ಕ್ರಿಕೆಟ್ ಬೆಟ್ಟಿಂಗ್ ಸುಳಿಗೆ ಸಿಲುಕಿದ ಚಟಗಾರನೊಬ್ಬ ಪತ್ನಿ ಹಾಗೂ ಇಬ್ಬರು ಮಕ್ಕಳಿಗೆ ವಿಷವುಣಿಸಿ ಕೊಲೆಗೈದಾ.!
ASHWASURYA/SHIVAMOGGA
✍️ ಸುಧೀರ್ ವಿಧಾತ
.ಅಶ್ವಸೂರ್ಯ/ನಾಗಮಂಗಲ : ಕ್ರಿಕೆಟ್ ಬೆಟ್ಟಿಂಗ್ ನ ಹಠಕ್ಕೆ ಬಿದ್ದ ಚಟಗಾರರಿಂದ ಅದೆಷ್ಟೋ ಸಂಸಾರಗಳು ಬಿದಿಗೆ ಬಿದ್ದರೆ ಇನ್ನೂ ಕೆಲವು ಸಂಸಾರದ ಸದಸ್ಯರು ಆತ್ಮಹತ್ಯೆಗೆ ಶರಣಾಗಿದ್ದಾರೆ.! ಇನ್ನೂ ಕೆಲವು ನಿಚರು ಬೆಟ್ಟಿಂಗ್ ಚಟಕ್ಕೆ ಬಿದ್ದು ಮಾಡಬಾರದಷ್ಟು ಸಾಲ ಮಾಡಿ ತೀರಿಸಲಾಗದ ಸ್ಥಿತಿಗೆ ತಲುಪಿ ತಮ್ಮ ಸಂಸಾರದ ಸದಸ್ಯರನ್ನೆ ಯಾವುದೊ ಒಂದು ರೀತಿಯಲ್ಲಿ ಹತ್ಯೆಗೈದು ತಾವು ಆತ್ಮಹತ್ಯೆಗೆ ಶರಣಾಗಿದ್ದಾರೆ.!
ಇದೆ ಹಾದಿಯಲ್ಲಿ ಸಾಗಿದ ನಾಗಮಂಗಲದ ನೀಚನೊಬ್ಬ ಕ್ರಿಕೆಟ್ ಬೆಟ್ಟಿಂಗ್ ಚಟದ ಜೋತೆಗೆ ಪರಸ್ತ್ರೀ ಜೊತೆಗಿನ ಅಕ್ರಮ ಸಂಬಂಧದ ಮೋಜಿಗೆ ಬಿದ್ದು ಸಾಲದ ಸುಳಿಗೆ ಸಿಲುಕಿದ್ದ.! ಕೊನೆಗೆ ಬೆಟ್ಟಿಂಗ್ ಚಟಕ್ಕೆ ಬಿದ್ದು ತೀರಿಸಲಾದಷ್ಟು ಸಾಲವು ಅಯ್ತು ಕೈಯಲ್ಲಿದ್ದ ಹಣ ಖಾಲಿಯಾದ ಮೇಲೆ ಇಟ್ಟುಕೊಂಡವಳು ದೂರ ತಳ್ಳಿರ ಬಹುದು.? ಅ ನಂತರದಲ್ಲಿ ದಿಕ್ಕೂ ಕಾಣದಾದ ಪತಿ ಮಹಾಶಯನೊಬ್ಬ ಹೆಂಡತಿ ಮತ್ತು ಇಬ್ಬರು ಮಕ್ಕಳಿಗೆ ವಿಷವುಣಿಸಿ ಕೊಲೆಗೈದು ತಾನು ಸಹ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಾಗಮಂಗಲದ ನಗರದಲ್ಲಿ ನಡೆದಿದೆ.
ನಗರದ ಎಂಟನೇ ವಾರ್ಡಿನ ಪೇಟೆ ಹೊಲ ರಸ್ತೆಯ ನಿವಾಸಿ ಕ್ರಿಕೆಟ್ ಬೆಟ್ಟಿಂಗ್ ಚಟಗಾರ ನರಸಿಂಹ ಪತ್ನಿ ಮತ್ತು ಮಕ್ಕಳನ್ನು ಹತ್ಯೆಗೈದಿದ್ದಲ್ಲದೆ ತಾನು ಸಹ ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎಂದು ತಿಳಿದು ಬಂದಿದೆ. ಸಾಯ ಬೇಕಾದವನು ಬದುಕಿದ್ದಾನೆ. ಪಾಪ ಬದುಕಬೇಕಾಗಿದ್ದ
ಈತನ ಪತ್ನಿ ಕೀರ್ತನ (23) ಮಕ್ಕಳಾದ ಜಯಸಿಂಹ (4) ಮತ್ತು ಒಂದೂವರೆ ವರ್ಷದ ರಿಷಿಕಾ ಹತ್ಯೆಯಾಗಿ ಹೋಗಿದ್ದಾರೆ.! ಸುಡುಗಾಡು ಸೇರಬೇಕಾದ ನೀಚ ನರಸಿಂಹನನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.
ನಾಗಮಂಗಲ ತಾಲೂಕಿನ ತೆಂಗಿನಭಾಗ ಗ್ರಾಮದ ಸ್ವಾಮಿ ಎನ್ನುವವರ ಪುತ್ರ ನರಸಿಂಹ ಕಟಿಂಗ್ ಶಾಪ್ ಅಂಗಡಿಯೊಂದನ್ನು ಇಟ್ಟುಕೊಂಡಿದ್ದ ಹೇಗೋ ಜೀವನ ಚೆನ್ನಾಗಿಯೇ ನಡೆಯುತ್ತಿತ್ತು. ಮಂಡ್ಯ ತಾಲೂಕಿನ ಬಸರಾಳು ಸಮೀಪದ ಕಂಬದಹಳ್ಳಿ ಗ್ರಾಮದ ಕೀರ್ತನ ಎನ್ನುವ ಯುವತಿಯನ್ನು ಮದುವೆಯಾಗಿದ್ದ. ಸುಖಸಂಸಾರ ಸಾಗಿಸುತ್ತಿದ್ದ ದಂಪತಿಗೆ ಮುದ್ದಾದ ಎರಡು ಮಕ್ಕಳು ಇದ್ದವು.ಎಲ್ಲವೂ ಸರಿ ಇದೆ ಎನ್ನುವಾಗಲೆ ಪರಸ್ತ್ರೀಯೊಬ್ಬಳ ಜೊತೆಗೆ ಅಕ್ರಮ ಸಂಬಂಧದ ಸುಳಿಗೆ ಸಿಲುಕಿ ಆಕೆಯನ್ನು ಇಟ್ಟುಕೊಂಡಿದ್ದ ಈತ ಅಡ್ಡದಾರಿಯಲ್ಲಿ ಹಣಮಾಡುವ ಚಟಕ್ಕೆ ಬಿದ್ದು ಕ್ರಿಕೆಟ್ ಬೆಟ್ಟಿಂಗಿನ ಬೆನ್ನಿಗೆ ಬಿದ್ದು ಲಕ್ಷಾಂತರ ರೂಪಾಯಿ ಸಾಲ ಮಾಡಿಕೊಂಡಿದ್ದ ಎನ್ನಲಾಗಿದೆ.!?
ಈ ಹಿನ್ನೆಲೆಯಲ್ಲಿ ನಿತ್ಯ ತವರಿಗೆ ಹೋಗಿ ಪತ್ನಿಗೆ ಹಣ ತರುವಂತೆ ಪೀಡಿಸುತ್ತಿದ್ದನಂತೆ.ಪಾಪ ಪತ್ನಿಯ ಮನೆಯವರು ನ್ಯಾಯ ಪಂಚಾಯಿತಿಮಾಡಿ ಹಣವನ್ನು ನೀಡಿದ್ದರಂತೆ.! ಆದರೂ ಸಹ ಈತ ಬದಲಾಗಿರಲಿಲ್ಲ ಮತ್ತೆ ಐಪಿಎಲ್ ಪಂದ್ಯಾವಳಿ ಆರಂಭ ಗೊಂಡ ನಂತರ ಬೆಟ್ಟಿಂಗ್ ಬೆನ್ನಿಗೆ ಬಿದ್ದು ಹಣಮಾಡಲು ಹೋಗಿ ಲಕ್ಷಾಂತರ ರೂಪಾಯಿ ಹಣ ಕಳೆದುಕೊಂಡಿದ್ದನಂತೆ.!
ಕೇಲವರ ಪ್ರಕಾರ ಸುಮಾರು ಎಂಟು ಲಕ್ಷ ಸಾಲದ ಹೊರೆ ಈತನ ಮೇಲಿತ್ತು, ನಿತ್ಯ ಸಾಲಕೊಟ್ಟವರ ಕಿರುಕುಳವು ಮಿತಿ ಮೀರಿತ್ತು. ಈತ ಸಾಲ ತೀರಿಸಲು ಯಾವುದೇ ದಾರಿ ಕಾಣದೆ ನಿತ್ಯ ಹೆಂಡತಿಯ ಜೊತೆಗೆ ಜಗಳ ಮಾಡುತ್ತಿದ್ದನಂತೆ. ಏಪ್ರಿಲ್ 18ರ
ಗುರುವಾರ ಬೆಳಿಗ್ಗೆ 11ಗಂಟೆಗೆ ಅಂಗಡಿಯಿಂದ ಮನೆಗೆ ಬಂದವನು ಪತ್ನಿ ಕೀರ್ತನ ಮತ್ತು ಇಬ್ಬರು ಮಕ್ಕಳಿಗೆ ವಿಷವುಣಿಸಿದ್ದಾನಂತೆ.!? ನಂತರ ಅವರುಗಳು ಸಾವನ್ನಪ್ಪಿರುವುದನ್ನು ಖಚಿತ ಮಾಡಿಕೊಂಡು ತಾನು ಸಹ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ.ಮದ್ಯಾಹ್ನದ ವೇಳೆಗೆ ಅಕ್ಕಪಕ್ಕದ ಮನೆಯವರು ಹೋಗಿ ನೋಡಿದಾಗ ಪ್ರಕರಣ ನೆಡೆದಿರುವುದು ಬೆಳಕಿಗೆ ಬಂದಿದೆ, ತಕ್ಷಣವೇ ನರಸಿಂಹನನ್ನು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.
ತವರು ಮನೆಯಿಂದ ಹಣ ತರುವಂತೆ ನಿತ್ಯ ಗಲಾಟೆ ಮಾಡುತ್ತಿದ್ದ ನರಸಿಂಹ ಬಲವಂತವಾಗಿ ಹೆಂಡತಿ ಮಕ್ಕಳಿಗೆ ವಿಷ ವುಣಿಸಿದ್ದಾನೆ, ಅಕ್ರಮ ಸಂಬಂಧ ಹಿನ್ನೆಲೆಯಲ್ಲಿ ಕುಟುಂಬವನ್ನು ಕೊಲೆಗೈದಿದ್ದಾನೆ ಎಂದು ಹೇಳಲಾಗುತ್ತಿದ್ದು ಪ್ರಕರಣದ ಸುತ್ತ ಹಲವು ಅನುಮಾನ ಸೃಷ್ಟಿಯಾಗಿದೆ.
ಕೀರ್ತನ ತಂದೆ ಶಿವನಂಜು ಮಾತನಾಡಿ ಪದೇ ಪದೇ ಹಣತರುವಂತೆ ನನ್ನ ಮಗಳಿಗೆ ಕಿರಿಕುಳ ನೀಡುತ್ತಿದ್ದ. 8 ಲಕ್ಷಕ್ಕೂ ಹೆಚ್ಚು ಸಾಲ ಮಾಡಿಕೊಂಡು ನ್ಯಾಯ ಪಂಚಾಯತಿ ಎಲ್ಲ ನಡೆದಿದ್ದವು. ಆದರೂ ಕೂಡ ನಾನು ಅವನಿಗೆ ಹಣವನ್ನು ನೀಡಿದ್ದೆ. ನೀಚ ಅಳಿಯ ನರಸಿಂಹನ ಆಕ್ರಮ ಸಂಬಂಧದ ಹಿನ್ನೆಲೆಯಲ್ಲಿ ನನ್ನ ಮಗಳು ಹತ್ಯೆಯಾಗಿದ್ದಾಳೆ ಎಂದು ತಿಳಿಸಿದರು.
ನಾಗಮಂಗಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ.