ಡಾ.ಸರ್ಜಿಗೆ ಮತ ನೀಡಿ ಹರಸಿ, ಗೆಲ್ಲಿಸಿ ವಿಧಾನ ಪರಿಷತ್ ಸದಸ್ಯರಾದ ಡಿ.ಎಸ್. ಅರುಣ್ ಮನವಿ
ASHWASURYA/SHIVAMOGGA
ಅಶ್ವಸೂರ್ಯ/ಶಿವಮೊಗ್ಗ : ನೈರುತ್ಯ ಪದವೀಧರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಡಾ.ಧನಂಜಯ ಸರ್ಜಿ ಅವರು ಸ್ಪರ್ಧಿಸಿದ್ದು, ತಾವೆಲ್ಲರೂ ಮತವನ್ನು ನೀಡುವ ವಿಧಾನಪರಿಷತ್ ಆಯ್ಕೆಯಾಗಿ ಬರಲೆಂದು ಹಾರೈಸುವಂತೆ ವಿಧಾನ ಪರಿಷತ್ ಸದಸ್ಯರಾದ ಡಿಎಸ್ ಅರುಣ್ ಮನವಿ ಮಾಡಿದರು.
ವಿನಾಯಕ ನಗರದಲ್ಲಿ ಶ್ರೀ ವಾಸವಿ ಕನ್ನಿಕಾ ಪರಮೇಶ್ವರಿ ದೇವಸ್ಥಾನ ಶಿವಮೊಗ್ಗ ಆರ್ಯವೈಶ್ಯ ವಾಸವಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಆಯೋಜಿಸಲಾಗಿದ್ದ ವಾಸವಿ ಜಯಂತೋತ್ಸವ ಮತ್ತು ಎರಡನೇ ಪ್ರತಿಷ್ಠಾಪನ ವರ್ಧಂತಿ ಭಾಗವಹಿಸಿ, ಮಾತನಾಡಿ, ಸರ್ವರಿಗೂ ವಾಸವಿ ಜಯಂತಿಯ ಶುಭಾಶಯಗಳು ಕೋರಿದರು.
ಡಾ.ಧನಂಜಯ ಸರ್ಜಿ ದೇವಸ್ಥಾನದ ಲ್ಲಿ ಪೂಜೆ ಗೆಲುವಿಗಾಗಿ ಪ್ರಾರ್ಥಿಸಿದರು.
ನೈರುತ್ಯ ಪದವಿಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾದ ಡಾ ಧನಂಜಯ ಸರ್ಜಿ ಮಾತನಾಡಿ, ನೈರುತ್ಯ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ನಾನು ಸ್ಪರ್ಧಿಸಿದ್ದೇನೆ, ಕ್ಷೇತ್ರದ ಮತದಾರರು ತಾವು ಮತ ನೀಡುವ ಮೂಲಕ ಸಂಬಂಧಿಕರು, ಸ್ನೇಹಿತರಿಂದಲೂ ಮತ ಕೊಡಿಸಿ ಗೆಲ್ಲಿಸುವಂತೆ ವಿನಂತಿಸಿದರು.
ಈ ಸಂದರ್ಭದಲ್ಲಿ ಶಿವಮೊಗ್ಗ ಶಾಸಕರಾದ ಎಸ್. ಎನ್. ಚೆನ್ನಬಸಪ್ಪ, ರಾಜ್ಯ ಪ್ರಕೋಸ್ಟಗಳ ಸಂಯೋಜಕರಾದ ಎಸ್. ದತ್ತಾತ್ರಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಮಾಲತೇಶ್, ಶಿವಮೊಗ್ಗ ಆರ್ಯವೈಶ್ಯ ವಾಸವಿ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷರಾದ ಟಿ. ಆರ್. ಅಶ್ವಥ್ ನಾರಾಯಣ ಶೆಟ್ಟಿ, ಉಪಾಧ್ಯಕ್ಷರಾದ ಆರ್. ಜಿ. ಮಂಜುನಾಥ್, ಡಿ.ಎಲ್. ಮಂಜುನಾಥ್, ಕಾರ್ಯದರ್ಶಿಗಳಾದ ಎಸ್ ವಿ ನಾಗೇಂದ್ರ, ಸಹ ಕಾರ್ಯದರ್ಶಿಗಳಾದ ವೈ.ಗೋಪಾಲಕೃಷ್ಣ ಗುಪ್ತ, ಟ್ರಸ್ಟಿಗಳಾದ ಬೆಲಗೂರು ಮಂಜುನಾಥ್, ಎಚ್ ಎಸ್ ಮಂಜುನಾಥ್ ಭಾಗಿಯಾಗಿದ್ದರು.