ಸಿಎಂ ಡಿಸಿಎಂ ಕೈ ಸೇರಿದ ಕಾಂಗ್ರೆಸ್ ಸಮೀಕ್ಷಾ ವರದಿ, 14ರಲ್ಲಿ “ಕೈ” ಮೇಲು.!

ಸಿಎಂ ಸಿದ್ದರಾಮಯ್ಯ ನವರು ಡಿಸಿಎಂ ಡಿ ಕೆ ಶಿವಕುಮಾರ್

ಸಿಎಂ ಡಿಸಿಎಂ ಕೈ ಸೇರಿದ ಕಾಂಗ್ರೆಸ್ ಸಮೀಕ್ಷಾ ವರದಿ, 14ರಲ್ಲಿ “ಕೈ” ಮೇಲು.!

ASHWASURYA/SHIVAMOGGA

✍️ ಸುಧೀರ್ ವಿಧಾತ

ಅಶ್ವಸೂರ್ಯ/ಬೆಂಗಳೂರು : ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಾಲಿಗೆ ವರದಾನವಾಗಲಿದೆ.ಬಿಜೆಪಿ ಪಾಲಿಗೆ ತಿರುಗುಬಾಣವಾಲಿದೇಯಾ.? ಎನ್ನುವ ಮಾತು ಎಲ್ಲೆಡೆ ಕೇಳಿಬರುತ್ತಿದೆ. ಏಪ್ರಿಲ್ 26 ಮತ್ತು ಮೇ.7 ಸೇರಿದಂತೆ ರಾಜ್ಯದಲ್ಲಿ ಒಟ್ಟು ಎರಡು ಹಂತದಲ್ಲಿ ಚುನಾವಣೆ ನಡೆದಿದ್ದು, ಯಾವ ಪಕ್ಷಕ್ಕೆ ಎಷ್ಟು ಗೆಲುವು ದೊರೆಯಬಹುದು? ಎಂಬ ಬಗ್ಗೆ ಕಾಂಗ್ರೆಸ್ ಪಕ್ಷದ ವತಿಯಿಂದ ನಡೆಸಲಾಗಿದ್ದ ಆಂತರಿಕ ಸಮೀಕ್ಷಾ ವರದಿ ಇದೀಗ ಸಿಎಂ ಮತ್ತು ಡಿಸಿಎಂ ಅವರ ಕೈ ಸೇರಿದ್ದು, ಕೈ ಪಾಳಯದವರಿಗೆ ಖುಷಿ ಸಮಾಚಾರ ಕಾದಿದೆ. ಈ ಸಲದ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಬಿಜೆಪಿ-ಜೆಡಿಎಸ್ ಚುನಾವಣಾ ಹೊಂದಾಣಿಕೆ ಮಾಡಿಕೊಂಡಿದ್ದರ ಪರಿಣಾಮ ಮತಗಳ ಧೃವೀಕರಣದಿಂದಾಗಿ ಕಾಂಗ್ರೆಸ್ ಪಕ್ಷಕ್ಕೆ ತುಸು ಹಿನ್ನಡೆಯಾಗಬಹುದೆಂಬ ಆತಂಕ ಇತ್ತು ಇದೀಗ ಈ ವರದಿಯಿಂದ ಅದು ದೂರವಾದಂತೆ ಕಾಣುತ್ತಿದೆ. ಏಕೆಂದರೆ ಬಿಜೆಪಿಯವರ ಇಪ್ಪತ್ತೆಂಟಕ್ಕೆ ಇಪ್ಪತ್ತೆಂಟೂ ಸೀಟ್ ಗಳನ್ನು ಗೆಲ್ಲುತ್ತೇವೆಂಬ ಲೆಕ್ಕಾಚಾರ ತಲೆಕೆಳಗಾಗಿದೆ. ಮೂಲಗಳ ಪ್ರಕಾರ ಈ ಬಾರಿ ಕಾಂಗ್ರೆಸ್ ಮೊದಲ ಹಂತದ ಹದಿನಾಲ್ಕು ಕ್ಷೇತ್ರಗಳಲ್ಲಿ 6 ಸೀಟ್ ಗಳು ಹಾಗೂ ಎರಡನೇ ಹಂತದ ಹದಿನಾಲ್ಕು ಕ್ಷೇತ್ರಗಳ ಪೈಕಿ 8 ಸೀಟುಗಳು ಸೇರಿದಂತೆ ಒಟ್ಟು 14 ಮತಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ವಿಜಯ ಪತಾಕೆ ಹಾರಿಸಲಿದ್ದಾರೆ ಎನ್ನುವುದು ಇದೀಗ ಬಹಿರಂಗವಾಗಿದೆ.!? ಇದೇ ಕಾರಣಕ್ಕೋ ಏನೋ ಮೊನ್ನೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚುನಾವಣಾ ಫಲಿತಾಂಶದ ಬಳಿಕ ಮಾಜಿ ಸಿಎಂ ಯಡಿಯೂರಪ್ಪ ಮತ್ತು ಅವರ ಪುತ್ರ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ತಲೆದಂಡ ಖಚಿತ ಎಂದು ಮಾರ್ಮಿಕವಾಗಿ ಹೇಳಿದ್ದರು.

ಒಟ್ಟಿನಲ್ಲಿ ಈ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಾಲಿಗೆ ಐದು‌ ಗ್ಯಾರಂಟಿಗಳು ವರದಾನವಾಗಿದೆ ಎನ್ನುವ ಮಾತು‌ ಕೇಳಿ ಬರುತ್ತಿದೆ. ಈ ಬಾರಿ ಮೋದಿ ಅಲೆ ರಾಜ್ಯ ಸರ್ಕಾರದ ಐದು ಗ್ಯಾರಂಟಿಗಳ ಸುನಾಮಿ ಹೊಡೆತಕ್ಕೆ ಕೊಚ್ಚಿ ಹೊದಂತೆ ಕಾಣುತ್ತಿದೆ.! ಕರ್ನಾಟಕದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮತ್ತು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರ ಅಲೆಯ ಎದುರು ಬಿಜೆಪಿಯ ಅಬ್ಬರ ತಣ್ಣಗಾದಂತಿದೆ..!

ಅದೇನೆ ಇರಲಿ ಜೂನ್4ರ ವರೆಗೆ ಸೋಲು ಗೆಲುವಿನ ಲೆಕ್ಕಚಾರ ಮತದಾರರ ನಡುವೆ ನೆಡೆಯುತ್ತದೆ. ಕ್ಷಣ ಕ್ಷಣಕ್ಕೂ ಬದಲಾಗುತ್ತಲೆ ಇರುತ್ತದೆ ಎನ್ನುವುದು ಮಾತ್ರ ಸತ್ಯ…..ಯಾರ ಪಾಲಿಗೆ ವಿಜಯಲಕ್ಷ್ಮಿ ಎನ್ನುವುದು ಮಾತ್ರ ಜೂನ್ ನಾಲ್ಕರ ವರೆಗೆ ಕಾಯಲೆಬೇಕು..

Leave a Reply

Your email address will not be published. Required fields are marked *

Optimized by Optimole
error: Content is protected !!