ತುಂಗಾ ರೀವರ್ ಫ್ರಂಟ್ ಯೋಜನೆ:ಇಂದಿನಿಂದ ಸಾರ್ವಜನಿಕರಿಗೆ ಉಚಿತ ಪ್ರವೇಶ.
ಶಿವಮೊಗ್ಗ:
ಶಿವಮೊಗ್ಗದ ತುಂಗಾ ನದಿಯ ಬಲದಂಡೆಯ ಉತ್ತರ ದಂಡೆ ಅಭಿವೃದ್ಧಿ ಯೋಜನೆಗೆ ಇಂದಿನಿಂದ ಚಾಲನೆ ದೊರೆತಿದೆ. ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ನಿರ್ಮಾಣವಾಗಿರುವ ಈ ಯೋಜನೆಗೆ ಸುಮಾರು 80 ಕೋಟಿ ರೂ. ಖರ್ಚು ಮಾಡಲಾಗಿದೆ.
ಇಲ್ಲಿ ಸುಂದರವಾದ ವಾತವರಣವಿದ್ದು 2.8 ಕಿಮೀಟರ್ ದೂರದ ವಾಕಿಂಗ್ ಪಾತ್ ಇದೆ. ಇನ್ನೂ ಸುಂದರವಾದ ಗಾರ
ಉದ್ಯಾನವನ, ಪಾರಂಪರಿಕ ಪ್ರತಿಮೆಗಳ ಜೊತೆಗೆ ದೋಣಿ ವಿಹಾರದ ವ್ಯವಸ್ಥೆಯನ್ನು ಸಾರ್ವಜನಿಕರಿಗೆ ಕಲ್ಪಿಸಲಾಗಿದೆ. ಆದರೆ ದೋಣಿ ವಿಹಾರವನ್ನು ಮಳೆಗಾಲ ಹೊರತುಪಡಿಸಿ ಗುಜರಾತ್ ನ ಸಾಬರಮತಿ ನದಿಯ ದಂಡೆಯ ಮೇಲೆ ನಿರ್ಮಾಣವಾಗಿರುವಂತೆ ನಿರ್ಮಿಸಲಾಗುತ್ತಿದೆ.
ಇಂದಿನಿಂದ ( ಫೆ,23) ವಾಕಿಂಗ್ ಪಾತನ್ನು ಪ್ರಾಯೋಗಿಕವಾಗಿ ಸಾರ್ವಜನಿಕರಿಗೆ ಓಡಾಡಲು ಅವಕಾಶ ಮಾಡಿಕೊಡಲಾಗಿದೆ. ಮಾ.8 ರಿಂದು ಸಂಜೆಯ ನಂತರವೂ ವಾಕಿಂಗ್ ಗೆ ಅವಕಾಶ ಮಾಡಿಕೊಡಲಾಗುತ್ತದೆ. ಬೆಕ್ಕಿನ ಕಲ್ಮಠದ ಹಿಂಭಾಗದಿಂದ ಹಿಡಿದು, ಬೈಪಾಸ್ ರಸ್ತೆ ವರೆಗಿನವಾಕಿಂಗ್ ಪಾತ್ ಗೆ 9 ಗೇಟಿನ ಮೂಲಕ ಪ್ರವೇಶ ದ್ವಾರಗಳನ್ನ ನಿರ್ಮಿಸಲಾಗುತ್ತಿದೆ.
ಈ ಕುರಿತು ಮಾಧ್ಯಮದವಿರಿಗೆ ಪ್ರತಿಕ್ರಿಯಿಸಿರುವ ಪಾಲಿಕೆ ಆಯುಕ್ತ ಮಾಯಣ್ಣ ಗೌಡ ಪ್ರಾಯೋಗಿಕವಾಗಿ ಈ ಪ್ರವೇಶವನ್ನು ಬೆಳಿಗ್ಗೆ 6 ರಿಂದ ಸಂಜೆ 6 ರವರೆಗೆ ಅವಕಾಶ ಮಾಡಿಕೊಡಲಾಗುತ್ತಿದೆ. ಸಾಧಕ ಬಾಧಕಗಳನ್ನ ನೋಡಿಕೊಂಡು ನಂತರ ಮಾ.8 ರಿಂದ ಸಂಜೆಯ ವಾಯುವಿಹಾರಕ್ಕೆ ಅವಕಾಶ ಕಲ್ಫಿಸಲಾಗುವುದು ಎಂದರು. ಸಧ್ಯಕ್ಕೆ ಪ್ರವೇಶ ಶುಲ್ಕ ಇರುವುದಿಲ್ಲ.ಇಲ್ಲಿ ಯಾವುದೇ ಅನಾಹುತ ಆಗದ ರೀತಿಯಲ್ಲಿ ಎಚ್ಚರಿಕೆ ಕ್ರಮವನ್ನು ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದರು
ಫೆ.23 ರಿಂದ ಮಾ.3 ರವರೆಗೆ ಸಾರ್ವಜನಿಕರಿಗೆ ಪ್ರಾಯೋಗಿಕವಾಗಿ ಉಚಿತ ಪ್ರವೇಶ ಮೂಲಕ ವೀಕ್ಷಣೆಗಾಗಿ ಈ ಮೂರು ದ್ವಾರಗಳಲ್ಲಿ ಬಿಡಲಾಗುವುದು
ಪ್ರವೇಶ ದ್ವಾರ ಸಂಖ್ಯೆ : 02 ಇಮಾಂಬಾಡ, ಬಿಬಿ ರಸ್ತೆ ಶಿವಮೊಗ್ಗ.
ಪ್ರವೇಶ ದ್ವಾರ ಸಂಖ್ಯೆ: 05 ರಾಮಣ್ಣ ಶ್ರೇಷ್ಟಿ ಪಾರ್ಕ್ ಪಕ್ಕ, ಗಾಂಧಿ ಬಜಾರ್,
ಪ್ರವೇಶ ದ್ವಾರ ಸಂಖ್ಯೆ : 09 ಬಿಸಿಎ ಹಾಸ್ಟೆಲ್ ಪಕ್ಕ, ಎಸ್‍ಪಿಎಂ ರಸ್ತೆ, ಶಿವಮೊಗ್ಗ.
ಬೆಳಿಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆವರೆಗೆ ಪ್ರವೇಶ ಸಮಯವಾಗಿರುತ್ತದೆ .