ಸಾವಿಗೆ ಕಾರಣ ನಿಗಢವಾಗಿದೆ.ಕೆಲಸ ಮಾಡುವ ಸ್ಥಳದಲ್ಲಿ ತೊಂದರೆ ಆಗಿರಬಹುದಾ.? ಯಾರನ್ನಾದರು ಪ್ರೀತಿಸಿ ಮೊಸಹೊದಳ ಯುವತಿ ಅಥವಾ ಇನ್ಯಾವುದೊ ವಿಷಯ ಈಕೆಯನ್ನು ಸಾವಿನಂಚಿಗೆ ತಂದು ನಿಲ್ಲಿಸಿದ ಬಹುದಾ.? ಒಟ್ಟಿನಲ್ಲಿ ಮುದ್ದದ ಯುವತಿಯೊಬ್ಬಳು ಸಾಕಷ್ಟು ಕನಸುಗಳ ಜೋತೆಗೆ ಬದುಕುವ ವಯಸ್ಸಿನಲಿ ನೇಣಿನ ಕುಣಿಕೆಗೆ ಕೊರಳೊಡ್ಡಲು ಕಾರಣಗಳೇನು… ಇನ್ನಷ್ಟೆ ಪೋಲಿಸರ ತನಿಖೆಯಿಂದ ಹೊರಬರಬೇಕಿದೆ…..
ಆತ್ಮಹತ್ಯೆಗೆ ಶರಣಾದ ಪ್ರೀತಿಕಾ ಪೂಜಾರಿ..!
ಘಟನೆ ವಿವರ
ಉಳ್ಳಾಲದ ಪಜೀರು ಗ್ರಾಮದ ಅಡಪ್ಪ ರೆಸಿಡೆನ್ಸಿಯಲ್ಲಿ ಈ ಘಟನೆ ನಡೆದಿದೆ.
ಮೃತಳನ್ನು ಪ್ರೀತಿಕಾ ಪೂಜಾರಿ(21) ಎಂದು ಗುರುತಿಸಲಾಗಿದೆ. ಪ್ರೀತಿಕಾ ತನ್ನ ತಾಯಿ ಮತ್ತು ಅಣ್ಣನೊಂದಿಗೆ ಪಜೀರು ಗ್ರಾಮದ ಅಡಪ್ಪ ರೆಸಿಡೆನ್ಸಿಯ ಬಾಡಿಗೆ ಮನೆಯಲ್ಲಿ ವಾಸವಿದ್ದು ಮಂಗಳೂರಿನ ಕಾಲ್ ಸೆಂಟರ್ ಒಂದರಲ್ಲಿ ಉದ್ಯೋಗ ಮಾಡುತ್ತಿದ್ದರು.
ಇಂದು ಮಧ್ಯಾಹ್ನದ ವೇಳೆಗೆ ಪ್ರೀತಿಕಾ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಸುದ್ದಿ ಬೆಳಕಿಗೆ ಬಂದಿದೆ. ಕೆಲಸದಿಂದ ಮರಳಿದ್ದ ತಕ್ಷಣವೇ ಪ್ರೀತಿಕಾ ನೇಣಿಗೆ ಕೊರಳೊಡ್ಡಿದ್ದಾರೆ ಎಂದು ತಿಳಿದು ಬಂದಿದೆ. ಕೊಣಾಜೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ. ಆತ್ಮಹತ್ಯೆಗೆ ಸ್ಪಷ್ಟ ಕಾರಣ ತಿಳಿದು ಬಂದಿಲ್ಲ. ಕಾರಣವಿಲ್ಲದೆ ನೆಣಿನ ಕುಣಿಕೆಗೆ ಕೊರಳೊಡ್ಡಲು ಸಾಧ್ಯವಿಲ್ಲ ಎನ್ನುವುದು ಸ್ಥಳೀಯರ ವಾದ
ಸುಧೀರ್ ವಿಧಾತ, ಶಿವಮೊಗ್ಗ