್ಯ ಪದವೀಧರ ಕ್ಷೇತ್ರದ ಬಿಜೆಪಿಯ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದ ಸರ್ಜಿ ಕೋಟಿ ಕೋಟಿ ಹಣ ಜೋಳಿಗೆಯಲ್ಲಿದ್ದರು ಜನಸಾಮಾನ್ಯರ ಕೈಗೆ ಸೀಗುವಂತಹ ವ್ಯಕ್ತಿ ಎನ್ನುವುದು ಎಲ್ಲರಿಗೂ ತಿಳಿದ ವಿಷಯ.ಅವರ ವ್ಯಕ್ತಿತ್ವವೆ ಅವರನ್ನು ಗೆಲುವಿನ ದಡ ಸೇರಿಸಿದೆ. ಅವರು ರಾಜಕೀಯ ಕ್ಷೇತ್ರಕ್ಕೆ ಹಣ ಮಾಡಲು ಬಂದಿಲ್ಲ ಹಣ ಹುಟ್ಟಿನಿಂದಲೇ ಅವರ ಬೆನ್ನಿಗಿದೆ ಜೋತೆಗೆ ಅವರ ಸಾರ್ವಜನಿಕ ಸೇವೆಯ ಶ್ರಮಕೂಡ ನಿರಂತರವಾಗಿದೆ.ರಾಜಕಾರಣವನ್ನೆ ಬಂಡವಾಳ ಮಾಡಿಕೊಂಡು ಬದುಕುವ ವ್ಯಕ್ತಿಯಂತು ಅವರಲ್ಲ ಈ ಕಾರಣದಿಂದಲೇ ವಿಜಯಲಕ್ಷ್ಮಿ ಕೂಡ ಅವರ ಬೆನ್ನಿಗೆ ನಿಂತಿದ್ದಾಳೆ. ಸುಲಭವಾಗಿ ಗೆಲುವು ಕೂಡ ಅವರದಾಗಿದೆ.
ನೈರುತ್ಯ ಪದವೀಧರ ಕ್ಷೇತ್ರದಲ್ಲಿ ಒಟ್ಟು ಚಲಾವಣೆಯಾದ ಮತ 66497 ಸ್ವೀಕೃತವಾದ ಮತಗಳ ಸಂಖ್ಯೆ 61382 ಧನಂಜಯ ಸರ್ಜಿ ಅವರು ಪಡೆದ ಮತ 37622 ಪ್ರತಿಸ್ಪರ್ಧಿಗಳು ಪಡೆದ ಮತಗಳು ಈ ರೀತಿ ಇದೆ. ಕಾಂಗ್ರೆಸ್ ಪಕ್ಷದ ಅಯನೂರು ಮಂಜುನಾಥ್ ಅವರು ಪಡೆದ ಮತ 13516,ಬಿಜೆಪಿಯಿಂದ ಬಂಡಾಯವೆದ್ದು ಪಕ್ಷೇತರ ಅಭ್ಯರ್ಥಿಯಾಗಿ ಸ್ಫರ್ಧಿಸಿದ್ದ ರಘುಪತಿ ಭಟ್ ಪಡೆದ ಮತ 7039, ಇನ್ನೂ ಟಿಕೆಟ್ ಕೊಡಲಿಲ್ಲ ಎನ್ನುವ ಕಾರಣಕ್ಕೆ ಕಾಂಗ್ರೆಸ್ ಪಕ್ಷದ ವಿರುದ್ಧ ಬಂಡಾಯವೆದ್ದು ಪಕ್ಷೇತರರಾಗಿ ಸ್ಫರ್ಧಿಸಿದ್ದ ಎಸ್ ಪಿ ದಿನೇಶ್ ಅವರು ಪಡೆದ ಮತ 5115, ಈ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಹಾಗೂ ಬಂಡಾಯ ಅಭ್ಯರ್ಥಿಗಳ ಆಟ ಎನು ನೆಡೆಯಲಿಲ್ಲ. ಬಿಜೆಪಿ ಪಕ್ಷದ ಅಭ್ಯರ್ಥಿ ಡಾಕ್ಟರ್ ಧನಂಜಯ ಸರ್ಜಿ ರಾಜಕರಣಕ್ಕೆ ಕಾಲಿಟ್ಟು ಮೊದಲ ಬಾರಿಗೆ ಎದುರಿಸಿದ ಮೊದಲ ಚುನಾವಣೆಯಲ್ಲೆ ಸುಲಭವಾಗಿ ಗೆದ್ದು ಗೆಲುವಿನ ನಗೆ ಬಿರಿದ್ದಾರೆ. ಶಿವಮೊಗ್ಗ ಕ್ಷೇತ್ರದಲ್ಲಿ ಲೋಕಸಭಾ ಮತ್ತು ನೈರುತ್ಯ ಪದವೀಧರ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಇಬ್ಬರು ಅಭ್ಯರ್ಥಿಗಳು ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಆಡಳಿತವಿದ್ದು ಹೀನಾಯ ಸೋಲಿಗೆ ಶರಣಾಗಿದ್ದು ದುರಂತವೆ ಹೌದು. ಇದಕ್ಕೆ ಶಿವಮೊಗ್ಗ ಕಾಂಗ್ರೆಸ್ ಪಕ್ಷದಲ್ಲಿ ಒಂದು ತಿಂಗಳಲ್ಲಿ ನೆಡೆದ ಅಚ್ಚರಿ ಬೆಳವಣಿಗೆ ಇವರುಗಳ ಸೋಲಿಗೆ ಪ್ರಮುಖ ಕಾರಣವಾಗಿದೆ ಎಂದರೆ ತಪ್ಪಾಗಲಾರದು ಅದನೇ ಇರಲಿ ನೈರುತ್ಯ ಪದವೀಧರ ಕ್ಷೇತ್ರದ ಬಿಜೆಪಿಯ ಅಭ್ಯರ್ಥಿಯಾಗಿ ಕಣಕ್ಕಿಳಿದು ಭರ್ಜರಿ ಜಯ ಸಾಧಿಸಿದ ಡಾಕ್ಟರ್ ಧನಂಜಯ ಸರ್ಜಿ ಅವರಿಗೆ ಶುಭವಾಗಲಿ.
ಪದವೀಧರ ಕಷ್ಟ ಸುಖವನ್ನು ಅಲಿಸುವಂತಹ ಜನಪ್ರಿಯ ನಾಯಕರಾಗಲಿ..
ಮೈಸೂರಿನಲ್ಲಿ ಗುರುವಾರ ನೈರುತ್ಯ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಧನಂಜಯ ಸರ್ಜಿ ಅವರು ಮೊದಲನೇ ಪ್ರಾಶಸ್ತ್ಯದಲ್ಲೇ ಅಭೂತಪೂರ್ವ ಗೆಲುವು ಸಾಧಿಸಿ ವಿಧಾನ ಪರಿಷತ್ ಗೆ ಆಯ್ಕೆ ಆದ ಬಳಿಕ ಚುನಾವಣಾಧಿಕಾರಿಗಳು ಡಾ.ಧನಂಜಯ ಸರ್ಜಿ ಅವರಿಗೆ ಪ್ರಮಾಣ ಪತ್ರ ವಿತರಿಸಿದರು.
ಈ ವೇಳೆ ಪತ್ನಿ ಶ್ರೀಮತಿ ನಮಿತಾ ಸರ್ಜಿ, ಸೋದರ ಹರ್ಷ ಸರ್ಜಿ, ಶ್ರೀಮತಿ ನಾಗವೇಣಿ ಸರ್ಜಿ ಹಾಗೂ ರಾಜ್ಯ ಪ್ರಕೋಷ್ಟಗಳ ಸಂಯೋಜಕ ಎಸ್.ದತ್ತಾತ್ರಿ, ವಿಧಾನ ಪರಿಷತ್ ಸದಸ್ಯರಾದ ಡಿ.ಎಸ್.ಅರುಣ್, ಶಿವಮೊಗ್ಗ ಜಿಲ್ಲಾ ಬಿಜೆಪಿ ಅಧ್ಯಕ್ಷ ರಾದ ಟಿ.ಡಿ.ಮೇಘರಾಜ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಸಿ.ಎಚ್.ಮಾಲತೇಶ್, ಶಿವರಾಜ್, ಜಿಲ್ಲಾ ಪ್ರಮುಖಾರಾದ ಮಧುಸೂದನ್, ದೇವರಾಜ್, ಡಾ.ಶ್ರೀನಿವಾಸ್ ರೆಡ್ಡಿ, ಎನ್.ಡಿ.ಸತೀಶ್, ವಿಕ್ರಮ್, ಧರ್ಮಪ್ರಸಾದ್, ವಿಕಾಸ್ ಯಳನೂರ್, ಸುರೇಖಾ ಮುರುಳೀಧರ್, ರಶ್ಮಿ ಶ್ರೀನಿವಾಸ್ ಮತ್ತಿತರರು ಹಾಜರಿದ್ದರು.