MS Mohammed Sujitha IPS
ಲೋಕಸಭಾ ಫಲಿತಾಂಶದ ಬೆನ್ನಿಗೆ ಹಾಸನದಲ್ಲಿ ಹರಿಯಿತು ಕುಖ್ಯಾತ ರೌಡಿಯೊಬ್ಬನ ನೆತ್ತರು
news.ashwasurya.in
SUDHIR VIDHATA
ಅಶ್ವಸೂರ್ಯ/ಹಾಸನ : ಹಾಸನದಲ್ಲಿ ಲೋಕಸಭಾ ಫಲಿತಾಂಶದ ಬೆನ್ನಿಗೆ ಮರು ದಿನವೇ ರೌಡಿಯೊಬ್ಬನ ನೆತ್ತರು ಹರಿದಿದೆ.ಹಾಸನದ ಡೆಂಜರಸ್ ರೌಡಿಶೀಟರ್ ನನ್ನು ದುಷ್ಕರ್ಮಿಗಳ ತಂಡ ಸೂರ್ಯನ ಕಿರಣ ಭೂಮಿಗೆ ಬೀಳುವ ಹೊತ್ತಿಗೆ ನಡುರಸ್ತೆಯಲ್ಲಿ ಹಂತಕರ ತಂಡ ಹತ್ಯೆ ಮಾಡಿ ಮುಗಿಸಿದ್ದಾರೆ.
ಕುಡಿಯುವ ನೀರನ್ನು ತೆಗೆದುಕೊಂಡು ಮನೆಗೆ ತೆಗೆದುಕೊಂಡು ಹೋಗುವ ಸಂಧರ್ಭದಲ್ಲಿ ರೌಡಿಶೀಟರ್ ಮೇಲೆ ಮಾರಕಾಸ್ತ್ರದಿಂದ ದಾಳಿ ಮಾಡಿ ಮನಬಂದಂತೆ ಕೊಚ್ಚಿ ನಡು ರಸ್ತೆಯಲ್ಲೆ ರೌಡಿಯ ನೆತ್ತರ ಕೊಡಿ ಹರಿಸಿ ಕೊಂದಿದ್ದಾರೆ . ಸ್ಥಳಕ್ಕೆ ಹಾಸನ ಎಸ್ಪಿ ಮೊಹಮ್ಮದ್ ಸುಜೀತಾ ಅಧಿಕಾರಿಗಳ ತಂಡದೊಂದಿಗೆ ಹತ್ಯೆಯಾದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು,ಆರೋಪಿಗಳ ಪತ್ತೆಗೆ ಪೊಲೀಸರ ತಂಡವನ್ನು ರಚಿಸಿ ಹಂತಕರಿಗೆ ಬಲೆಬೀಸಿದ್ದಾರೆ.
ಹತ್ಯೆಯಾದ ನಟೋರಿಯಸ್ ರೌಡಿಶೀಟರ್ ಯಾರು.!?
ಕೊಲೆಯಾದ ವ್ಯಕ್ತಿ ಕೊಲೆ, ದರೋಡೆ, ಅತ್ಯಾಚಾರ ಸೇರಿದಂತೆ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಕುಖ್ಯಾತ ರೌಡಿ ಚೈಲ್ಡ್ ರವಿ ಎಂದು ತಿಳಿದು ಬಂದಿದೆ .ನಟೋರಿಯಸ್ ರೌಡಿ ಚೈಲ್ಡ್ ರವಿಯನ್ನೆ ಆತನ ವಿರೋಧಿ ಪಡೆ ಮನಬಂದಂತೆ ಕೊಚ್ಚಿ ಕೊಲೆ ಮಾಡಿ ರಿವೆಂಜ್ ತಿರೀಸಿಕೊಂಡಿದೆ. ಬರ್ಬರವಾಗಿ ಹತ್ಯೆಯಾದ ರೌಡಿಶೀಟರ್ 45 ವರ್ಷದ ರವಿ ಅಲಿಯಾಸ್ ಚೈಲ್ಡ್ ರವಿ ಕೊಲೆಯಾದ ಕುಖ್ಯಾತ ರೌಡಿ.ನಗರದ ಹೇಮಾವತಿ ನಗರದಲ್ಲಿ ಇಂದು ಬೆಳಗ್ಗೆ ಮನೆಗೆ ಕುಡಿಯುವ ನೀರನ್ನು ತೆಗೆದುಕೊಂಡು ಹೋಗುವ ಸಂಧರ್ಭದಲ್ಲಿ ಹಂತಕರು ಸ್ಕೆಚ್ ಹಾಕಿ ಮುಂಜಾನೆ 8 ಗಂಟೆಗ ಸುಮಾರಿಗೆ ಆತ ಬರುವ ಹಾದಿಯನ್ನೆ ಕಾದು ಮಾರಕಾಸ್ತ್ರಗಳಿಂದ ದಾಳಿ ಮಾಡಿ ರಸ್ತೆಯಲ್ಲಿಯೇ ಕೊಚ್ಚಿ ಕೊಲೆ ಮಾಡಿದ್ದಾರೆ.
ಹತ್ಯೆಯಾದ ರೌಡಿಶೀಟರ್ ಚೈಲ್ಡ್ ರವಿಯ ಹಿನ್ನಲೆಯು ರೋಚಕವಾಗಿದೆ.
ರವಿ ಅಲಿಯಾಸ್ ಚೈಲ್ಡ್ ರವಿ ಕೇವಲ 14 ವರ್ಷವಿರುವಾಗಲೇ ಶಾಲೆಗೆ ಹೋಗುವ ಬಾಲಕಿಯನ್ನೇ ಅತ್ಯಾಚಾರ ಮಾಡಿದ್ದ ಎನ್ನುವ ಮಾತು ಕೇಳಿಬರುತ್ತಿದೆ. ಈ ಕಾರಣಕ್ಕಾಗಿಯೇ ಇವನಿಗೆ ಚೈಲ್ಡ್ ರವಿ ಅನ್ನುವ ಹೆಸರು ಬಂದಿದೆ. ಕಿರಿವಯಸ್ಸಿನಲ್ಲೆ ಪಾತಕ ಲೋಕದಲ್ಲಿ ಹೆಜ್ಜೆ ಹಾಕಿ ರೌಡಿಸಂ ಫೀಲ್ಡ್ ಗೆ ಎಂಟ್ರಿಕೊಟ್ಟಿದ್ದ.
2014ರಲ್ಲಿ ಹಾಸನ ನಗರದ ಸಹ್ಯಾದ್ರಿ ವೃತ್ತದಲ್ಲಿ ಕುಖ್ಯಾತ ರೌಡಿ ಸ್ಲಂ ಮಂಜನ ಮರ್ಡರ್ ಮಾಡಿದ್ದ ಕೆಡವಿದ್ದ.! ಬಳಿಕ 2016 ರಲ್ಲಿ ರೌಡಿಶೀಟರ್ ಗಳಾದ ಪ್ರವೀಣ್ ಹಾಗೂ ಪ್ರಮೋದ್ ಮರ್ಡರ್ ಕೇಸ್ ಲ್ಲೂ ಭಾಗಿಯಾಗಿದ್ದ.ಇಷ್ಟೇ ಅಲ್ಲದೇ ಹಲ್ಲೆ, ದರೋಡೆ ಸೇರಿದಂತೆ ಹತ್ತಾರು ಪ್ರಕರಣಗಳಲ್ಲಿ ಭಾಗಿಯಾಗಿದ್ದ ನಟೋರಿಯಸ್ ರೌಡಿಶೀಟರ್ ಚೈಲ್ಡ್ ರವಿ ಹತ್ಯೆಯಾಗುವ ಹಿಂದಿನ ದಿನ ಕೂಡ ರಾತ್ರಿ ಬೇರೊಂದು ಗ್ಯಾಂಗ್ ನ ಜೊತೆಗೆ ಗಲಾಟೆ ಮಾಡಿಕೊಂಡಿದ್ದನಂತೆ.ಅದೇ ಗ್ಯಾಂಗ್ ಮಾರನೆ ದಿನ ಬೆಳಗ್ಗೆ ಸ್ಕೆಚ್ ಹಾಕಿ ಮರ್ಡರ್ ಮಾಡಿ ಮುಗಿಸಿ ರಿವೆಂಜ್ ತೀರಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.!
ಚೈಲ್ಡ್ ರವಿಯನ್ನು ಕಾರಿನಲ್ಲಿ ಹಿಂಬಾಲಿಸಿಕೊಂಡು ಬಂದ ಆರೋಪಿಗಳು ಸುತ್ತಮುತ್ತಲು ಸಾರ್ವಜನಿಕರು ಓಡಾಡುತ್ತಿದ್ದ ಸಮಯದಲ್ಲೇ ಆತನ ಬೈಕ್ಗೆ ಡಿಕ್ಕಿ ಹೊಡೆದು ಕೆಳಗೆ ಬೀಳಿಸಿ ಕೃತ್ಯ ಎಸಗಿದ್ದಾರೆ. ವಾಕಿಂಗ್ ಮಾಡುತ್ತಿದ್ದ ಜನರು, ಸಾರ್ವಜನಿಕರು ಹಾಗೂ ಶಾಲೆಗೆ ಹೋಗಲು ಬಸ್ಗಾಗಿ ಸ್ವಲ್ಪ ದೂರದಲ್ಲಿ ಮಕ್ಕಳು ಕಾಯುತ್ತಾ ನಿಂತಿರುವಾಗಲೇ ದುಷ್ಕರ್ಮಿಗಳು ಅಟ್ಟಹಾಸ ಮೆರೆದಿದ್ದಾರೆ. ಘಟನೆ ಕಂಡು ಎಲ್ಲರೂ ಭಯಭೀತರಾಗಿದ್ದಾರೆ.
ಈಗಾಗಲೇ ಆರೋಪಿಗಳ ಪತ್ತೆಗೆ ಪೋಲಿಸರು ಬಲೆ ಬೀಸಿದ್ದು , ಘಟನೆ ನಡೆದಿರುವ ಸ್ಥಳದ ಸುತ್ತಮುತ್ತದ ಸಿಸಿಟಿವಿ ಕ್ಯಾಮರಾಗಳ ವಿಡಿಯೋಗಳನ್ನು ಕಲೆಹಾಕುತ್ತಿದ್ದಾರೆ. ಶೀಘ್ರದಲ್ಲೇ ಈ ಪ್ರಕರಣದ ಆರೋಪಿಗಳನ್ನು ಬಂಧಿಸುವ ಭರವಸೆಯನ್ನು ಪೊಲೀಸ್ ಇಲಾಖೆ ಹಿರಿಯ ಅಧಿಕಾರಿಗಳು ವ್ಯಕ್ತಪಡಿಸಿದೆ.
ಪೆನ್ಷನ್ ಮೊಹಲ್ಲಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಹಂತಕರ ಹುಡುಕಾಟಕ್ಕೆ ಈಗಾಗಲೇ ಹಾಸನ ಎಸ್ಪಿ ಮಹಮದ್ ಸುಜೀತ್ ಎರಡು ತಂಡ ರಚನೆ ಮಾಡಿದ್ದು, ತನಿಖೆ ಮುಂದುವರೆದಿದೆ