ಮಡಿಕೇರಿ ಮತ್ತು ಕುಶಾಲನಗರದ ಬಿಜೆಪಿಯ ಸಮಾವೇಶದಲ್ಲಿ ನೆರೆದಿದ್ದ ಮಂದಿಯ ಜೋಬಿಗೆ ಕೈಬಿಟ್ಟ 10 ಮಂದಿ ಭದ್ರಾವತಿಯ ಪಿಕ್ ಪಾಕೆಟರ್ ಗಳು ಅಂದರ್.!
ASHWASURYA/SHIVAMOGGA
✍️ ಸುಧೀರ್ ವಿಧಾತ
ಅಶ್ವಸೂರ್ಯ/ಮಡಿಕೇರಿ : ಮಾ. 27; ಕಳೆದ ಮಾರ್ಚ್ 27ರಂದು ಬಿಜೆಪಿಯ ಪಕ್ಷದ ವತಿಯಿಂದ ಮಡಿಕೇರಿ ಹಾಗೂ ಕುಶಾಲನಗರದಲ್ಲಿ ನಡೆದ ಸಮಾವೇಶದ ಸಂದರ್ಭದಲ್ಲಿ ದೊಡ್ಡಮಟ್ಟದಲ್ಲಿ ಜನ ಸೇರಿದ್ದರು ಇದನ್ನೇ ಏನ್ ಕ್ಯಾಶ್ ಮಾಡಿಕೊಂಡ ಪಿಕ್‌ಪಾಕೆಟ್ ಮಾಡುವ ಹದಿಮೂರು ಜನ ಖದೀಮರ ತಂಡ ಭರ್ಜರಿಯಾಗಿ ಕೇಲವರ ಜೇಬಿಗೆ ಕೈ ಬಿಟ್ಟು ಹಣ ಮೊಬೈಲ್ ನಂತಹ ಬೆಲೆಬಾಳುವ ವಸ್ತುಗಳನ್ನು ಕದ್ದಿದ್ದರು. ಸ್ಥಳೀಯ ಪೋಲಿಸ್ ಠಾಣೆಗಳಲ್ಲಿ ದೂರು ದಾಖಲಾಗಿತ್ತಿದ್ದಂತೆ ಪೋಲಿಸರು ತಕ್ಷಣವೇ ಖದೀಮರ ಬೇಟೆಗೆ ಇಳಿದಿದ್ದರು ಕೊನೆಗೂ 13 ಮಂದಿ ಪಿಕ್ ಪಾಕೆಟರ್ ಗಳನ್ನೂ ಕೊಡಗು ಜಿಲ್ಲಾ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ, ಬಂಧಿತರಾದ13 ಆರೋಪಿಗಳಿಂದ 12 ಮೊಬೈಲ್, 2 ಕಾರು ಹಾಗೂ 69,960 ರೂ ನಗದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಬಂಧಿತರಲ್ಲಿ 10 ಮಂದಿ ಖದೀಮರ ತವರು ನೆಲ ಶಿವಮೊಗ್ಗ ಜಿಲ್ಲೆಯ ಭದ್ರವತಿಯವರಾಗಿದ್ದರೆ, ಇಬ್ಬರು ಬೆಂಗಳೂರು ಮೂಲದವರಾಗಿದ್ದಾರೆ.
ಶಿವಮೊಗ್ಗ ಜಿಲ್ಲೆ ಭದ್ರವತಿಯ ಜಯಣ್ಣ (38), ಪುಟ್ಟರಾಜು (39), ನಾಗರಾಜ ಸಿ (43), ವೆಂಕಟೇಶ್ ಆರ್ (44), ರಾಮು (43), ಉಮೇಶ ಕೆ, (36), ಜಯಣ್ಣ (53), ಬೋಜಪ್ಪ (50), ಮೆಹಬೂಬ್ ಸುಭಾನ್ (48), ಗಿರೀಶ ಡಿ (31), ಬಾಲು (35) ಬೆಂಗಳೂರಿನ ಹಬ್ಬಗೋಡಿ ಹರೀಶ (35) ನೆಲಮಂಗಲದ ರಂಗಣ್ಣ (50) ಬಂಧಿತ ಆರೋಪಿಗಳು ಎಂದು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ತಿಳಿಸಿದ್ದಾರೆ.
ಪ್ರತ್ಯೇಕ ಮೂರು ಪ್ರಕರಣಗಳನ್ನು ದಾಖಲಿಸಿಕೊಂಡು ಪೊಲೀಸರು ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಅದೇನು ದುರಂತವೊ ಇದು ವರೆಗೂ ಭದ್ರಾವತಿಯ ಪೋಲಿಸರಿಗೆ ಸಂಪೂರ್ಣ ಮಾಹಿತಿ ಇದ್ದರು ಈ ಪಿಕ್ ಪಾಕೆಟರ್ ಗಳು ದಿನದಿಂದ ದಿನಕ್ಕೆ ಕಳ್ಳತನವನ್ನೆ ತಮ್ಮ ಬಂಡವಾಳ ಮಾಡಿಕೊಂಡು ರಾಜ್ಯಾದ್ಯಂತ ಸಭೆ ಸಮಾರಂಭಗಳಲ್ಲಿ ತಮ್ಮ ಕೈಚಳಕದಿಂದ ಅಮಾಯಕ ಮಂದಿಯ ಜೋಬಿಗೆ ಕತ್ತರಿ ಹಾಕುತ್ತಿದ್ದಾರೆ.ಈ ಗಂಡಸರ ತಂಡ ಮಾತ್ರವಲ್ಲದೆ ಮಹಿಳಾ ಮಣಿಗಳ ದೊಡ್ಡ ಪಡೆ ರಾತ್ರಿ ರೈಲಿನಲ್ಲಿ ತಮ್ಮ ಕೈಚಳಕ ತೋರಿಸುತ್ತಿರುತ್ತಾರೆ. ಇವರದೊಂದು ದೊಡ್ಡಮಟ್ಟದ ಗ್ಯಾಂಗ್ ಭದ್ರಾವತಿಯಲ್ಲಿ ನೆಲೆ ಉರಿದೆ. ಭದ್ರಾವತಿಯ ಹೊಸಮನೆ ಮತ್ತು ಇನ್ನೀತರ ಸ್ಥಳದಲ್ಲಿ ಸಾಕಷ್ಟು ವರ್ಷದಿಂದ ತಳವೂರಿದ್ದಾರೆ.ಸ್ವಂತ ಮನೆ ಕೋಟಿ ಬೆಲೆ ಬಾಳುವ ಖದೀಮರು ಇಲ್ಲಿದ್ದಾರೆ ಎಂದರೆ ನೀವು ನಂಬಲೆ ಬೇಕು. ಅದೇನೇ ಇರಲಿ ತಕ್ಷಣವೇ ಕಾರ್ಯಚರಣೆಗೆ ಇಳಿದು ಖದೀಮರನ್ನು ಖೆಡ್ಡಕ್ಕೆ ಕೆಡವಿ ಕೊಂಡ ಕೊಡಗು ಜಿಲ್ಲಾ ಪೋಲಿಸರನ್ನು ಮೆಚ್ಚಲೆ ಬೇಕು