NDA 300 ರ ಗಡಿ ದಾಟುತ್ತಾ.? ಸಮೀಕ್ಷೆಗಳು ಸುಳ್ಳಾಯ್ತಾ.? ಇತರರು ಪ್ರಮುಖ ಪಾತ್ರ ವಹಿಸುತ್ತಾರ.?
news.ashwasurya.in
sudhi vidhata
ಅಶ್ವಸೂರ್ಯ/ಶಿವಮೊಗ್ಗ: ಲೋಕಸಭಾ ಚುನಾವಣೆ 2024 ರ ಮತ ಎಣಿಕೆ ಕಾರ್ಯ ನಡೆಯುತ್ತಿದ್ದು, ಆರಂಭಿಕ ಹಂತದಲ್ಲಿ ಇದೀಗ NDA ಒಕ್ಕೂಟ ಇದೀಗ 293 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದರೆ, ಇಂಡಿಯಾ ಒಕ್ಕೂಟ 230 ಸ್ಥಾನಗಳಲ್ಲಿ ಮುನ್ನಡೆಯಲ್ಲಿದೆ. ಇತರರು 20 ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿದೆ.
ಈ ಕ್ಷಣದ ಬಲ ಬಲವನ್ನು ನೋಡಿದರೆ NDA ಮತ್ತು ಇಂಡಿಯಾ ಒಕ್ಕೂಟ ಎರಡೂ ಬಣಗಳಲ್ಲಿ ಒಂದು ರೀತಿಯ ಕಳವಳ ಶುರುವಾಗಿದೆ. ಈ ಕ್ಷಣದ ಎರಡು ಪ್ರಬಲ ಬಣಗಳ ಮುನ್ನಡೆಯನ್ನು ಗಮನಿಸಿದರೆ ಇಂಡಿಯಾ ಒಕ್ಕೂಟದಲ್ಲಿ ಹೆಚ್ಚು ನಿರಾಳತೆ ಮೂಡಿಸಿರಬಹುದು. ಯಾಕೆಂದರೆ ಆರಂಭದ ಅರ್ಧಗಂಟೆಯಲ್ಲಿ ಇಂಡಿಯಾ ಒಕ್ಕೂಟ ಭಾರೀ ಹಿನ್ನಡೆಯಲ್ಲಿತ್ತು ಈಗ ನಿಧಾನವಾಗಿ ಮುನ್ನಡೆಯತ್ತ ಹೆಜ್ಜೆ ಹಾಕಿದೆ.
ಆದರೆ ಇತ್ತೀಚಿನ ಬೆಳವಣಿಗೆಯನ್ನು ಗಮನಿಸಿದರೆ NDA ಇನ್ನೂ 300 ರ ಗಡಿ ದಾಟುವುದು ಅನುಮಾನವಾಗಿದೆ. ಅತ್ತ ಇಂಡಿಯಾ ಒಕ್ಕೂಟ ಮುನ್ನಡೆ ಹೆಚ್ಚುತ್ತಿದೆ. ವಿಶೇಷವಾಗಿ ಉತ್ತರ ಪ್ರದೇಶದಲ್ಲಿ ಬಿಜೆಪಿಗೆ ಭಾರೀ ಹಿನ್ನಡೆಯಾಗುತ್ತಿದೆ. ಬಿಹಾರದಲ್ಲಿ ಎರಡೂ ಬಣಗಳ ನಡುವೆ ಜಿದ್ದಾಜಿದ್ದಿನ ಪೈಪೋಟಿ ಮುಂದುವರಿದೆ. ಆರಂಭಿಕ ಟ್ರೆಂಡ್ ಗಮನಿಸಿದರೆ ಇತರರು ಪ್ರಮುಖ ಪಾತ್ರ ವಹಿಸಲಿದ್ದಾರ.? ಎನ್ನುವುದನ್ನು ಕಾದು ನೋಡಬೇಕಿದೆ.
ಸದ್ಯದ ಬೆಳವಣಿಗೆಯಿಂದ ಎರಡೂ ಒಕ್ಕೂಟದ ಎದೆಬಡಿತ ಹೆಚ್ಚಿಸಿದೆ. ಇದೇ ರೀತಿ ಮುಂದುವರಿದರೆ ಇಂಡಿಯಾ ಒಕ್ಕೂಟದ ಆತ್ಮವಿಶ್ವಾಸ ಹೆಚ್ಚಲಿದೆ.