ಬೆಂಗಳೂರಿನಲ್ಲಿ ಮೀತಿ ಮೀರಿದ ಮೀಟರ್ ಬಡ್ಡಿ ದಂಧೆ: ಅಪ್ಪ–ಮಗ ಎಸ್ಕೇಪ್.! ಶಿವಮೊಗ್ಗದ ಗಲ್ಲಿ ಗಲ್ಲಿಯಲ್ಲೂ ಮೀಟರ್ ಬಡ್ಡಿ ಮಾಫಿಯಾ.! ಕಡಿವಾಣ ಹಾಕೋರು ಯಾರು.?

Meter interest will push people like mafia to the house of death.! These traffickers have no humanity and are willing to pay for interest money. This is Meter Buddy Mafia.!?

ಬೆಂಗಳೂರಿನಲ್ಲಿ ಮೀತಿ ಮೀರಿದ ಮೀಟರ್ ಬಡ್ಡಿ ದಂಧೆ: ಅಪ್ಪ–ಮಗ ಎಸ್ಕೇಪ್.!

ASHWASURYA/SHIVAMOGGA

✍️ ಸುಧೀರ್ ವಿಧಾತ

ಅಶ್ವಸೂರ್ಯ/ಬೆಂಗಳೂರು: ನಿರ್ಭಯವಾಗಿ ಮೀಟರ್ ಬಡ್ಡಿ ದಂಧೆಯಲ್ಲಿ ತೊಡಗಿದ್ದ ಆರೋಪದಡಿ ಶ್ರೀರಾಮ್ ಹಾಗೂ ಇತನ ಮಗ ಕಲ್ಯಾಣ್‌ಕುಮಾರ್ ವಿರುದ್ಧ ಪ್ರಕರಣ ದಾಖಲಾಗಿದ್ದು ಇಬ್ಬರು ಬಡ್ಡಿ ಮಕ್ಕಳು ತಲೆಮರೆಸಿಕೊಂಡಿದ್ದಾರೆ.
ಮೀಟರ್ ಬಡ್ಡಿ ವ್ಯವಹಾರ ಸಂಬಂಧ ವಿಲ್ಸನ್ ಗಾರ್ಡನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು ನ್ಯಾಯಾಲಯದ ಅನುಮತಿ ಪಡೆದು ಶ್ರೀರಾಮ್ ಮನೆಯ ಮೇಲೆ ದಾಳಿಯ ವೇಳೆಯಲ್ಲಿ 100ಕ್ಕೂ ಹೆಚ್ಚು ಜನರ ಚೆಕ್‌ಗಳು, ವಾಹನಗಳ ನೋಂದಣಿ ಪ್ರಮಾಣ ಪತ್ರಗಳು, ಆಸ್ತಿಗೆ ಸಂಬಂಧಪಟ್ಟ ದಾಖಲೆಗಳನ್ನು ಜಪ್ತಿ ಮಾಡಲಾಗಿದೆ’ ಎಂದು ಪೊಲೀಸ್ ಕಮಿಷನರ್ ಬಿ. ದಯಾನಂದ್ ತಿಳಿಸಿದ್ದಾರೆ.!

ಮೀಟರ್ ಬಡ್ಡಿ ದಂಧೆಯ ಸುಳಿಗೆ ಸಿಲುಕುವ ಸಣ್ಣಪುಟ್ಟ ವ್ಯಾಪಾರಿಗಳು ದುಡಿದ ಹಣವನ್ನೇಲ್ಲ ಬಡ್ಡಿಯ ರೂಪದಲ್ಲಿ ಕಟ್ಟಿ ಆರ್ಥಿಕ ಸಂಕಷ್ಟದಲ್ಲಿ ಸಿಲುಕಿದ್ದ ಅದೇಷ್ಟೋ ಮಂದಿ ಸಣ್ಣ ವ್ಯಾಪಾರಿಗಳು ವ್ಯಾಪಾರಕ್ಕೆ ಕುಟುಂಬ ನಿರ್ವಹಣೆಗೆಂದು ಸಾಲ ಪಡೆದು ಭಯ ಹುಟ್ಟಿಸುವ ಬಡ್ಡಿ ಕಟ್ಟಲಾಗದೆ ತೀವ್ರ ಸಂಕಷ್ಟಕ್ಕೀಡಾಗಿದ್ದಾರೆ. ಕೆಲವೆಡೆ ಮೀಟರ್‌ ಬಡ್ಡಿ ದಂಧೆಯ ತೀವ್ರತೆಗೆ ಸಾವಿನ ಪ್ರಕರಣಗಳು ನಿತ್ಯ ವರದಿಯಾಗುತ್ತಿದೆ.


ಶ್ಯಾಮಣ್ಣ ಗಾರ್ಡನ್‌ನ ಶ್ರೀರಾಮ್ ಹಲವು ವರ್ಷಗಳಿಂದ ಬಡ್ಡಿ ವ್ಯವಹಾರ ಮಾಡುತ್ತಿದ್ದ. ಕಂಪನಿಯೊಂದರ ಉದ್ಯೋಗಿ ಆಗಿರುವ ಮಗ ಕಲ್ಯಾಣ್‌ಕುಮಾರ್ ಸಹ ಅಪ್ಪನ ವ್ಯವಹಾರಕ್ಕೆ ಸಹಕರಿಸುತ್ತಿದ್ದ. ಈ ಬಡ್ಡಿಮಕ್ಕಳು ಮೀಟರ್ ಬಡ್ಡಿ ರೂಪದಲ್ಲಿ ಅಮಾಯಕ ಜನರಿಗೆ ಸಾಲ ಕೊಡುತ್ತಿದ್ದರಂತೆ ಇವರಿಬ್ಬರೂ, ಸಾಲ ಪಡೆದವರಿಂದ ಮನಬಂದಂತೆ ಬಡ್ಡಿ ವಸೂಲಿ ಮಾಡುತ್ತಿದ್ದರಂತೆ.! ಈ ಬಗ್ಗೆ ಕೆಲವರು, ಸಹಕಾರ ಇಲಾಖೆಗೆ ದೂರು ನೀಡಿದ ಹಿನ್ನಲೆಯಲ್ಲಿ ಇವರ ಮನೆಯ ಮೇಲೆ‌ ದಾಳಿ ಮಾಡಲಾಗಿದ್ದು ದಾಳಿಯ ವೇಳೆ ಬಡ್ಡಿ ವ್ಯವಹಾರಕ್ಕೆ ಸಂಬಂಧಿಸಿದಂತೆ ಸಾಕಷ್ಟು ದಾಖಲೆಗಳು ದೊರೆತಿರುವುದಾಗಿ ತಿಳಿದುಬಂದಿದೆ.

ಕೆಲವರಿಗೆ ಖಾಕಿಯ ಶ್ರೀರಕ್ಷೆ !? 

ರಾಜ್ಯದಲ್ಲಿ ಬಡ್ಡಿ ದಂಧೆಕೋರರ ರಕ್ಷಣೆಗೆ ಕೆಲವು ಮಂದಿ ಪೋಲಿಸರು ಮತ್ತು ‌ಕೆಲವು ಅಧಿಕಾರಿಗಳು ನಿಂತಿದ್ದಾರೆ ಎನ್ನುವ ಆರೋಪಗಳಿವೆ. ಇಲಾಖೆಯ ಸಹಾಯವಾಣಿ ಇದ್ದರೂ ದೂರುಗಳು ಮಾತ್ರ ಠಾಣೆ ಮೆಟ್ಟಿಲೇರುತ್ತಿಲ್ಲ. ಇದಕ್ಕೆ ಕಾರಣ ಪೊಲೀಸ್‌ ಇಲಾಖೆಯ ಕೆಲವು ಸಿಬ್ಬಂದಿಯೇ ಬಡ್ಡಿ ದಂಧೆಯಲ್ಲಿ ತೊಡಗಿರುವ ಗುಮಾನಿಗಳಿಂದಾಗಿ ಜನರು ಠಾಣೆಗಳತ್ತ ಮುಖ ಮಾಡುತ್ತಿಲ್ಲ.! ಇದನ್ನೆ ಬಂಡವಾಳವಾಗಿಸಿಕೊಳ್ಳುವ ಕಾರ್ಪೊರೇಟರ್‌ಗಳು, ಫೈನಾನ್ಸ್‌ ಕಂಪನಿಗಳು, ಮೀಟರ್ ಬಡ್ಡಿ ದಂಗೆಕೋರರು ಮನಸೋ ಇಚ್ಛೆ ಬಡ್ಡಿ ದರ ಫಿಕ್ಸ್‌ ಮಾಡಿ ಜನರನ್ನು ಸುಲಿಗೆ ಮಾಡುತ್ತಿರುವುದು ವಾಸ್ತವ.


ಇದರ ಪರಿಶೀಲನೆ ನಡೆಸಿದ ಸಹಕಾರ ಇಲಾಖೆಯ ಅಧಿಕಾರಿಗಳು ದೂರು ನೀಡಿದ್ದರು. ಅದರನ್ವಯ ತಂದೆ–ಮಗನ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು ಇಬ್ಬರಿಗೂ ನೋಟಿಸ್ ಕೂಡಾ ನೀಡಲಾಗಿದ್ದು ಇದುವರೆಗೂ ವಿಚಾರಣೆಗೆ ಬಂದಿರಲಿಲ್ಲ. ಬಂಧನ ಭೀತಿಯಲ್ಲಿ ತಲೆಮರೆಸಿಕೊಂಡಿದ್ದಾರೆ ಇವರ ಪತ್ತೆಗಾಗಿ ಶೋಧ ಮುಂದುವರಿಸಲಾಗಿದೆ ಎಂದು ತಿಳಿಸಿದರು.

ಒಟ್ಟಿನಲ್ಲಿ ಬೆಂಗಳೂರು, ಶಿವಮೊಗ್ಗ, ಭದ್ರಾವತಿ ಹಾಗೂ ಇನ್ನಿತರ ಜಿಲ್ಲೆಗಳಲ್ಲಿ ಮೀಟರ್ ಬಡ್ಡಿ ಮಾಫಿಯಾ ಭರ್ಜರಿಯಾಗಿ ನೆಡೆಯುತ್ತಿದ್ದು ಸಂಬಂಧ ಪಟ್ಟ ಅಧಿಕಾರಿಗಳು ಈ ಮೀಟರ್ ಬಡ್ಡಿ ಮಾಫಿಯಾದ ಕಿಂಗ್ ಪಿನ್ ಗಳನ್ನು ಮಟ್ಟಹಾಕಬೇಕಿದೆ ಅದರಲ್ಲೂ ಶಿವಮೊಗ್ಗ ಮೀಟರ್ ಬಡ್ಡಿ ಮಾಫಿಯಾದ ಕೇಂದ್ರ ಬಿಂದುವಾಗಿದೆ.ಈ ಮೀಟರ್ ಬಡ್ಡಿ ಮಾಫಿಯಾದವರ ಸುಳಿಗೆ ಸಿಲುಕಿ ಅದೆಷ್ಟೋ ಜೀವಗಳು ಬದುಕಿನ ನಡು ಹಾದಿಯಲ್ಲೆ ಸುಡುಗಾಡು ಸೇರಿವೆ ಅಮಾಕ ಮಂದಿಯ ಆಸ್ತಿಪಾಸ್ತಿಯನ್ನು ಮೀಟರ್ ಬಡ್ಡಿಯ ಹೆಸರಿನಲ್ಲಿ ನುಂಗಿ ನೀರು ಕುಡಿದಿರುವ ಖದೀಮ ದಂಗೆಕೋರರ ದಂಡೆ ಶಿವಮೊಗ್ಗ ನಗರದಲ್ಲಿ ಬಿಡು ಬಿಟ್ಟಿದೆ ಇನ್ನಾದರು ಎಚ್ಚೆತ್ತುಕೊಂಡು ಅಧಿಕಾರಿಗಳು ಈ ಮೀಟರ್ ಬಡ್ಡಿ ಮಾಫಿಯಾದ ನಡು ಮುರಿಯಬೇಕಿದೆ….

Leave a Reply

Your email address will not be published. Required fields are marked *

Optimized by Optimole
error: Content is protected !!