ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಬಂಡಾಯ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪನವರಿಗೆ ಹೀನಾಯ ಸೋಲು. ಠೇವಣಿ ಕಳೆದುಕೊಂಡ ಮಾಜಿ ಉಪ ಮುಖ್ಯಮಂತ್ರಿ
news.ashwasurya.in
SUDHIR VIDHATA
ಬಿಜೆಪಿ ಪಕ್ಷ ಸಾಕಷ್ಟು ಅಧಿಕಾರ ಹುದ್ದೆಯನ್ನು ಕೊಟ್ಟಿದ್ದರು ಕೇವಲ ಮಗನಿಗೆ ಟಿಕೆಟ್ ಕೊಡಲಿಲ್ಲ ಎನ್ನುವ ಕಾರಣಕ್ಕೆ ಬಿಜೆಪಿ ವಿರುದ್ಧ ಬಂಡಾಯವೆದ್ದು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದ ಕೆ.ಎಸ್.ಈಶ್ವರಪ್ಪ ಠೇವಣಿ ಕಳೆದುಕೊಂಡು ಮೂರನೇ ಸ್ಥಾನಕ್ಕೆ ತೃಪ್ತಿ
ಅಶ್ವಸೂರ್ಯ/ಶಿವಮೊಗ್ಗ: ರಾಜ್ಯಾದ್ಯಂತ ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಎರಡು ಲಕ್ಷಕ್ಕೂ ಅಧಿಕ ಮತಗಳ ಅಂತರದಲ್ಲಿ ಜಯ ಗಳಿಸಿದ್ದು, ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ಎರಡನೇ ಸ್ಥಾನ ಪಡೆದಿದ್ದಾರೆ, ಬಿಜೆಪಿಯ ವಿರುದ್ದ ಬಂಡಾಯ ಎದ್ದು ಪಕ್ಷೇತರರಾಗಿ ನಿಂತಿದ್ದ ಕೆ.ಎಸ್.ಈಶ್ವರಪ್ಪ ಠೇವಣಿ ಕಳೆದುಕೊಂಡಿದ್ದಾರೆ.ಬಿಜೆಪಿಯ ಪ್ರಬಲ ನಾಯಕರಾಗಿದ್ದ ಮಾಜಿ ಉಪ ಮುಖ್ಯಮಂತ್ರಿ ಕೆ ಎಸ್ ಈಶ್ವರಪ್ಪನವರು ಪಡೆದದ್ದು ಕೇವಲ 30050 ಮತಗಳು.
ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ಅವರು ಡಮ್ಮಿ ಕ್ಯಾಂಡಿಡೇಟ್ ಎನ್ನುತ್ತಿದ್ದ ಈಶ್ವರಪ್ಪನವರ ಮಾತು ಅವರುಗೆ ತಿರುಗುಬಾಣವಾಗಿದೆ. ಮತದಾರ ಈಶ್ವರಪ್ಪ ನವರಿಗೆ ಮತ ನೀಡದೆ ಸರಿಯಾಗಿ ಗುಮ್ಮಿ ಡಮ್ಮಿ ಅಭ್ಯರ್ಥಿ ಈಶ್ವರಪ್ಪ ಎಂದು ತೋರಿಸಿದ್ದಾರೆ. ಸ್ವತಃ ಈಶ್ವರಪ್ಪನವರೆ ಊಹಿಸಲೂ ಇರದ ಸೋಲನ್ನು ಕಂಡಿದ್ದಾರೆ.
ಮತ ಎಣಿಕೆಯ ಒಂದು ದಿನದ ಮುನ್ನವೂ ಈಶ್ವರಪ್ಪ ಗೆಲುವಿನ ಮಾತನ್ನು ಆಡಿದ್ದರು. ಆದರೆ ಕೇವಲ 30050 ಮತಗಳಿಸಿ ಠೇವಣಿ ಕಳೆದುಕೊಂಡ ಈಶ್ವರಪ್ಪನವರ ಸ್ಥಿತಿಯನ್ನು ಉಹಿಸಲು ಸಾಧ್ಯವಿಲ್ಲ.! ಬಿಜೆಪಿ ಪಕ್ಷಕ್ಕಿಂತಲೂ ಹೆಚ್ಚಾಗಿ ಈಶ್ವರಪ್ಪ ಕೆಂಡಕಾರಿದ್ದು ಯಡಿಯೂರಪ್ಪ ಮತ್ತು ವಿಜಯೇಂದ್ರ ಮತ್ತು ರಾಘವೇಂದ್ರರ ವಿರುದ್ದ ಆದರೆ ಈಗ ಈಶ್ವರಪ್ಪನವರ ಸ್ಥಿತಿ.? ಅವರ ಬೆಂಬಲಿಗರಿಗೆ ಗೊತ್ತು.?
ಬಿ ವೈ ರಾಘವೇಂದ್ರ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಪ್ರಬಲ ಅಭ್ಯರ್ಥಿ ಎನ್ನುವುದು ಮತ್ತೊಮ್ಮೆ ಸಾಭಿತಾಗಿದೆ ಜೋತೆಗೆ ಈ ಕ್ಷೇತ್ರ ಲೋಕಸಭಾ ಚುನಾವಣೆಯ ಬಿಜೆಪಿಯ ಭದ್ರ ಕೋಟೆ ಎನ್ನುವುದು ನಿಜವಾಗಿದೆ..