ಶಂಕಿತ ಉಗ್ರ
ರಾಮೇಶ್ವರಂ ಕೆಫೆ ಪ್ರಕರಣ ; ಶಂಕಿತ ಬಾಂಬರ್ ಟೋಪಿ ಖರೀದಿಸಿದ್ದು ಚೆನ್ನೈಯಲ್ಲಿ .!?
ಶಂಕಿತ ಬಾಂಬರ್ ಧರಿಸಿದ್ದ ಟೋಪಿಯ ಜಾಡು ಹಿಡಿದು ಉಗ್ರನ ಪತ್ತೆಗೆ ಮುಂದಾದ ಎನ್‌ಐಎ ತಂಡ
ASHWASURYA/SHIVAMOGGA
✍️ ಸುಧೀರ್ ವಿಧಾತ
ಅಶ್ವಸೂರ್ಯ/ಶಿವಮೊಗ್ಗ: ಬೆಂಗಳೂರಿನ ಕುಂದಲಹಳ್ಳಿ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ ಪ್ರಕರಣ ನೆಡೆದು ಕೇಲವು ದಿನಗಳೆ ಉರುಳಿದರು ಶಂಕಿತ ಜಾಡು ಮಾತ್ರ ಇನ್ನೂ ಪತ್ತೆಯಾಗಿಲ್ಲ. ಆದರೆ ಆತ ಧರಿಸಿದ್ದ ಟೋಪಿಯ ಜಾಡು ಹಿಡಿದು ಹಲವು ಮಹತ್ವದ ಸುಳಿವು ಸಂಗ್ರಹಿಸಿದ್ದಾರೆ ಎನ್ಐಎ ತಂಡ.ಬಾಂಬರ್ ಕೃತ್ಯ ಎಸಗಿದ ಬಳಿಕ ಕೆಫೆಯಿಂದ ಒಂದಷ್ಟು ದೂರಕ್ಕೆ ಹೋಗಿ ಧಾರ್ಮಿಕ ಸ್ಥಳದ ಬಳಿ ಧರಿಸಿದ್ದ ಟೋಪಿ ತೆಗೆದು
ಅಲ್ಲೆಬಿಟ್ಟು ಶರ್ಟ್ ತೆಗೆದು ರೌಂಡ್-ನೆಕ್ ಟಿ-ಶರ್ಟ್ ಧರಿಸಿ ತೆರಳಿದ್ದ. ಆದರೆ ಅಲ್ಲಿ ಪತ್ತೆಯಾಗಿದ್ದ ಆತನ ಟೋಪಿಯ ಜಾಡು ಹಿಡಿದು ಹೊರಟಾಗ ಶಂಕಿತ ಉಗ್ರ ಚೆನ್ನೈಯಲ್ಲಿ ಟೋಪಿ ಖರೀದಿಸಿರುವ ಸುಳಿವು ಸಿಕ್ಕಿದೆ. ಟೋಪಿ ಖರೀದಿಸಿದ ಚಿಲ್ಲರೆ ಅಂಗಡಿಯ ಒಂದು ತಿಂಗಳ ಸಿಸಿಟಿವಿ ಬ್ಯಾಕ್‌ಅಪ್‌ನ್ನು ತನಿಖಾಧಿಕಾರಿಗಳು ಪರಿಶೀಲಿಸಿದ್ದರು. ಆಗ ಕಳೆದ ಜನವರಿ ಅಂತ್ಯದಲ್ಲಿ ಚಿಲ್ಲರೆ ಅಂಗಡಿಯಲ್ಲಿ ಈ ಟೋಪಿ ಖರೀದಿಸಿರುವುದು ಗೊತ್ತಾಗಿದೆ. ಇಬ್ಬರು ಯುವಕರು ಚಿಲ್ಲರೆ ಅಂಗಡಿಗಳಲ್ಲಿ ಟೋಪಿ, ಇತರ ವಸ್ತುಗಳನ್ನು ಖರೀದಿಸುವ ಫೂಟೇಜ್ ತನಿಖಾಧಿಕಾರಿಗಳಿಗೆ ಸಿಕ್ಕಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ವಶಪಡಿಸಿಕೊಂಡ ಟೋಪಿಯಲ್ಲಿ ಕೂದಲು ಪತ್ತೆಯಾಗಿದ್ದು ಇದನ್ನು ಸಂಗ್ರಹಿಸಿ ವಿಧಿ ವಿಜ್ಞಾನ ಪ್ರಯೋಗಾಲಯ (ಎಫ್ಎಸ್‌ಎಲ್)ಕ್ಕೆ ಕಳುಹಿಸಲಾಗಿದೆ. ಇದರ ಆಧಾರದ ಮೇಲೆ ವೈಜ್ಞಾನಿಕವಾಗಿ ಕೆಲವೊಂದು ಪ್ರಕ್ರಿಯೆ ಮೂಲಕ ಆತನ ಕುಟುಂಬದ ಮೂಲ ಪತ್ತೆಹಚ್ಚಲು ಒಂದು ತಂಡ ಮುಂದಾಗಿದೆ.
ಶಂಕಿತ ಉಗ್ರನ ಜೋತೆ ಟೋಪಿ ಖರೀದಿಸುವ ವೇಳೆ ಇದ್ದ ಆತನ ಸಹಚರನ ಬಂಧನಕ್ಕೆ ಎನ್ಐಎ ತಂಡ ಮುಂದಾಗಿದೆ ಇಬ್ಬರು ಶಂಕಿತರು ಶಿವಮೊಗ್ಗ ಮೂಲದವರು ಎಂದು ಅನುಮಾನಿಸಲಾಗಿದೆ.