ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಕಾರ್ಯಾಧ್ಯಕ್ಷ ಮಂಜುನಾಥ್ ಭಂಡಾರಿ
ಈ ಬಾರಿಯ 18 ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಸ್ಪಷ್ಟ ಗೆಲುವು ಸಾಧಿಸುವ ಸೂಚನೆ ಇದೆ : ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಕಾರ್ಯಾಧ್ಯಕ್ಷ ಮಂಜುನಾಥ್ ಭಂಡಾರಿ
ASHWASURYA/SHIVAMOGGA
✍️ ಸುಧೀರ್ ವಿಧಾತ
ಅಶ್ವಸೂರ್ಯ/ಶಿವಮೊಗ್ಗ : ಇಂದು ಸುದ್ದಿಘೋಷ್ಠಿಯಲ್ಲಿ ಮಾತನಾಡಿದ ಭಂಡಾರಿ ಅವರು ಕಾಂಗ್ರೆಸ್ ಪಕ್ಷದ ನೇತಾರ ರಾಹುಲ್ ಗಾಂಧಿಯವರು ಕನ್ಯಾಕುಮಾರಿಯಿಂದ ಕಾಶ್ಮೀರದ ವರೆಗೆ ಭಾರತ್ ಜೋಡೊ ಹೆಸರಿನಲ್ಲಿ
ಪಾದಯಾತ್ರೆ ನಡೆಸಿದರು.ಅದರಲ್ಲೂ ಕರ್ನಾಟಕ ರಾಜ್ಯದಲ್ಲಿ ಭಾರತ್ ಜೊಡೋ ಪಾದಯಾತ್ರೆಯಲ್ಲಿ ಜನರ ನಾಡಿ ಮಿಡಿತ ಅರಿತ ರಾಹುಲ್ ಅವರು ಜನರಿಂದ 2000 ಸಲಹೆಗಳನ್ನು ಪಡೆದಿದ್ದರು. ಈ ಸಲಹೆಗಳಿಂದಲೆ ರಾಜ್ಯದಲ್ಲಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಐದು ಗ್ಯಾರೆಂಟಿಯನ್ನು ರಚಿಸಿ ಪ್ರಣಾಳಿಕೆಯಲ್ಲಿ ಬಿಡುಗಡೆ ಮಾಡಲಾಗಿತ್ತು.ನಮ್ಮ ಜನಪ್ರಿಯ ಬಡವರ ಪರ ಪ್ರಣಾಳಿಕೆಯೆ ಕಾಂಗ್ರೆಸ್ ಪಕ್ಷವನ್ನು ಅತ್ಯಧಿಕ 135 ಸ್ಥಾನವನ್ನು ಗೆಲ್ಲವಂತೆ ಮಾಡಿತ್ತು. ನುಡಿದಂತೆ ನಮ್ಮ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಮತ್ತು ಉಪ ಮುಖ್ಯಮಂತ್ರಿ ಡಿಕೆ ಶಿವರಾಜಕುಮಾರ್ ಅವರು ಐದು ಗ್ಯಾರಂಟಿಗಳನ್ನು ಜಾರಿಗೆ ತಂದು ಫಲಾನುಭವಿಗಳಿಗೆ ಹಂಚಿದ್ದೇವೆ.
ಈಗ ಮತ್ತೆ ಪಾದಯಾತ್ರೆ ನಡೆಸಿ ಸಲಹೆ ಪಡೆದು ಐದು ಗ್ಯಾರೆಂಟಿಯನ್ನ ಕಾಂಗ್ರೆಸ್ ಪಕ್ಷ ನೀಡಲು ಮುಂದಾಗಿದೆ. ಆದರೆ ಬಿಜೆಪಿ ಏಕಮೇವ ನಾಯಕನ ಸುತ್ತ ಗ್ಯಾರೆಂಟಿ ಗಿರಕಿ ಹೋಡೆಯುತ್ತಿದೆ. ಪಕ್ಷದ ಚಿಂತನೆಯನ್ನೆ ಹೊರಗಿಟ್ಟು ಮೋದಿ ಗ್ಯಾರೆಂಟಿ ಮೋದಿ ಗ್ಯಾರಂಟಿ ಎಂದು ನಮ್ಮ ಗ್ಯಾರಂಟಿ ಪದಬಳಕೆ ಮಾಡಿಕೊಂಡು ಚುನಾವಣೆಗೆ ಮುಂದಾಗಿದ್ದಾರೆ.
ಮೋದಿ ಗ್ಯಾರಂಟಿ ವರ್ಕ್ಔಟ್ ಆಗೋಲ್ಲ ಎಂದರು.
ವಿದೇಶದಲ್ಲಿರುವ 6 ಟ್ರಲಿಯನ್ ಡಾಲರ್ ಕಪ್ಪುಹಣವನ್ನು ತರಲಾಗುವುದು ಎಂದು ಮೋದಿ ಅವರು ಭಾಷಣ ಮಾಡಿದ್ದರು.ಅದನ್ನು ಬರೆಯುವುದೆ ಕಷ್ಟ.! ಬಿಜೆಪಿ ಅಧಿಕಾರಕ್ಕೆ ಬಂದು ಹತ್ತು ವರ್ಷವೂ ಕಳೆಯಿತು 60 ದಿನಗಳಲ್ಲಿ ಕಪ್ಪುಹಣ ತರುವುದಾಗಿ ಹೇಳಿದ ಪರಿಣಾಮ 2014 ರಲ್ಲಿ ಅಧಿಕಾರಕ್ಕೆ ಬಂದರು ಅದರು ಈ ವರೆಗೆ ಕಪ್ಪುಹಣ ಬರಲಿಲ್ಲ. 2019 ರಲ್ಲಿ ಪುಲ್ವಾಮಾ ದಾಳಿ ನಡೆಯಿತು.ಆದರೆ ಪುಲ್ವಾಮಾ ದಾಳಿ ನಡೆದಿದ್ದು ಮತ್ತು ಭದ್ರತಾ ವೈಫಲ್ಯದ ಬಗ್ಗೆ ಇದುವರೆಗೂ ಸ್ಪಷ್ಟನೆ ಇಲ್ಲಾ ಎಂದರು.
ಆಗಿನ ರಾಜ್ಯಪಾಲ ಸತ್ಯಪಾಲ್ ಪುಲ್ವಾಮಾ ದಾಳಿಗೂ ಮುಂಚೆಯೇ ಗುಪ್ತಚರ ವರದಿಯ ಆಧಾರ ಮೇಲೆ ದಾಳಿ ನಡೆಯುವ ಬಗ್ಗೆ ಸರ್ಕಾರಕ್ಕೆ ಎಚ್ಚರಿಸಲಾಗಿತ್ತು. ಅದರು ದಾಳಿ ನೆಡೆಯಿತು. ಬಿಜೆಪಿಯು ಅಧಿಕಾರಕ್ಕೆ ಬರುವ ಮುನ್ನ 400 ರೂಪಾಯಿ ಇದ್ದ ಸಿಲಿಂಡರ್ 1000 ರೂಪಾಯಿ ಗಡಿದಾಟಿದರು ಬಿಜೆಪಿ ಮಾತನಾಡಲಿಲ್ಲ. ಈಗ 400 ಸ್ಥಾನ ಪಡೆಯುವುದಾಗಿ ಘೋಷಿಸಿದ್ದ ಮೋದಿ ದೇಶದ ಮೊದಲನೇ ಹಂತದ ಚುನಾವಣೆ ನಡೆದ ನಂತರ ಅಬ್ ಕೀ ಬಾರ್ ಚಾರ್ ಸೌ ಪಾರ್ ಅಭಿಯಾನದ ಬಗ್ಗೆ ಮಾತನಾಡುತ್ತಿಲ್ಲ ಎಂದು ಅಚ್ಚರಿ ವ್ಯಕ್ತಪಡಿಸಿದರು.
ಈಗ ಮುಸ್ಲಿಮ್ ಸಮುದಾಯದ ಬಗ್ಗೆ ಮಾತನಾಡುತ್ತಿದ್ದಾರೆ. ಚೈನಾ ದೇಶದ ಭೂಮಿಯ ಅತಿಕ್ರಮಣದ ಬಗ್ಗೆ ಬಿಜೆಪಿ ಮೌನವಾಗಿರುವುದೇಕೆ ಎಂದು ಪ್ರಶ್ನಿಸಿದರು. ಸಬ್ ಕ ಸಾತ್ ಸಬ್ ಕ ವಿಶ್ವಾಸ್ ಅಭಿಯಾನ ಈಗ ಸಬ್ ಕಾ ದೋಖಾ ಎಂಬುದು ಸಾಭೀತಾಗುತ್ತಿದೆ ಎಂದರು.
ಕಳೆದ ವಿಧಾನ ಸಭೆಯಲ್ಲಿ ಕಾಂಗ್ರೆಸ್ ಗೆ 43% ಮತಬಿದ್ದಿದೆ. ಅಂದರೆ ಈ ಬಾರಿಯ 18 ಲೊಕಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಸ್ಪಷ್ಟ ಗೆಲುವು ಸಾಧಿಸಲಿದೆ ಎಂದರು. 1 ಕೋಟಿ 43 ಸಾವಿರ ಕುಟುಂಬಕ್ಕೆ ಗ್ಯಾರಂಟಿ ನೀಡಲಾಗುತ್ತಿದೆ. ಅಂದರೆ 5 ಕೋಟಿ ಕುಟುಂಬಕ್ಕೆ ಅನುಕೂಲವಾಗುತ್ತಿದೆ.ಈ ಬಾರಿಯು ನಮ್ಮ ಪ್ರಣಾಳಿಕೆಯಲ್ಲಿ ನಾವು ಅಧಿಕಾರಕ್ಕೆ ಬಂದರೆ ಬಡ ಹೆಣ್ಣುಮಕ್ಕಳಿಗೆ ವರ್ಷಕ್ಕೆ ಒಂದು ಲಕ್ಷ ರೂಪಾಯಿಯನ್ನು ನೀಡಲಿದ್ದೇವೆ ಹಾಗಾಗಿ ಈ ಬಾರಿ ನಮ್ಮ ಕಾಂಗ್ರೆಸ್ ಪಕ್ಷಕ್ಕೆ ಅನುಕೂಲಕರ ವಾತಾವರಣವಿದೆ ಎಂದರು.