ಶಿವಮೊಗ್ಗದಲ್ಲಿ ಕಾಂಗ್ರೆಸ್ ವಿರುದ್ಧ ಗರ್ಜಿಸಿದ ಪ್ರಧಾನಿ ಮೋದಿ

ಶಿವಮೊಗ್ಗದಲ್ಲಿ ಕಾಂಗ್ರೆಸ್ ವಿರುದ್ಧ ಗರ್ಜಿಸಿದ ಪ್ರಧಾನಿ ಮೋದಿ

ASHWASURYA/SHIVAMOGGA

SUDHIR VIDHATA

ಅಶ್ವಸೂರ್ಯ/ಶಿವಮೊಗ್ಗ

ಶಿವಮೊಗ್ಗ ,ಮಾ.18‌: ಲೋಕಸಭೆ ಚುನಾವಣೆ ದಿನಾಂಕ ಘೋಷಣೆಯಾದ ಬೆನ್ನಲ್ಲೇ ಪ್ರಧಾನಿ ನರೇಂದ್ರಮೋದಿ ಅವರು ಕರ್ನಾಟಕದಲ್ಲಿ ಮತ್ತೆ ರಣಕಹಳೆ ಮೊಳಗಿಸುವ ಮೂಲಕ ಚುನಾವಣಾ ಕಾವು ರಂಗೇರುವಂತೆ ಮಾಡಿದ್ದಾರೆ. ಎರಡು ದಿನಗಳ ಹಿಂದಷ್ಟೇ ಕಲ್ಯಾಣ ಕರ್ನಾಟಕದ ಮುಖ್ಯ ಕೇಂದ್ರ ಕಲಬರುಗಿಯಲ್ಲಿ ಬಿಜೆಪಿಯ ಪರ ಪ್ರಚಾರ ಮಾಡಿದ್ದ ಮೋದಿಯವರು ಇಂದು ಮಲೆನಾಡಿನ ತವರೂರು ಶಿವಮೊಗ್ಗ ನಗರದಲ್ಲಿ ಕರ್ನಾಟಕದ ನಾಲ್ಕು ಜಿಲ್ಲೆಗಳ ಅಭ್ಯರ್ಥಿಗಳ ಪರವಾಗಿ ಮತಯಾಚಿಸಿ ಬಿಜೆಪಿಯಲ್ಲಿ ಮಿಂಚಿನ ಸಂಚಲನ ಸೃಷ್ಟಿಸಿದ ಜೋತೆಗೆ ವಿರೋಧ ಪಕ್ಷಗಳ ವಿರುದ್ಧ ರಣಕಹಳೆ ಮೊಳಗಿಸಿದರು.
ಶಿವಮೊಗ್ಗ ನಗರದ ಅಲ್ಲಮ್ಮಪ್ರಭು ( ಫ್ರೀಡಂ ಪಾರ್ಕ್) ಮೈದಾನದಲ್ಲಿ ಶಿವಮೊಗ್ಗ ಕ್ಷೇತ್ರದ ಜೋತೆಗೆ ದಾವಣಗೆರೆ, ಚಿತ್ರದುರ್ಗ ಮತ್ತು ಚಿಕ್ಕಮಗಳೂರು ಹಾಗೂ ಮಂಗಳೂರು ಕ್ಷೇತ್ರದ ಅಭ್ಯರ್ಥಿಗಳ ಪರವಾಗಿ ಮತಯಾಚನೆ ಮಾಡಿದರು. ಮೋದಿ ಕರ್ನಾಟಕ ರಾಜ್ಯದಲ್ಲಿ ಈ ಬಾರಿ 28 ಕ್ಷೇತ್ರಗಳಲ್ಲೂ ಬಿಜೆಪಿ, ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬರಬೇಕೆಂದು ನೆರದಿದ್ದ ಬಿಜೆಪಿಯ ನಾಯಕರು ಕಾರ್ಯಕರ್ತರು ಹಾಗೂ ಮತದಾರರಲ್ಲಿ ವಿನಂತಿ ಮಾಡಿದರು.


ಎಂದಿನಂತೆ ಕನ್ನಡದಲ್ಲೇ ತಮ್ಮ ಭಾಷಣವನ್ನು ಆರಂಭಿಸಿದ ಮೋದಿಯವರು ತಮ್ಮ ಅರ್ಧಗಂಟೆಗಳ ಭಾಷಣದಲ್ಲಿ ಕಾಂಗ್ರೆಸ್ ಮತ್ತು ಇಂಡಿಯಾ ಮೈತ್ರಿಕೂಟಗಳನ್ನು ಮನಬಂದಂತೆ ತರಾಟೆಗೆ ತೆಗೆದುಕೊಂಡರು.ಕಲಬುರಗಿ ಯಲ್ಲಿ ಭಾಷಣದಲ್ಲಿ ಅಲ್ಲಿಯ ಮತದಾರರಿಗೆ ಕೇಳಿದಂತೆ ಶಿವಮೊಗ್ಗದಲ್ಲೂ
ಕರ್ನಾಟಕದಲ್ಲಿ ಇಲ್ಲಿನ ಜನತೆ ನನಗೆ ಒಂದು ಗ್ಯಾರಂಟಿಯನ್ನು ನೀಡಬೇಕು. ಲೋಕಸಭಾ ಚುನಾವಣೆಯಲ್ಲಿ ಎಲ್ಲಾ 28 ಕ್ಷೇತ್ರಗಳನ್ನು ಗೆಲ್ಲಿಸಿ ಕಾಂಗ್ರೆಸ್‍ಗೆ ಒಂದೇ ಒಂದು ಕ್ಷೇತ್ರವನ್ನು ಸಹ ಬಿಟ್ಟು ಕೊಡುವುದಿಲ್ಲ ಎಂದು ನನಗೆ ಗ್ಯಾರಂಟಿ ಕೊಡಬೇಕು ಎಂದರು. ಕರುನಾಡಿನಲ್ಲಿ ಎಲ್ಲಾ ಕಡೆ ಬಿಜೆಪಿ ಮತ್ತು ಜೆಡಿಎಸ್ ಅಭ್ಯರ್ಥಿಗಳು ಗೆಲ್ಲಬೇಕೆಂದು ಮನವಿ ಮಾಡಿಕೊಂಡರು.ಇಲ್ಲಿಯ ಆಡಳಿತ ಪಕ್ಷ ಕಾಂಗ್ರೆಸ್ ಕರ್ನಾಟಕವನ್ನು ಗ್ಯಾರಂಟಿ ನೆಪದಲ್ಲಿ ಲೂಟಿ ಹೊಡೆಯುತ್ತಿದೆ. ಇಲ್ಲಿನ ಹಣವು ದೆಹಲಿ ಕಾಂಗ್ರೆಸ್ ನಾಯಕರ ಪಾಲಾಗುತ್ತಿದೆ. ದೆಹಲಿಯ ನಾಯಕರು ಕರ್ನಾಟಕವನ್ನು ಎಟಿಎಂ ಮಾಡಿಕೊಂಡಿದ್ದಾರೆ. ಇದಕ್ಕೆ ಅವಕಾಶ ಮಾಡಿಕೊಡಬೇಡಿ. ಎನ್‍ಡಿಎ ಅಭ್ಯರ್ಥಿಗಳನ್ನು ಬಹುಮತದಿಂದ ಗೆಲ್ಲಿಸಿ ಎಂದು ಮನವಿ ಮಾಡಿದರು.


ಹತ್ತು ವರ್ಷಗಳಲ್ಲಿ ನಾವು ಒಂದೇ ಒಂದು ಹಗರಣವಿಲ್ಲದೆ ಸರ್ಕಾರವನ್ನು ಮುನ್ನಡೆಸಿದ್ದೇವೆ. ಕೇಂದ್ರದಲ್ಲಿ ಮೂರನೇ ಬಾರಿಗೆ ನಾವು ಅಧಿಕಾರಕ್ಕೆ ಬರುವುದು ನೂರಕ್ಕೆ ನೂರರಷ್ಟು ಖಚಿತ. ಗ್ಯಾರಂಟಿಗಳನ್ನು ನಂಬಿ ಕಾಂಗ್ರೆಸ್‍ಗೆ ಪಕ್ಷಕ್ಕೆ ಮರಳಾಗಬೇಡಿ ಮತಹಾಕಬೇಡಿ. ವಿಶ್ವದಲ್ಲಿ ಭಾರತವನ್ನು ಮೊದಲ ಸ್ಥಾನಕ್ಕೆ ಕೊಂಡೊಯ್ಯಬೇಕಾದರೆ ಬಿಜೆಪಿಯನ್ನು ಗೆಲ್ಲಿಸಿ ಎಂದು ವಿನಮ್ರವಾಗಿ ನೆರೆದಿದ್ದ ಮತದಾರರಲ್ಲಿ ಮನವಿ ಮಾಡಿದರು.
ಕರ್ನಾಟಕದಲ್ಲಿ ಎಟಿಎಂ ಸರ್ಕಾರವನ್ನು ಬುಡಸಮೇತವಾಗಿ ಕಿತ್ತೊಯ್ಯುವ ಸಂಕಲ್ಪವನ್ನು ಮತದಾರರು ಮಾಡಬೇಕು. ಕಳೆದ ಬಾರಿ 25 ಕ್ಷೇತ್ರಗಳಲ್ಲಿ ಗೆಲ್ಲಿಸಿಕೊಟ್ಟಿದ್ದೀರಿ. ಈ ಬಾರಿ 28 ಕ್ಷೇತ್ರಗಳನ್ನು ಗೆಲ್ಲಿಸಿ ದಾಖಲೆ ಬರೆಯಬೇಕೆಂದು ಕಾಂಗ್ರೆಸ್ ಪಕ್ಷಕ್ಕೆ ಒಂದೆ ಒಂದು ಗೆಲುವು ಸಿಗದಹಾಗೆ ಮಾಡಬೇಕು ಎಂದು ಕೋರಿದರು.ಶಿವಮೊಗ್ಗದ ಸಭೆಗೂ ಮುನ್ನ ತೆಲಂಗಾಣದಿಂದ ವಿಶೇಷ ವಿಮಾನದಲ್ಲಿ ಸೋಗಾನೆ ಬಳಿ ಇರುವ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಮೋದಿ ಅವರನ್ನು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹಾಗೂ ಶಿವಮೊಗ್ಗ ಜಿಲ್ಲಾ ಘಟಕ ಮೋದಿ ಜಿ ಅವರನ್ನು ಆತ್ಮೀಯವಾಗಿ ಬರಮಾಡಿಕೊಂಡರು.
ಅಲ್ಲಿಂದ ಅಲ್ಲಮ್ಮಪ್ರಭು ಕ್ರೀಡಾಂಗಣಕ್ಕೆ ಆಗಮಿಸಿದ ಮೋದಿ ಅವರು ನಂತರ ತೆರೆದ ಜೀಪ್‍ನಲ್ಲಿ ಕ್ರೀಡಾಂಗಣದ ಮಧ್ಯಭಾಗದಿಂದ ಸಮಾವೇಶ ನಡೆಯುವ ವೇದಿಕೆಯ ಕಡೆಗೆ ಆಗಮಿಸಿದರು. ಈ ವೇಳೆ ಮೋದಿಯವರಿಗೆ ನೆರೆದಿದ್ದ ಕಾರ್ಯಕರ್ತರ ಹರ್ಷೋದ್ಘಾರ, ಜೈಕಾರ, ಜೈ ಮೋದಿ ಎಂಬ ಘೋಷಣೆಗಳು ಮೊಳಗಿದವು.

ವೇದಿಕೆಯಲ್ಲಿ ಮಾಜಿ ಸಿಎಂ ಯಡಿಯೂರಪ್ಪ,ಬಿಜೆಪಿಯ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ,ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ,ಶಿವಮೊಗ್ಗ ಶಾಸಕ ಚನ್ನಬಸಪ್ಪ (ಚನ್ನಿ)ಜೆಡಿಎಸ್ ಪಕ್ಷದ ಶಿವಮೊಗ್ಗ ಗ್ರಾಮಾಂತರ ಶಾಸಕಿ ಶಾರದಾ ಪೂರ್ಯನಾಯ್ಕ್ ,ಮಾಜಿ ಶಾಸಕ ಹಾಲಪ್ಪ,ಮಾಜಿ ಶಾಸಕ ಕುಮಾರ್ ಬಂಗಾರಪ್ಪ ಸಭೆಯಲ್ಲಿ ಹಾಜರಿದ್ದರು ಇನ್ನೂ ದಾವಣಗೆರೆ, ಚಿತ್ರದುರ್ಗ, ಉಡುಪಿ/ಚಿಕ್ಕಮಗಳೂರು, ಮಂಗಳೂರು ಕ್ಷೇತ್ರದ ಅಭ್ಯರ್ಥಿಗಳು ಹಾಜರಿದ್ದರು ಮೋದಿ ಇವರ ಪರವಾಗಿಯು ಮತಯಾಚಿಸಿದರು.
ಈ ಎಲ್ಲಾ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ ಶಿವಮೊಗ್ಗ ಕ್ಷೇತ್ರದ ಅಭ್ಯರ್ಥಿ ಬಿ ವೈ ರಾಘವೇಂದ್ರ ಒಬ್ಬ ಅಭ್ಯರ್ಥಿಯಾಗಿ ಲವಲವಿಕೆಯಿಂದ ಇದ್ದು ಈ ಒಂದು ಪ್ರಧಾನಿ ಮೋದಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ನೆರವೇರಿಸಿದರು. ಇನ್ನೊಂದು ಪ್ರಮುಖ ವಿಷಯ ಹಾವೇರಿಯಿಂದ ಟಿಕೆಟ್ ಸಿಗದೆ ಮುನಿಸಿಕೊಂಡು ಶಿವಮೊಗ್ಗ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಫರ್ದಿಸುತ್ತಿರುವ ಈಶ್ವರಪ್ಪ ಗೈರುಹಾಜರು ಎದ್ದು ಕಾಣುತ್ತಿತ್ತು. ಕೊನೆಗೂ ಈಶ್ವರಪ್ಪನವರ ಸ್ಫರ್ಧೆ ಖಚಿತ ಎನ್ನುವಂತೆ ಕಾಣುತ್ತಿದೆ

Leave a Reply

Your email address will not be published. Required fields are marked *

Optimized by Optimole
error: Content is protected !!