ಪತ್ನಿ ಗೀತಾ ಸೋಲು, ನಟ ಶಿವರಾಜ್ ಕುಮಾರ್ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್

ಪತ್ನಿ ಗೀತಾ ಸೋಲು, ನಟ ಶಿವರಾಜಮಾರ್ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್

Ashwasurya/Shivamogga

✍️ sudhir vidhata

ಅಶ್ವಸೂರ್ಯ/ಬೆಂಗಳೂರು: ಈ ಬಾರಿ ಲೋಕಸಭಾ  ಚುನಾವಣೆಯಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದ ಪ್ರಬಲ ಅಭ್ಯರ್ಥಿಯಾಗಿ ಕಣಕ್ಕಿಳಿದು ಸೋತಿರುವ ಪತ್ನಿ ಗೀತಾ ಪರವಾಗಿ ಪತಿ ನಟ ಶಿವರಾಜ್ ಕುಮಾರ್ ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳಿಗೆ ಸಂದೇಶಗಳನ್ನು ರವಾನಿಸಿದ್ದಾರೆ.
ಮಾಜಿ ಜನಪ್ರಿಯ ಮುಖ್ಯಮಂತ್ರಿ ಬಡವರ ಪಾಲಿನ ಆರಾಧಕ ದಿವಂಗತ ಎಸ್ ಬಂಗಾರಪ್ಪನವರ ಮಗಳೂ ಆಗಿರುವ ಗೀತಾ ಈ ಬಾರಿ ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. ಆದರೆ ಜನಪ್ರಿಯ ಸಂಸದರಾಗಿದ್ದ ಬಿಜೆಪಿಯ ಬಿ ವೈ ರಾಘವೇಂದ್ರ ವಿರುದ್ಧ ಸೋಲನ್ನು ಕಂಡಿದ್ದಾರೆ.ಗೀತಾ ಅವರು ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು

ಈ ಹಿಂದೆ ಕೂಡ ಜೆಡಿಎಸ್ ಪಕ್ಷದಿಂದ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಬಿ ಎಸ್ ಯಡಿಯೂರಪ್ಪ ನವರ ವಿರುದ್ಧ ಸೋತಿದ್ದ ಗೀತಾ ಶಿವರಾಜಕುಮಾರ್ ಈ ಬಾರಿ ಕಾಂಗ್ರೆಸ್ ಪಕ್ಷದಿಂದ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತಿದ್ದಾರೆ. ಅವರ ಪರವಾಗಿ ಈ ಬಾರಿ ಸಾಕಷ್ಟು ಮಂದಿ ಸಿನಿಮಾ ತಾರೆಯರು ಅದರಲ್ಲೂ ಸ್ವತಃ ಪತಿ ಕನ್ನಡದ ಸ್ಟಾರ್ ನಟ ಶಿವಣ್ಣನೇ ಮಡದಿಗೆ ಸಾತ್ ನೀಡಿ ಪ್ರಚಾರ ನಡೆಸಿದರೂ ಮತದಾರನ ಮನ ಮುಟ್ಟಲು ಸಾಧ್ಯವಾಗಲಿಲ್ಲ.ಅದಕ್ಕಿಂತ ಪ್ರಮುಖವಾಗಿ ಕೇಲವು ಮಂದಿ ಕಿರಾತಕರ ದಂಡು ಚುನಾವಣೆಗೆ ಒಂದು ತಿಂಗಳು ಬಾಕೀ ಇರುವಾಗ ಕಾಂಗ್ರೆಸ್ ಭವನವನ್ನು ಪ್ರೇವೆಶಿಸಿ ಗೀತಾ ಶಿವರಾಜಕುಮಾರ್ ಅವರ ಸೋಲಿಗೆ ಅಂತಿಮ ಮೊಳೆ ಹೊಡೆದಿದ್ದಾರೆ. ಕೆಲಸಕ್ಕೆ ಬಾರದ ಕೇಲವರಂತು ಕಾಂಗ್ರೆಸ್ ನ ಮಹಾನ್ ನಾಯಕರಂತೆ ಫೋಸು ಕೊಟ್ಟಿದ್ದು ಮಿಡಿಯಾದವರ ಕ್ಯಾಮರಕ್ಕೆ ಮುಖ ತೂರಿಸಿದ್ದು ಬಿಟ್ಟರೆ ಇವರಿಂದ ಅಭ್ಯರ್ಥಿ ಗೀತಾ ಶಿವರಾಜಕುಮಾರ್ ಅವರಿಗೆ ಅದ ಲಾಭ ಮಾತ್ರ ಶೂನ್ಯ ಎಂದರೆ ತಪ್ಪಾಗಲಾರದು.ಈಗ ಮುಗ್ಧ ದಂಪತಿಗಳಿಗೆ ಈ ಚುನಾವಣೆ ಬೇಕಿತ್ತಾ ಎನ್ನುವ ಮಾತು ಕ್ಷೇತ್ರದ ಎಲ್ಲೆಡೆ ಪ್ರತಿಧ್ವನಿಸುತ್ತಿದೆ.
ಅದೇನೇ ಇರಲಿ ಸೋಲೆ ಗೆಲುವಿನ ಮೆಟ್ಟಿಲು‌ ಎನ್ನುವುದು‌‌ ಸತ್ಯ.

ಇದೀಗ ಪತ್ನಿ ಸೋತ ಬೆನ್ನಲ್ಲೇ ಕನ್ನಡದ ಸೂಪರ್ ಸ್ಟಾರ್ ನಟ ಶಿವರಾಜಕುಮಾರ್ ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಬೆಂಬಲಕ್ಕೆ ನಿಂತ ಎಲ್ಲರಿಗೂ ಸಂದೇಶ ಒಂದನ್ನು ಬರೆದಿದ್ದಾರೆ…

ಫಲಿತಾಂಶ ನಮ್ಮ ಕಡೆಯಾಗದಿದ್ದರೂ ನಿಮ್ಮೊಂದಿಗಿನ ಈ ಪ್ರಯಾಣ ಮತ್ತು ಜನರ ಅಚಲವಾದ ಬೆಂಬಲಕ್ಕಾಗಿ ನಾವು ಸದಾ ನಿಮ್ಮಗಳಿಗೆ ಕೃತಜ್ಞರಾಗಿರುತ್ತೇವೆ. ಮತದಾರನ ನಿರ್ಣಯಕ್ಕೆ ತಲೆ ಬಾಗುತ್ತ , ನಾವು ಭವಿಷ್ಯದ ಬದಲಾವಣೆಗಾಗಿ ಪ್ರಯತ್ನಿಸುವುದನ್ನು ಎಂದಿನಂತೆಯೇ ಮುಂದುವರಿಸುತ್ತೇವೆ. ತಮ್ಮ ಅಚಲವಾದ ಬೆಂಬಲದೊಂದಿಗೆ ಪ್ರೋತ್ಸಾಹಿಸಿದ ಪ್ರತಿಯೊಬ್ಬ ಕಾರ್ಯಕರ್ತರು ಮತ್ತು ವಿಶ್ವಾಸವಿಟ್ಟು ಮತ ಹಾಕಿದ ಪ್ರತಿಯೊಬ್ಬರಿಗೂ ಧನ್ಯವಾದಗಳು ಎಂದು ಹೇಳಿದ್ದಾರೆ.
ಮಡದಿಗಾಗಿ ತಾನೊಬ್ಬ ಸ್ಟಾರ್ ನಟನೆನ್ನುವುದನ್ನೂ ಮರೆತು ಸುಡು ಬಿಸಿಲಿನಲ್ಲಿ ಶಿವಮೊಗ್ಗ ಕ್ಷೇತ್ರದ ಅಗಲಕ್ಕೂ ಸಂಚರಿಸಿ ಮಡದಿಯ ಗೆಲುವಿಗಾಗಿ ಮತದಾರನ ಮನೆ ಮನೆ ಬಾಗಿಲಿಗೆ ತೆರಳಿ ಮತಯಾಚನೆ ಮಾಡಿದ್ದರು ಶಿವಣ್ಣ.ಅದೇನೊ ಶಿವಣ್ಣನನ್ನು ನಟನಾಗಿ ಸ್ವೀಕರಿಸಿದ ಜನ ರಾಜಕೀಯವಾಗಿ ಸ್ವೀಕರಿಸಲು ಮನಸ್ಸು ಮಾಡಲಿಲ್ಲ ರಾಜಕೀಯವೆ ಹಾಗೆ ಇಂದು ಮೇಲೆರಿದವನು ನಾಳೆ ಕೇಳಗೆ ಬಿಳುವುದು ಸಹಜ ಅದು ಸತ್ಯವು ಹೌದು…!
ಇದಕ್ಕೆ ತಾಜಾ ಉದಾಹರಣೆ ಆಂಧ್ರಪ್ರದೇಶದ ವಿಧಾನಸಭಾ ಚುನಾವಣೆಯಲ್ಲಿ ಕಳೆದಬಾರಿ ಎಲ್ಲಾ ಕ್ಷೇತ್ರದಲ್ಲೂ ಸ್ಫರ್ಧಿಸಿದ್ದ ಪವರ್ ಸ್ಟಾರ್ ನಟ ಪವನ್ ಕಲ್ಯಾಣ್ ಅವರ ಪಕ್ಷ ಕೇವಲ ಒಂದು ಕ್ಷೆತ್ರದಲ್ಲಿ ಗೆದ್ದರೆ ನಟ ಪವನ್ ಕಲ್ಯಾಣ್ ಸ್ಫರ್ಧಿಸಿದ್ದ ಎರಡು ಕ್ಷೇತ್ರದಲ್ಲಿ ಹೀನಾಯ ಸೋಲು ಕಂಡಿದ್ದರು ಅದರೆ ಈ ಬಾರಿಯಾ ವಿಧಾನಸಭಾ ಚುನಾವಣೆಯಲ್ಲಿ ಟಿಡಿಪಿ ಜೋತೆಗೆ ಮೈತ್ರಿಮಾಡಿಕೊಂಡು ಸುಮಾರು 27 ಕ್ಷೇತ್ರದಲ್ಲಿ ಸ್ಫರ್ಧಿಸಿ ಅಷ್ಟು ಕ್ಷೇತ್ರವನ್ನು ಗೆದ್ದು ಬಿಗಿದ್ದಾರೆ. ರಾಜಕೀಯವೆ ಹಾಗೆ ಒಮ್ಮೆ ಸೋತವನು ಮತ್ತೊಮ್ಮೆ ಗೆದ್ದು ಬಿಗುವುದು ಸಹಜ ಇಲ್ಲಿ ಯಾವದೇ ಹಣ, ಯಾವುದೆ ಸಮೀಕ್ಷೆ. ಯಾವುದೇ ಜನಪ್ರಿಯ ನಾಯಕನಾಗಿರಲಿ, ಚಿತ್ರ ನಟನಾಗಿರಲಿ, ಗೆಲುವು ನನ್ನದೆ ಎಂದು ಬಿಗಲು ಸಾಧ್ಯವಿಲ್ಲ ಮತದಾರನ ತೀರ್ಮಾನವೆ ಅಂತಿಮ…

Leave a Reply

Your email address will not be published. Required fields are marked *

Optimized by Optimole
error: Content is protected !!