ನೀನು ನಿಜವಾದ ಗೇಮ್ ಚೇಂಜರ್,ಮ್ಯಾನ್ ಆಫ್ ದಿ ಮ್ಯಾಚ್ ನಿನಗೆ ಸಿಗಬೇಕು: ಸಹೋದರ ಪವನ್ ಗೆಲುವಿಗೆ ಸಂತೋಷ ವ್ಯಕ್ತಪಡಿಸಿದ ಮೆಗಾ ಸ್ಟಾರ್ ಜಿರಂಜೀವಿ

ನೀನು ನಿಜವಾದ ಗೇಮ್ ಚೇಂಜರ್,ಮ್ಯಾನ್ ಆಫ್ ದಿ ಮ್ಯಾಚ್ ನಿನಗೆ ಸಿಗಬೇಕು: ಸಹೋದರ ಪವನ್ ಗೆಲುವಿಗೆ ಸಂತೋಷ ವ್ಯಕ್ತಪಡಿಸಿದ ಮೆಗಾ ಸ್ಟಾರ್ ಜಿರಂಜೀವಿ

news.ashwasurya.in

✍️ sudhir vidhata

ಅಶ್ವಸೂರ್ಯ/ಆಂಧ್ರಪ್ರದೇಶ: ಜನಸೇನಾ ಪಾರ್ಟಿ ಸ್ಥಾಪಿಸಿ ಚುನಾವಣಾ ಅಖಾಡಕ್ಕೆ ಧುಮುಕಿದ್ದ ‘ಪವರ್ ಸ್ಟಾರ್’ ಪವನ್ ಕಲ್ಯಾಣ್‌ಗೆ ಕೊನೆಗೂ ಭರ್ಜರಿ ಜಯ ಸಿಕ್ಕಿದೆ. 2024ರ ಆಂಧ್ರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಜನಸೇನಾ ಪಾರ್ಟಿಯು ನೀರಿಕ್ಷೆಗೂ ಮೀರಿ ಗಮನಾರ್ಹ ಸಾಧನೆ ಮಾಡಿದೆ. ಪೀಠಾಪುರ ವಿಧಾನಸಭಾ ಕ್ಷೇತ್ರದಿಂದ ನಟ ಮೆಗಾ ಸ್ಟಾರ್ ಜಿರಂಜೀವಿ ಸಹೋದರ ನಟ ಸೂಪರ್ ಸ್ಟಾರ್ ಪವನ್ ಕಲ್ಯಾಣ್‌ ಶಾಸಕರಾಗಿ ಆಯ್ಕೆ ಆಗಿದ್ದಾರೆ. ಇದೀಗ ತಮ್ಮನ ಗೆಲುವನ್ನು ಕಂಡು ಜಿರಂಜೀವಿ ಹೆಮ್ಮೆ ಪಟ್ಟಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ತಮ್ಮನ ಗೆಲುವಿಗೆ ಸಂತೋಷ ವ್ಯಕ್ತಪಡಿಸಿ ಪೋಸ್ಟ್ ಹಂಚಿಕೊಂಡ ಚಿರಂಜೀವಿ

ಸಾಮಾಜಿಕ ಜಾಲತಾಣದಲ್ಲಿ ಮೆಗಾ ಸ್ಟಾರ್ ಜಿರಂಜೀವಿ ತಮ್ಮನಿಗೆ ಅಭಿನಂದನೆ ಸಲ್ಲಿಸಿದ್ದಾರೆ ಜೊತೆಗೆ ಹೆಮ್ಮೆ ವ್ಯಕ್ತಪಡಿಸಿದ್ದಾರೆ. “ನನ್ನ ಪ್ರೀತಿಯ ಕಲ್ಯಾಣ್ ಬಾಬು (ಪವನ್ ಕಲ್ಯಾಣ್‌), ಆಂಧ್ರಪ್ರದೇಶದ ಜನರ ಬೃಹತ್ ಮತ್ತು ಅದ್ಭುತ ಜನಾದೇಶದಿಂದ ನಾನು ರೋಮಾಂಚನಗೊಂಡಿದ್ದೇನೆ. ನೀನು ನಿಜವಾಗಿಯೂ ಈ ಚುನಾವಣೆಯ ಗೇಮ್ ಚೇಂಜರ್. ಮ್ಯಾನ್ ಆಫ್ ದಿ ಮ್ಯಾಚ್ ನಿನಗೆ ಸಿಗಬೇಕು ! ಆಂಧ್ರಪ್ರದೇಶದ ಜನರ ಬಗ್ಗೆ ನಿನಗಿರುವ ಅತೀವ ಕಾಳಜಿ, ನಿನ್ನ ದೂರದೃಷ್ಟಿಯ ಆಲೋಚನೆ ರಾಜ್ಯದ ಅಭಿವೃದ್ಧಿಯ ಬಗ್ಗೆ ನೀನು ಹೊಂದಿರುವ ಬಯಕೆ, ನಿನ್ನ ತ್ಯಾಗ, ನಿನ್ನ ರಾಜಕೀಯ ತಂತ್ರಗಳು ಈ ಅದ್ಭುತ ಫಲಿತಾಂಶದಲ್ಲಿ ಪ್ರಭಾವ ಬೀರಿದೆ ನಿನ್ನನ್ನು ಗೆಲುವಿನ ಅಂಚಿಗೆ ತಂದು ನಿಲ್ಲಿಸಿದೆ.ಅಣ್ಣನಾಗಿ ನನಗೆ ನಿನ್ನ ಬಗ್ಗೆ ಗೌರವವಿದೆ ನಿನ್ನ ಗೆಲುವು ನನ್ನನ್ನು ಹೆಮ್ಮೆಪಡುವಂತೆ ಮಾಡಿದೆ, ನಿನಗೆ ಈ ಅಣ್ಣನ ಆಶೀರ್ವಾದಗಳು, ಅಭಿನಂದನೆಗಳು” ಎಂದು ಚಿರಂಜೀವಿ ಹೇಳಿದ್ದಾರೆ.

ಪ್ರಾಮಾಣಿಕ ಪ್ರಯತ್ನ ಮತ್ತು ಸಮರ್ಥ ಬೆಂಬಲದೊಂದಿಗೆ ರಾಜ್ಯವನ್ನು ಅಭೂತಪೂರ್ವ ಬೆಳವಣಿಗೆಯ ಹಾದಿಯಲ್ಲಿ ಮುನ್ನಡೆಸುತ್ತ ನೀನು ಜನರಿಗೆ ಅಪಾರವಾಗಿ ಸೇವೆ ಸಲ್ಲಿಸುತ್ತೀಯಾ, ಸಹಾಯ ಮಾಡುತ್ತೀಯಾ ಎಂಬ ದೃಢವಾದ ನಂಬಿಕೆ ನನಗಿದೆ. ನನ್ನ ಪ್ರೀತಿ ಮತ್ತು ಆಶೀರ್ವಾದಗಳು ನಿನ್ನ ಮೇಲೆ ಸದಾ ಇರಲಿದೆ” ಎಂದಿದ್ದಾರೆ ಮೆಗಾ ಸ್ಟಾರ್ ಚಿರಂಜೀವಿ.
ಚುನಾವಣೆಯ ಆರಂಭದಲ್ಲಿ ಸಹೋದರ ಪವನ್‌ ಕಲ್ಯಾಣ್‌ ಅವರನ್ನು ಬೆಂಬಲಿಸುವಂತೆ ಅಭಿಮಾನಿಗಳಿಗೆ ಮನವಿ ಮಾಡಿದ್ದ ಚಿರಂಜೀವಿ,

2019ರ ಆಂಧ್ರಪ್ರದೇಶ ವಿಧಾಸನಭಾ ಚುನಾವಣೆಯಲ್ಲಿ ಪವನ್ ಕಲ್ಯಾಣ್ ನೇತೃತ್ವದ ಜನಸೇನಾ ಪಾರ್ಟಿ ಕಳಪೆ ಸಾಧನೆ ಮಾಡಿತ್ತು. 137 ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿದ್ದ ಜನಸೇನಾ ಪಾರ್ಟಿಯು ಗೆಲುವು ಪಡೆದುಕೊಂಡಿದ್ದು ಕೇವಲ ಒಂದು ಕ್ಷೇತ್ರದಲ್ಲಿ ಮಾತ್ರ.! ಪಕ್ಷದ ಸಂಸ್ಥಾಪಕ ಪವನ್ ಕಲ್ಯಾಣ್ ಅವರು ಭೀಮಾವರಂ & ಗಾಜುವಾಕಾ ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿದ್ದರು. ಆದರೆ ಎರಡೂ ಕ್ಷೇತ್ರಗಳಲ್ಲಿಯೂ ಸೋಲಿಗೆ ಶರಣಾಗಿದ್ದರು. ಚಲಾವಣೆಯಾದ ಒಟ್ಟಾರೆ ಮತಗಳಲ್ಲಿ ಜನಸೇನಾ ಪಾರ್ಟಿಗೆ ಸಿಕ್ಕಿದ್ದು 5.53% ಮತಗಳು ಮಾತ್ರ.ಪವನ್ ಕಲ್ಯಾಣ್ ಅವರ ಪಕ್ಷ ಹೇಳ ಹೆಸರಿಲ್ಲದಂತೆ ದೂಳಿಪಟವಾಗಿತ್ತು.

ಸೋಲಿಗೆ ಹೆದರದ ಪವನ್ ಮತ್ತೆ ಪಕ್ಷ ಸಂಘಟನೆಯ ಮೂಲಕ ಮತದಾರನ ಮುಂದೆ ನಿಂತು ಈ ಬಾರಿಯ ಚುನಾವಣೆಯಲ್ಲಿ ಅಭೂತಪೂರ್ವ ಸಾಧನೆ ಮಾಡಿದ್ದಾರೆ ಪವನ್‌ ಕಲ್ಯಾಣ್

ಹಿಂದಿನ ಚುನಾವಣೆಯ ಸೋಲನ್ನು ಗಮನದಲ್ಲಿರಿಸಿಕೊಂಡು, 2024ರ ಆಂಧ್ರಪ್ರದೇಶದ ಚುನಾವಣೆಯಲ್ಲಿ ಭಾರಿ ತಯಾರಿಗಳೊಂದಿಗೆ ಅಖಾಡಕ್ಕೆ ಇಳಿದಿದ್ದರು ಪವನ್ ಕಲ್ಯಾಣ್. ಟಿಡಿಪಿ ಮತ್ತು ಬಿಜೆಪಿ ಮೈತ್ರಿ ಮಾಡಿಕೊಂಡಿದ್ದ ಪವನ್, ತಮ್ಮ ಪಕ್ಷದಿಂದ 21 ಕ್ಷೇತ್ರಗಳಲ್ಲಿ ಸ್ಪರ್ಧಿಗಳನ್ನು ಇಳಿಸಿದ್ದರು. ಅಚ್ಚರಿ ಎಂದರೆ, 21 ಕ್ಷೇತ್ರಗಳಲ್ಲಿಯೂ ಜನಸೇನಾ ಪಾರ್ಟಿಯ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಪವನ್ ಕೂಡ ಪೀಠಾಪುರಂ ಕ್ಷೇತ್ರದಲ್ಲಿ ಅಭೂತಪೂರ್ವ ಗೆಲುವು ಪಡೆದುಕೊಂಡಿದ್ದಾರೆ. ಟಿಡಿಪಿಯ ಚಂದ್ರಬಾಬು ನಾಯ್ಡು ನೇತೃತ್ವದಲ್ಲಿ ರಚನೆಯಾಗುವ ಸರ್ಕಾರದಲ್ಲಿ ಪವನ್‌ ಕಲ್ಯಾಣ್ ಉಪ ಮುಖ್ಯಮಂತ್ರಿ ಆಗುವ ಸಾಧ್ಯತೆ ಇದೆ.

Leave a Reply

Your email address will not be published. Required fields are marked *

Optimized by Optimole
error: Content is protected !!