ಸೂಪರ್ ಸ್ಟಾರ್ ರಜನಿಕಾಂತ್‌ ಅವರ ಒಂದು ಮಾತು ಆಂಧ್ರಪ್ರದೇಶದ ಸರ್ಕಾರದ ಪತನಕ್ಕೆ ಕಾರಣವಾಯ್ತಾ ..! ಹೇಗೆ..?

ಸೂಪರ್ ಸ್ಟಾರ್ ರಜನಿಕಾಂತ್‌ ಅವರ ಒಂದು ಮಾತು ಆಂಧ್ರಪ್ರದೇಶದ ಸರ್ಕಾರದ ಪತನಕ್ಕೆ ಕಾರಣವಾಯ್ತಾ ..! ಹೇಗೆ..?

news.ashwasurya.in/shivamogga

Sudhir vidhata

ಶಿವಮೊಗ್ಗ/ಆಂಧ್ರಪ್ರದೇಶದ: ಕಳೆದ 2 ತಿಂಗಳಿಂದ ಭಾರತದಾದ್ಯಂತ ರಾಜಕೀಯ ಕಣ ರಂಗೇರಿತ್ತು . ಕಳೆದ ಏಪ್ರಿಲ್‌ನಲ್ಲಿ ತಮಿಳುನಾಡಿನಲ್ಲಿ ಮೊದಲ ಹಂತದಲ್ಲಿ ಆರಂಭವಾದ ಸಂಸತ್ ಚುನಾವಣೆಯು ರಾಷ್ಟ್ರದ ವಿವಿಧ ರಾಜ್ಯಗಳಲ್ಲಿ ಏಳು ಹಂತಗಳಲ್ಲಿ ಚುನಾವಣೆ ನಡೆಯಿತು. ಆಂಧ್ರಪ್ರದೇಶ, ಅರುಣಾಚಲ ಪ್ರದೇಶ, ಒಡಿಶಾ ಮತ್ತು ಸಿಕ್ಕಿಂ ರಾಜ್ಯಗಳಲ್ಲಿ ಲೋಕಸಭಾ ಚುನಾವಣೆಯ ಜೋತೆಗೆ ವಿಧಾನಸಭೆ ಚುನಾವಣೆಗಳು ನಡೆದಿವೆ. ವಿಧಾನಸಭಾ ಚುನಾವಣೆಯಲ್ಲಿ ಜನಪ್ರಿಯ ಮುಖ್ಯಮಂತ್ರಿ ಎನ್ನಿಸಿಕೊಂಡಿದ್ದ ಜಗನ್ ಹೀನಾಯ ಸೋಲಿಗೆ ಶರಣಾಗಿದಗದಾರೆ.! ಸಾಕಷ್ಟು ಅಭಿವೃದ್ಧಿಯ ನಡುವೆಯು ಆಂಧ್ರಪ್ರದೇಶದಲ್ಲಿ ಸರ್ಕಾರ ಬದಲಾವಣೆಯಾಗಿದೆ.

ಆಂಧ್ರಪ್ರದೇಶದ ವಿಧಾನಸಭಾ ಚುನಾವಣೆಯಲ್ಲಿ ವೈಎಸ್‌ಆರ್‌ಪಿ ವಿರುದ್ಧ ತೆಲುಗು ದೇಶಂ ಪಕ್ಷ, ಜನಸೇನಾ ಪಕ್ಷ ಮತ್ತು ಬಿಜೆಪಿ ಮೈತ್ರಿ ಪಕ್ಷಗಳು ಭರ್ಜರಿಯಾಗಿ ಗುಡುಗಿದ್ದವು. ಜಗನ್ ಮೋಹನ್ ರೆಡ್ಡಿ ನೇತೃತ್ವದ ವೈಎಸ್‌ಆರ್ ಕಾಂಗ್ರೆಸ್ ಈ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸಿತ್ತು. ನಿನ್ನೆಯಷ್ಟೇ ಸಂಸತ್ ಚುನಾವಣಾ ಫಲಿತಾಂಶದ ಜೊತೆಗೆ ರಾಜ್ಯ ವಿಧಾನಸಭಾ ಚುನಾವಣಾ ಫಲಿತಾಂಶವೂ ಹೊರಬಿದ್ದಿದೆ. ಇದರಲ್ಲಿ ವೈಎಸ್‌ಆರ್ ಕಾಂಗ್ರೆಸ್ ಹೀನಾಯ ಸೋಲು ಕಂಡಿದೆ. ಇದರಿಂದ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅಧಿಕಾರ ಕಳೆದುಕೊಂಡಿದ್ದಾರೆ. 


ಜೂನ್ 9 ರಂದು ನೂತನ ಮುಖ್ಯಮಂತ್ರಿಯಾಗಿ ಚಂದ್ರಬಾಬು ನಾಯ್ಡು ಅಧಿಕಾರ ಸ್ವೀಕರಿಸಲಿರುವ ಹಿನ್ನೆಲೆಯಲ್ಲಿ ನ್ಯಾಷನಲ್ ಡೆಮಾಕ್ರಟಿಕ್ ಪಕ್ಷದ ಕಾರ್ಯಕರ್ತರು ಹುಚ್ಚೆದ್ದು ಸಂಭ್ರಮಿಸುಸಿದ್ದಾರೆ. ಇದೇ ವೇಳೆ ಚಂದ್ರಬಾಬು ನಾಯ್ಡು ಅವರ ಈ ಯಶಸ್ಸಿಗೆ ರಜನಿಕಾಂತ್ ಕಾರಣ ಎಂದು ಹಲವರು ಹೇಳುತ್ತಿದ್ದಾರೆ.

ಹೌದು.. ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಮತ್ತು ಟಾಲಿವುಡ್ ಸೂಪರ್‌ಸ್ಟಾರ್ ನಟ ಎನ್‌ ಟಿ ರಾಮರಾವ್‌ ಅವರ ಜನ್ಮ ಭೂಮಿಯಲ್ಲಿ ಶತಮಾನೋತ್ಸವವನ್ನು ಕಳೆದ ವರ್ಷ ಆಚರಿಸಲಾಯಿತು. ಈ ಕಾರ್ಯಕ್ರಮಕ್ಕೆ ವಿಶೇಷ ಅತಿಥಿಯಾಗಿ ಸೂಪರ್ ಸ್ಟಾರ್ ನಟ ರಜನಿಕಾಂತ್ ಆಗಮಿಸಿದ್ದರು.

ಪ್ರಮುಖ ಕೆಲಸವಿದ್ದರೂ ಅದನ್ನು ಬದಿಗಿಟ್ಟು ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಆ ವೇಳೆ ತೆಲುಗು ದೇಶಂ ಪಕ್ಷದ ನಾಯಕ ಹಾಗೂ NTR ಅಳಿಯ ಚಂದ್ರಬಾಬು ನಾಯ್ಡು ಅವರನ್ನು ತಲೈವಾ ರಜನಿಕಾಂತ್ ಮನಸಾರೆ ಹೊಗಳಿದ್ದರು. 
ಚಂದ್ರಬಾಬು ನಾಯ್ಡು ಅವರೊಂದಿಗಿನ 30 ವರ್ಷಗಳ ಸ್ನೇಹದ ಬಗ್ಗೆ ಮಾತನಾಡಿದ್ದ ರಜನಿಕಾಂತ್ ಚಂದ್ರಬಾಬು ನಾಯ್ಡು ಅವರು ರಾಜಕೀಯ ದಾರ್ಶನಿಕರಾಗಿದ್ದಾರೆ ಅಂತ ಮನಸ್ಸು ಬಿಚ್ಚಿ ಹೇಳಿದ್ದರು. ಅಲ್ಲದೆ, ತಾವು ಹೈದರಾಬಾದ್‌ಗೆ ಬಂದಾಗಲೆಲ್ಲಾ ಚಂದ್ರಬಾಬು ನಾಯ್ಡು ಅವರನ್ನು ಭೇಟಿ ಮಾಡುವುದಾಗಿ ತಿಳಿಸಿದ್ದರು. ಅಷ್ಟೇ ಅಲ್ಲ ಬಾಬು ಸದಾ ಜನಸೇವೆ ಬಗ್ಗೆ ಚಿಂತಿಸುತ್ತಾರೆ ಎಂದಿದ್ದರು. 


ರಜನಿಕಾಂತ್ ಅವರ ಭಾಷಣಕ್ಕೆ ಆಂಧ್ರಪ್ರದೇಶದ ವಿವಿಧ ವಲಯಗಳಿಂದ ಖಂಡನೆ ವ್ಯಕ್ತವಾಗಿತ್ತು. ಅದರಲ್ಲೂ ವೈಎಸ್‌ಆರ್ ಕಾಂಗ್ರೆಸ್‌ನ ನಾಯಕಿ ನಟಿ ರೋಜಾ ರಜನಿಕಾಂತ್ ಹೊಗಳಿಕೆಯನ್ನು ನೇರವಾಗಿ ಟೀಕಿಸಿದ್ದರು. ಇದರ ಬೆನ್ನಲ್ಲೇ ರಜನಿ ಅವರು ಚಂದ್ರಬಾಬು ನಾಯ್ಡು ಅವರನ್ನು ಬೆಂಬಲಿಸಿ ಹೊಗಳಿರುವುದು ಅಲ್ಲಿನ ಆಡಳಿತ ಬದಲಾವಣೆಗೆ ಕಾರಣವಾಗಿರಬಹುದು ಎನ್ನುತ್ತಿದ್ದಾರೆ ತಲೈವಾ ಅಭಿಮಾನಿಗಳು ಹಾಗೂ ರಾಜಕೀಯ ವಿಮರ್ಶಕರು. 

Leave a Reply

Your email address will not be published. Required fields are marked *

Optimized by Optimole
error: Content is protected !!