ಎಂಎಡಿಬಿ ಅಧ್ಯಕ್ಷರಾಗಿ ಆರ್ ಎಂ ಮಂಜುನಾಥ್ ಗೌಡ ಅಧಿಕಾರ ಸ್ವೀಕಾರ
ಕಾಂಗ್ರೆಸ್ಸಿನ ಹಿರಿಯ ಮುಖಂಡ ತೀರ್ಥಹಳ್ಳಿಯ ಡಾ.ಆರ್.ಎಂ. ಮಂಜುನಾಥ್ ಗೌಡರು ಇಂದು ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ(ಎಂಎಡಿಬಿ)ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದರು.
ಅಧಿಕಾರ ಸ್ವೀಕರಿಸಿ ಮಾತನಾಡಿದ ಆರ್.ಎಂ.ಮಂಜುನಾಥ್ ಗೌಡ್ರು, ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ಎಂಬುವುದು ದಿವಂಗತ ಬಂಗಾರಪ್ಪನವರ ಕನಸು. ನನಗೆ ಕೊಟ್ಟ ಈ ಜವಬ್ದಾರಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸುವೆ. ಮಲೆನಾಡು ಅಭಿವೃದ್ಧಿ ಮಂಡಳಿ ಎಂಬುವುದು ಬಹುದೊಡ್ಡದಾದ ಪ್ರಾಧಿಕಾರವಾಗಿದೆ. ಇಲ್ಲಿ ಬೇಕಾದಷ್ಟು ಕೆಲಸವಿದೆ ಎಂಬುವುದು ನಿಜ. ನಿಭಾಯಿಸುವುದು ಅಷ್ಟು ಸುಲಭವಲ್ಲ ಎಂಬುವುದು ಗೊತ್ತು. ಆರ್ಥಿಕ ಮುಗ್ಗಟ್ಟಿನ ಇಂತಹ ಪರಿಸ್ಥಿತಿಯಲ್ಲೂ ಪ್ರಾಧಿಕಾರವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುವೆ ಎಂದರು.
ಜವಬ್ದಾರಿ ಇದೆ ಎಂಬುವುದು ನಿಜ. ಅದನ್ನು ಸಮರ್ಥವಾಗಿ ನಿಭಾಯಿಸುವೇ ಎಂಬ ವಿಶ್ವಾಸವು ನನಗೆ ಇದೆ. ಪ್ರವಾಸೋಧ್ಯಮಕ್ಕೆ ಹೆಚ್ಚು ಒತ್ತು ಕೊಡುವೆ ಮಲೆನಾಡು ಭಾಗಗಳಲ್ಲಿ ಕಾಲಸಂಕಗಳು ಅಭಿವೃದ್ಧಿಯಾಗಬೇಕಾಗಿದೆ. ಅನೇಕ ಕೆಲಸಗಳು ಇವೆ. ನನ್ನ ಮೇಲೆ ವಿಶೇಷ ವಿಶ್ವಾಸವಿಟ್ಟು, ಈ ಹುದ್ದೆ ನೀಡಲಾಗಿದೆ. ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಮತ್ತೆಲ್ಲ ಸಚಿವರಿಗೆ ಅಭಿನಂದನೆಗಳು ಎಂದರು.
ಸರ್ಕಾರ ಗ್ಯಾರಂಟಿಗಳ ನಡುವೆ ಉತ್ತಮವಾಗಿ ಕೆಲಸ ಮಾಡುತ್ತಿದೆ. ಜನರಲ್ಲಿ ಧೈರ್ಯ ಮೂಡಿದೆ. ವಿರೋಧ ಪಕ್ಷಗಳು ಏನೇ ಹೇಳಲಿ ಸರ್ಕಾರ ಉತ್ತಮ ಕೆಲಸ ಮಾಡುತ್ತಿದೆ. ಚಿಕ್ಕಪುಟ್ಟ ವಿಚಾರಗಳಿಗೆ ತಲೆಕೆಡಿಸಿಕೊಳ್ಳುವುದಿಲ್ಲ. ಕಾಂಗ್ರೆಸ್ ಸರ್ಕಾರ ಜನರಲ್ಲಿ ವಿಶ್ವಾಸ ಮೂಡಿಸಿದೆ ಎಂದರು.
ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ಮಾತನಾಡಿ,
ಆರ್.ಎಂ. ಮಂಜುನಾಥ್ ಗೌಡರ ದಕ್ಷತೆಗಾಗಿ ಈ ಹುದ್ದೆ ಬಂದಿದೆ. ಅವರ ಜವಬ್ದಾರಿ ಮತ್ತಷ್ಟು ಹೆಚ್ಚಿದೆ. ಸಹಕಾರಿ ಕ್ಷೇತ್ರದ ಸಾಮಾನ್ಯ ಪ್ರತಿನಿಧಿಯಾಗಿ ಬಂದ ಅವರು, ಪ್ರಬಲ ಮುಖಂಡರಾಗಿ ಸಹಕಾರ ರತ್ನ ಪ್ರಶಸ್ತಿ ಪಡೆಯುವ ಮಟ್ಟಕ್ಕೆ ಹೋಗಿ ಈಗ ಈ ದೊಡ್ಡ ಹುದ್ದೆಯನ್ನು ಅಲಂಕರಿಸಿದ್ದಾರೆ ಎಂದರು.
ಚಂಡು ಎಷ್ಟು ಪುಟಿದರೂ ಅಷ್ಟೇ ವೇಗವಾಗಿ ವಾಪಾಸ್ಸು ಬರುವಂತೆ ಅನೇಕ ಏಳುಬೀಳುಗಳ ನಡುವೆಯೂ ಆರ್.ಎಂ.ಮಂಜುನಾಥ್ ಗೌಡರು ಮತ್ತೆ ಮತ್ತೆ ಪುಟಿದೆದಿದ್ದಾರೆ. ಅವರು ಗಟ್ಟಿಕುಳ. ಅವರು ಈ ಹುದ್ದೆಯನ್ನು ಮತ್ತಷ್ಟು ವಿಸ್ತಾರಗೊಳಿಸಲಿ. ಅಭಿವೃದ್ಧಿಪಡಿಸಲಿ ಇದೊಂದು ಬಹುದೊಡ್ಡ ವಿಸ್ತಾರವಾದ ಕ್ಷೇತ್ರವಾಗಿದೆ. 13 ಜಿಲ್ಲೆಗಳು ಬರುತ್ತವೆ. 72ಕ್ಕೂ ಹೆಚ್ಚು ಶಾಸಕರು ಇಲ್ಲಿರುತ್ತಾರೆ. ಹಾಗಾಗಿ ಈ ಕ್ಷೇತ್ರವನ್ನು ಅವರು ಮತ್ತಷ್ಟು ವಿಸ್ತರಿಸಲಿ ಎಂದರು.
ಚನ್ನಗಿರಿ ಕ್ಷೇತ್ರದ ಶಾಸಕ ಶಿವಗಂಗಾ ಬಸವರಾಜ್ ಮಾತನಾಡಿ
, ಆರ್.ಎಂ.ಮಂಜುನಾಥ್ ಗೌಡರು ಯುವಕರಿಗೆ ಪ್ರೋತ್ಸಾಹ ನೀಡುತ್ತಾರೆ. ಅತ್ಯಂತ ಪ್ರೀತಿಯ ಮನುಷ್ಯ ಶಾಸಕರಾಗ ಬಯಸಿದ್ದರು ಆಗಲಿಲ್ಲ. ಆದರೆ, 86 ಶಾಸಕರು ಕೂಡ ಅವರ ಮುಂದೆ ಕುಳಿತುಕೊಳ್ಳುತ್ತಾರೆ. ಒಳ್ಳೆಯ ಕೆಲಸ ಮಾಡಲಿ ಎಂದು ಹಾರೈಸಿದರು.
ಶಾಸಕ ಬೇಳೂರು ಗೋಪಾಲಕೃಷ್ಣ ಮಾತನಾಡಿ,
ತೀರ್ಥಹಳ್ಳಿಯ ಶಾಸಕರನ್ನಾಗಿ ಆರ್.ಎಂ.ಮಂಜುನಾಥ್‌ಗೌಡರನ್ನು ನೋಡಬೇಕೆಂಬುದೇ ನನ್ನ ಆಸೆ. ಮುಂದಿನ ದಿನಗಳಲ್ಲಿ ಇದು ಈಡೇರುತ್ತದೆ. ಗೌಡರ ಪರವಾಗಿ ನಾನು ಯಾವಾಗಲೂ ಇರುತ್ತೇನೆ ಎಂದರು.
ರಾಜಕೀಯದ ಈ ತುಳಿತದ ಕ್ಷೇತ್ರವನ್ನು ಮೆಟ್ಟಿ ನಿಂತವರು ಗೌಡರು, ಸಹಕಾರ ಕ್ಷೇತ್ರ, ರಾಜಕೀಯ ಕ್ಷೇತ್ರ ಎರಡರಲ್ಲೂ ಮಿಂಚಿದವರು. ಅವರ ಪ್ರೇರಣೆ ಅಪಾರವಾದುದು. ಅನೇಕ ಹೋರಾಟಗಳಿಂದ ಅವರು ಮೇಲೆ ಬಂದಿದ್ದಾರೆ. ಪಕ್ಷ ಬೇದ ಮರೆತು ನಾನು ಸಹ ಹೋರಾಟದಲ್ಲಿ ತೊಡಗಿದ್ದೆ. ಅವರಿಗೆ ಒಳ್ಳೆಯದಾಗಲಿ, ಅವರು ಕೂಡ ಮುಂದೆ ಶಾಸಕರಾಗಲಿ ಎಂದರು.
ಈ ಸಂದರ್ಭದಲ್ಲಿ ಆರ್.ಎಂ.ಮಂಜುನಾಥ್ ಗೌಡರ ಅಭಿಮಾನಿಗಳು, ರಾಜಕೀಯ ಮುಖಂಡರು, ವಿವಿಧ ಸಂಘಟನೆಗಳು, ಆರ್.ಎಂ.ಮಂಜುನಾಥ್ ಗೌಡರಿಗೆ ಶುಭ ಕೊರಿದರು.
ಕಾರ್ಯಕ್ರಮದಲ್ಲಿ ಪ್ರಮುಖರಾದ ಎಂ. ಶ್ರೀಕಾಂತ್, ಶಿವಕುಮಾರ್, ಅನಿತಾಕುಮಾರಿ, ಮೈಲಾರಪ್ಪ ಹೆಚ್.ಸಿ. ಯೋಗೀಶ್,ಎಸ್.ಕೆ.ಮರಿಯಪ್ಪ, ಬಲ್ಕಿಶ್‌ಬಾನು,ಶಿ ಜು ಪಾಶ, ಜಿ ಪದ್ಮನಾಭ್, ರಮೇಶ್ ಶಂಕರಘಟ್ಟ, ಚಂದ್ರಭೂಪಾಲ್, ಗೋಣಿ ಮಾಲತೇಶ್, ಹೆಚ್.ಪಿ. ಗಿರೀಶ್, ನಾಗರಾಜ್ ಕುರವಳ್ಳಿ, ಮಧು ಕೆಸ್ತೂರು ಹೊಳೆಯಪ್ಪ ಮುಂತಾದವರಿದ್ದರು.