ಮೃತ ವ್ಯಕ್ತಿ ದಿನಕರ್ ಶೆಟ್ಟಿ
ಕೋಟ , ಜು.5: ಕಳೆದ ರಾತ್ರಿಯಿಂದ ಕರಾವಳಿ ಕುಂದಾಪುರ ತಾಲೂಕಿನಾದ್ಯಂತ ಸುರಿಯುತ್ತಿರುವ ಭಾರಿ ಮಳೆಗೆ ಸ್ಥಳೀಯ ಜನರ ಬದುಕು ಅಸ್ಥವ್ಯಸ್ತವಾಗಿದೆ. ಎಲ್ಲಿ ದೃಷ್ಟಿ ಹಾಹಿಸಿದರು ಬರಿನೀರೆ. ಮಳೆಯ ಆರ್ಭಟದಿಂದಾಗಿ ಸ್ಕೂಟರೊಂದು ರಸ್ತೆ ಬದಿಯ ಕೆರೆಗೆ ಬಿದ್ದ ಪರಿಣಾಮ ಸವಾರ ನೀರಿನಲ್ಲಿ ಮುಳುಗಿ ಸ್ಥಳದಲ್ಲೇ ಮೃತಪಟ್ಟ ಘಟನೆ ತೆಕ್ಕಟ್ಟೆ ಸಮೀಪದ ಮಲ್ಯಾಡಿ ಎಂಬಲ್ಲಿ ತಡ ರಾತ್ರಿ ಈ ಘಟನೆ ನಡೆದಿದೆ,
ಮೃತರನ್ನು ಸ್ಥಳಿಯ ನಿವಾಸಿ ದಿನಕರ ಶೆಟ್ಟಿ (53) ಎಂದು ಗುರುತಿಸಲಾಗಿದೆ.
ಮಣೂರಿನಲ್ಲಿರುವ ಹಳ್ಳಿಮನೆ ದೊಣ್ಣೆ ಬಿರಿಯಾನಿ ಹೋಟಲಿನಲ್ಲಿ ಕ್ಯಾಶ್ಯರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ದಿನಕರ್ ಅವರು ಎಂದಿನಂತೆ ತಮ್ಮ ಕೆಲಸ ಮುಗಿಸಿಕೊಂಡು ತಮ್ಮ ಸ್ಕೂಟರಿನಲ್ಲಿ ರಾತ್ರಿ ಮನೆಗೆ ಹೊರಟಿದ್ದರು. ವಿಪರೀತ ಮಳೆಯಿಂದಾಗಿ ಇವರ ಮನೆ ಸಮೀಪದ ತಿರುವಿನಲ್ಲಿರುವ ಕೆರೆಯು ತುಂಬಿ ಮಣ್ಣು ಮಿಶ್ರಿತ ನೀರು ರಸ್ತೆಯಲ್ಲಿ ಹರಿಯುತ್ತಿತ್ತು. ಈ ರಸ್ತೆಯಲ್ಲಿ ಬರುತ್ತಿದ್ದ ದಿನಕರ ಶೆಟ್ಟಿಗೆ ಮಳೆಯಿಂದ ಮತ್ತು ರಸ್ತೆಯಲ್ಲಿ ನೀರು ಹರಿಯುತ್ತಿದ್ದ ಕಾರಣಕ್ಕೆ ಯಾವುದೇ ತಡೆಗೋಡೆ ಇಲ್ಲದೆ ಇರುವುದರಿಂದ ಸ್ಕೂಟರ್ ಚಲಿಸುವಾಗ ಅಯಾ ತಪ್ಪಿ ಸುಮಾರು 15- 20 ಅಡಿ ಆಳದ ರಸ್ತೆ ಬದಿಯ ಕೆರೆಗೆ ಸ್ಕೂಟರ್ ಸಮೇತ ಬಿದ್ದರೆನ್ನಲಾಗಿದೆ.
ಕೆಲಸ ಮುಗಿಸಿ ಹೊರಟಿರುವ ಬಗ್ಗೆ ಪತ್ನಿಗೆ ಕರೆ ಮಾಡಿದ ದಿನಕರ ಶೆಟ್ಟಿ ಹೇಳಿದ್ದರಂತೆ ಮನೆ ಬಾರದಿರುವುದನ್ನು ನೋಡಿ ಹುಡುಕಾಡಿದಾಗ ಸ್ಕೂಟರ್ ಸಹಿತ ಬಿದ್ದಿರುವುದು ಕಂಡುದಬಂದಿದೆ. ಕೂಡಲೇ ಸ್ಥಳೀಯರು ಪೊಲೀಸರಿಗೆ ಅಗ್ನಿಶಾಮಕ ದಳ ಹಾಗೂ ಮುಳುಗುತಜ್ಞ ಈಶ್ವರ ಮಲ್ಪೆಅವರಿಗೆ ಮಾಹಿತಿ ನೀಡಿದ್ದಾರೆಅವರು ಸ್ಥಳಕ್ಕೆ ಆಗಮಿಸಿದ ಈಶ್ವರ ಮಲ್ಪೆಕೆರೆಗೆ ಧುಮುಕಿ ಮೊದಲು ಸ್ಕೂಟರ್ ಅನ್ನು ಮೇಲಕ್ಕೆ ಎತ್ತಿದ್ದಾರೆ. ನಂತರ ಹುಡುಕಾಟ ನಡೆಸಿದರು ದಿನಕರ್ ಶೆಟ್ಟಿ ಸುಳಿವು ಸಿಕ್ಕಿರಲಿಲ್ಲ ನಂತರ ನಸುಕಿನ ವೇಳೆ 1:30ರ ಸುಮಾರಿಗೆ ಮೃತದೇಹವನ್ನು ಮೇಲಕ್ಕೆ ಎತ್ತಲಾಗಿದೆ ಎಂದು ತಿಳಿದುಬಂದಿದೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಕೃತಿಯ ವಿಕೋಪಕ್ಕೆ ಅದೆಷ್ಟೋ ಬಾಳಿ ಬದುಕಬೇಕಾದ ಜೀವಗಳು ಮಳೆಯ ಆರ್ಭಟಕ್ಕೆ ಬಲಿಯಾಗಿವೆ. ರಸ್ತೆಯಲ್ಲಿ ಮನೆಯ ಹಾದಿ ಹಿಡಿದು ಹೊರಟ ಅದೆಷ್ಟೋ ಜೀವಗಳು ನೀರಿನಲ್ಲಿ ಕೊಚ್ಚಿ ಹೋದರೆ. ಇತ್ತ ನಿತ್ಯದಂತೆ ಮನೆಯವರ ಬರುವಿಕೆಗಾಗಿ ಕಾದು ಕುಳಿತ ಮನೆಯವರಿಗೆ ದೀಡಿರ್ ಎಂದು ಮನೆಯ ಯಜಮಾನ ಸಾವಿನ ಸುದ್ದಿ ತಿಳಿದು ಬದುಕೆ ಸೂತ್ರ ಹರಿದ ಗಾಳಿಪಟದಂತಾಗಿದೆ ಅದೆಷ್ಟೋ ಕನಸುಗಳು ನೀರಿನಲ್ಲಿ ಕೊಚ್ಚಿಹೊದಂತಾಗಿದೆ.
ಇನ್ನಷ್ಟು ದಿನ ಮಡದಿ ಮಕ್ಕಳು ಮತ್ತು ಹೆತ್ತವರ ಹಾಗೂ ಒಡಹುಟ್ಟಿದವರ ಜೋತೆ ಸಂತೋಷದ ಬದುಕನ್ನು ಕಾಣಬೇಕಿದ್ದ ದಿನಕರ್ ಶೆಟ್ಟಿ ಅವರು ಪ್ರಕೃತಿಯ ವಿಕೋಪಕ್ಕೆ ಬಲಿಯಾಗಿದ್ದಾರೆ.ಅವರ ಆತ್ಮಕ್ಕೆ ಚಿರಶಾಂತಿ ದೊರಕಲಿ…….
ಸುಧೀರ್ ವಿಧಾತ, ಶಿವಮೊಗ್ಗ