ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಲ್ಲವರನ್ನು ಓಲೈಸಿಕೊಳ್ಳಲು ಡ್ಯಾಮೇಜ್ ಕಂಟ್ರೋಲ್ ಮಾಡಲು ಹೋಗಿ ಬಿಜೆಪಿ ದೊಡ್ಡ ಯಡವಟ್ಟನ್ನೆ ಮಾಡಿಕೊಂಡಿದೆ..!
ASHWASURYA/SHIVAMOGGA
✍️ ಸುಧೀರ್ ವಿಧಾತ
ಅಶ್ವಸೂರ್ಯ/ಮಂಗಳೂರು : 33 ವರ್ಷದ ಬಳಿಕ ಕರಾವಳಿ ಕ್ಷೇತ್ರವನ್ನು ಉಳಿಸಿಕೊಳ್ಳಲು ಬಿಜೆಪಿ ತನ್ನೆಲ್ಲಾ ಪ್ರಯತ್ನಕ್ಕೆ ಮುಂದಾಗಿದೆ. ಎದುರಾಳಿ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಪೂಜಾರಿ ಪ್ರಚಾರದ ವೈಖರಿಗೆ ಹಾಗೂ ಪಡೆದುಕೊಳ್ಳುತ್ತಿರುವ ಜನಪ್ರೀಯತೆ ಒಂದು ಕಾರಣವಾದರೆ ಬಿಜೆಪಿಯಲ್ಲಿದ್ದ ಬಿಲ್ಲವ ಸಮೂದಾಯದ ಬಹುದೊಡ್ಡ ಮತದಾರರು ಪದ್ಮರಾಜ್ ಕಡೆಗೆ ವಾಲಿರುವುದು ಮತ್ತೊಂದು ಪ್ರಬಲ ಕಾರಣವಾಗಿದೆ. ಈ ಎರಡು ಕಾರಣಕ್ಕೆ ಪ್ರಧಾನಿ ನರೇಂದ್ರ ಮೋದಿಯವರನ್ನೇ ಕರೆಯಿಸಿ ಅವರ ಮೂಲಕ ನಾಟಕೀಯ ಎಂಬಂತೆ ನಾರಾಯಣಗುರುಗಳ ಮೂರ್ತಿಗೆ ಮಾಲಾರ್ಪಣೆ ಮಾಡಿ ನಂತರ ರೋಡ್ ಶೋ ಮಾಡಿರುವುದು ಬಿಜೆಪಿಯವರ ಹೈ ಡ್ರಾಮಾ ಎನ್ನುವುದು ಬಿಲ್ಲವ ಸಮುದಾಯಕ್ಕೆ ಅರ್ಥವಾಗಿದೆ.
ದಕ್ಷಿಣ ಕನ್ನಡ ಕ್ಷೇತ್ರದ ಲೋಕಸಭಾ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಪೂಜಾರಿ
ಖಡಕ್ ಎಚ್ಚರಿಕೆ ನೀಡಿದ ನಾರಾಯಣಗುರು ವಿಚಾರ ವೇದಿಕೆ..!
ಕರಾವಳಿಯ ಪ್ರಬಲ ಸಮುದಾವಾದ ಬಿಲ್ಲವರ ಮತಗಳನ್ನು ತನ್ನತ್ತ ಸೇಳೆದುಕೊಳ್ಳಲು ಬಿಜೆಪಿಗೆ ಇದ್ದದ್ದು ಒಂದೇ ಒಂದು ಮಾರ್ಗವೆಂದರೆ ಅದು ನಾರಾಯಣಗುರುಗಳು.! ಆ ಒಂದು ಕಾರಣವನ್ನೆ ಅಸ್ತ್ರಮಾಡಿಕೊಂಡು ಕಾರಣಾಂತರದಿಂದ ಸಮಾವೇಶವನ್ನು ರದ್ಧು ಮಾಡಿ ರೋಡ್ ಶೋ ನಡೆಸಲಾಗಿತ್ತು ಎಂದು ಕರಾವಳಿಯ ಜನ ಮಾತನಾಡಿಕೊಳ್ಳುತ್ತಿದ್ದಾರೆ.! ಅಂದು ಪ್ರಧಾನಿ ಮೋದಿ ಅವರಿಂದ ನಾರಾಯಣ ಗುರುಗಳಿಗೆ ಮಾಲಾರ್ಪಣೆ ಮಾಡಿದ ಬಳಿಕ ರೋಡ್ ಶೋ ಮಾಡುವ ಬಗ್ಗೆ ಬಿಜೆಪಿ ನಾಯಕರು ತೀರ್ಮಾನಿಸಿದ್ದಾರೆ. ಆದರೆ ಈ ವಿಚಾರ ತಿಳಿಯುತ್ತಿದ್ದಂತೆ ನಾರಾಯಣಗುರು ವಿಚಾರ ವೇದಿಕೆಯ ಸತ್ಯಜಿತ್ ಸುರತ್ಕಲ್ ಬಿಜೆಪಿ ನಾಯಕರಿಗೆ ಹಲವು ಸವಾಲು ಎಸೆದಿದ್ದರು.
ನೇರ ನುಡಿಯ ದಿಟ್ಟ ನಾಯಕ ಸತ್ಯಜಿತ್ ಸುರತ್ಕಲ್
ಗಣರಾಜ್ಯೋತ್ಸವದಲ್ಲಿ ನಾರಾಯಣಗುರುಗಳ ಟ್ಯಾಬ್ಲೋ ನಿರಾಕರಣೆ, ರಾಜ್ಯದಲ್ಲಿ ಪಠ್ಯದಿಂದ ನಾರಾಯಣಗುರುಗಳ ಪಾಠ ತೆಗೆದು ಹಾಕಿರುವುದು ಹಾಗೂ ಕೋಟಿ ಚೆನ್ನಯ್ಯರ ಬಗ್ಗೆ ಅವಹೇಳನಕಾರಿ ಹೇಳಿಕೆಗೆ ಮೊದಲು ಉತ್ತರ ನೀಡಿ ಎಂದು ಆಗ್ರಹಿಸಿದ್ದರು. ಇಷ್ಟೆಲ್ಲಾ ಮಾಡಿ ಬಿಲ್ಲವರನ್ನು ಕಡೆಗಣಿಸಿ ಈಗ ನಾರಾಯಣಗುರುಗಳಿಗೆ ಮಾಲಾರ್ಪಣೆ ಮಾಡಿಸುವ ಬಿಜೆಪಿಯ ನಿರ್ಧಾರವನ್ನು ಕಟುವಾಗಿ ಟೀಕಿಸಿದ್ದರು.
ಬಿಲ್ಲವರನ್ನು ಕಡೆಗಣಿಸಿದ ಬಿಜೆಪಿ ನಾಯಕರು.!
ಪ್ರಧಾನಿ ಮೋದಿಯವರು ನಾರಾಯಣಗುರುಗಳಿಗೆ ಮಾಲಾರ್ಪಣೆ ಮಾಡಿದರೆ ಇದನ್ನು ಬಿಲ್ಲವ ಸಮಾಜ ಒಪ್ಪಿಕೊಳ್ಳುತ್ತದೆ ನಂತರ ಎಲ್ಲವೂ ಸರಿಯಾಗಲಿದೆ ಎಂದು ಅಂದುಕೊಂಡಿದ್ದರು ಬಿಜೆಪಿ ಬಳಗ, ಆದರೆ ಬಹುತೇಕ ಬಿಲ್ಲವರು ಮೋದಿ ಕಾರ್ಯಕ್ರಮದ ವಿಚಾರವಾಗಿ ಸೋಶಿಯಲ್ ಮೀಡಿಯಾದಲ್ಲಿ ಅಸಮಾಧಾನ ಹೊರ ಹಾಕಿದ್ದಾರು. ಪ್ರಧಾನಿ ಮೋದಿ ಗುರುಗಳಿಗೆ ಹಾರ ಹಾಕುವಾಗ ಮಾಡಿದ ಆ ಒಂದು ತಪ್ಪು ಬಿಲ್ಲವ ಸಮುದಾಯದ ಜನರ ಮನಸಿಗೆ ನೋವುಂಟು ಮಾಡಿದೆ ಎಂಬ ಚರ್ಚೆ ನಡೆಯುತ್ತಿದೆ. ಅಷ್ಟೇ ಅಲ್ಲದೆ ನಾರಾಯಣ ಗುರು ವೃತ್ತ ನಿರ್ಮಾಣದ ರೂವಾರಿಯಾಗಿದ್ದ ಬಿರುವೆರ ಕುಡ್ಲದ ಮುಖಂಡ ಉದಯ ಪೂಜಾರಿಯನ್ನು ಕಡೆಗಣಿಸಿದ್ದೂ ಬಿಲ್ಲವ ಯುವಕರ ಬಳಗದಲ್ಲಿ ಅಸಮಾಧಾನ ಮೂಡಿಸಿದೆ. ಈ ವಿಚಾರವಾಗಿ ಬಿಜೆಪಿ ಜಿಲ್ಲಾಧ್ಯಕ್ಷರನ್ನು ತರಾಟೆಗೆ ತೆಗೆದುಕೊಂಡ ಆಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಕೂಡ ಆಗಿದೆಯಂತೆ.!
ಹಾರ ಹಾಕುವ ಭರದಲ್ಲಿ ಗುರು ಪೀಠದ ಮೇಲೆ ಕಾಲಿರಿಸಿದ ಪ್ರಧಾನಿ ಮೋದಿ.!
ನಾರಾಯಣಗುರುಗಳ ಮೂರ್ತಿಗೆ ಮಾಲಾರ್ಪಣೆ ಮಾಡುವಾಗ ಪ್ರಧಾನಿ ಮೋದಿ ಅವರು ಗುರುಪೀಠದ ಮೇಲೆ ಕಾಲಿರಿಸಿದ್ದರು. ಇದು ಬಿಲ್ಲವರ ಸ್ವಾಭಿಮಾನದ ಮೇಲೆ ಸ್ಥಳಿಯ ಬಿಜೆಪಿಯ ನಾಯಕರು ಇಟ್ಟ ಕಾಲು ಎಂದು ವ್ಯಾಪಕವಾಗಿ ಟೀಕೆ ವ್ಯಕ್ತವಾಗುತ್ತಿದೆ. ಬಿರುವೆರ ಕುಡ್ಲದ ಉದಯ ಪೂಜಾರಿಯನ್ನು ಕಡೆಗಣಿಸಿದ್ದಲ್ಲದೆ, ಮೋದಿಯವರಿಗೆ ಸರಿಯಾದ ಮಾರ್ಗದರ್ಶನ ನೀಡದೆ ಈ ಪ್ರಮಾದ ಆಗಿರುವುದು ದುರಂತವೆ ಹೌದು.! ಪ್ರಧಾನಿ ಮೋದಿಯ ಮೇಲೆ ಇರುವ ಅಭಿಮಾನ ಬಿಟ್ಟು ಕೊಡದ ಬಿಲ್ಲವ ಯುವಕರು ಇದಕ್ಕೆ ಸ್ಥಳಿಯ ಬಿಜೆಪಿ ನಾಯಕರೇ ಕಾರಣ ಎಂದು ಆರೋಪಿಸುತ್ತಿದ್ದಾರೆ. ಪ್ರಧಾನಿ ಮೋದಿ ಗುರುಪೀಠದ ಮೇಲೆ ಕಾಲು ಇರಿಸಿದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಇದನ್ನು ಕಾಂಗ್ರೆಸ್ ಪಕ್ಷ ಕೂಡಾ ಚುನಾವಣೆಯ ಅಸ್ತ್ರವಾಗಿ ಬಳಸಿಕೊಂಡು ಮತ ಬೇಟೆಗೆ ನಿಂತಿದೆ.
ಬಿಲ್ಲವರನ್ನು ಓಲೈಸಿಕೊಳ್ಳಲು ಡ್ಯಾಮೇಜ್ ಕಂಟ್ರೋಲ್ ಮಾಡಲು ಹೋಗಿ ಬಿಜೆಪಿ ದೊಡ್ಡ ಯಡವಟ್ಟನ್ನೆ ಮಾಡಿಕೊಂಡಿದೆ..!
ಬಿಜೆಪಿಯ ಅಭ್ಯರ್ಥಿ ಬ್ರಿಜೇಶ್ ಚೌಟಾ
ಪದ್ಮರಾಜ್ ಪೂಜಾರಿ ಅವರಿಗೆ ಟಿಕೆಟ್ ಸಿಕ್ಕ ಸಮಯದಲ್ಲಿ ಭಾಷಣ ಮಾಡಿದ್ದ ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟ ಪದ್ಮರಾಜ್ ಪೂಜಾರಿ ದೇಶ ದ್ರೋಹಿ ಎಂದು ಕರೆದಿದ್ದರು . ಆ ಒಂದು ಹೇಳಿಕೆಯ ಡ್ಯಾಮೇಜ್ ಕಂಟ್ರೋಲ್ ಮಾಡಲು ಬಿಜೆಪಿ ನಾಯಕರು ಹಲವಾರು ಸರ್ಕಸ್ ಮಾಡಿದ್ದಾರೆ.ಮಾಜಿ ಕೇಂದ್ರ ಸಚಿವ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಜನಾರ್ಧನ ಪೂಜಾರಿ ಅವರ ಕಾಲಿಗೆ ಬಿದ್ದ ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟ ಒಂದು ರೀತಿಯಲ್ಲಿ ಬಿಲ್ಲವರ ಮನ ಒಲಿಸುವ ಪ್ರಯತ್ನ ಕೂಡಾ ಮಾಡಿದ್ದರು. ಆದರೆ ಅದಾಗಲೇ ಬಿಲ್ಲವ ಯುವಕರು ಅದೇನೆ ಆಗಲಿ ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಪೂಜಾರಿ ಅವರನ್ನು ಗೆಲ್ಲಿಸುವ ಪಣತೊಟ್ಟಿದ್ದಾರೆ. ಪಕ್ಕಾ ಬಿಜೆಪಿ ಮತಗಳು ಈ ಬಾರಿಯ ಚುನಾವಣೆಯಲ್ಲಿ ಕೇವಲ ಜಾತಿ ಹೆಸರಿನಲ್ಲಿ ಕಾಂಗ್ರೆಸ್ ಪಾಲಾಗಲಿದೆ ಎನ್ನುವ ಆತಂಕದಲ್ಲಿರುವ ಬಿಜೆಪಿ ಬಳಗ ಬಿಲ್ಲವರ ಓಲೈಕೆಗೆ ಪ್ರಧಾನಿ ಮೋದಿಯವರನ್ನು ಕರೆಯಿಸಿಕೊಂಡಿದ್ದರು.! ಆದರೆ ಈಗ ಪ್ರಧಾನಿ ಮೋದಿ ಅವರಿಂದಲೇ ಆದ ಪ್ರಮಾದ ಹಾಗೂ ಸ್ಥಳೀಯ ನಾಯಕರಿಂದ ಬಿರುವೆರ ಕುಡ್ಲದ ನಾಯಕನ ಕಡೆಗಣನೆ ಮಾಡಿರುವುದೆ ಈ ಬಾರಿ ಚುನಾವಣೆಯಲ್ಲಿ ಬಿಜೆಪಿಗೆ ಮುಳುವಾಗುವ ಎಲ್ಲಾ ಲಕ್ಷಣ ಎದ್ದು ಕಾಣಿಸುತ್ತಿದೆ. ಸಾಮಾಜಿಕ ಜಾಲ ತಾಣದಲ್ಲಿ ಪ್ರಧಾನಿ ಬಂದು ಹೋದಾಗಿನಿಂದ ಈ ಚರ್ಚೆ ಜೋರಾಗಿ ನಡೆಯುತ್ತಿದ್ದು. 33 ವರ್ಷದ ಬಳಿಕ ಕರಾವಳಿಯಲ್ಲಿ ಕಾಂಗ್ರೆಸ್ ಪ್ರಬಲವಾಗಿ ಸದ್ದು ಮಾಡುತ್ತಿದೆ. ಅಭ್ಯರ್ಥಿ ಪದ್ಮರಾಜ್ ಪೂಜಾರಿ ಕೂಡ ಅಷ್ಟೇ ಜನಪ್ರಿಯತೆಯನ್ನು ಹೊಂದಿದವರಾಗಿದ್ದಾರೆ.