ಲೋಕಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯಲ್ಲಿ ಬಿಗಿ ಪೋಲಿಸ್ ಬಂದೋಬಸ್ತ್: ನಗರದಲ್ಲಿ ಪಥ ಸಂಚಲನ
ಬರಲಿರುವ ಲೋಕಸಭಾ ಚುನಾವಣೆ – 2024 ರ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಶ್ರೀ ಮಿಥುನ್ ಕುಮಾರ್ ಜಿ.ಕೆ ಐಪಿಎಸ್, ಮಾನ್ಯ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ ರವರ ಮಾರ್ಗದರ್ಶನದಲ್ಲಿ, ಶ್ರೀ ಅನಿಲ್ ಕುಮಾರ್ ಭುಮರಡ್ಡಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ ರವರ ನೇತೃತ್ವದಲ್ಲಿ ಕೇಂದ್ರೀಯ ಮೀಸಲು ಪಡೆ ಮತ್ತು ಶಿವಮೊಗ್ಗ ಜಿಲ್ಲಾ ಪೊಲೀಸ್ ವತಿಯಿಂದ ಈ ದಿನ ದಿನಾಂಕಃ 08-03-2024 ರಂದು ಸಂಜೆ ಶಿವಮೊಗ್ಗ ನಗರದಲ್ಲಿ, ಪೊಲೀಸ್ ಪಥ ಸಂಚಲನವನ್ನು ( ರೂಟ್ ಮಾರ್ಚ್) ಹಮ್ಮಿಕೊಂಡಿದ್ದು, ಸದರಿ ಪಥಸಂಚನವನ್ನು ಶಿವಮೊಗ್ಗ ನಗರದ ಶಿವಪ್ಪ ನಾಯಕ ವೃತ್ತದಿಂದ ಪ್ರಾರಂಭಿಸಿ, ಎಎ ವೃತ್ತ, ಓಟಿ ರಸ್ತೆ,ಸೀಗೇಹಟ್ಟಿ, ಬಿಬಿ ರಸ್ತೆ, ಆರ್ ಎಸ್ ಪಾರ್ಕ್, ಎಸ್ ಪಿ ಎಂ ರಸ್ತೆ, ಕೋಟೆ ಮಾರಿಕಾಂಬ ದೇವಸ್ಥಾನ ರಸ್ತೆ ಮುಖಾಂತರ ಭೀಮೇಶ್ವರ ದೇವಸ್ಥಾನದ ಹತ್ತಿರ ಬಂದು ಮುಕ್ತಾಯ
ಮಾಡಲಾಯಿತು.
ಸದರಿ ಪಥ ಸಂಚನದಲ್ಲಿ ಶ್ರೀ ಪ್ರಕಾಶ್, ಡಿವೈಎಸ್.ಪಿ ಡಿಎಆರ್, ಶಿವಮೊಗ್ಗ ಶ್ರೀಮತಿ ಸಬಿತಾ, ಪೊಲೀಸ್ ನಿರೀಕ್ಷಕರು ಮತ್ತು ಶ್ರೀಮತಿ ಜ್ಯೋತಿ,ಪೊಲೀಸ್ ನಿರೀಕ್ಷಕರು, ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಮಹಿಳಾ ತುಕಡಿ), ಶ್ರೀ ರವಿ ಪಾಟೀಲ್, ಪೊಲೀಸ್ ನಿರೀಕ್ಷಕರು, ದೊಡ್ಡಪೇಟೆ ಪೊಲೀಸ್ ಠಾಣೆ, ಶ್ರೀ ಆನಂದ್, ಆರ್.ಪಿ.ಐ ಡಿಎಆರ್ ಶಿವಮೊಗ್ಗ, ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಮಹಿಳಾ ತುಕಡಿ)ಯ ಅಧಿಕಾರಿ ಹಾಗೂ ಸಿಬ್ಬಂಧಿಗಳು, ದೊಡಟ್ಡಪೇಟೆ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರು, ಸಿಬ್ಬಂಧಿಗಳು ಹಾಗೂ ಡಿಎಆರ್ ಪೊಲೀಸ್ ಅಧಿಕಾರಿ ಸಿಬ್ಬಂಧಿಗಳು ಭಾಗವಹಿಸಿದ್ದರು.