ಕಾರು ಸ್ಕೂಟರ್ ನಡುವೆ ಅಪಘಾತ ಮದುವೆಯಾಗಿ ಆರನೇ ದಿನಕ್ಕೆ ಸಾವಿನಮನೆ ಸೇರಿದ ನವವಿವಾಹಿತೆ, ವರನ ಸ್ಥಿತಿ ಗಂಭೀರ.!

ಮೃತ ನವ ವಧು ಅನಿಶಾ

ಪಾಲಕ್ಕಾಡ್: ಮದುವೆಯಾದ ಹೊಸದರಲ್ಲಿ ನವ ವಧು ವರರನ್ನು ನೆಂಟರಿಷ್ಟರು ಊಟಕ್ಕೆ ಕರೆಯುವುದು ಸಹಜ ಅದರಂತೆ ತಮಿಳುನಾಡಿನ ಪಾಲಕ್ಕಾಡ್ ಗೆ ಊಟಕ್ಕೆ ತೆರಳಿ ಊಟ ಮುಗಿಸಿಕೊಂಡು ಮನೆಗೆ ಹಿಂದುರುಗುವಾಗ ಪಾಲಕ್ಕಾಡಿನ ಪುದುಶೇರಿ ಕುರುತಿಕ್ಕಾಡ್ ಎಂಬಲ್ಲಿ ಕಂಟೈನರ್ ಲಾರಿ ಮತ್ತು ಬೈಕ್ ನಡುವೆ ಡಿಕ್ಕಿಯಾಗಿ ನವವಿವಾಹಿತೆ ಅನಿಶಾ (20) ಮೃತಪಟ್ಟಿದ್ದಾರೆ. ವರನ ಸ್ಥಿತಿಯು ತೀರ ಗಂಭೀರವಾಗಿದೆ ಎಂದು ತಿಳಿದುಬಂದಿದೆ.
ಕಣ್ಣನೂರಿನ ಪುದುಕೋಡು ಮೂಲದ ಅನಿಶಾ ಅದೆಷ್ಟೋ ಕನಸುಗಳನ್ನು ಹೊತ್ತು ಕೇವಲ ಆರು ದಿನಗಳ ಹಿಂದೆ ಸಪ್ತಪದಿ ತುಳಿದು ಗಂಡನಮನೆ ಸೇರಿದ್ದಳು ಪತಿ ಕೊಯಮತ್ತೂರು ಮೂಲದ ಶಾಕಿರ್ (32) ಎಂದು ತಿಳಿದು ಬಂದಿದೆ ಈತ ಕೂಡ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯ ಹಾಸಿಗೆಯ ಮೇಲೆ ಸಾವು ಬದುಕಿನೋಡನೆ ಹೋರಾಡುತ್ತಿದ್ದಾನೆ. ಇವರಿಬ್ಬರ ಮದುವೆ ಜುಲೈ 4 ರಂದು ನಡೆದಿತ್ತು.

ನೆನ್ಮಾರಾದ ಕುಣಿಶೇರಿಯಲ್ಲಿರುವ ಸಂಬಂಧಿಕರ ಮನೆಯಲ್ಲಿ ಔತಣ ಮುಗಿಸಿ ಕೊಯಮತ್ತೂರಿನ ಗಂಡನ ಮನೆಗೆ ಹಿಂದಿರುಗುತ್ತಿದ್ದಾಗ ಈ ಅವಘಡ ಸಂಭವಿಸಿದೆ. ಅನಿಶಾ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಪಾಲಕ್ಕಾಡ್‌ನಿಂದ ಕೊಯಮತ್ತೂರು ಕಡೆಗೆ ಹೋಗುತ್ತಿದ್ದ ಅವರ ನವ ದಂಪತಿಗಳ ಆಕ್ಟಿವಾ ಮೋಟಾರ್‌ಸೈಕಲ್ ಗೆ ಅದೇ ದಿಕ್ಕಿನಲ್ಲಿ ಹೋಗುತ್ತಿದ್ದ ಕಂಟೈನರ್‌ಗೆ ಡಿಕ್ಕಿ ಹೊಡೆದಿದೆ. ಬೈಕ್ ಚಲಾಯಿಸುತ್ತಿದ್ದ ಶಾಕಿರ್ ಗಂಭೀರವಾಗಿ ಗಾಯಗೊಂಡರೆ ಅನಿಶಾ ಸಾವಿನ ಮನೆ ಸೇರಿದ್ದಾಳೆ. ನಿಲ್ಲಿಸಿದ್ದ ಕಂಟೈನರ್ ಅನ್ನು ಎತ್ತಿಕೊಂಡು ಹೋಗುವಾಗ ಎಡಬದಿಯಿಂದ ದಂಪತಿಗಳು ವೇಗವಾಗಿ ಓವರ್ ಟೇಕ್ ಮಾಡಲುಹೋಗಿ ಈ ಅಪಘಾತ ಸಂಭವಿಸಿದೆ. ನವ ವಧುವನ್ನು ಕಳೆದುಕೊಂಡ ಹುಡುಗನ ಮನೆಯವರ ಮತ್ತು ಹೆತ್ತವರ ಅಕ್ರಂದ ಮುಗಿಲುಮುಟ್ಟಿದೆ




ಸುಧೀರ್ ವಿಧಾತ, ಶಿವಮೊಗ್ಗ

Leave a Reply

Your email address will not be published. Required fields are marked *

Optimized by Optimole
error: Content is protected !!