ಕರ್ನಾಟಕ ಕಾಂಗ್ರೆಸ್ ಪಾರ್ಟಿ: ಪಟ್ಟು ಹಿಡಿದು ತಮ್ಮವರಿಗೆ ಲೋಕಸಭಾ ಟಿಕೆಟ್ ಗಿಟ್ಟಿಸಿಕೊಂಡ ಸಚಿವರಿಗೆ ತಾಕೀತು ನಿಮ್ಮ ಅಭ್ಯರ್ಥಿಯನ್ನು ಗೆಲ್ಲಿಸಿ ಇಲ್ಲವೇ ಕುರ್ಚಿ ಬಿಡಿ: ಕಾಂಗ್ರೆಸ್ ಹೈಕಮಾಂಡ್

.

ಕರ್ನಾಟಕ ಕಾಂಗ್ರೆಸ್ ಪಾರ್ಟಿ: ಪಟ್ಟು ಹಿಡಿದು ತಮ್ಮವರಿಗೆ ಲೋಕಸಭಾ ಟಿಕೆಟ್ ಗಿಟ್ಟಿಸಿಕೊಂಡ ಸಚಿವರಿಗೆ ತಾಕೀತು ನಿಮ್ಮ ಅಭ್ಯರ್ಥಿಯನ್ನು ಗೆಲ್ಲಿಸಿ ಇಲ್ಲವೇ ಕುರ್ಚಿ ಬಿಡಿ: ಕಾಂಗ್ರೆಸ್ ಹೈಕಮಾಂಡ್

ಶಿವಮೊಗ್ಗ: ಸಾಕಷ್ಟು ವಿರೋಧದ ನಡುವೆಯೂ ತಮ್ಮ ಮಕ್ಕಳು, ಕುಟುಂಬ, ಸಹೋದರ ಸಹೋದರಿಯರಿಗೆ ತಮ್ಮ ಬೆಂಬಲಿಗರಿಗೆ ಬಿಟ್ಟು ಬಿಡದೆ ಟಿಕೆಟ್‌ ಗಿಟ್ಟಿಸಿಕೊಂಡಿರುವ ಸಚಿ ವರು ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿ ಕೊಂಡು ಬರಬೇಕು ಬರದಿದ್ದರೆ ನಿಮ್ಮ ಸಚಿವಸ್ಥಾನದ ಕುರ್ಚಿಯನ್ನು ಖಾಲಿ ಮಾಡಬೇಕಾಗುತ್ತದೆ ಎಂದು ಫಲಾನುಭವಿ ಸಚಿವರಿಗೆ ಕಾಂಗ್ರೆಸ್‌ ಹೈಕಮಾಂಡ್‌ ಕಟ್ಟಪ್ಪಣೆ ಮಾಡಿದೆ.


ಆಡಳಿತಾರೂಢ ಕಾಂಗ್ರೆಸ್‌ ಪಕ್ಷ ಈ ಚುನಾವಣೆ ಅತ್ಯಂತ ಪ್ರತಿಷ್ಠೆ ಮಾತ್ರವಲ್ಲದೆ ಸವಾಲಾಗಿ ತೆಗೆದುಕೂಂಡಿದೆ. ಕಳೆದ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಜೆಡಿಎಸ್‌-ಕಾಂಗ್ರೆಸ್‌ ಮೈತ್ರಿ ಸರಕಾರವಿದ್ದರೂ ತಲಾ ಒಂದೊಂದು ಕ್ಷೇತ್ರಗಳಲ್ಲಿ ಮಾತ್ರ ಗೆಲ್ಲಲು ಸಾಧ್ಯವಾಗಿತ್ತು. ಉಳಿ ದಂತೆ ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಬಿಟ್ಟರೆ ಉಳಿದೆಲ್ಲ 25 ಕ್ಷೇತ್ರಗಳು ಬಿಜೆಪಿ ಪಾಲಾಗಿದ್ದವು. ಆದರೆ ಈ ಬಾರಿ ಪೂರ್ಣ ಪ್ರಮಾಣದಲ್ಲಿ ಕಾಂಗ್ರೆಸ್‌ ಸರಕಾರವೇ ಇರುವುದರಿಂದ ಕನಿಷ್ಠ ಇಪ್ಪತ್ತು ಕ್ಷೇತ್ರಗಳಲ್ಲಿ ಗೆಲ್ಲಲೇ ಬೇಕೆಂಬ ಲೆಕ್ಕಾಚಾರದಲ್ಲಿ ಹಲವು ಬಗೆಯ ಸವಾಲು ಸ್ವೀಕರಿಸಿ ಸಚಿವರ ಬೇಡಿಕೆಗಳಿಗೆ ಮನ್ನಣೆ ನೀಡಿರುವ ಹೈಕಮಾಂಡ್‌, ಗೆದ್ದುಕೊಂಡು ಬರ ಬೇಕೆಂಬ ಗುರಿ ನೀಡಿದೆ. ಹೀಗಾಗಿ ಸಚಿವರುಗಳು ಇನ್ನಿಲ್ಲದ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಗೆದ್ದರೆ ಸಚಿವರ ಕಡೆಯವರು ಲೋಕಸಭೆ ಪ್ರವೇಶಿಸುತ್ತಾರೆ,ಅವರ ಅಭ್ಯರ್ಥಿಗಳು ಸೋತರೆ ಸಚಿವರು ಮನೆಗೆ ಹೋಗುತ್ತಾರೆ ಎಂಬ ಚರ್ಚೆ ಆರಂಭವಾಗಿದೆ.
ಸಬೂಬು ಹೇಳದೆ ಸಚಿವ ಸ್ಥಾನ ಬಿಡಬೇಕು


ರಾಜ್ಯದ 28 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಇದು ವರೆಗೆ ಪ್ರಕಟಿಸಿರುವ 24 ಕ್ಷೇತ್ರಗಳ ಅಭ್ಯರ್ಥಿಗಳ ಪೈಕಿ 14 ಕ್ಷೇತ್ರಗಳ ಟಿಕೆಟ್‌ಗಳು ಸಚಿವರ ಪುತ್ರರು, ಪುತ್ರಿಯರು, ಪತ್ನಿ ಹಾಗೂ ಸಹೋದರ ಸಹೋದರಿಯರ ಪಾಲಾಗಿವೆ. ಚುನಾವಣೆಯನ್ನು ಗೆಲ್ಲಲೇಬೇಕೆಂಬ ದೃಷ್ಟಿಯಿಂದ ಅಭ್ಯರ್ಥಿ ಆಯ್ಕೆ, ಚುನಾವಣೆ ನಿರ್ವಹಣೆ ಎಲ್ಲವನ್ನೂ ಪಕ್ಷದ ಜಿಲ್ಲಾ ಉಸ್ತುವಾರಿ ಸಚಿವರಿಗೆ ವಹಿಸಿದ್ದರಿಂದ ಚುನಾವಣೆಯನ್ನು ಎಲ್ಲಾ ರೀತಿಯಲ್ಲು ಎದುರಿಸಲು ಸನ್ನದ್ದರಾಗಿದ್ದಾರೆ, ಅದರಲ್ಲೂ ತಮ್ಮವರನ್ನೇ ಗೆಲ್ಲಿಸುವುದು ಸೂಕ್ತ ಎಂಬ ತೀರ್ಮಾನಕ್ಕೆ ಬಂದ ಸಚಿವರು ಕುಟುಂಬದ ಸದಸ್ಯರಿಗೆ ಟಿಕೆಟ್‌ ಕೊಡಿಸುವಲ್ಲಿಯು ಯಶಸ್ವಿಯಾಗಿದ್ದಾರೆ. ಆದರೆ ಈಗ ತಮ್ಮವರಿಗೆ ಟಿಕೆಟ್ ಕೊಡಿಸಿದ ಸಚಿವರುಗಳ ಮುಂದೆ ದೊಡ್ಡ ಸವಾಲು ಎದುರಾಗಲಿದೆ ತಮ್ಮವರನ್ನು ಗೆಲ್ಲಿಸಿಕೊಂಡು ಬರಲೆಬೇಕು ಸಚಿವರ ಅಭ್ಯರ್ಥಿಗಳು ಸೋತಿದ್ದೆ ಆದರೆ ನೈತಿಕ ಹೊಣೆ ಹೊತ್ತು ಯಾವುದೇ ಕಾರಣ ಹೇಳದೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಗುತ್ತದೆ ಎಂದು ಖಡಕ್ ಅದ ಸಂದೇಶವನ್ನು ಕಾಂಗ್ರೆಸ್‌ ವರಿಷ್ಠರು ಟಿಕೆಟ್‌ ಗಿಟ್ಟಿಸಿಕೊಂಡಿರುವ ಸಚಿವರಿಗೆ ನೀಡಿದ್ದಾರೆ ಎಂದು ಪಕ್ಷದ ಉನ್ನತ ಮೂಲಗಳು ತಿಳಿಸಿವೆ.
ಫ‌ಲಿತಾಂಶ ಬಳಿಕ ಪುನಾರಚನೆ ಗ್ಯಾರಂಟಿ
ಚುನಾವಣೆ ಫ‌ಲಿತಾಂಶ ಜೂ. 4ರಂದು ಹೊರಬೀಳಲಿದ್ದು, ಅನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಚಿವ ಸಂಪುಟ ಪುನಾರಚನೆ ಖಚಿತ ಎಂಬ ಮಾತು ಈಗ ಕಾಂಗ್ರೆಸ್‌ ಪಕ್ಷದೊಳಗೆ ಹರಿದಾಡುತ್ತಿದೆ.

Leave a Reply

Your email address will not be published. Required fields are marked *

Optimized by Optimole
error: Content is protected !!