ಬಾಪೂಜಿ ಆಯುರ್ವೇದಿಕ್ ಕಾಲೇಜಿನಲ್ಲಿ ಬಿಜೆಪಿಯ ನೈರುತ್ಯ ಪದವೀಧರ ಕ್ಷೇತ್ರದ ಅಭ್ಯರ್ಥಿ ಡಾ.ಧನಂಜಯ ಸರ್ಜಿ ಅವರಿಂದ ಮತಬೇಟೆ

ಬಾಪೂಜಿ ಆಯುರ್ವೇದಿಕ್ ಕಾಲೇಜಿನಲ್ಲಿ ಡಾ.ಧನಂಜಯ ಸರ್ಜಿ ಮತಬೇಟೆ

ASHWASURYA/SHIVAMOGGA

SUDHIR VIDHATA

ಅಶ್ವಸೂರ್ಯ/ಶಿವಮೊಗ್ಗ: ಶಿವಮೊಗ್ಗದ ಸವಳಂಗ ರಸ್ತೆಯ ಬಾಪೂಜಿ ಆಯುರ್ವೇದಿಕ್ ಕಾಲೇಜು ಹಾಗೂ ಮಹಿಳಾ ವಸತಿ ನಿಲಯದಲ್ಲಿ ಶುಕ್ರವಾರ ಬೆಳಗ್ಗೆ ನೈರುತ್ಯ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಧನಂಜಯ ಸರ್ಜಿ ಅವರು ಕಾಲೇಜಿನ ಪ್ರಾಂಶುಪಾಲರು, ವೈದ್ಯರು, ಪ್ರಾಧ್ಯಾಪಕರು ಹಾಗೂ ಸಿಬ್ಬಂದಿಗಳೊಂದಿಗೆ ಸಮಾಲೋಚನೆ ನಡೆಸಿ, ಮತಯಾಚಿಸಿದರು. ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಪಂಕಜ್ ಪ್ರಸಾದ್ ,ಡಾ. ಶ್ರೀನಿವಾಸ್ ಶೆಟ್ಟಿ, ಡಾ.ಶಶಿಕಾಂತ್ , ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಾಲತೇಶ್ ಮತ್ತಿತರರು ಹಾಜರಿದ್ದರು.

ಈ ಸಂದರ್ಭದಲ್ಲಿ ಡಾ.ಧನಂಜಯ ಸರ್ಜಿ ಅವರು ಮಾತನಾಡಿ, ಬಿಜೆಪಿ ಅಭ್ಯರ್ಥಿಯಾಗಿ ನಾನು ಕಣಕ್ಕಿಳಿದಿದ್ದು, ಮತ ಚಲಾಯಿಸುವಾಗ ನನ್ನ ಭಾವಚಿತ್ರದ ಪಕ್ಕದಲ್ಲಿ ಒಂದು ಗೆರೆಯನ್ನು ಮಾತ್ರ ಹಾಕಬೇಕು, ಯಾವುದೇ ಕಾರಣಕ್ಕೂ ಒಂದು ಅಂಕಿಯ ಮುಂದೆ ಚುಕ್ಕಿ ಇಡಬಾರದು, ಇಲ್ಲವೇ ಒತ್ತಿ ಕೆಳಗೆ ಎಳೆದು ಹಾಕಿದರೆ, ಒಂದು ಬರೆದು ಮೇಲೆ ಅಥವಾ ಕಳೆಗೆ ಕೊಂಬು ಕೊಟ್ಟರೆ, one ಎಂದು ಬರೆದರೆ ಇಲ್ಲವೇ ರೈಟ್ ಮಾರ್ಕ್ ಹಾಕಿದರೂ, x ಹಾಕಿದರೂ ಆ ಮತವು ತಿರಸ್ಕೃತಗೊಳ್ಳುತ್ತದೆ, ಹಾಗಾಗಿ ತಾವೆಲ್ಲರೂ ಈ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು, ಏಕೆಂದರೆ ಕಳೆದ ಚುನಾವಣೆಯಲ್ಲಿ 3800 ಮತಗಳು ತಿರಸ್ಕೃತಗೊಂಡಿದ್ದವು. ಹಾಗಾಗಿ ಅತ್ಯಂತ ಜಾಗ್ರತೆ ಮತ್ತು ಎಚ್ಚರಿಕೆಯಿಂದ ನನ್ನ ಭಾವಚಿತ್ರದ ಮುಂದೆ ಒಂದು ಗೆರೆಯನ್ನು ಮಾತ್ರ ಹಾಕುವ ಮೂಲಕ ಮೊದಲ ಪ್ರಾಶಸ್ತ್ಯ ಮತವನ್ನು ನೀಡಿ ಗೆಲ್ಲಿಸುವಂತೆ ಮನವಿ ಮಾಡಿದರು.

ನಾನು ಮತ್ತು ನನ್ನ ತಂಡ……

Leave a Reply

Your email address will not be published. Required fields are marked *

Optimized by Optimole
error: Content is protected !!