Suhani Bhatnagar: ದಂಗಲ್ನಲ್ಲಿ ಅಮೀರ್ ಖಾನ್ ಜೊತೆ ಮಗಳಾಗಿ ನಟಿಸಿದ್ದ ಯುವ ನಟಿ ಸಾವು
news.ashwasurya.in
ಅಮೀರ್ ಖಾನ್ ಜೊತೆ ಸೂಪರ್ ಹಿಟ್ ಸಿನಿಮಾ ದಂಗಲ್ ನಲ್ಲಿ ನಟಿಸಿದ್ದ ಮುದ್ದು ಮುಖದ ಚೆಲುವೆ
ಸುಹಾನಿ ಭಟ್ನಾಗರ್ ಚಿಕ್ಕ ವಯಸ್ಸಿನಲ್ಲಿಯೇ ಸಾವು! ಸುಹಾನಿ ಭಟ್ನಾಗರ್ಗೆ ಏನಾಗಿತ್ತು?
ಬಾಲಿವುಡ್ ಸ್ಟಾರ್ ಅಮೀರ್ ಖಾನ್ ಅವರ ಬ್ಲಾಕ್ಬಸ್ಟರ್ ಚಿತ್ರ ‘ದಂಗಲ್’ ನಲ್ಲಿ ಬಬಿತಾ ಫೋಗಟ್ ಪಾತ್ರದಲ್ಲಿ ನಟಿಸಿದ್ದ ಸುಹಾನಿ ಭಟ್ನಾಗರ್ ನಿಧನರಾಗಿದ್ದಾರೆ. ಕೇವಲ 19ನೇ ವಯಸ್ಸಿಗೆ ಮುದ್ದು ಮುಖದ ನಟಿಯ ಸಾವು ಎಲ್ಲರಿಗೂ ಶಾಕ್ ಕೊಟ್ಟಿದೆ.ಒಂದೊಮ್ಮೆ ಯೋಚಿಸುವಂತೆ ಮಾಡಿದೆ!
ನಟಿಯ ದಿಢೀರ್ ಸಾವಿಗೆ ನಿಖರವಾದ ಕಾರಣ ತಕ್ಷಣವೇ ತಿಳಿದುಬಂದಿಲ್ಲ. ಕೆಲವು ಮೂಲಗಳ ಪ್ರಕಾರ ಕೆಲವು ದಿನಗಳ ಹಿಂದೆ ಸುಹಾನಿ ಅಪಘಾತಕ್ಕೆ ಒಳಗಾಗಿದ್ದರಂತೆ ಈ ಘಟನೆಯಿಂದ ಅವರ ಕಾಲು ಮುರಿದಿದ್ದು ಚಿಕಿತ್ಸೆ ಪಡೆಯುತ್ತಿದ್ದರು ಎನ್ನಲಾಗಿದೆ.
ವೈದ್ಯರು ಆಕೆಗೆ ಸೂಚಿಸಿದ ಔಷಧಿಗಳು ತೆಗೆದುಕೊಂಡ ಪರಿಣಾಮವಾಗಿ ಅದರಲ್ಲಿ ಕೆಲವೊಂದು ಅಡ್ಡ ಪರಿಣಾಮಗಳು ಬಿರಿದ್ದು ಆಕೆಯ ದೇಹದಲ್ಲಿ ನಿಧಾನವಾಗಿ ದ್ರವದ ಶೇಖರಣೆ ಪ್ರಾರಂಭವಾಯಿತಂತೆ!! ಇದರಿಂದ ಬಾಳಿ ಬದುಕ ಬೇಕಾಗಿದ್ದ ಮುದ್ದು ಮುಖದ ನಟಿ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಅವರು ಸ್ವಲ್ಪ ಸಮಯದಿಂದ ದೆಹಲಿಯ ಪ್ರತಿಷ್ಠಿತ ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರಂತೆ ಎಂದು ವರದಿಗಳಿಂದ ತಿಳಿದುಬಂದಿದೆ. ಆದರೆ ಈಗ ಆಕೆಯ ಸಾವಿನ ಆಘಾತಕಾರಿ ಸುದ್ದಿ ಆಕೆಯ ಅಭಿಮಾನಿಗಳಿಗೆ ಆಘಾತವನ್ನುಂಟು ಮಾಡಿದೆ.
ದಂಗಲ್ನಲ್ಲಿ ಬಬಿತಾ ಫೋಗಟ್ನ ಪಾತ್ರವು ಪ್ರೇಕ್ಷಕರ ಮನಮುಟ್ಟಿತ್ತು ಜೊತೆಗೆ ಆ ಪಾತ್ರ ಹೆಚ್ಚು ಪ್ರಶಂಸಿಸಲ್ಪಟ್ಟಿದೆ. ಟಿವಿ ಜಾಹೀರಾತುಗಳಲ್ಲೂ ಸುಹಾನಿ ಕೆಲಸ ಮಾಡಿದ್ದು ಮೆಚ್ಚುಗೆ ಗಳಿಸಿದ್ದಾರೆ. ದಂಗಲ್ ನಂತರ ಆಫರ್ಗಳ ಹೊರತಾಗಿಯೂ, ಅವರು ನಟನೆಯಿಂದ ವಿರಾಮ ತೆಗೆದುಕೊಂಡರು ಕಾರಣ ತನ್ನ ಅಧ್ಯಯನದತ್ತ ಗಮನ ಹರಿಸಲು ಬಯಸಿದ್ದರು
ಒಟ್ಟಿನಲ್ಲಿ ಕಿರಿ ವಯಸ್ಸಿನಲ್ಲೆ ಶ್ರೇಷ್ಠ ನಟಿಯೊಬ್ಬಳನ್ನು ಕಳೆದುಕೊಂಡಿದ್ದು ಮಾತ್ರ ಭಾರತೀಯ ಚಿತ್ರರಂಗಕ್ಕೆ ತುಂಬಾಲಾರದ ನಷ್ಟವಾಗಿದೆ.