ಕುಮಾರಸ್ವಾಮಿ ಆರೋಪ ಮಾಡುವುದಕ್ಕೆ ಸ್ವತಂತ್ರರು: ಶಿಕ್ಷಣ ಸಚಿವ ಮಧು ಬಂಗಾರಪ್ಪ

ಕುಮಾರಸ್ವಾಮಿ ಆರೋಪ ಮಾಡುವುದಕ್ಕೆ ಸ್ವತಂತ್ರರು

ವರ್ಗಾವಣೆ ದಂಧೆ ಆರೋಪ ವಿಚಾರಕ್ಕೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿರುಗೇಟು ನೀಡಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಅಂಥ ಹೊಲಸು ಕೆಲಸ ನಾನಂತೂ ಮಾಡಲ್ಲ, ಮಾಡಿಲ್ಲ. ಜೆಡಿಎಸ್​​ನವರಿಗೆ ಉತ್ತರ ಕೊಡೋ ಅವಶ್ಯಕತೆ ಇಲ್ಲ ಎಂದರು. ಅಂಥ ಅಭ್ಯಾಸ ನನಗಂತೂ ಇಲ್ಲ. ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಆರೋಪ, ಅಭಿಪ್ರಾಯ ಹೇಳುವುದಕ್ಕೆ ಸ್ವತಂತ್ರರು.. ಕಾನೂನು ಇದ್ದೇ ಇದೆ, ಅದಕ್ಕೆ ಸಂಬಂಧಿಸಿದಂತೆ ಕಾನೂನು ತನ್ನ ನಿರ್ಧಾರ ಕೈಗೊಳ್ಳುತ್ತದೆ ಎಂದರು. ಪೆನ್​​ಡ್ರೈವ್ ಆದ್ರೂ ಇರಲಿ, ಸಿಡಿ ಆದ್ರೂ ಇರಲಿ, ನಿಮ್ಮ ಟಿವಿಯಲ್ಲಾದ್ರೂ ಬರಲಿ, ಏನೇ ಇದ್ರೂ ಕಾನೂನು ಅಡಿಯಲ್ಲಿ ಎಲ್ಲವೂ ಆಗಬೇಕು ಎಂದು ಕಿಡಿಕಾರಿದ್ರು

ಸುಧೀರ್ ವಿಧಾತ, ಶಿವಮೊಗ್ಗ

Leave a Reply

Your email address will not be published. Required fields are marked *

Optimized by Optimole
error: Content is protected !!