ವಿಜಯಪುರ ಜಿಲ್ಲೆಯ ಆಲಮೇಲ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ರೌಡಿ ಶೀಟರ್ ಒಬ್ಬನನ್ನು ಹಾಡುಹಗಲೇ ಬರ್ಬರವಾಗಿ ಹತ್ಯೆಮಾಡಲಾಗಿದೆ….
ಆಲಮೇಲ ಪಟ್ಟಣ ನಿವಾಸಿ ಮಾಳಪ್ಪ ಯಮನಪ್ಪ ಮೇತ್ರಿ ಹತ್ಯೆಯಾದ ರೌಡಿಶೀಟರ್ ಎಂದು ಗುರುತಿಸಲಾಗಿದ್ದು ದೇವರನಾವದಗಿ ಪರಿಸರದಲ್ಲಿ ಇಂದು (ಮಂಗಳವಾರ) ಮಧ್ಯಾಹ್ನ 1 ಗಂಟೆ ಸುಮಾರಿಗೆ ರೌಡಿ ಶೀಟರ್ ಮಾಳಪ್ಪ ಯಮನಪ್ಪನಿಗೆ ಹೊಂಚುಹಾಕಿ ಕುಳಿತಿದ್ದ ಹಂತಕರು ಮಾರಕಾಸ್ತ್ರಗಳಿಂದ ಅಟ್ಯಾಕ್ ಮಾಡಿದ ಟೀಮ್ ಮನಬಂದಂತೆ ಲಾಂಗ್ ಬಿಸಿದ್ದಾರೆ. ತಲೆ ಭಾಗಕ್ಕೆ ತೀವ್ರ ಪ್ರಮಾಣದಲ್ಲಿ ಮಚ್ಚಿನೇಟು ಬಿದ್ದ ಕಾರಣಕ್ಕೆ ಮಾಡಿದ್ದು, ತೀವ್ರ ರಕ್ತಸ್ರಾವವಾಗಿ ಮಾಳಪ್ಪ ಸ್ಥಳದಲ್ಲೇ ಉಸಿರು ಚಲ್ಲಿದ್ದಾನ.
ರೌಡಿಶೀಟರ್ ಮಾಳಪ್ಪ ಈ ಪರಿಸರದಲ್ಲಿ ಅನಧಿಕೃತ ಹಾಗೂ ಕಾನೂನು ಬಾಹೀರವಾಗಿ ಇಸ್ಪೀಟ್ ಜೂಜು ಅಡ್ಡೆ ನಡೆಸುತ್ತಿದ್ದ ಎನ್ನಲಾಗಿದೆ. ಹತ್ಯೆಯಾಗಿರುವ ರೌಡಿಶೀಟರ್ ಮಾಳಪ್ಪನ ಮೇಲೆ ಆಲಮೇಲ ಪೊಲೀಸ್ ಠಾಣೆಯಲ್ಲಿ ಹಲವು ಪ್ರಕರಣ ದಾಖಲಾಗಿದ್ದು, ಪದೇ ಪದೇ ಕಾನೂನು ಬಾಹೀರ ಕೃತ್ಯದಲ್ಲಿ ಪಾಲ್ಗೊಳ್ಳುತ್ತಿದ್ದನೆಂದು ತಿಳಿದು ಬಂದಿದೆ. ಈಗಾಗಲೇ ಆಲಮೇಲ ಪೋಲಿಸ್ ಠಾಣೆಯಲ್ಲಿ ಇವನ ಮೇಲೊಂದು ರೌಡಿ ಶೀಟ್ ತೆರೆಯಲಾಗಿತ್ತು. ಇವನು ಇತ್ತೀಚಿಗೆ ಸಾಕಷ್ಟು ಪುಡಿ ರೌಡಿ ಗಳ ಜೋತೆಗೆ ವೈಷಮ್ಯ ಕಟ್ಟಿಕೊಂಡಿದ್ದ. ಈ ಕಾರಣದಿಂದಲೇ ಮಂಗಳವಾರ ಮಟ ಮಟ ಮಧ್ಯಾಹ್ನ ಹೊತ್ತಿಗೆ ಮಾಳಪ್ಪನ ಹೆಗಲೇರಿ ಕುಳಿತಿದ್ದ ವಿಧಿ ಹೆಣವಾಗಿಸಿ ಮಲಗಿಸಿದೆ.! ರಿವೆಂಜ್ ಗೆ ಬಿದ್ದಿರಬಹುದಾದ ಹಂತಕರು ಮಾಳಪ್ಪನನ್ನು ಮನಬಂದಂತೆ ಕೊಚ್ಚಿ ಉಸಿರು ನಿಲ್ಲಿಸಿದ್ದಾರೆ.
ರೌಡಿ ಶೀಟರ್ ಮಾಳಪ್ಪನ ಹತ್ಯೆಗೆ ಕಾರಣವಿನ್ನು ತಿಳಿದು ಬಂದಿಲ್ಲ. ಸ್ಥಳಕ್ಕೆ ಧಾವಿಸಿರುವ ಆಲಮೇಲ್ ಪೊಲೀಸರು ಹತ್ಯೆಯಾದ ಸ್ಥಳದ ಮಹಜರು ಮಾಡಿ ತನಿಖೆ ಮುಂದುವರೆಸಿದ್ದಾರೆ
ಸುಧೀರ್ ವಿಧಾತ, ಶಿವಮೊಗ್ಗ