ಯಡಿಯೂರಪ್ಪನವರಿಗೆ ಬಂಗಾರಪ್ಪನವರಿಂದಲೆ ಬಲ ಬಂದಿದ್ದು. ನಂತರ ಬಿಜೆಪಿಯ ಹೊಲಸು ರಾಜಕಾರಣಕ್ಕೆ ಬೇಸತ್ತು ಪಕ್ಷ ತೊರೆದು ಸಮಾಜವಾದಿ ಪಕ್ಷದಿಂದ ನಿಂತು ಗೆದ್ದಿದ್ದರು ; ಶಿಕ್ಷಣ ಸಚಿವ ಎಸ್ ಮಧು ಬಂಗಾರಪ್ಪ

ಯಡಿಯೂರಪ್ಪನವರಿಗೆ ಬಂಗಾರಪ್ಪನವರಿಂದಲೆ ಬಲ ಬಂದಿದ್ದು. ನಂತರ ಬಿಜೆಪಿಯ ಹೊಲಸು ರಾಜಕಾರಣಕ್ಕೆ ಬೇಸತ್ತು ಪಕ್ಷ ತೊರೆದು ಸಮಾಜವಾದಿ ಪಕ್ಷದಿಂದ ನಿಂತು ಗೆದ್ದಿದ್ದರು; ಸಚಿವ ಎಸ್ ಮಧು ಬಂಗಾರಪ್ಪ

ASHWASURYA/SHIVAMOGGA

✍️ ಸುಧೀರ್ ವಿಧಾತ

 ಅಶ್ವಸೂರ್ಯ/ಶಿವಮೊಗ್ಗ ; ಲೋಕಸಭಾ ಚುನಾವಣೆಯಲ್ಲಿ ನನ್ನ ಸಹೋದರಿ ಗೀತಾ ಶಿವರಾಜಕುಮಾರ್ ಅವರ ಗೆಲುವಿನ ಕಾನ್ಫಿಡೆನ್ಸ್ ಲೆವೆಲ್ ಹೆಚ್ಚಾಗಿದೆ. ಯೋಜನೆ ಮೀರಿ ಜನರ ಆಶೀರ್ವಾದ ಮಾಡುತ್ತಿದ್ದಾರೆ.ಈ ಬಾರಿ ಗೀತಕ್ಕನ ಗೆಲುವು ಯಾರಿಂದಲೂ ತಡೆಯಲು ಸಾಧ್ಯವಿಲ್ಲ. ಮತದಾರರ ವಿಶ್ವಾಸ ದೊಡ್ಡದಿದೆ ಅವರ ಆಶೀರ್ವಾದದಿಂದ ನಾವು ಗೆಲುವು ಸಾಧಿಸುವುದು ಕಷ್ಟವೇನಲ್ಲ

ಸುಳ್ಳು ಪ್ರಚಾರವೇ ಬಿಜೆಪಿಯವರ ಬಂಡವಾಳವಾಗಿದೆ. ಅವರ ಸುಳ್ಳುಗಳೆ ಅವರ ಅಭ್ಯರ್ಥಿಗಳ ಸೋಲಿಗೆ ಕಾರಣವಾಗುತ್ತಿದೆ. ಮೋದಿಯಿಂದ ಇಂಥ ಅನಾಹುತ ನಡೆಯುತ್ತಿದೆ. ಈಗಿನ ಸಂಸದರು ಕೂಡ ಸುಳ್ಳನ್ನೆ ಬಂಡವಾಳ ಮಾಡಿಕೊಂಡು ಬಂದಿದ್ದಾರೆ

ಚಿತ್ರ ರಂಗದ ಮಹಾನ್ ಸಾಧಕ ದ್ವಾರಕೀಶ್ ನಿಧನಕ್ಕೆ ಸಂತಾಪ ಸುಚಿಸಿದ ಸಚಿವರು


ನಿನ್ನೆ ದಿನ ಕನ್ನಡ ಚಿತ್ರರಂಗದ ಹಾಸ್ಯನಟ ನಿರ್ದೇಶಕ ನಿರ್ಮಾಪಕರಾಗಿ ಸೇವೆಸಲ್ಲಿಸಿದ ಭಾರತೀಯ ಚಿತ್ರರಂಗದ ಮಹಾನ್ ಸಾಧಕ ದ್ವಾರಕೀಶ್ ನಿಧನಕ್ಕೆ ಸಂತಾಪಗಳು.

ಗೀತಾ ಶಿವರಾಜಕುಮಾರ್ ಅವರು ಗ್ರಾ ಪಂ ಮಟ್ಟದಲ್ಲಿ ಭರ್ಜರಿ ಪ್ರಚಾರಕ್ಕೆ ಮುಂದಾಗಿದ್ದಾರೆ.ಬಿಸಿಲಿನ ತಾಪದ ನಡುವೆಯೂ ಗೀತಕ್ಕ ಮತ್ತು ಶಿವಣ್ಣ ನೂರಾರು ಕಾರ್ಯಕರ್ತರ ಜೊತೆಗೂಡಿ ಕುಗ್ರಾಮದ ಕೊನೆಯ ಮನೆಯವರೆಗೂ ಮನೆ ಮನೆ ಪ್ರಚಾರಕ್ಕೆ ಮುಂದಾಗಿದ್ದಾರೆ.
ಇನ್ನೂ ಬಿಜೆಪಿಯವರೂ ಯಾವ ಮಟ್ಟಕ್ಕೆ ಸುಳ್ಳನ್ನು ಹೇಳುತ್ತಾರೆ ಎಂದರೆ ಬಂಗಾರಪ್ಪ ಸಂಸದರಾಗಿ ಗೆದ್ದಿದ್ದು ಬಿಜೆಪಿಯಿಂದ ಎಂದು ಹೇಳ್ತಾರೆ. ರಾಘವೇಂದ್ರರಿಗೆ ಮಾನ, ಮರ್ಯಾದೆ ಇದೆಯಾ? ಕರ್ನಾಟಕದಲ್ಲಿ ಬಿಜೆಪಿಗೆ ಶಕ್ತಿ ಕೊಟ್ಟಿದ್ದು ಬಂಗಾರಪ್ಪ.ಬಂಗಾರಪ್ಪ ನವರಿಂದಲೆ ಕರ್ನಾಟಕದಲ್ಲಿ ಬಿಜೆಪಿಗೆ ನೆಲೆಸಿಕ್ಕಿದ್ದು ಎನ್ನುವುದು ಮೊದಲು ನೆನಪಿರಲಿ.ಅವರನ್ನು ಕೀಳು ಮಟ್ಟದಲ್ಲಿ ಮಾತಾಡುವ ಆವಶ್ಯಕತೆ ಇಲ್ಲ ಬಂಗಾರಪ್ಪ ನವರ ಆಶೀರ್ವಾದದಿಂದಲೆ ಕೇಲವು ಬಿಜೆಪಿಯ ನಾಯಕರು ಎಲ್ಲಾ ಅಧಿಕಾರವನ್ನು ಅನುಭವಿಸಿದ್ದಾರೆ. ಯಡಿಯೂರಪ್ಪ ಸೋತಾಗ ಅವರನ್ನು ಗೆಲ್ಲಿಸಿದ್ದೇ ಬಂಗಾರಪ್ಪ.

ಯಡಿಯೂರಪ್ಪನವರಿಗೆ ಬಂಗಾರಪ್ಪನವರಿಂದಲೆ ಬಲ ಬಂದಿದ್ದು. ನಂತರ ಬಿಜೆಪಿಯ ಹೊಲಸು ರಾಜಕಾರಣಕ್ಕೆ ಬೇಸತ್ತು ಪಕ್ಷ ತೊರೆದು ಸಮಾಜವಾದಿ ಪಕ್ಷದಿಂದ ನಿಂತು ಗೆದ್ದಿದ್ದರು ಅ ಚುನಾವಣೆಯಲ್ಲಿ ಬಿಜೆಪಿ ಮೂರನೇ ಸ್ಥಾನಕ್ಕೆ ತೃಪ್ತಿ ಪಡುವಂತಾಗಿತ್ತು.ಆಗ ನಿಮಗೆ ಶಕ್ತಿ ಇರಲಿಲ್ವಾ? ನಿಮ್ಮ ಶಕ್ತಿ ಎಲ್ಲಿಗೆ ಹೋಗಿತ್ತು.?
ರಾಜಕೀಯವಾಗಿ ಯಡಿಯೂರಪ್ಪನವರ ಫ್ಯಾಮಿಲಿ ಬಂಗಾರಪ್ಪನವರ ಋಣದಲ್ಲಿದೆ ಎನ್ನುವುದು ನೆನಪಿರಲಿ.!
ಶಿವಮೊಗ್ಗದ ಜಿಲ್ಲಾಸ್ಪತ್ರೆಯನ್ನು ರಾಜಕಾರಣದ ಸ್ವಾರ್ಥಕ್ಕೆ ಶಿಕಾರಿಪುರಕ್ಕೆ ಒಯ್ದಿದ್ರು. ಜಿಲ್ಲಾಸ್ಪತ್ರೆ ಜಿಲ್ಲಾ ಕೇಂದ್ರದಲ್ಲೇ ಇರಬೇಕು. ಸಿಮ್ಸ್ ಕೂಡ ಕಾಂಗ್ರೆಸ್ ಕೂಸು. ಭ್ರಷ್ಟರನ್ನು ಸದೆಬಡಿಯೋ ಕೆಲಸ ನಡೆಯುತ್ತೆ.ಜಿಲ್ಲೆಯಲ್ಲಿಯ ಎಂ ಸ್ಯಾಂಡ್, ಜಲ್ಲಿ ಕಥೆ ಗೊತ್ತಿದೆ. ಬರದ ಬಗ್ಗೆ ಮಾತಾಡೋ ಯೋಗ್ಯತೆ ಅವರಿಗಿಲ್ಲ.
ನಾಚಿಕೆ ಆಗಬೇಕು ಸಂಸದ ರಾಘವೇಂದ್ರರಿಗೆ. ಶರಾವತಿ ಸಮಸ್ಯೆ ಬಗ್ಗೆ ಸುಳ್ಳು ಹೇಳುವುದನ್ನೆ ಪರಿಪಾಠ ಮಾಡಿಕೊಂಡಿದ್ದಾರೆ. ಈಶ್ವರಪ್ಪ, ಯತ್ನಾಳ್, ಮಾಲೀಕಯ್ಯ ಗುತ್ತೇದಾರ್,ಸಂಗಣ್ಣ ಕರಡಿಯವರಿಗೆ ಮೊದಲು ಉತ್ತರಕೊಡಿ. ಸ್ವಾರ್ಥದ ರಾಜಕಾರಣ ಬಿಡಿ.

ತಂದೆಯನ್ನು ಸೋಲಿಸಿದ್ದಿವಿ ಈಗ ಮಗಳನ್ನು ಸೋಲಿಸುತ್ತೇವೆ ಎನ್ನುವ ಭ್ರಮೆ ಬಿಡಿ. ನೀರಾವರಿಗೋಸ್ಕರ ಮಧು ಬಂಗಾರಪ್ಪನವರ ಹೆಸರನ್ನು ಜನ ಹೇಳುತ್ತಿದ್ದಾರೆ. ಪಾದಯಾತ್ರೆ ಮಾಡಿದ್ದು ಜನತೆಗೆ ನೆನಪಿದೆ.
ಸಂಸದರಾಗಿ ಬರಗಾಲಕ್ಕೆ ದುಡ್ಡು ತರೋ ಯೋಗ್ಯತೆ ಇಲ್ಲ. ಮೋದಿನ ವಿಶ್ವಗುರು ಮಾಡಬೇಕಂತೆ. ಮತಹಾಕಿದವರನ್ನು ಮನುಷ್ಯರಾಗಿ ಕಾಣಿ. ಕಾರ್ಖಾನೆಗಳೆಲ್ಲ ಬಿಕರಿಯಾಗಿರೊ ಲೆಕ್ಕ ಗೊತ್ತಿದೆ.
ರಾಘವೇಂದ್ರ ಸ್ವಾರ್ಥದ ರಾಜಕಾರಣ ಮಾಡ್ತಿದ್ದಾರೆ. ಕಾರ್ಖಾನೆಗಳ ಅಭಿವೃದ್ಧಿಗೆ ನಮ್ಮದೇ ಯೋಜನೆಗಳಿವೆ. ಭ್ರಷ್ಟಾಚಾರ ತೊಳೆಯೋ ಪೌಡರ್ ಬಿಜೆಪಿಯಿಂದ ಬಂದಿದೆ. ವರ್ಸ್ಟ್ ವಾಷಿಂಗ್ ಪೌಡರ್ ಇದು. ಭ್ರಷ್ಟಾಚಾರ ತೊಳೆಯೋ ಮಾತಾಡಿ ಭ್ರಷ್ಟಾಚಾರಿಗಳೆ ಆಗಿದ್ದಾರೆ.
ಶಿವಮೊಗ್ಗ ಜಿಲ್ಲೆಯಲ್ಲಿ ಏಳ ಕೋಟಿ ಹಣ ಗೃಹಲಕ್ಷ್ಮೀದು ಜನರಿಗೆ ಹೋಗ್ತಿದೆ. ನಾವೇನಿದ್ರೂ ಕ್ಲೀನ್. ನಮಗೆ ವಾಷಿಂಗ್ ಪೌಡರ್ ಅವಶ್ಯಕತೆ ಇಲ್ಲ. ಪಂಚ ಗ್ಯಾರಂಟಿಗಳು ಜನರ ಮನೆ ಬೆಳಕಾಗಿವೆ.
ಗ್ಯಾರಂಟಿಗಳನ್ನು ಅದರ ಬಗ್ಗೆಯ ಮಾಹಿತಿಯನ್ನು ಮನೆಮನೆಗೆ ತಲುಪಿಸೋ ಕಾರ್ಯ ಮಾಡುತ್ತಿದ್ದೇವೆ.ಈಗಾಗಲೇ ರಾಜ್ಯದ ಐದು ಗ್ಯಾರಂಟಿಗಳು ಕರ್ನಾಟಕದಲ್ಲಿ ಅಬ್ಬರಿಸುವುದರ ಜೋತೆಗೆ ರಾಜ್ಯದ ಐದು ಗ್ಯಾರಂಟಿಗಳು ಈಗ ಫಲಾನುಭವಿಗಳಿಗೆ ತಲುಪಿವೆ. ಈಗ ಕೇಂದ್ರದ ಗ್ಯಾರಂಟಿಗಳು ಕೂಡ ಕೇಂದ್ರ ಸರ್ಕಾರದ ಆಡಳಿತದ ಚುಕ್ಕಾಣಿ ಹಿಡಿದರೆ ಫಲಾನುಭವಿಗಳಿಗೆ ತಲುಪಲಿದೆ ಎಂದು ಹೇಳಿದರು.
ಗಾಂಧಿ ಫ್ಯಾಮಿಲಿ ಬಗ್ಗೆ ಮಾತಾಡೋ ಯೋಗ್ಯತೆ ಯಡಿಯೂರಪ್ಪನವರಿಗೆ ಇಲ್ಲ. ರಾಹುಲ್ ಗಾಂಧಿ ಬಹಳಷ್ಟು ಜೀವಗಳನ್ನು ಕಳೆದುಕೊಂಡ ಜೀವ. ಅವರನ್ನು ಮನಸ್ಸಿಗೆ ಬಂದಹಾಗೆ ಟೀಕಿಸಿದ್ರಿ. ಅವರು ದೇಶ ಒಂದು ಮಾಡಲು ಭಾರತ್ ಜೂಡೋ ಪಾದಯಾತ್ರೆ ಮಾಡಿದ್ದಾರೆ
20ನೇ ತಾರೀಖಿನಿಂದ ಗ್ಯಾರಂಟಿ ಡ್ರೈವ್ ಆರಂಭ ಆಗಲಿದೆ. ಚಂದ್ರಭೂಪಾಲ ಮುಂದಾಳತ್ವದಲ್ಲಿ, ಪ್ರಸನ್ನ ಕುಮಾರ್ ಅಧ್ಯಕ್ಷತೆಯಲ್ಲಿ ಐದು ದಿನ ನಡೆಯಲಿದೆ.
ಡಿಕೆ ಶಿವಕುಮಾರ್ ಸಂತೋಷ ಪಟ್ಟಿದ್ದಾರೆ. ಅವರು ಹೊಗಳಿದ್ದಾರೆ ನನ್ನನ್ನು .ನನ್ನಲ್ಲಿ ಕಾನ್ಫಿಡೆನ್ಸ್ ಹೆಚ್ಚಾಗಿದೆ ಇದರಿಂದ. 70 ದಿನಗಳ ಕಾಲ ಟ್ರೈನಿಂಗ್ ತಗೆದುಕೊಂಡಿದ್ದೀನಿ ಶಿಕ್ಷಣ ಇಲಾಖೆ ನಡೆಸಲು. ಅವರು ಒಳ್ಳೆಯ ಮಾತಾನಾಡಿದ್ದು ನನ್ನ ಭಾಗ್ಯ.
ಚಿತ್ರ ನಟರು ಸ್ವಯಂ ಪ್ರೇರಿತರಾಗಿ ಬರಲಿದ್ದಾರೆ. 26 ರ ನಂತರ ಪಕ್ಷದ ಹಿರಿಯರು ಬರಲಿದ್ದಾರೆ. ಕಾರ್ನರ್ ಮೀಟಿಂಗುಗಳು ಸಾಕಷ್ಟು ಪರಿಣಾಮಕಾರಿಯಾಗಿ ನಡೆಯಲಿವೆ.
ಬಿಜೆಪಿ ವ್ಯವಹಾರಗಳು ನಾಳೆಯಿಂದ ಆರಂಭವಾಗಲಿವೆ. ಇಂಟೆಲಿಜೆನ್ಸ್ ಅಪಬಳಕೆ ಮಾಡಿಕೊಳ್ಳೋದಿಲ್ಲ.
ಈಶ್ವರಪ್ಪರಿಗೆ ಮೊದಲು ಉತ್ತರ ಕೊಡಿ ರಾಘವೇಂದ್ರ. ಅವರು ನಿಮಗೆ ಬತ್ತಿ ಇಟ್ಟಿದ್ದಾರೆ. ಭ್ರಷ್ಟಾಚಾರ, ಎಲೆಕ್ಷನ್ ಬಾಂಡ್ ಬಗ್ಗೆ ಮಾತಾಡಿ…ಮೋದಿ ಕೂಡ ಮಾತಾಡೋಲ್ಲ. ಇದೆಲ್ಲಾ ಪ್ರೊಫೆಷನಲ್‌ ಭ್ರಷ್ಟಾಚಾರ ಎಂದು ಶಿಕ್ಷಣ ಸಚಿವರಾದ ಎಸ್ ಮಧು ಬಂಗಾರಪ್ಪ ನವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು

Leave a Reply

Your email address will not be published. Required fields are marked *

Optimized by Optimole
error: Content is protected !!