ನಾನ್ಯಾಕೆ ವೀಕ್ ಕ್ಯಾಂಡಿಡೇಟ್ ಆಗ್ತೇನೆ. ಅವರಿಗೆ ನನ್ನ ಸ್ಪರ್ಧೆಯಿಂದಲೇ ಹೆದರಿಕೆಯಾಗಿದೆ. ಅದಕ್ಕೆ ನನ್ನನ್ನೆ ವೀಕ್ ಕ್ಯಾಂಡಿಡೇಟ್ ಎನ್ನುತ್ತಿದ್ದಾರೆ ; ಕಾಂಗ್ರೆಸ್ ಲೋಕಸಭಾ ಅಭ್ಯರ್ಥಿ ಗೀತಾ ಶಿವರಾಜಕುಮಾರ್
ASHWASURYA/SHIVAMOGGA
✍️ ಸುಧೀರ್ ವಿಧಾತ
ಅಶ್ವಸೂರ್ಯ/ಶಿವಮೊಗ್ಗ ; ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಗೀತಾ ಶಿವರಾಜ್‌ಕುಮಾರ್ ವೀಕ್ ಕ್ಯಾಂಡಿಡೇಟ್ ಎಂಬ ವಿಚಾರಕ್ಕೆ ಎದುರಾಳಿ ಸ್ಫರ್ಧಿಗಳಿಗೆ ಪ್ರತಿಕ್ರಿಯೆ ನೀಡಿದರು ನಾನ್ಯಾಕೆ ವೀಕ್ ಕ್ಯಾಂಡಿಡೇಟ್ ಆಗ್ತೇನೆ. ಅವರಿಗೆ ನನ್ನ ಸ್ಪರ್ಧೆಯಿಂದಲೇ ಹೆದರಿಕೆಯಾಗಿದೆ. ಅದಕ್ಕೆ ನನ್ನನ್ನೆ ವೀಕ್ ಕ್ಯಾಂಡಿಡೇಟ್ ಎನ್ನುತ್ತಿದ್ದಾರೆ ಎಂದು ತಿರುಗೇಟು ನೀಡಿದರು.
ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಚುನಾವಣೆಗೆ ಸ್ಥಳೀಯ ನಾಯಕರು ಕಾರ್ಯಕರ್ತರ ಜೊತೆಗೂಡಿ ಪ್ರಚಾರ ನೆಡೆಸುತ್ತಿದ್ದೇವೆ. 2014ರ ಚುನಾವಣೆಗೂ ಈ ಬಾರಿಯ ಚುನಾವಣೆಗೆ ಸಾಕಷ್ಟು ವ್ಯತ್ಯಾಸವಿದೆ. ಕಳೆದ ಬಾರಿ ಜೆಡಿಎಸ್ ನಿಂದ ಸ್ಪರ್ಧೆ ಮಾಡಿದ್ದು ಈ ಬಾರಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧೆ ಮಾಡಿದ್ದೇನೆ. ಕಳೆದ ಬಾರಿಗಿಂತ ಈ ಬಾರಿ ಮತದಾರರ ಒಲವು ನಮ್ಮ ಕಡೆ ಹೆಚ್ಚಾಗಿದೆ ಎಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್‌ಕುಮಾರ ಹೇಳಿದರು.
ಇಂದು ಶಿವಮೊಗ್ಗದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ನಾವು ಕ್ಷೇತ್ರದಾದ್ಯಂತ ಸಂಚಾರ ನಡೆಸಿದಾಗ ಕುಡಿಯುವ ನೀರಿನ ಸಮಸ್ಯೆ ವಿದ್ಯುತ್ ಸಮಸ್ಯೆ ಬರಗಾಲ ಮೊದಲಾದ ಸಮಸ್ಯೆಗಳ ಬಗ್ಗೆ ಜನರು ಅಳಲು ತೋಡಿಕೊಂಡಿದ್ದಾರೆ. ಕ್ಷೇತ್ರದಲ್ಲಿ ಹೆಚ್ಚು ಸಮಯ ಇರುತ್ತೇನೆ. ನನ್ನ ಮಕ್ಕಳು ದೊಡ್ಡವರಾದ ಹಿನ್ನೆಲೆಯಲ್ಲಿ ನನಗೆ ಯಾವ ಸಮಸ್ಯೆಯೂ ಇಲ್ಲ. ಶಿವಮೊಗ್ಗ ಮತ್ತು ಸೊರಬದ ಕುಬಟೂರಿನಲ್ಲಿ ನನಗೆ ಮನೆ ಇದೆ. ಜಿಲ್ಲೆಯಲ್ಲಿ ಬಗರು ಹುಕುಂ ಹಕ್ಕು ಪತ್ರದ ಸಮಸ್ಯೆ ಇದೆ. ಇದನ್ನು ನನ್ನ ಸಹೋದರ ಮಧು ಜೊತೆಗೂಡಿ ಬಗೆಹರಿಸುತ್ತೇನೆ ಎಂದು ಭರವಸೆ ನೀಡಿದರು.
ಕ್ಷೇತ್ರದಲ್ಲಿ ಮೋದಿಯ ಆಲೆ ಈ ಅಲೆ ಅ ಅಲೆಯ ಬಗ್ಗೆ ನನಗೆ ಗೊತ್ತಿಲ್ಲ ನಮ್ಮ ಕೆಲಸವನ್ನು ನಾವು ಮಾಡುತ್ತಿದ್ದೇವೆ. ಹಾಲಿ ಸಂಸದರ ಪ್ರೋಗ್ರೆಸ್ ರಿಪೋರ್ಟ್ ನೋಡಿದ್ದೇನೆ. ಅದರಲ್ಲಿ ಎಲ್ಲವೂ ನಿಜವಿಲ್ಲ. ನನ್ನ ಎದುರಾಳಿ ಯಾರು ಎಂದು ಯೋಚನೆ ಮಾಡುವುದಿಲ್ಲ . ನಮಗೆ ಕೆಲವೊಮ್ಮೆ ನೇರ ಸ್ಪರ್ಧೆ ಇದ್ದರೆ ಕೆಲವೊಮ್ಮೆ ತ್ರಿಕೋನ ಸ್ಪರ್ಧೆ ಏರ್ಪಡುತ್ತದೆ. ಈಶ್ವರಪ್ಪನವರ ಸ್ಪರ್ಧೆಯಿಂದ ನಮಗೆ ಲಾಭ ನಷ್ಟದ ಪ್ರಶ್ನೆ ಇಲ್ಲಾ ಎಂದರು.
ಗೀತಾ ಶಿವರಾಜ್‌ಕುಮಾರ್ ವೀಕ್ ಕ್ಯಾಂಡಿಡೇಟ್ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ನಾನ್ಯಾಕೆ ವೀಕ್ ಕ್ಯಾಂಡಿಡೇಟ್ ಆಗ್ತೇನೆ. ಎದುರಾಳಿ ಸ್ಪರ್ಧಿಗಳಿಗೆ ನನ್ನ ಸ್ಪರ್ಧೆಯಿಂದಲೇ ಹೆದರಿಕೆಯಾಗಿದೆ. ಅದಕ್ಕೆ ನನ್ನನ್ನೇ ವೀಕ್ ಕ್ಯಾಂಡಿಡೇಟ್ ಎನ್ನುತ್ತಿದ್ದಾರೆ. ನಾನು ನಾಳೆ ( ಏ,15) ನಾಮಪತ್ರ ಸಲ್ಲಿಸುತ್ತಿದ್ದೇನೆ. ಡಿಸಿಎಂ ಡಿಕೆ ಶಿವಕುಮಾರ್, ಸಚಿವ ಮಧು ಬಂಗಾರಪ್ಪ, ಶಿವರಾಜಕುಮಾರ್ ಜೊತೆಗಿರುತ್ತಾರೆ. ಹಲವು ಸಿನಿಮ ನಟರು ನಮ್ಮ ಪರವಾಗಿ ಚುನಾವಣಾ ಪ್ರಚಾರಕ್ಕೆ ಬರಲಿದ್ದಾರೆ ಎಂದರು.